26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಧಾರವಾಡ ಸಹವಾಸ ಬೇಡವೇ ಬೇಡ

December 5, 2008 - 12:19pm
Nagaraj.G
ನಾನು ಮೊನ್ನೆ ಅಂದರೆ 2 ನೇ ತಾರೀಕಿನಂದು ಕೆಲಸದ ನಿಮಿತ್ತ ಧಾರವಾಡಗೆ ಹೋಗಲು ತಯಾರಾದೆ. ಅದಕ್ಕೂ ಮುಂಚೆ  ಧಾರವಾಡದ ಬಗ್ಗೆ ಸಂಪದ ಬಳಗದವರಿಂದ ಸ್ವಲ್ಪ ಮಾಹಿತಿ ಪಡೆಯಬೇಕೆಂದುಕೊಂಡೆ ಆದರೆ, ಸಮಯ ಅಭಾವದ ಕಾರಣ ಹಾಗೆ ಹೊರಟೆ. ಧಾರವಾಡಕ್ಕೆ ಇದು ನನ್ನ ಮೊದಲನೆಯ  ಬೇಟಿ. ಅಂತು ನಾನು ಐರಾವತ ಏರಿ ಧಾರವಾಡ ಕಡೆ ಹೊರಟೆ. ಬಸ್ಸಲ್ಲಿ ಹಿಂದಿ ಭಾಷೆಯಲ್ಲಿ ಭಾಷಾಂತರಿಸಿದ ಜಾಕಿಚಾನ್ ಚಲನಚಿತ್ರ ನೋಡುತ್ತಾ ನಿದ್ದೆಯಲ್ಲಿ ಜಾರಿದೆ. ಸುಮಾರು 2:30 ರ ಸುಮಾರಿಗೆ ದಾವಣಗೆರೆಗೆ ಬಸ್ಸು ತಲುಪಿತು ಅಲ್ಲಿ ಸ್ವಲ್ಪ ಎಚ್ಚರ ಬಂತು ನಂತರ ನಿದ್ದೆಯ ಮಂಕಿನಲ್ಲಿ ಜಾರಿದೆ ಬೆಳಿಗ್ಗೆ ಸುಮಾರು 5:30 ಅಥವಾ 6:00 ಘಂಟೆ ಆಗಿರಬೇಕು  ಹುಬ್ಬಳ್ಳಿ ತಲುಪಿದೆವು. ಅಲ್ಲಿಂದ ನನ್ನ ಗ್ರಹಚಾರ ಶುರುವಾಯಿತು ಅನಿಸತ್ತೆ, ಎಚ್ಚರವಾಯಿತು. ಧಾರವಾಡ ತಲುಪಿದ್ದು ಸುಮಾರು 7:00 ಗಂಟೆ  ಇರಬೇಕು ಬಸ್ಸು ಇಳಿಯಲು ಬ್ಯಾಗಿಗೆ ಕೈ ಹಾಕುತ್ತೇನೆ ನನ್ನ ಬ್ಯಾಗ್ ನಾಪತ್ತೆಯಾಗಿತ್ತು. ನನ್ನ ಜೊತೆಗಿದ್ದ ಸ್ನೇಹಿತೆಯರು ಡ್ರೈವರ್ ಹತ್ತಿರ ಕಂಪ್ಲೆಂಟ್ ಹೇಳುತ್ತಿದ್ದರು ಡ್ರೈವರ್ ಏನೆಲ್ಲ ಇತ್ತು  ಬ್ಯಾಗ್ನಲ್ಲಿ ಎಂದು ನನ್ನನ್ನು ಕೇಳಿದರು ನನ್ನ ಪರ್ಸ್ ಮತ್ತು ಡೆಬಿಟ್ ಕಾರ್ಡ್, ಬಟ್ಟೆ, ವಿಸಿಟಿಂಗ್ ಕಾರ್ಡ್ಸ್ ಮತ್ತು ಡೈರಿ ಇತ್ಯಾದಿಗಳು ಇದೆ ಎಂದು ತಿಳಿಸಿದೆ. ನಂತರ ಅಲ್ಲಿದ್ದಂತಹ ಬ್ಯಾಗ್ ಗಳನ್ನು ಯಾರದು ಎಂದು ಪ್ರತಿಯೊಬ್ಬರನ್ನು ವಿಚಾರಿಸುತ್ತಾ ಹೊರಟರು ಎಲ್ಲರು ನಂದು ನಿಂದು ಎಂದರು ಕಡೆಗೆ ಒಂದು ಬ್ಯಾಗ್ ಬಾಕಿ ಇತ್ತು ಅದನ್ನು ತೆಗೆದು ಒಳಗೆ ಏನಾದ್ರೂ ಮಾಹಿತಿ ಸಿಗತ್ತಾ ಎಂದು  ನೋಡುತ್ತಿರಬೇಕಾದ್ರೆ, ನನ್ನ ಮೊಬೈಲ್ ರಿಂಗಾಯಿತು ನನ್ನ ಕಷ್ಟದಲ್ಲಿ ನಾನಿದ್ದರೆ ಯಾರಪ್ಪ ಇದು ಎಂದು ರಿಸೀವ್ ಮಾಡಿದೆ ಆಕಡೆಯಿಂದ ದಿಸ್ ಇಸ್ ನಾಗರಾಜ್, ಎಂದರು. ಎಸ್ ಎಂದೆ ಆಗ ಅವರು ನಿಮ್ಮ ಬ್ಯಾಗನ್ನು ನನ್ನ ಬ್ಯಾಗ್ ಎಂದು ತಿಳಿದು ತೆಗೆದುಕೊಂಡು ಹುಬ್ಬಳ್ಳಿಯಲ್ಲಿ ಇಳಿದಿದ್ದೇನೆ ದಯವಿಟ್ಟು ಕ್ಷಮಿಸಿ ಎಂದರು. ನಂತರ ಬ್ಯಾಗನ್ನು ಓಪನ್ ಮಾಡಿ ಎಂದರು ಓಪನ್ ಮಾಡಿದೆ ಅದರಲ್ಲಿ ಕ್ರೆಡಿಟ್ ಕಾರ್ಡ್ಸ್, ಡೆಬಿಟ್ ಕಾರ್ಡ್ಸ್, ಪಾಸ್ ಪೋರ್ಟ್ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಇತ್ತು ನಂತರ ಅವರು ಡೈರಿ ಓದು ಇದೆ ಅದನ್ನ ತೆಗೆಯಿರಿ ಅದರಲ್ಲಿ ನನ್ನ ವಿಸಿಟಿಂಗ್ ಕಾರ್ಡ್ಸ್ ಇದೆ ಎಂದರು ಅದರಂತೆ ತೆಗೆದೆ ಕಾರ್ಡ್ ತೆಗೆದು ನೋಡಿದೆ ಅವರು ಗೋದ್ರೆಜ್ ಕಂಪನಿಯಲ್ಲಿ ಕೆಲಸಗಾರರಾಗಿದ್ದ. ನಂತರ ಅವರು ಎಲ್ಲಿ ಇದ್ದೀರಾ ಎಂದು ಕೇಳಿದರು ನಾನು ಧಾರವಾಡದಲ್ಲಿ ಇದ್ದೇನೆ ನನ್ನ ಬ್ಯಾಗ್ ತನ್ನಿ ನಿಮ್ಮ ಬ್ಯಾಗ್ ತೆಗೆದುಕೊಂಡು ಹೋಗಿ ಎಂದೆ ಅದರಂತ ಅವರು ಬರುವುದಾಗಿ ತಿಳಿಸಿದರು. ಅವರನ್ನು ಹಳೆ ಬಸ್ ನಿಲ್ದಾಣಕ್ಕೆ ಬರಲು ತಿಳಿಸಿ ಒಂದು ಅಟೋ ಹಿಡಿದು ನನ್ನ ಸ್ನೇಹಿತರೊಟ್ಟಿಗೆ ಹೋಟಲ್ (ಲಾಡ್ಜ್) ಹುಡುಕಲು ಹೊರೆಟೆವು ಅಲ್ಲಿ ಇಡಿ ಧಾರವಾಡ ಹುಡಿಕಿದರು ಸಹ ರೂಮ್ಸ್ ಸಿಗಲಿಲ್ಲ. ಅದೇ ಸಮಯಕ್ಕೆ ನನ್ನ ಬ್ಯಾಗ್ ಧಾರವಾಡ ತಲುಪಿತ್ತು ನನಗೆ ಹಳೆ ಬಸ್ ನಿಲ್ದಾನಕ್ಕೆ ಬರಲು ಪೋನ್ ಮಾಡಿ ತಿಳಿಸಿದರು ಅದರಂತೆ ಅಟೋ ಹಳೆಬಸ್ ನಿಲ್ದಾಣಕ್ಕೆ ತಿರುಗಿಸಿದೆವು. ಅಲ್ಲಿ ನನ್ನ ಬ್ಯಾಗ್ ಪಡೆದು ಅವರ ಬ್ಯಾಗ್ ನೀಡಿ ಅಲ್ಲಿಂದ ಮತ್ತೆ ಹೋಟಲ್ ಹುಡುಕಲು ಮುಂದಾದೆವು  ಕಡೆಗೆ ಅಪೋಲೋ ಹೋಟಲ್ನಲ್ಲಿ ಕೇವಲ ಒಂದು ರೂಮ್ ಇತ್ತು ನಾವಿರುವುದು 3 ಜನ,  ಇಬ್ಬರು ಹುಡುಗಿಯರು ಮತ್ತೆ ನಾನು. ಏನು ಮಾಡುವುದು ಎಂದು ರೂಮ್ ಪಡೆದೆವು. ನಂತರ ಅವರಿಗೆ ನಾನು ಮೊದಲು ಸ್ನಾನ ಮಾಡಿ ನಮ್ಮ ಸಂದರ್ಶನಕ್ಕೆ ಬೇಕಾದ ವ್ಯಕ್ತಿಗಳ ಸಂಪರ್ಕಕ್ಕೆ ಮುಂದಾಗುತ್ತೇನೆ ನಂತರ ಸ್ನಾನ ಮಾಡಿ ಬನ್ನಿ ಹೊರಗೆ ಇರುತ್ತೇನೆ ಎಂದು ಸ್ನಾನಕ್ಕೆ ಹೊರಟೆ ಅಲ್ಲಿ ನೋಡಿದರೆ ಬಿಸಿ ನೀರಿಲ್ಲ ತನ್ನಿರಿನಲ್ಲಿ ಸ್ನಾನ ಮಾಡಿ ಅನುಭವವಿಲ್ಲ ಏನು ಮಾಡುವುದು ನನ್ನ ಗ್ರಹಚಾರ ಎಂದು ತಿಳಿದು ಸ್ನಾನ ಮಾಡಿ ಹೊರ ಬಂದೆ.  ಆಗ ನನಗೆ ಈ ಧಾರವಾಡ ಸಹವಾಸವೇ ಬೇಡ ಅನಿಸಿತು :)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on
ಮೊದಲನೆಯ ತಪ್ಪು - ಧಾರವಾಡಕ್ಕೆ ಐರಾವತ ಹತ್ತಿದ್ದು! :-) (ಧಾರವಾಡಕ್ಕೆ ರೈಲು ಪ್ರಯಾಣ ಆರಾಮು) - HPN ನನ್ನ ಬ್ಲಾಗುಗಳು: [:http://sampada.net/b...|ಪರಿವೇಶಣ] | [:http://hpnadig.net/blog|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ನಾಡಿಗ್ ರವರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಾನು ಮೊದಲು ರೈಲಿನಲ್ಲಿ ಪ್ರಯಾಣ ಮಾಡಲು ನಿರ್ದರಿಸಿ, IRCTC ಯಲ್ಲಿ ಟಿಕೆಟ್ ಬುಕ್ ಮಾಡಲು ಹೋದೆ ಆದರೆ, ನಾನು ಮೊದಲೇ ಹೇಳಿದ ಹಾಗೆ ನನ್ನ ಗ್ರಹಚಾರದ ಕಾರಣ ಟಿಕೆಟ್ ಇರಲಿಲ್ಲ ನಂತರ ಐರಾವತ ಮೊರೆ ಹೋಗಿ ಟಿಕೆಟ್ ಬುಕ್ ಮಾಡಿದ್ದು. :( ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಇದು ಅಕಸ್ಮಾತ್ತಾಗಿ ಆದ ಒಂದು ಅನುಭವ. ಇದಕ್ಕೋಸ್ಕರ ಧಾರವಾಡ ಸಾಕಾಯ್ತು ಅಂತ ಯಾಕಂದುಕೊಳ್ಳುತ್ತೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಕನ್ನಡದಕಂದರವರೇ ಮೊದಲನೆ ದಿನ ನನಗೆ ಹಾಗೆ ಅನಿಸಿತು ಮಾರನೆ ದಿನ ನನಗೆ ತುಂಬಾನೇ ಕುಷಿಯಾಯಿತು ಯಾಕೆ ಅಂದ್ರೆ ಅಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನಾಟ್ಯ ಪರ್ವ 08 ನಡೆಯುತ್ತಿತ್ತು ಇದನ್ನು ನಡೆಸುತ್ತಿದ್ದವರು ಅಭಿನಯ ಭಾರತಿ ಕಲಾ ತಂಡದವರು ಅಲ್ಲಿ ನೆರೆದಿದ್ದ ಬೇರೆ ಬೇರೆ ರಾಜ್ಯದ ಜನ ವಿವಿಧ ಕಾರ್ಯಕ್ರಮಗಳು ಪ್ರತಿ ದಿನ ನಾಟಕಗಳು ಮತ್ತು ಧಾರವಾಡದ ಜೋಳದ ರೊಟ್ಟಿ ಊಟ ಜೊತೆಗೆ ಧಾರವಾಡ ಠಾಕೂರ್ ಪೇಢ ತಿಂದು ಅಲ್ಲಿಂದ ಬರಲು ತುಂಬಾನೆ ಬೇಸರ ಆಯಿತು ಕಣ್ರೀ ;( ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀನಿವಾಸ ವೀ. ಬ೦ಗೋಡಿ on
[quote=Nagaraj]ಅಲ್ಲಿಂದ ಬರಲು ತುಂಬಾನೆ ಬೇಸರ ಆಯಿತು ಕಣ್ರೀ ;([/quote] ಇದನ್ನು ಕೇಳಿ ಖುಷಿ ಆತು. ಧಾರವಾಡ ಅನುಭವದ ಬಗ್ಗೆ ಇನ್ನೊಂದು ಲೇಖನ ಬರಿತಿರಲ್ಲ? ಅದರ ತಲೆಬರಹ "ಧಾರವಾಡ ಬೇಕೇ ಬೇಕು" ಅಂತ ಹಾಕಬಹುದು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಶ್ರೀನಿವಾಸರವರೇ ನೀವು ಹೆಳಿದ ಹಾಗೇ ಸಂಪದದಲ್ಲಿ ಧಾರವಾಡದ ಬಗ್ಗೆ ತುಂಬಾನೆ ಚೆನ್ನಾಗಿ ಬ್ಲಾಗ್ ಬರೀಬೇಕು ಅಂದುಕೊಂಡು ಧಾರವಾಡಗೆ ಹೋಗಿದ್ದು, ಆದರೆ ನನಗೆ ಆದ ಬೇಸರದಿಂದ ಈ ರೀತಿ ಆಯಿತು. ತಪ್ಪದೆ ಇನ್ನೊಂದು ಬ್ಲಾಗ್ ಬರಿತೇನೆ ತಲೆ ಬರಹ ಚೆನ್ನಾಗಿ ನೀವು ಹೆಳಿದ ಹಾಗೇ ಬರೆಯುವೆ ಕಣ್ರೀ :) ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಅಲ್ಲ ಗುರೂ ಕೇವಲ ಒಂದು ಸಾರಿ ಯಾರದೋ ತಪ್ಪಿನಿಂದ ನಿಮಗೆ ತೊಂದರೆ ಆಯಿತೆಂದು ನೀವು ಮತ್ತೊಮ್ಮೆ ಧಾರವಾಡಕ್ಕೆ ಬರಬಾರದೆನ್ನುವುದು ಖಂಡಿತ ಒಳ್ಳೆಯ ಅನಿಸಿಕೆ ಅಲ್ಲ...... ನಮ್ಮ ಉತ್ತರ ಕರ್ನಾಟಕ ಸ್ನೇಹಕ್ಕೆ ಹೆಸರುವಾಸಿ, ಬರೀ ಒಂದು ಘಟನೆಯಿಂದ ನಮ್ಮ ಬಗ್ಗೆ ನಮ್ಮ ಊರಿನ ಬಗ್ಗೆ ಈ ತರಹದ ಭಾವನೆ ಇಟ್ಟುಕೊಳ್ಳಬೇಡಿ.... ಇನ್ನೊಮ್ಮೆ ಮಗದೊಮ್ಮೆ,ಮತ್ತೊಮ್ಮೆ ಖಂಡಿತ ಬನ್ನಿ, ಅಲ್ಲಿ ನಮ್ಮ ಸ್ನೇಹಿತರು,ನೆಂಟರೂ ಇದ್ದಾರೆ, ಅವರು ನಿಮಗೆ ಸಹಾಯ ಮಾಡುತ್ತಾರೆ.... ಇನ್ನು ಈ ಬರಹ ಓದಿ ಯಾರಿಗೂ ನೀಮ್ಮದೇ ಅಭಿಪ್ರಾಯ ಬರದಿರಲಿ ಅಂತ ನಾ ಬಯಸುವೆ.... ನಿಮ್ಮ ಈ ಮೇಲಿನ ಘಟನೆ ತುಂಬಾ ರಸವತ್ತಾಗಿದೆ.... ನಿಮ್ಮ ಪ್ರೀತಿಯ..... V
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ನಾಗರಾಜ್, ನಿಮ್ ಬ್ಯಾಗ್ ಹೇಗೆ ಬದಲಾಯ್ತು ಅಂತ ಅರ್ಥ ಆಗ್ಲಿಲ್ಲ... ಎರಡು ಬ್ಯಾಗುಗಳೂ ಒಂದೇ ರೀತಿಯಿತ್ತೇ? ಅಂದಹಾಗೆ, ಧಾರವಾಡದ ಪೇಡ ನಮಗೆಲ್ರಿ? -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಅನಿಲ್ ರವರೇ ನನ್ನ ಬ್ಯಾಗ್ ಬ್ಲಾಕ್ ಕಣ್ರೀ ಅವರ ಬ್ಯಾಗ್ ಆರೆಂಜ್ ಕತ್ತಲಲ್ಲಿ ಸರಿಯಾಗಿ ಕಾಣಿಸಿಲ್ಲ ಅನಿಸತ್ತೆ ಅವರು ನನ್ನ ತರಾ ಹುಬ್ಬಳ್ಳಿಗೆ ಹೊಸದಾಗಿ ಎಂಟ್ರಿ ಆಗಿದ್ದಾರೆ :) ಅಂದಹಾಗೆ ಧಾರವಾಡ ಪೇಡ ನಿಮಗೂ ಉಂಟು ನಮ್ಮ ಆಪೀಸಿಗೆ ಬನ್ನಿ ಪೇಡ ತಿಂದು ಆಪಿಸು ನೋಡಿ ಹೊಗಿರಂತೆ :D ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಎಲ್ಲಿರೋದು ನಿಮ್ ಆಫೀಸು? -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಅನಿಲ್ ರವರೇ ನಮ್ಮ ಆಪಿಸು ಇರೋದು ದೊಮ್ಮಲೂರಿನಲ್ಲಿ ಕಣ್ರೀ No7, 8th main, 3rd Phase, Domlur 2nd Stage Bangalore -71 our Web site ID is www.maraa.in ದಯವಿಟ್ಟು ನಮ್ಮ ವೆಬ್ ಸೈಟ್ ಓಪನ್ ಮಾಡಿ ಹೆಚ್ಚಿನ ಮಾಹಿತಿ ಗೊತ್ತಾಗತ್ತೆ :) ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ನಿಮ್ ಮೊಬೈಲ್ ನಂಬರ್ ನನಗೆ ಇ-ಮೇಲ್ ಮಾಡ್ಬಿಡಿ... ಆ ಕಡೆ ಬಂದಾಗ ನಿಮ್ಮನ್ನು ಸಂಪರ್ಕಿಸಿ ಭೇಟಿ ಮಾಡುವೆ... -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಅನಿಲ್ ರವರೇ ನಿಮ್ಮ ಮೇಲ್ ಐಡಿ ಕೊಡದೆ ಮೇಲ್ ಮಾಡು ಅಂದ್ರೆ ಹೇಗೆ ಹೇಳಿ ಸ್ವಾಮೀ......:) ನನ್ನ ಮೊಬೈಲ್ ನಂ: ******** ಅಂದ ಹಾಗೆ ನಾನು ಈ ವರ್ಷ ಪೂರ್ತಿ ಬೆಂಗಳೂರಿನಲ್ಲಿ ಇರಲ್ಲ ಕಣ್ರೀ :( ಈ ತಿಂಗಳ 9 ರನಂತರ ಹೊರ ರಾಜ್ಯಗಳಲ್ಲಿ ಇರುತ್ತೇನೆ ದಯವಿಟ್ಟು ಮುಂದಿನ ವರ್ಷ ಕಾಲ್ ಮಾಡಿ ಬನ್ನಿ :) ಅಂದಹಾಗೆ ನಿಮ್ಮ ನಂಬರ್ ತಿಳಿಸಿ ಕೆಲ ಸಮಯ ನಂಬರ್ ಸೇವ್ ಮಾಡಿಲ್ಲ ಅಂದರೆ ಪೋನ್ ಪಿಕ್ ಮಾಡಲ್ಲ ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ [ಸೂ: ಪ್ರತಿಕ್ರಿಯೆಯಲ್ಲಿದ್ದ ಮೊಬೈಲ್ ನಂಬರ್ ನಿರ್ವಾಹಕರಿಂದ ತೆಗೆದುಹಾಕಲ್ಪಟ್ಟಿದೆ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಅಯ್ಯೋ!!! ಕ್ಷಮಿಸ್ರಿ... ನಿಮಗೆ ಖಾಸಗಿ ಸಂದೇಶ ಕಳಿಸಿರುವೆ... ನನ್ ಮೈಲ್ ಐಡಿ ಇದೆ ಅದರಲ್ಲಿ ನಿಮ್ ನಂಬರಿಗೆ ಫೋನ್ ಮಾಡ್ತೀನಿ... -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayak.mdesai on
ಹಾಗೆ ನೋಡಿದರೆ ಧಾರವಾಡ ಸಹವಾಸ ಬೇಕೇ ಬೇಕು ಅಂತ ಬರಿಬೇಕು ನೀವು... ಬೆಂಗಳೂರಿನಲ್ಲಿ ಇದ್ದರೆ ನಿಮಗೆ ಬ್ಯಾಗ ಸಿಕ್ತಾಇತ್ತೋ ಇಲ್ವೊ ಗೊತ್ತಿಲ್ಲ.. ಯಾರೋ ಪಾಪ ಗೊತ್ತಿಲ್ಲದೇ ತೊಗೊಂಡು ಹೋಗಿದ್ರು ಅನ್ಸತ್ತೆ...... ವಿನಾಯಕ ಮುತಾಲಿಕ ದೇಸಾಯಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಅಲ್ಲ ಕಣ್ರೀ ನಾನು ಬೆಂಗಳೂರಿನಲ್ಲಿ ಇದ್ದಿದ್ದರೆ ನನ್ನ ಬ್ಯಾಗೆ ಹೋಗ್ತಾ ಇರಲಿಲ್ಲ ಆಲ್ವಾ :) ಆತನ ಹೆಸರು ತರುಣ್ ಅಂತ ಕರ್ನಾಟಕಕ್ಕೆ ಹೊಸಬನಂತೆ ಯಾವ ಆತುರದಲ್ಲಿ ಎತ್ತುಕೊಂಡು ಹೋದನೋ ಏನೋ ಗೊತ್ತಿಲ್ಲ ನನಗಂತೂ ಸಿಕ್ಕ ಬಟ್ಟೆ ಪ್ರಾಣ ಸಂಕಟ ಆಗಿತ್ತು :( ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayak.mdesai on
ಅದೂ ನಿಜಾನೇ....... ವಿನಾಯಕ ಮುತಾಲಿಕ ದೇಸಾಯಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shilpaam on
ವಿನಾಯಕರವರು ಹೇಳಿದ್ದು ಅಗದಿ ಖರೆ ಅದರಿ. ಧಾರವಾಡ ಆಗಿತ್ತು ಅಂತ ನಿಮ್ಮ ಬ್ಯಾಗು ಸಿಕ್ಕಿತು. ಬ್ಯಾರೆ ಎಲ್ಲರೆ ಆಗಿತ್ತು ಅಂದ್ರ, ನೀವು ಬ್ಯಾಗ್ ತೊಗೊಂಡಿದ್ರಿ ಅನ್ನೊದನ್ನ ಮರಿಬೇಕಾಗತಿತ್ತು. ಮತ್ತ, ಹೋಟೆಲ್ ರೂಮು ಸಿಗೊದು ಸರಳ ಅಲ್ಲರಿ, ಅದೂ ನಾಟಕ, ನಾಟ್ಯ, ಹಾಡಿನ ಕಾರ್‍ಯಕ್ರಮ ಇದ್ದಾಗ! ಧಾರವಾಡ ಕಲಾಕಾರರ ಬೀಡು ರಿ. ಶಿಲ್ಪ ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಶಿಲ್ಪಾರವರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಅಂದಹಾಗೆ ತಾವು ಧಾರವಾಡದವರು ಕಣ್ರೀ ನಿಮಗೆ ಧಾರವಾಡದ ಮೇಲೆ ತುಂಬಾನೆ ಪಿರೀತಿ ಅದೇ ಬಿಡ್ರಿ :) ಅಂದ ಹಾಗೆ ಹೋಟೆಲ್ ರೂಮು ಸಿಗೊದು ಸರಳ ಅಲ್ಲ ಅನ್ನೋದು ನಮಗೆ ಗೊತ್ತಾದದ್ದೇ ಈಗ ತಾನೆ ಗೊಂಬೆ ಮನೆ ಪ್ರಕಾಶ್ ಗರೂಡ ಮತ್ತು ಅವರ ಪತ್ನಿ ಹೇಳಿದ್ರು ಮೊದಲೇ ನೀವು ಬರುವುದು ತಿಳಿಸಿದ್ರೆ ರೂಮ್ ಬುಕ್ ಮಾಡ್ತಿದ್ದ್ವಿ ಅಂದ್ರು. ನಾವು ರಂಗಭೂಮಿ ಕಲಾವಿದರ ಮೂಲಭೂತ ಸೌಕರ್ಯಗಳು ಬಗ್ಗೆ ಮತ್ತು ರಂಗಮಂದಿರದ ಮೂಲಭೂತ ಸೌಕರ್ಯಗಳ ಬಗ್ಗೆ ರಿಸರ್ಚ್ ಮಾಡೋದಕ್ಕೆ ಬೇಟಿಯನ್ನು ಮಾಡಿದ್ದು ಎಲ್ಲಾ ರಂಗ ತಂಡಗಳನ್ನು ಬೇಟಿ ಮಾಡಿದ್ವಿ ಕಣ್ರೀ ಅಂದ ಹಾಗೆ ನಿಮಗೆ ನಾಟಕದ ಹುಚ್ಚು ಮತ್ತು ಅಭಿನಯದ ಹುಚ್ಚು ಇರೋದು ನೋಡಿ ತುಂಬಾನೆ ಸಂತೋಷ ಕಣ್ರೀ. ನೀವು ಹೇಳಿದ ಹಾಗೆ ಧಾರವಾಡ ಕಲಾಕಾರರ ಬೀಡು ರೀ. ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shilpaam on
ಒಳ್ಳೆ ಕೆಲಸಕ್ಕ್ ಹೊಗಿದ್ರಿ. ಗರುಡ ಸರ್ ಹೆಂಗಿದ್ದಾರ? ಅವರ ಗೊಂಬೆಮನೆ ಎನಂತದ? ಶಿಲ್ಪ ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಓಹ್. ಇದನ್ನು ಓದಿ ತಿಳಿದದ್ದೇನೆಂದರೆ, ಜಗತ್ತಿನಲ್ಲಿ ಒಳ್ಳೆಯವರು ಇದ್ದೇ ಇದ್ದಾರೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj.G on
ಸುನೀಲರವರೆ ಯಾರು ಒಳ್ಳೆಯವರು......? ನಾನಾ! :) ವಂದನೆಗಳೊಂದಿಗೆ ನಿಮ್ಮವ ......... ನಾಗರಾಜ್. ಜಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ನಿಮ್ಮ ನಿರ್ಲಕ್ಶಕ್ಕೆ ಊರು ಏನು ಮಾಡಿತು. ಐರಾವತ ಸಿಕ್ತು ಅಂತ ನಿದ್ದಿ ಮಾಡಿದ್ರ ಹೆಂಗ್? ಹಂಗೆಲ್ಲ ನಮ್ಮ ಊರಿಗೆ ಬಯ್ಯಬ್ಯಾಡ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on
ಧಾರವಡಕ್ಕೆ ಒಬ್ಬಳು ದೇವತೆ ಯಿದ್ದಾಳೆ. ಅವಳನ್ನು ನೆನೆದು ಕಾಲಿಟ್ಟ ನನಗೆ ಎರಡು ಬಾರಿ ಹೋದಾಗಲೂ ತಪೋ ಭೂಮಿಗೆ ಹೋದ ಅನುಭವವಾಯ್ತು. ಎರಡು ಬಾರಿಯೂ ಸಜ್ಜನರ ಸ೦ಘ .. ಒಳ್ಳೆ ಊಟ .. ನಿದ್ದೆಗೆ ಒಳ್ಳೆ ಮನೆ ಸಿಕ್ತು..ನೀವು ಪುಣ್ಯ ಮಾಡಿರಬೇಕು ಧಾರವಾಡಕ್ಕೆ ಹೋಗೋಕ್ಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಧಾರವಾಡದ ದೇವತೆ ಯಾರ್ರೀ ? ದುರ್ಗಾ ತಾನೇ ? "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.