"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಸಂಪದ ಆರ್ಕೈವಿನಿಂದ

ಲೇಖಕರು

Nagaraj.G's picture

ಪೂರ್ಣ ಹೆಸರು
ನಾಗರಾಜ್

ಪರಿಚಯ

ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಬೆಂಗಳೂರಿನಲ್ಲಿ ಮರ ಅನ್ನುವ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in

ನನ್ನ ಬ್ಲಾಗ್ ಸ್ಪಾಟ್: http://nagarajmaraa....

ಹಂಪಿಯ ಕೆಲವು ಚಿತ್ರಗಳು

ಸಂಪದಿಗರಿಗೆಲ್ಲಾ ನಮಸ್ಕಾರ ಐತಿಹಾಸಿಕ ಸ್ಥಳವಾದ ಹಂಪಿಯ ಕೆಲವು ಚಿತ್ರಗಳು ಇವು. ಕೆಲವು ಚಿತ್ರಗಳ ಬಗ್ಗೆ ಮಾಹಿತಿ ಇಲ್ಲ ಕಾರಣ ಮರೆವು  :(  ಅಂದಹಾಗೆ ನಿಮ್ಮ ಹತ್ರ ಇದರ ಬಗ್ಗೆ ಮಾಹಿತಿ ಇದ್ರೆ ದಯವಿಟ್ಟು ಹಂಚಿಕೊಳ್ಳೀ......

1.ವಿರುಪಾಕ್ಷ ದೇವಾಲಯ

 

 2. ಹಂಪಿಯ ಚಿತ್ರ

 

 

3.ವಿರುಪಾಕ್ಷ ದೇವಾಲಯದ ಒಳ ಚಿತ್ರ

 

4.ಹಂಪಿಯಲ್ಲಿನ ಕಲ್ಲಿನ ಮಂಟಪ

 

5. ಹಂಪಿಯ ಕಲ್ಲು ಬಂಡೆಗಳ ಒಂದು ನೋಟ

 

6. ಹಂಪಿಯ ವಿರುಪಾಕ್ಷ ದೇವಾಲಯ ವಿಹಂಗಮ ನೋಟ

7. ಹಂಪಿಯ ಚಿತ್ರ

 

8. ಹಂಪಿಯ ಒಂದು ನೋಟ

 

9.ಹಂಪಿಯ ಚಿತ್ರ

 

10. ಉಗ್ರ ನರಸಿಂಹ

 

11.ಕಲ್ಲಿನ ರಥ

 

12. ವಿಠ್ಠಲ ದೇವಾಲಯ

13. ಇತ್ತೀಚೆಗೆ ತಾನೇ ಕುಸಿದು ಬಿದ್ದ ಹಂಪಿ ಆನೆಗುಂದಿ ಸಂಪರ್ಕದ ತೂಗು ಸೇತುವೆ

 

14. ಹಂಪಿಯ ಚಿತ್ರ

 

15.  ವಿಠ್ಠಲ ದೇವಾಲಯದ ಹೊರನೋಟ

 

16. ವಿಠ್ಠಲ ದೇವಾಲಯ

 

17.ತುಂಗಭದ್ರಾ ನದಿ ಮತ್ತು ಸೂರ್ಯಾಸ್ಥಮದ ಕಿರಣಗಳು

 

ಇನ್ನಷ್ಟು ಚಿತ್ರಗಳನ್ನು  ಸದ್ಯದಲ್ಲೇ ಹಾಕುವೆ.... ಹಂಪಿಯ ಬಗ್ಗೆ ಮಾಹಿತಿಗಾಗಿ ಇಲ್ಲಿ ನೋಡಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಂಪಿಯ ಕೆಲವು ಚಿತ್ರಗಳು

asuhegde's picture

ಸಖತ್ ಚಿತ್ರಗಳು....ನಾಗರಾಜ್,
ಸಂಪದದಲ್ಲಿ ಒಳ್ಳೊಳ್ಳೇ ಅನುಭವೀ ಛಾಯಾಚಿತ್ರಗ್ರಾಹಕರು ಇದ್ದಿರುವಂತಿದೆ...

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ಹೆಗ್ಡೆ ಸಾರ್......

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

drushya pradeep's picture

ಫೋಟೋ ಗಳು ತುಂಬಾ ಚೆನ್ನಾಗಿವೆ ನಾಗರಾಜ್...
ಇಷ್ಟವಾಯ್ತು...
ಎಷ್ಟು ಸಲ ನೋಡಿದ್ರು ಬೇಜಾರಾಗ್ದೇ ಇರೋ ಜಾಗ ಅಂದ್ರೆ ಹಂಪಿ...

ನನ್ನಿ
ದೃಶ್ಯ ಪ್ರದೀಪ :)

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ದೃಶ್ಯ....
ನೀನು ಹೇಳಿದ್ದು ನಿಜ ಹಂಪಿಯನ್ನು ಎಷ್ಟು ಬಾರಿ ನೋಡಿದ್ರು ಬೇಜಾರ್ ಆಗೋದಿಲ್ಲ ಆದ್ದರಿಂದಲೇ ಕಳೆದ ವರ್ಷ ಸುಮಾರು ಎಂಟು ಬಾರಿ ಬೇಟಿ ಮಾಡಿದ್ದೆ.

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

nkumar's picture

ಎಲ್ಲಾ ಚಿತ್ರಗಳು ಚೆನ್ನಾಗಿವೆ. ಕಡೆಯದ್ದು ಬೊಂಬಾಟ್

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ನಂದಕುಮಾರ್ ನನಗೂ ಸಹ ಕಡೆಯ ಚಿತ್ರ ಇಷ್ಟವಾಯಿತು...

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

palachandra's picture

ಸಕ್ಕತ್ ಫೋಟೋಸ್

"ತುಂಗಭದ್ರಾ ನದಿ ಮತ್ತು ಸೂರ್ಯಾಸ್ಥಮದ ಕಿರಣಗಳು " - ಚಿಂದಿಯಾಗಿದೆ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಪಾಲಾರವರೇ....

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

anil.ramesh's picture

ಸೂಪರ್‍ ಫೋಟೋಸ್.

೧೭. ತುಂಗಭದ್ರಾ ನದಿ ಮತ್ತು ಸೂರ್ಯಾಸ್ಥಮದ ಕಿರಣಗಳು
ವಾವ್! ತುಂಬಾ ಚೆನ್ನಾಗಿದೆ.

೧೬. 16. ವಿಠ್ಠಲ ದೇವಾಲಯ
ಎಡಕ್ಕೆ ಎತ್ತಿಕೊಂಡಿದೆ. ಸರಿಯಾಗಿ Align ಮಾಡಿದ್ದಿದ್ರೆ ಚೆನ್ನಾಗಿ ಕಾಣ್ತಿತ್ತು.

-ಅನಿಲ್.

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಅನೀಲ್ ರವರೇ
>>>>>>೧೬. 16. ವಿಠ್ಠಲ ದೇವಾಲಯ
ಎಡಕ್ಕೆ ಎತ್ತಿಕೊಂಡಿದೆ. ಸರಿಯಾಗಿ Align ಮಾಡಿದ್ರೆ ಚೆನ್ನಾಗಿ ಕಾಣ್ತಿತ್ತು.<<<<<<
ನಾನು ಸರಿಯಾಗಿ ಗಮನಿಸಿರಲಿಲ್ಲ ಈಗ ನೋಡಿದೆ ;)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

Vyasraj's picture

ಸೂಪರ್ರ್ ಫೋಟೊಸ್ ಕಣ್ರೀ .....
೬ ನೆ ಫೋಟೊ ಸುಪ್ರಸಿದ್ಧ ಹಂಪಿ ಬಜಾರ್ ನಡೆಯುತ್ತಿದ್ದ ಜಾಗಾ ಅಲ್ವೆ ?

ಯಾವಗ್ ಹೋಗಿದ್ರಿ , ಈಗ್ಲೂ ನದಿಲಿ ಇಶ್ಟೊಂದು ನೀರ್‍ ಇದೆನಾ ?

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ನಿಜ ವ್ಯಾಸರಾಜ್ ಅದು ಹಂಪಿ ಬಜಾರ್ ಚಿತ್ರಾನೇ...... ನಾನು ಆಗಾಗ ಹೋಗ್ತಾ ಇರ್ತೀನಿ ನನಗೆ ಇಷ್ಟವಾದ ಜಾಗ ನಾನು ಜನವರಿ ೧ಕ್ಕೆ ಹೋಗಿದ್ದೆ ಮತ್ತೆ ಹೋಗಲಿಲ್ಲ ನೀರು ಸ್ವಲ್ಪ ಕಡಿಮೆ ಆಗಿದೆ ಬೇಸಿಗೆ ಅಲ್ವಾ......

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

ನೇಸರ's picture

ನಾಗರಾಜ್ ಮೂರ್ತಲಿ ಬಸವಣ್ಣನ ಫೋಟೊ ಎಲ್ಲಿ? ತಮಾಷೆಗೆ ಹೇಳ್ದೆ ಅಷ್ಟೇ. ನಮ್ಮ ಕಡೆ ಯಾರದ್ರು ಹಂಪಿಗೆ ಹೋಗಿದ್ದೆ ಅಂದ್ರೆ ಮೂರ್ತಲಿ ಬಸವಣ್ಣನ ನೋಡ್ದ್ಯ ಅಂತ ಕೇಳ್ತಾರೆ... ಫೋಟೋಸ್ ಚೆನ್ನಾಗಿ ಇವೆ. ಟೈಮ್ ಸಿಕ್ಕರೆ ನಾನು ಈ ಸರ್ತಿ ಊರಿಗೆ ಹೋದಾಗ ತೆಗೆದ ಫೋಟೋಸ್ ಲಿಂಕ್ ಹಾಕ್ತೀನಿ...

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದಗಳು ಸಾರ್.....ಈ ಸಾರಿ ಹೋದಾಗ ಮೂರ್ತಲಿ ಬಸವಣ್ಣನ ಫೋಟೊ ತಂದು ಹಾಕ್ತೀನಿ. :)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

modmani's picture

ಸುಂದರ ಚಿತ್ರಗಳು.. ಸುಂದರ ಬೆಳಕಿನ ಸಂಯೋಜನೆ, ಸುಂದರ ಹೊರಾಂಗಣ, ಮರೆತ ಮನೆಯ ವೈಭವವನ್ನು ಮತ್ತೆ ಕಣ್ಣಿಗೆ ಕಟ್ಟಿ ಕೊಡುವ ಪ್ರಯತ್ನ. ಅಭಿನಂದನೆಗಳು ನಾಗರಾಜ್ ಕೃತಜ್ಞತೆಗಳು ಕೂಡಾ..

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದಗಳು ನಿಮ್ಮ ಹೊಗಳಿಕೆ ಎಲ್ಲಾನು ನನಗೆ ಬೇಡ, ಹಂಪಿಯ ಸುಂದರ ಸ್ಮಾರಕಗಳಿಗೆ ಸಲ್ಲಬೇಕು...

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

msudan86's picture

ನಾಗರಾಜ್ ,

ಹಂಪಿಯ ಚಿತ್ರಗಳು ತುಂಬ ಚೆನ್ನಾಗಿದೆ ....

ನೀನು ಯಾವಾಗ ಹೋಗಿದ್ದೆ ?

--ಗೌಡ್ರು

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ಗೌಡ್ರೆ.......
ಸುಮಾರು ಸಾರಿ ಹೋಗಿದ್ದೆ ಗೌಡ್ರೆ ಜನವರಿ 1 ಕ್ಕೆ ಹೋಗಿದ್ದೆ, ಈ ತಿಂಗಳು 24 ಕ್ಕೆ ಮತ್ತೆ ಹೋಗಬೇಕು ಅಂತ ಇದ್ದೀನಿ ನೋಡೋಣ ;)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

manjunath s reddy's picture

ಫೋಟೋಗಳು ಸಕ್ಕತ್ತ್..
:)

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದಗಳು ರೆಡ್ಡಿಯವರಿಗೆ ಅಂದಹಾಗೆ ತಲೆ ಕೆಳಗಾಕಿದ್ರು ಚಿತ್ರಗಳು ಸರಿಯಾಗಿ ಕಾಣ್ತವಾ....? :)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

harshab's picture

ಛೇ...!! "ಉಗ್ರ ನರಸಿಂಹ" ಮೂರ್ತಿಯ ಕೈಗಳೆರಡು ಮುರಿದುಹೋಗಿವೆ.

ನಮ್ಮ ಪ್ರವಾಸೋದ್ಯಮ ಇಲಾಖೆಗೆ, ಪುರಾತನ ’ಆಸ್ತಿ’ ಗಳ ಬೆಲೆಯೇ ಗೊತ್ತಿಲ್ಲ. ಹಂಪಿಯನ್ನ ಹಾಳಾಗಲು ಬಿಟ್ಟಿದ್ದಾರೆ.

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಹರ್ಷ ಇದು ಇತ್ತೀಚೆಗೆ ಮುರಿದದ್ದು ಅಲ್ಲ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣದಲ್ಲಿ ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.ಅದರ ಜೊತೆ ಇದೂ ಸಹ ಹಾಳಾಗಿದೆ. ಹಂಪಿಯಲ್ಲಿ ಶೇಕಡ ೯೦ ರಷ್ಟು ಎಲ್ಲವೂ ಹಾಳಾಗಿದೆ. ಇತ್ತೀಚೆಗೆ ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಆದ್ದರಿಂದ ಯುನೆಸ್ಕೋ ಎಲ್ಲಾ ಸ್ಮಾರಕಗಳನ್ನು ಸರಿಪಡಿಸಲು ಮುಂದಾಗಿದೆ ಕಾರ್ಯ ಸಹ ನಡೆಯುತ್ತಿದೆ.

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

harshab's picture

"ತಾಳೀಕೋಟೆಯ ಯುದ್ಧದಲ್ಲಿ "

ಸ್ವಲ್ಪ ವಿವರಿಸುತ್ತೀರಾ..?

ಯಾವಾಗಾ? ಯಾಕೆ ನಡೆಯಿತು ? ಅಂತ.

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ತಾಳೀಕೋಟೆಯ ಯುದ್ಧ ಜನವರಿ 26, 1565ರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ ಬಿಜಾಪುರದಿಂದ 80 ಕಿ.ಮೀ ದೂರದಲ್ಲಿರುವ ಕರ್ನಾಟಕದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.

ಇದರ ಬಗ್ಗೆ ಮಾಹಿತಿ ಇಲ್ಲಿ ನೋಡಿ http://kn.wikipedia....

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

harshab's picture

ಹೋ, ಆ ಕಾಲದಲ್ಲಿ, ಎಲ್ಲಾ ಯುದ್ದ ಗಳಲ್ಲಿ ಸೋತವರ ಆಸ್ತಿಗಳನ್ನ, ದೇವರ ಮೂರ್ತಿಗಳನ್ನ ಹಿಂಗಾ ಹೊಡದಾಕ್ತಿದ್ದಿದ್ದು...!!

ಉ: ಹಂಪಿಯ ಕೆಲವು ಚಿತ್ರಗಳು

hamsanandi's picture

ನಾಗರಾಜ್ ಅವರೆ, ಚಿತ್ರಗಳು ತುಂಬಾ ಚೆನ್ನಾಗಿವೆ.

ಉಗ್ರನರಸಿಂಹನ ಬಗ್ಗೆ ಇನ್ನೊಂದು ಸ್ವಲ್ಪ ಹೆಚ್ಚಿನ ಮಾಹಿತಿ ಸೇರಿಸೋಣ ಅನ್ನಿಸಿತು :) ಯಾಕಂದ್ರೆ ನನಗನ್ನಿಸೋ ಹಾಗೆ ಮುಕ್ಕಾಲು ಮಂದಿ ಸಂಪದಿಗರಿಗೆ ೮೨-೮೪ ನೇ ಇಸವೀಲಿ ನಡೆದಿದ್ದೇನು ಅಂತ ನೆನಪಿರೋದಿಕ್ಕೆ ಸಾಧ್ಯ ಇಲ್ಲ.

ತಾಳೀಕೋಟೆ ಯುದ್ಧದಲ್ಲಿ ಹಂಪೆ ನಾಶವಾದಾಗ ಈ ಮೂರ್ತಿ ಇನ್ನೂ ಹೆಚ್ಚಿಗೆ ಭಗ್ನವಾಗಿತ್ತು. ಕೈಕಾಲುಗಳು ಪೂರ್ತಿ ಮುರಿದಿದ್ದವು. ಮೂರ್ತಿಯ ಭಾಗಗಳು ಎಷ್ಟೋ ತುಂಡುತುಂಡಾಗಿ ಅಲ್ಲಿ ಅಕ್ಕ ಪಕ್ಕದಲ್ಲೇ ನೆಲದಲ್ಲಿ ಬಿದ್ದಿದ್ದವು. ೧೯೮೦ ನೇ ಇಸವಿ ಸುಮಾರಲ್ಲಿ (ಅಂದಾಜು), ಪುರಾತತ್ವ ಇಲಾಖೆಯವರು(ಇರಬೇಕು), ಅಲ್ಲೆಲ್ಲ ಅಗೆದು, ಆ ತುಂಡುಗಳನ್ನೆಲ್ಲ ಮೂರ್ತಿಯ ಯಾವ ಭಾಗದ್ದಿರಬೇಕೆಂದು ಪತ್ತೆ ಮಾಡಿ ದುರಸ್ತಿ ಮಾಡಲು ತೊಡಗಿದರು. ಸಿಕ್ಕ ಭಾಗಗಳನ್ನು ಜೋಡಿಸತೊಡಗಿದರು. ಅಲ್ಲದೇ, ನರಸಿಂಹನ ತೊಡೆಯಮೇಲೆ ಕುಳಿತಿದ್ದಿರಬೇಕಾದ ಲಕ್ಷಿಯ ವಿಗ್ರಹವೂ (ಅಥವಾ ಭಾಗಗಳೂ) ದೊರಕಿದ್ದರಿಂದ ಇದು ಉಗ್ರ ನರಸಿಂಹನಲ್ಲದೇ, ಲಕ್ಷ್ಮೀ ನರಸಿಂಹ ಆಗಿರಬೇಕೆಂಬ ಊಹೆಯನ್ನೂ ಮಾಡಲಾಯಿತು.

ಆ ಸಮಯದಲ್ಲಿ ಡಾ.ಶಿವರಾಮ ಕಾರಂತರು ( ಅವರೇ ಅಂತ ನೆನಪು, ತಪ್ಪಿದ್ದರೆ ತಿಳಿಸಿ -ತಿದ್ದಿಕೊಳ್ಳುವೆ) ಈ ರೀತಿ ದುರಸ್ತಿ ಮಾಡುವುದು ಚರಿತ್ರೆಗೆ ಮಾಡುವ ಅಪರಾಧ ಎಂದು, ಈ ಕೆಲಸದ ಮೇಲೆ ಕೋರ್ಟ್ ತಡೆಯಾಜ್ಞೆ ತಂದು, ಈ ಕೆಲಸವನ್ನು (ನನಗೆ ತಿಳಿದ ಮಟ್ಟಿಗೆ) ಪೂರ್ತಿ ಮಾಡದೆ ನಿಲ್ಲಿಸಲಾಯಿತು. ಹಾಗಾಗಿ ನರಸಿಂಹ (ಅರೆಬರೆ) ಉಗ್ರನಾಗೇ ಉಳಿದಿದ್ದಾನೆ.

೧೯೮೦ ಕ್ಕೂ ಮೊದಲು ತೆಗೆದಿರುವ ಚಿತ್ರಗಳಲ್ಲಿ ಅವನ ಮೊದಲ ರೂಪವನ್ನು ನೋಡಬಹುದು.

-ಹಂಸಾನಂದಿ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಹಂಸಾನಂದಿಯವರೇ ಪ್ರತಿಕ್ರಿಯೆಗೆ ನನ್ನಿ ಸುಮಾರು ಮಾಹಿತಿ ನೀಡಿದ್ದೀರಾ ನೀವು ಹೇಳಿದ್ದು ನಿಜಾನೇ ಭಾಗಗಳನ್ನು ಅಂಟಿಸಿದ ಗುರುತುಗಳನ್ನು ಕಾಣಬಹುದು.

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

hamsanandi's picture

ವಿಗ್ರಹದ ಹಳೆಯ ಮತ್ತೆ ಹೊಸ ಚಿತ್ರಗಳನ್ನು ಒಟ್ಟಿಗೆ ಇಲ್ಲಿ ಹಾಕಿದ್ದೇನೆ:

http://www.sampada.n...

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ

ಉ: ಹಂಪಿಯ ಕೆಲವು ಚಿತ್ರಗಳು

palachandra's picture

ನನ್ನಿ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

:) ;)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

anil.ramesh's picture

ಹಂಸಾನಂದಿ,
ಮಾಹಿತಿಗೆ ಧನ್ಯವಾದ.

-ಅನಿಲ್.

ಉ: ಹಂಪಿಯ ಕೆಲವು ಚಿತ್ರಗಳು

createam's picture

ಮೊದಲು ಹಂಪಿಗೆ ಹೋದಾಗ ನನಗೂ ಕಾರಂತರಿಗೆ ಅನ್ನಿಸಿದಂತೆ ಅನಿಸಿತ್ತು (great minds think alike!!, ತಮಾಷೆಗ್ರೀ, ನಾನು ಅದ್‍ಹೇಗೆ ಕಾರಂತರಿಗೆ ಹೋಲಿಸ್ಕೊಂಡೆ ಅಂತ ವಾದ ಮಾಡೊಕ್ ಬರ್ಬೇಡಿ ;)). ಪುರಾತತ್ವ ಇಲಾಖೆಗೆ ಅಶ್ಟೂ ತಲೆ ಬೇಡ್ವ? ಇತಿಹಾಸದಿಂದ ಕಲಿಯೋದು ಬಹಳ ಇದೆ, ಆದರೆ ಇತಿಹಾಸವನ್ನ ಮರೆ ಮಾಚೋದ್ರಲ್ಲಿ ಅರ್ಥ ಇಲ್ಲ.
ಹಿಂದೆ ಅದು ಹೇಗಿರಬಹುದು ಎನ್ನುವ ಒಂದ ಚಿತ್ರವೋ ಅಥವಾ ಮಾಡೆಲ್ಲೋ ಸರಿ, ಅದು ಬಿಟ್ಟು ಹಳೇದನ್ನೆಲ್ಲಾ ಜೋಡಿಸ್ತೀನಿ ಅನ್ನೋದಲ್ಲ. ಇದನ್ನ ಯೋಚಿಸಿ, ಮಹೆಂಜೋದಾರೋದಲ್ಲಿ ಹಿಂದೆ ಒಂದು ದೊಡ್ಡ ನಗರವೇ ಇತ್ತು ಅಂತ ಆ ಜಾಗದಲ್ಲಿ ಸಿಗೋ ಇಟ್ಟಿಗೆಗಳನ್ನೆಲ್ಲ ಸೇರಿಸಿ ಹಳೇ ನಗರವನ್ನ ಮತ್ತೆ ಕಟ್ತೀನಿ ಅಂತ ಕೂತ್ರೆ ಹೇಗಾಗಬಹುದು?

ಉ: ಹಂಪಿಯ ಕೆಲವು ಚಿತ್ರಗಳು

shashikannada's picture

ಪ್ರಿಯ ನಾಗರಾಜ್,

ನಮಸ್ಕಾರ. ಹಂಪಿಯ ಎಲ್ಲಾ ಚಿತ್ರಗಳು ಸೊಗಸಾಗಿವೆ. ನಾನು ಹಂಪಿಗೆ ಹೋಗುವ ದಾರಿಯಲ್ಲಿ ಸಿಗುವ ಕಮಲಾಪುರದಲ್ಲಿ 3 ತಿಂಗಳು ವಾಸವಾಗಿದ್ದೆ.ಆದರೂ, ಹಂಪಿಯ ಎಲ್ಲಾ ಸ್ಥಳಗಳನ್ನು ನೋಡಲಾಗಿಲ್ಲ.ನಿಮಗೆ ಗೊತ್ತಿರೋ ಹಾಗೆ ಹಂಪಿ ನೋಡೋಕೆ ಕನಿಷ್ಟ ಒಂದು ವಾರವಾದ್ರೂ ಬೇಕು.ನನ್ನದೂ ಕೆಲವು ಫೋಟೋಗಳಿವೆ. ಹಾಕಬೇಕು. ಅಂದಹಾಗೆ, ನೀವು ಕಮಲ ಮಹಲ್, ಮಹಾನವಮಿ ದಿಬ್ಬ, ಆನೆ ಕಟ್ಟಿ ಹಾಕುತ್ತಿದ್ದ ಸ್ಥಳ, ಕಮಲಾಪುರದ ಕೆರೆ, ಈಗ ಹೊಸದಾಗಿ ಉತ್ಖನನ ಮಾಡಿರುವ ಕೆಲ ಸ್ಥಳಗಳ ಫೋಟೋಗಳನ್ನು ನೀವು ತೆಗೀಬೇಕಿತ್ತು. ನೀವು ಮತ್ತೊಮ್ಮೆ ಆ ಕಡೆ ಹೋದ್ರೆ ಕನ್ನಡ ವಿಶ್ವವಿದ್ಯಾಲಯಕ್ಕೊಮ್ಮೆ ಭೇಟಿ ಕೊಡಿ. ಬಹುಶಃ ನೀವು ಅಂತಹ ವಿಶ್ವವಿದ್ಯಾಲಯವನ್ನು ಇದುವರೆಗೂ ನೋಡಿರಲಾರಿರಿ.

ಪ್ರೀತಿಯಿಂದ,
ಶಶಿ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಶಿವಕುಮಾರ್ ನಿಮ್ಮ ಪ್ರತಿಕ್ರಿಯೆಗೆ ನನ್ನಿ
ನೀವು ಹೇಳಿದ ಹಾಗೆ ಕಮಲ ಮಹಲ್, ಮಹಾನವಮಿ ದಿಬ್ಬ, ಆನೆ ಕಟ್ಟಿ (ಆನೆಲಾಯ)ಹಾಕುತ್ತಿದ್ದ ಸ್ಥಳ, ಕಮಲಾಪುರದ ಕೆರೆ, ಈಗ ಹೊಸದಾಗಿ ಉತ್ಖನನ ಮಾಡಿರುವ ಕೆಲ ಸ್ಥಳಗಳ ಫೋಟೋಗಳನ್ನು ನಾನು ತೆಗೆದಿರುವೆ ಅದನ್ನ ಸಹ ಸದ್ಯದಲ್ಲೇ ಸಂಪದದಲ್ಲಿ ಹಾಕುವೆ...
ಕಮಲಾಪುರದ ಬಳಿ ಇರುವ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಮೂರು ಬಾರಿ ಬೇಟಿ ನೀಡಿದ್ದೆ. ಜೊತೆಗೆ ಯುನೆಸ್ಕೋ ಜೊತೆ ಕಳೆದ ವರ್ಷ ಜುಲೈನಲ್ಲಿ ಮೂರು ದಿನಗಳ ಕಾಲ ಕಾರ್ಯಗಾರವನ್ನು ಸಹ ಮಾಡಿದೆವು. ವಿಶ್ವವಿದ್ಯಾಲಯ ತುಂಬಾನೇ ಚೆನ್ನಾಗಿದೆ ಅಲ್ಲಿನ ಗಿಡಮರಗಳು ತುಂಬಾನೇ ಇಷ್ಟವಾಯಿತು.

ನಾಗರಾಜ್
ಪ್ರೀತಿಯಿಂದ,

ಉ: ಹಂಪಿಯ ಕೆಲವು ಚಿತ್ರಗಳು

vinutha.mv's picture

ಚ೦ದದ ಚಿತ್ರಗಳು ನಾಗರಾಜ್. ಹಂಪಿ ಆನೆಗುಂದಿ ಸಂಪರ್ಕದ ತೂಗು ಸೇತುವೆ ಮರುನಿರ್ಮಾಣ ಕಾರ್ಯ ಶುರು ಆಗಿದ್ಯಾ?

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ನಿಮ್ಮ ಪ್ರತಿಕ್ರಿಯೆಗೆ ನನ್ನಿ
>>>ಹಂಪಿ ಆನೆಗುಂದಿ ಸಂಪರ್ಕದ ತೂಗು ಸೇತುವೆ ಮರುನಿರ್ಮಾಣ ಕಾರ್ಯ ಶುರು ಆಗಿದ್ಯಾ? <<<<
ಇದರ ಬಗ್ಗೆ ಇನ್ನಷ್ಟು ಚರ್ಚೆ ನಡೀತಾ ಇದೆ ಸದ್ಯದಲ್ಲೇ ಆಗಬಹುದು.

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

shaamala's picture

ನಾಗರಾಜ್ ಅವರೇ,
ಹಂಪಿಯ ಚಿತ್ರಗಳು ತುಂಬಾ ಸೊಗಸಾಗಿವೆ. ಧನ್ಯವಾದಗಳು.

ಇಲ್ಲಿ ನನ್ನ ಮಗಳ ಶಾಲೆಯ ಪ್ರಾಜೆಕ್ಟ್ ಗಾಗಿ ಹಂಪಿಯ (ವರ್ಲ್ಡ್ ಹೆರಿಟೇಜ್) ಬಗ್ಗೆ ಒಂದು ಪೋಸ್ಟರ್ ಮಾಡಬೇಕಂತ ನಾನು ಅಂತರಜಾಲದಲ್ಲಿ ಕಾಪಿರೈಟ ಇಲ್ಲದ ಚಿತ್ರಗಳ್ನ ಹುಡುಕ್ತಾ ಇದ್ದೆ. ಈಗ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದೆ, ಆದರೆ ಚಿತ್ರಗಳ್ನ ಬಳಸಿಕೊಳ್ಳಲು ನಿಮ್ಮ ಅನುಮತಿ ಬೇಕು. ನೀಡುತ್ತೀರ?

ನೂರಾರು ವರ್ಷಗಳ ಹಿಂದೆ ಕಟ್ಟಿದ ಶ್ರೀ ವಿರೂಪಾಕ್ಷ ದೇವಸ್ಥಾನ ಮನುಷ್ಯನ ದಾಳಿಗೆ ಪಕ್ಕಾಗೂ ಇನ್ನೂ ಚೆನ್ನಾಗೇ ನಿಂತಿದೆ- ಆಧುನಿಕ ತಂತ್ರಜ್ಞಾನ ಬಳಸಿ, ಅನುಭವಸ್ಥ ಇಂಜಿನಿಯರ್ಗಳು ಕಟ್ಟುತ್ತಿರುವ ತೂಗು ಸೇತುವೆ ಕಟ್ಟುತ್ತಿರುವಾಗಲೇ ಬಿದ್ದಿದೆ!! ಪವಾಡ ಎನ್ನೋಣವೇ :), ಕಟ್ಟುವವರ ಕರ್ತವ್ಯ ನಿಷ್ಠೆ ಎನ್ನೋಣವೇ, ಅವರ ದೈವ ಭಕ್ತಿಯೇ, ರಾಜನ ಭಯವೇ (ಈ ಆಡಳಿತದ ವಿಫಲತೆಯೇ?), ಈಗಿನ ಜನತೆಗೆ ತಮ್ಮ ಕೆಲಸದಲ್ಲಿ ಆಸಕ್ತಿ, ಹೆಮ್ಮೆ ಇಲ್ಲದಿರುವುದೇ? ಒಟ್ಟಿನಲ್ಲಿ ನಾಗರೀಕತೆ ಎತ್ತ ಕಡೆ ಸಾಗುತ್ತಿದೆ ಅಂತ ಸ್ಪಷ್ಟವಾಗಿ ಕಾಣುತ್ತಾ ಇದೆ ಅಲ್ಲವೇ!

ನನ್ನಿ,
ಶಾಮಲ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಶ್ಯಾಮಲಾರವರೇ ನಿಮ್ಮ ಪ್ರತಿಕ್ರಿಯೆಗೆ ನನ್ನಿ
ನನ್ನ ಯಾವುದೇ ಚಿತ್ರಗಳಿಗೆ ಆಗಲೀ ಯಾವುದೇ ಬರಹಗಳಿಗೆ, ರೇಡಿಯೋ ಕಾರ್ಯಕ್ರಮಗಳಿಗೆ ಕಾಪಿರೈಟ್ ಇರುವುದಿಲ್ಲ ತಪ್ಪದೇ ಬಳಸಬಹುದು :)
ಸೇತುವೇ ಬೀಳೋದಕ್ಕೆ ಇಂಜನೀಯರ್ಸ್ ರವರ ಬೇಜವಾಬ್ದಾರಿಯೇ ಕಾರಣ ಇದರಲ್ಲಿ ಯಾವುದೇ ಪವಾಡ, ದೈವ ಭಕ್ತಿ ಯಾವುದೂ ಸಹ ಇಲ್ಲ. ಸೇತುವೆ ಕಟ್ಟಲು ಶುರು ಮಾಡಿ ಹತ್ತಾರು ವರ್ಷಗಳ ನಂತರ ಪುನಃ ಅದನ್ನೇ ಮುಂದುವರೆಸಿದರೆ ಏನಾಗತ್ತೆ ? ಹೀಗೇ ಆಗತ್ತೆ ಮೊದಲೇ ತುಕ್ಕು ಹಿಡಿದಿತ್ತು ನಂತರ ಅದಕ್ಕೆ ಕಂಬಿಗಳನ್ನ ಜೋಡಿಸಿ ಕೆಲಸ ಶುರು ಮಾಡಿದ್ರೂ ಅದಕ್ಕೆ ಹೀಗಾಗಿದ್ದು....

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

naasomeswara's picture

ತುಂಗಭದ್ರಾ ನದಿಯ ಸಂಜೆಯ ನೋಟ ಸೂಪರ್ಬ್!

-ನಾಸೋ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ಸಾರ್

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

manjunathams's picture

ಪೋಟೋಗಳು ಚೆನ್ನಾಗಿವೆ ನಾಗರಾಜ್, ಅಂದಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದೀರೆಂದು ಕಾಣುತ್ತದೆ ಇಲ್ಲದೆ ಹೋದರೆ ವರ್ಷಕ್ಕೆ ಏಳು ಬಾರಿ ಹೇಗೆ ಸಾಧ್ಯವಾಗುತ್ತಿತ್ತು? anyhow thank you for sharing your wonderful moment with excellent photos.

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಮಂಜುನಾಥ್ ರವರೇ ನೀವು ಹೇಳಿದ ಹಾಗೆ ನಮ್ಮ ಮನೆಯಲ್ಲಿ ನಮ್ಮ ತಾಯಿ ಸಹ ಹೇಳ್ತಾಳೆ ಕಾಲಿಗೇನಾದ್ರು ಚಕ್ರ ಇದೇ ಇದ್ದಕ್ಕಿದ್ದಂಗೆ ಹೋಗ್ತೀಯಾ ಇದ್ದಕ್ಕಿದ್ದಂಗೆ ಬರ್ತೀಯಾ ಅಂತ :) ಅಮ್ಮನ ಮಾತುಗಳು ಜ್ನಾಪಕ ಬಂತು ;)
ನನಗೆ ಇಷ್ಟವಾದ ಸ್ಥಳಗಳಿಗೆ ಪ್ರತಿ ವಾರಾಂತ್ಯದಲ್ಲಿ ಹೋಗ್ತಾ ಇರ್ತೇನೆ...:)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

Ananatha's picture

ಸೊಗಸಾದ ಚಿತ್ರಗಳು..ನಾಗರಾಜ್...
ಕ್ಷೇತ್ರ ಸ೦ದರ್ಶನ ಅತ್ತ್ಯುತ್ತಮ ಹವ್ಯಾಸ..
ಮು೦ದುವರೆಸಿ ಅಭ್ಯಾಸ..
ನಮಗೂ ಹ೦ಚಿ ಪ್ರವಾಸದ..
ಸಿಹಿ ಪಾಯಸ..!

ಅನ೦ತ್

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಧನ್ಯವಾದ ನಾಯಕ್ ಪಾಯಸ ಹಂಚೋದಕ್ಕೆ ಸ್ವಲ್ಪ ಕಷ್ಟ... ;)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

sm.sathyacharana's picture

ಆದ್ರೂ ನಾಗರಾಜ್.. ಬಿಟ್ಟಿಯಾಗಿ ಕೊಡಬೇಡ್ರಿ.. ;) (@ನನ್ನ ಯಾವುದೇ ಚಿತ್ರಗಳಿಗೆ ಆಗಲೀ ಯಾವುದೇ ಬರಹಗಳಿಗೆ, ರೇಡಿಯೋ ಕಾರ್ಯಕ್ರಮಗಳಿಗೆ ಕಾಪಿರೈಟ್ ಇರುವುದಿಲ್ಲ ತಪ್ಪದೇ ಬಳಸಬಹುದು )ತಮಾಷೆಗೆ ಹೇಳಿದೆ.. :D

ನಾನು ಇದುವರೆವಿಗೆ.. ಒಂದೇ ಬಾರಿ ಹಂಪಿಗೆ ಭೇಟಿಯಿತ್ತದ್ದು..
ಆಗ ಅನ್ನಿಸಿದ್ದು ಅಷ್ಟೇ.. ಎಲ್ಲರೂ ಹೇಳುವಂತೆ, ಇದು, ಒಂದು ದಿನದಲ್ಲ.. ಒಂದು ವಾರದ ಭೇಟಿಯ ಜಾಗ.
ನನಗನ್ನಿಸೋದು, ಅಲ್ಲೇ ಎಲ್ಲಾದ್ರೂ ಮನೆ ಮಾಡ್ಕೊಂಡು, ಒಂದು ತಿಂಗಳೋ, ಒಂದೈದೋ, ಹತ್ತೋ ತಿಂಗಳು ಇರಬೇಕೇನೋ.. ಆಗ ಒಂದಷ್ಟು ಸಮಾಧಾನ ಆಗುತ್ತೆ.. :D

ನಿಮ್ಮೊಲವಿನ,
ಸತ್ಯ..

ಉ: ಹಂಪಿಯ ಕೆಲವು ಚಿತ್ರಗಳು

shaamala's picture

ನೀವು ಹೇಳುವುದು ಸತ್ಯ- ಸತ್ಯ ಅವರೇ :)
ನಾಗರಾಜ್ ಅವರು ಬಹಳ ಕಡೆ ಕಷ್ಟಪಟ್ಟು ಪ್ರವಾಸ ಮಾಡಿ ತೆಗೆದ ಚಿತ್ರಗಳು, ಬರೆದ ಲೇಖನಗಳು -ಯಾವುದೇ ಆಗಲಿ, ಅದು ಅವರ ಸ್ವತ್ತು, ಅವರ ಶ್ರಮದ ಫಲ. ಅದಕ್ಕೆ ಅವರು ಪ್ರತಿಫಲ ಕೇಳಿದರೆ ತಪ್ಪಾಗುವುದಿಲ್ಲ. ನಮ್ಮಲ್ಲಿನ್ನೂ ಆ ರೀತಿ ಯೋಚನೆ ಬೆಳೆದಿಲ್ಲ. ಈಗ ಎಲ್ಲರೂ ಜಾಗತಿಕ ನಾಗರೀಕರಾಗಿರುವುದರಿಂದ ಈ ಬೌಧ್ಧಿಕ ಹಕ್ಕು , ಕಾಪಿ ರೈಟ್ ಇವೆಲ್ಲ ಉಪಯೋಗಿಸಿ ತಮ್ಮ ಕೃತಿಗಳನ್ನು ಕಾಪಾಡಿಕೊಳ್ಳುವುದು ಒಳ್ಳೆಯದು!

ಶಾಮಲ

ಉ: ಹಂಪಿಯ ಕೆಲವು ಚಿತ್ರಗಳು

Nagaraj.G's picture

ಸತ್ಯ ಚರಣ್ ನೀನು ಹೇಳಿದ್ದು ನಿಜಾನೇ ಬಿಟ್ಟಿಯಾಗಿ ಕೊಡಬಾರ್ದು ನಮ್ಮ ಕರ್ಚುವೆಚ್ಚಗಳೆಲ್ಲಾ ಎಷ್ಟಾಗಿರತ್ತೆ ;) ಆದ್ರೂ ನಮ್ಮ ಪಾಲಿಸಿ ಬಿಟ್ಟು ಹೋಬಾರದಲ್ವಾ......
ಚರಣ್ ಹಂಪಿಗೆ ಬೇಗ ಹೋಗಿಬನ್ನಿ. ನಮ್ಮ ಗಳೆಯರು ಹಂಪಿ ಮತ್ತು ಆನೆಗುಂದಿಯಲ್ಲಿ ಇದ್ದಾರೆ ಅವರು ನಿಮಗೆ ಏನಾದ್ರು ಸಹಾಯ ಬೇಕಾದ್ರೆ ಮಾಡ್ತಾರೆ ನೀವು ಹೋದಗ ತಿಳಿಸಿದ್ರೆ ಉತ್ತಮ ಅಂದಹಾಗೆ ಈ ಸಮಯದಲ್ಲಿ ಹೋದ್ರೆ ಸಿಕ್ಕಾಪಟ್ಟೆ ಬಿಸಿಲು ಸುತ್ತಾಡೋದಕ್ಕೆ ಕಷ್ಟ. ಬೇಸಿಗೆಯ ಇನ್ನೊಂದು ಅನುಕೂಲ ಅಂದ್ರೆ ಈಗ ಯಾರೂ ಸಹ ಪ್ರವಾಸಿಗರು ಬರೋದಿಲ್ಲ ಆದ್ದರಿಂದ ನಿಮಗೆ ರೂಂಗಳು ಸ್ವಲ್ಪ ಚೀಪಾಗಿ ಸಿಗತ್ತೆ... :)

ನಾಗರಾಜ್

ಉ: ಹಂಪಿಯ ಕೆಲವು ಚಿತ್ರಗಳು

sm.sathyacharana's picture

ನಾಗರಾಜ್.. ನಿಮ್ಮ ಪಾಲಿಸಿ ಬಿಡಬೇಡಿ.. ಸಂಪದದವರೆಲ್ಲಾ ನಮ್ಮವರೇ ಅಲ್ವೇ..
ಸುಮ್ಮನೆ ತಮಾಷೆ ಮಾಡಿದೆ..
ಸದ್ಯ ನಾನು ಹಂಪಿಗೆ ಪ್ರವಾಸ ಮಾಡೋದು ಕಷ್ಟ..
ಆದರೆ, ಕೆಲಸದ ಮೇಲೆ, "on duty" ದಕ್ಷಿಣ ಮಹಾರಾಷ್ಟ್ರ, ಉತ್ತರ ಕರ್ನಾಟಕ, ಗೋವ, ಈ ಪ್ರದೇಶಗಳಿಗೆ ನನ್ನ ಭೇಟಿ, ಸದ್ಯದಲ್ಲೇ.. ಅಂದರೆ, ಸೋಮವಾರದಿಂದ ಶುರುವಾಗುತ್ತಿದೆ.. ಒಟ್ಟು ಹದಿನೈದು ದಿನ.. ಸಂಪದ ನೋಡೋಕ್ಕೆ.. ಸಮಯ ಸಿಗುತ್ತೋ ಇಲ್ವೋ ಅನ್ನೋ ಯೋಚನೆ.. ಆಗಿದೆ.. ನೋಡೋಣ.. ಹಂಪಿಗೆ ಒಂದು ಬಾರಿ ಹೋಗಿದ್ದೇನೆ.. ಮತ್ತೆ ಸಮಯ ಮಾಡಿಕೊಂಡು, ಹೋಗಲೇ ಬೇಕು.. ಆದರೆ ಸಮಯ ಯಾವಾಗ ಬರುತ್ತೋ.. ಭಗವಂತ ಬಲ್ಲ.. ನಿಮ್ಮೆಲ್ಲಾ ಸಲಹೆಗಳಿಗೆ..ಧನ್ಯವಾದ.. ಖಂಡಿತ ಮುಂದಿನ ಬಾರಿ ಹೋಗುವಾಗ, ನಿಮ್ಮನ್ನು.. ಸಂಪರ್ಕಿಸುವೆ..

ನಿಮ್ಮೊಲವಿನ,
ಸತ್ಯ..

ಉ: ಹಂಪಿಯ ಕೆಲವು ಚಿತ್ರಗಳು

shaamala's picture

ಕಾಮೆಂಟ್ ಮೇಲಿದೆ!