ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜನನ ನೋಂದಣಿ

ಎರಡು ವರ್ಷಕ್ಕೆ ಹಿಂದೆ ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳಲ್ಲಿ "ಪ್ಲಾನ್ ಇಂಡಿಯಾ" ಸಹಯೋಗದಲ್ಲಿ ಸಾರ್ವತ್ರಿಕ ಜನನ ನೋಂದಣಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂದಿದ್ದೆವು.

ಅರಿವು ಮೂಡಿಸುವ ಸಲುವಾಗಿ  ಹಲವಾರು ಮಾದರಿಗಳನ್ನು ಬಳಸಲಾಯಿತು.  ರೇಡಿಯೋ ಮೂಲಕ, ಬಿತ್ತಿಪತ್ರಗಳು, ಗೋಡೆ ಬರಹ,  ಬೀದಿ ನಾಟಕ, ದೂರದರ್ಶನ ಹೀಗೆ ಹಲವಾರು ಮಾದರಿಗಳನ್ನು ಬಳಸಿ ಜನರಿಗೆ ಅರಿವನ್ನು ಮೂಡಿಸಿ, ಜನನ ನೋಂದಣಿಯ ಪ್ರಮಾಣ ಹೆಚ್ಚಿಗೆ ಮಾಡಲಾಯಿತು ಹಾಗೂ ಯೋಜನೆಯು ಯಶಸ್ವಿ ಆಯಿತು.

ನಾನು ಸಹ ಈ ಯೋಜನೆಯಲ್ಲಿ ಭಾಗಿ ಆಗಿ ಸಾಕಷ್ಟು ಕೆಲಸ ಮಾಡಿದೆ. ರೇಡಿಯೋ ಕಾರ್ಯಕ್ರಮ ತಯಾರಿಸುವುದರಿಂದ ಹಿಡಿದು, ದೂರದರ್ಶನಕ್ಕೆ ಮತ್ತು ಸ್ಥಳೀಯ ಕೇಬಲ್ ಆಪರೇಟರಿಗೆ ಬೇಕಾದ ವಿಡಿಯೋ ಯಾರಿಸುವ ತನಕ ಹಾಗೂ ಒಟ್ಟಾರೆ ಯೋಜನೆಯ ವಿಡಿಯೋ ಡಾಕ್ಯುಮೆಂಟೇಷನ್  ಮಾಡುವ ತನಕ ಕೆಲಸ ಮಾಡಿದೆ.ಅವುಗಳ ಉದಾಹರಣೆ ಇವು.

ನೀವು ನಿಮ್ಮ ಮುಗುವಿನ ಜನನ ನೋಂದಣಿ ಮಾಡಿದ್ದೀರಾ.? ಮಾಡಿಲ್ಲದಿದ್ದರೆ ಕೂಡಲೇ ನೋಂದಣಿ ಮಾಡಿಸಿ.

No votes yet