ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Microwave Oven ನಲ್ಲಿ ಅನ್ನ ಮಾಡಿದ್ದರಾ??

ಇಂದು ನಮ್ಮ ಮನೆಯಲ್ಲಿ ಅಡಿಗೆ ಮಾಡುವ ರಾಣಿಯಮ್ಮ ಪೋನ್ ಮಾಡಿ ಅಕ್ಕಿ ಮುಗಿದೋಗಿದೆ ಸಾರ್ ಏನು ಮಾಡೊದು ಸಾಂಬರ್ ಮತ್ತು ಪಲ್ಯ ಮಾಡಿದ್ದೇನೆ ಎಂದರು. ಆಯ್ತು ನಾನು ಆಪೀಸಿನಿಂದ ಬರುವಾಗ ಅಕ್ಕಿ ತಂದು ಅನ್ನ ಮಾಡ್ತೇನೆ ಬಿಡಿ ಎಂದು ಹೇಳಿದೆ ಅದರಂತೆ ನಾನು ಆಪೀಸಿನಿಂದ ಹೋಗುವಾಗ ಅಕ್ಕಿಯನ್ನು ತೆಗೆದುಕೊಂಡು ಹೋರಟೆ ಮನೆಗೆ ಹೋಗಿ ಅನ್ನಕ್ಕೆ ಪಾತ್ರೆಯನ್ನು ಇಟ್ಟು ಗ್ಯಾಸ್ ಹೊತ್ತಿಸಿದೆ ಸ್ವಲ್ಪ ಸಮಯದ ನಂತರ ಅಕ್ಕಿ ಸಹ ಹಾಕಿದೆ ಸ್ವಲ್ಪ ಸಮಯದಲ್ಲೇ ಗ್ಯಾಸ್ ಮುಗಿದ ಕಾರಣ ಸ್ಟೊವ್ ಆಪ್ ಆಯ್ತು ಏನು ಮಾಡೊದು ಅಂತ ದಿಕ್ಕು ತೋಚದಾದೆ. Sad
ನಾನು ಸ್ವಲ್ಪ ಸಮಯ ಯೋಚಿಸಿ, microwave Ovenನಲ್ಲಿ ಅನ್ನ ಮಾಡಿದರೆ ಹೆಂಗೆ ಎಂದು ಅದರಲ್ಲಿ ಸ್ವಲ್ಪ ಅಕ್ಕಿಯನ್ನು ಇಟ್ಟು ಭಯದಿಂದ ಐದಾರು ನಿಮಿಷಕ್ಕೆ ಒಮ್ಮೆ ತೆಗೆದು ನೋಡುತ್ತಾ ಇದ್ದೆ ಸ್ವಲ್ಪ ಸಮಯದಲ್ಲೆ ಅನ್ನ ರೆಡಿಯಾಯಿತು ಅದರಂದು ಮೂರು ಬಾರಿ ಮಾಡಿದೆ ಇಬ್ಬರಿಗೆ ಆಗುವಷ್ಟು ಅನ್ನ ರೆಡಿಯಾಯಿತು. ಅಂತೂ microwave Ovenನಲ್ಲಿ ಸಹ ಅನ್ನ ಮಾಡಬಹುದು ಎಂದು ತಿಳಿದು ಸಂತೋಷವಾಯಿತು Smiling
ಅಕಸ್ಮಾತ್ ಕಷ್ಟ ಕಾಲದಲ್ಲಿ ಅಂದ್ರೆ ಗ್ಯಾಸ್ ಆದಾಗ ಈ ರೀತಿಯ ಪ್ರಯತ್ನ ನೀವು ಸಹ ಮಾಡಿದ್ದೀರಾ?????

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

vini.mysore's picture

ನಾಗರಾಜ್, ನಾನು ಪ್ರತಿದಿನ microwave Ovenನಲ್ಲಿ ಅನ್ನ ಮಾಡ್ತೀನಿ... ನಿಜ ಹೇಳ್ಬೇಕು ಅಂದ್ರೆ ಇದು ಸ್ಟವ್ ಗಿಂತ ಸುಲಭ.
ಪ್ರೀತಿ ಸ್ನೇಹ ನನ್ನುಸಿರು,
ವಿನಯ್.

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Nagaraj.G's picture

ವಿನಯ್ ನೀವು ತುಂಬಾನೇ ಜಾಣರು ಬಿಡಿ ಅದಕ್ಕೆ ಈ ವಿಧಾನ Eye-wink
ಹೌದು ಸ್ಟವ್ ಗಿಂತ ಸುಲಭ ಆದ್ರೆ ಸ್ವಲ್ಪ ತಡ ಆಗತ್ತೆ ಮೊದಲು ಮಾಡಿದ್ದರಿಂದ ತುಂಬಾನೇ ಭಯವಾಗತ್ತೆ Sad
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

hamsanandi's picture

ಕಷ್ಟಕಾಲದಲ್ಲಿ ಯಾಕ್ರೀ, ಯಾವಾಗ ಬೇಕಾದ್ರೂ ಮಾಡ್ಬಹುದು - ಸ್ವಲ್ಪ ತಡ ಆಗತ್ತೆ ಅಷ್ಟೆ - ಅನ್ನ ಬೇಯೋದಕ್ಕೆ ೧೫ -೨೦ ನಿಮಿಷ.

ತರಕಾರಿಗಳನ್ನಾದರೆ ಇನ್ನೂ ಬೇಗ ಬೇಯಿಸಿಕೋಬಹುದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Nagaraj.G's picture

ಹಂಸಾನಂದಿ ಸಾರ್ ತಮ್ಮ ಪ್ರತಿಕ್ರಿಯೆಗೆ ನನ್ನಿ
ನೀವು ಹೇಳಿದ ಹಾಗೆ ಯಾವಾಗ ಬೇಕಾರ್ದು ಮಾಡಬಹುದು ಸ್ವಲ್ಪ ತಡ ನಿಜಾನೇ ಇನ್ನು ಮೇಲೆ ನಾನು ತಪ್ಪದೇ ಟ್ರೈ ಮಾಡ್ತಾ ಇರ್ತೆನೆ Eye-wink

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

mnsrao's picture

MNS Rao
ಮೈಕ್ರೋವೇವ್‍ಗೆ ಸರಿಹೊಂದುವ ರೈಸ್ ಕುಕ್ಕರ್ ಅಮೆರಿಕಾದಲ್ಲಿ ಸಿಗುತ್ತದೆ. ಅದು ನಾವು ತಂದಿದ್ದೇವೆ. ಇಲ್ಲೂ ಸಿಗುತ್ತದೋ ಇಲ್ಲವೋ ತಿಳಿಯದು. ಪ್ರಯತ್ನಿಸಿ.

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Nagaraj.G's picture

ಧನ್ಯವಾದ ಸಾರ್...
ಪ್ರಯತ್ನ ಮಾಡೊಣ

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

vikashegde's picture

ಓವನ್ ತಗೊಂಡಾಗ ಅದರ ಯೂಸರ್ ಮ್ಯಾನ್ಯುವಲ್ ಓದಿದ್ರೆ ಈ ತೊಂದ್ರೆ ಬರ್ತಿರ್ಲಿಲ್ಲೆನೋ!

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Nagaraj.G's picture

ಅದರ ಬಗ್ಗೆ ಯಾರ್ ತಲೆ ಕೆಡಿಸಿಕೊಳ್ತಾರೆ ನೀವೆ ಹೇಳಿ Eye-wink

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Narayana's picture

ನಮ್ಮನೇಲಿ ಬೆಳಿಗ್ಯೆ ಚಹಾ ಸೈತ microwaveನಲ್ಲೇ ಆಗುತ್ತೆ.

microwave ನಲ್ಲಿ ಮಾಡಿದ ಉಪ್ಪಿಟ್ಟು ಬೇರೆಯೇ ಥರಾ ರುಚಿಯಾಗಿರುತ್ತೆ.

ಕಡಲೇಬೀಜ ಹುರಿಯುವುದು, ಹಪ್ಪಳ ಸುಡುವುದು, ಆಲೂಗೆಡ್ಡೆ , ಗೆಣಸು , ಮುಸುಕಿನ ಜೋಳ ಒಣ ಒಣ ಬೇಯಿಸುವುದು ಇತ್ಯಾದಿ ಚೆನ್ನಾಗಿ ಮಾಡಬಹುದು. ಆಲೂಗೆಡ್ಡೆ , ಗೆಣಸು ಇತ್ಯಾದಿಗಳನ್ನು ಒಳಗಿಡುವ ಮೊದಲು forkನಿಂದ ಚುಚ್ಚಿ ಸಣ್ಣ ಸಣ್ puncture ಮಾಡಿಕೊಳ್ಳಬೇಕು. ಇಲ್ಲದಿದ್ದರೆ microwave ಆಗುತ್ತಿರುವಾಗ ಸಿಡಿಯುವ ಸಂಭವವಿರುತ್ತದೆ.

ಇಂತೀ ನಿಮ್ಮ
ನಾರಾಯಣ

ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??

Nagaraj.G's picture

ನಾರಾಯಣರವರೆ microwave ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ನನ್ನಿ
ನಾನು ಸಹ ಇನ್ನು ಮೇಲೆ ಪ್ರಯತ್ನ ಮಾಡುವೆ Smiling

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

Syndicate content