ಸಮೋಸ
ಮೇಷ್ಟ್ರು : ನೀವು ಮೂರು ಜನ ಒಂದೆ ತರ ಇದ್ದೀರಾ..... ಅಂದ ಹಾಗೆ ನಿಮ್ಮಪ್ಪ ಏನ್ ಕೆಲಸ ಮಾಡ್ತಾರೆ ?
ಹುಡುಗರು : ನಮ್ಮಪ್ಪ XEROX ಅಂಗಡಿ ಇಟ್ಟಿದ್ದಾರೆ !!!
********************************************************************
ಟೀಚರ್ : ಭೂಮಿಗೂ ಚಂದ್ರನಿಗೂ ವ್ಯತ್ಯಾಸವೇನು ?
ಪುಟ್ಟಿ : ಅಣ್ಣ ತಂಗಿ ಟೀಚರ್ !
ಟೀಚರ್ : ಅದು ಹೇಗೆ ?
ಪುಟ್ಟಿ: ನಾವು ಭೂಮಿಗೆ ತಾಯಿ ಅನ್ನುತ್ತೇವೆ, ಚಂದ್ರನಿಗೆ ಮಾಮ ಅಂತೀವಲ್ಲ !!!
********************************************************************
ಶಿಕ್ಷಕ : ಯಾಕೋ ಗುಂಡ ಇವತ್ತು ತಡವಾಗಿ ಬಂದಿದ್ದೀಯಾ ?
ಗುಂಡ : ಕೋಳಿ ಕೂಗೋದು ತಡ ಆಯ್ತು ಸಾರ್ !
ಶಿಕ್ಷಕ : ನಮ್ಮ ಮನೆ ಹತ್ರ ಬೆಳಿಗ್ಗೆ ೫ ಗಂಟೆಗೇ ಕೋಳಿ ಕೂಗುತ್ತೆ ....
ಗುಂಡ : ಆ ಕೋಳಿ ನಮ್ಮ ಮನೆ ಹತ್ರ ಬರೋಕೆ ೮ ಗಂಟೆ ಆಗುತ್ತೆ !!!
********************************************************************
ಹುಡುಗಿ: ಸಾಕು ಯಾರಾದ್ರು ನೋಡಿದ್ರೆ ಕಷ್ಟ
ಹುಡುಗ: ಏನು ಆಗೊಲ್ಲ ಸ್ವಲ್ಪ ಓಪನ್ ಮಾಡಿ ನನಗೆ ತೋರಿಸು ಪ್ಲೀಸ್
ಹುಡುಗಿ: ತೋರಿಸಿಲ್ಲ ಅಂದ್ರೆ ಏನಾಗತ್ತೆ????
ಹುಡುಗ: ಏನಾಗತ್ತೆ..... ನೀನು ತೋರಿಸಿಲ್ಲ ಅಂದ್ರೆ ನಾನು ಈ ವರ್ಷಾನು ಸಹ ಎಗ್ಸಾಮ್ ನಲ್ಲಿ ಪಾಸಾಗೊಲ್ಲ ಅಷ್ಟೆ
- Nagaraj.G's blog
- Login or register to post comments
- 611 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಸಮೋಸ
Mor Morning (ಬೆಳ್ ಬೆಳಿಗ್ಗೆ) ಬಿಸಿ ಬಿಸಿ, ಸಮೋಸಗಳನ್ನು ತಿನ್ಸಿದ್ದಕ್ಕೆ ಧನ್ಯವಾದ.
ಎಲ್ಲಾ ಸಮೋಸಗಳು ರುಚಿಯಾಗಿವೆ. :D
-ಸ್ವಾಮಿ ಶರಣಂ.
ಉ: ಸಮೋಸ
ಧನ್ಯವಾದ ಅನೀಲ್ ಸ್ವಾಮಿಗಳೇ
ಅಂದಹಾಗೇ ವೃತದಲ್ಲಿ ಇದ್ದರೂ ಸಮೋಸ ತಿಂದು ರುಚಿಯಾಗಿದೆ ಅಂದ್ರಲ್ಲಾ ;)
ನಾಗರಾಜ್
ಉ: ಸಮೋಸ
>>ಅಂದಹಾಗೇ ವೃತದಲ್ಲಿ ಇದ್ದರೂ ಸಮೋಸ ತಿಂದು ರುಚಿಯಾಗಿದೆ ಅಂದ್ರಲ್ಲಾ
ಈ ಸಮೋಸ ತಿಂದರೆ, ಹೊಟ್ಟೆ ತುಂಬುವುದಿಲ್ಲ, ಮನಸ್ಸಿಗೆ ಖುಷಿ ಆಗತ್ತೆ. ಅದಕ್ಕೆ ಆ ತರಹ ಹೇಳಿದ್ದು. ;)
ಇನ್ನೊಂದ್ ವಿಷ್ಯ,
ವೃತ ಅಲ್ಲ ವ್ರತ.
-ಸ್ವಾಮಿ ಶರಣಂ.
ಉ: ಸಮೋಸ
ಟೈಪಿಸುವಾಗ್ ಮಿಸ್ ಆಯ್ತು ನೋಡಲೇ ಇಲ್ಲ ಮತ್ತೆ ನೋಡಿ ಸರಿ ಮಾಡೋಣ ಅಂದ್ರೆ ಆಗಲಿಲ್ಲ ;)
ನಾಗರಾಜ್
ಉ: ಸಮೋಸ
ಸಮೋಸ ಮಸ್ತಾಗಿದೆ ...
ಉ: ಸಮೋಸ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದ
:D :D :D :D :D :D
ನಾಗರಾಜ್
ಉ: ಸಮೋಸ
ನನ್ನ ಹೆಸರು ಯಾಕ್ರೀ ಹಾಕಿದ್ದೀರಾ ನಾಗರಾಜ್?
ಉ: ಸಮೋಸ
ಪ್ರಪಂಚದಲ್ಲಿ ನೀವೊಬ್ಬರೇನಾ ಇರೋದು
ನೀವಲ್ಲಮ್ಮ ನನ್ನ ಗೆಳೆಯ ಕಳುಹಿಸಿದನ್ನ ಹಾಗೇ ಟೈಪಿಸಿದೆ ;)
ಬದಲಾಯಿಸ್ಲಾ.........
ನಾಗರಾಜ್
ಉ: ಸಮೋಸ
ಇಂಚರ - ನಾಗರಾಜ್,
ನಿಮ್ಮಿಬ್ರದ್ದೂ ಒಂದೇ ಸ್ಕೂಲಾ?
ಉ: ಸಮೋಸ
ಇಲ್ಲಪ್ಪ :D
ಇಂಚರಾ ನೀವೇನಾದ್ರು ನನ್ನ ಜೊತೆ ಓದಿದ್ರಾ.... ;)
ನಾಗರಾಜ್
ಉ: ಸಮೋಸ
ಇಂಚರ ಟೀಚರ್ ಪ್ರಶ್ನೆಗೆ ಉತ್ತರ ಹೇಳಿದ್ದು ನಮಗೆ ಯಾರಿಗೂ ಗೊತ್ತಾಗ್ಲಿಲ್ಲ, ನಿಮಗೆ ಮಾತ್ರ ಗೊತ್ತಾಯ್ತಲ್ಲಾ...ಅದಕ್ಕೇ ಅನುಮಾನ ಬಂತು.
:-)
ಉ: ಸಮೋಸ
ಅವರಿಗೆ ಕೋಪ ಬಂದಿದೆ ಅಂತ ಇಂಚರ ಹೋಗಿ ಆ ಜಾಗದಲ್ಲಿ ಪುಟ್ಟಿ ಕುಂತಾಳೆ ;)
ಇಂಚರಾ ಕೋಪ ಮಾಡಿಕೊಳ್ಳಬೇಡಿ :(
ನಾಗರಾಜ್
ಉ: ಸಮೋಸ
ಒಂದಕ್ಕಿಂತ ಒಂದು ಸೂಪರ್, ಸಮೋಸ.
ಅಂತೂ "ಸಮೋಸ" ಹಿಟ್ ಆಯ್ತು.
ಟೈಟಲಿಗೆ ಕಾಪಿರೈಟ್ ಮಾಡ್ಕೋ ಬೇಕಿತ್ತು...ಅನ್ನಿಸುತ್ತೆ.
:-)
ಉ: ಸಮೋಸ
ಹ್ಹಹ್ಹಹ್ಹಹ್ಹಹ್ಹ
ಅಂದಹಾಗೇ ಕಾಪಿರೈಟ್ ನೀವು ಮಾಡಿಲ್ಲ ಅಲ್ವಾ ;) ಈಗ ಯೋಚನೇ ಮಾಡಿ ಪ್ರಯೋಜನವಿಲ್ಲ
ನಾಗರಾಜ್
ಉ: ಸಮೋಸ
ಸಮೋಸ ಇಷ್ಟೆನಾ ರಾಜ್ ,ಏಷ್ಟೆ ತಿಂದರೂ ಸಾಕಾಗೊಲ್ಲ :)
ಸಮೋಸ ಸೂಪರ್ :)
--ಗೌಡ್ರು
ಉ: ಸಮೋಸ
ಗೌಡ್ರೆ ನೀವೆಲ್ಲೋ ಬಕಾಸುರ ವಂಶದವರಿರಬಹುದು :)
ನಾಗರಾಜ್
ಉ: ಸಮೋಸ
ನಾವೆಲ್ಲ ಭೀಮನ ವಂಶದವರು ,ತಿನ್ನೊದರಲ್ಲಿ ಆ ಬಕಾಸುರನನ್ನೆ ಮೀರಿಸುವವರು ನಾವು :)
ಹಹ್ಹಹಹ್ಹಹ್ಹ
--ಗೌಡ್ರು
ಉ: ಸಮೋಸ
ಅಂದುಕೊಂಡೆ :D
ನಾಗರಾಜ್
ಉ: ಸಮೋಸ
ಗೌಡ್ರೆ ನಿಮಗೋಸ್ಕರ ಸ್ವೆಷಲ್ ಸಮೋಸ ಹಾಕೌತ್ತೇನೆ ಬಿಡಿ :)
ನಾಗರಾಜ್