ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಸಂಪದ ಆರ್ಕೈವಿನಿಂದ

ಲೇಖಕರು

Nagaraj.G's picture

ಪೂರ್ಣ ಹೆಸರು
ನಾಗರಾಜ್

ಪರಿಚಯ

ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಬೆಂಗಳೂರಿನಲ್ಲಿ ಮರ ಅನ್ನುವ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in

ನನ್ನ ಬ್ಲಾಗ್ ಸ್ಪಾಟ್: http://nagarajmaraa....

ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರದೇಶ್ ಬೇಟಿ ನೀಡಿದಾಗ ತೆಗೆದ ಕೆಲವು ಪೋಟೋಗಳನ್ನು ಸುಮಾರು ದಿನಗಳಿಂದ ಸಂಪದದಲ್ಲಿ ಹಾಕಬೇಕು ಅಂತ ಕಾದು ಕಾದು  ಈದಿನ ಹಾಕ್ತಾ ಇದ್ದೀನಿ

 

ಓರ್ಚಾಹತ್ತಿರ  ನನ್ನ ಕ್ಯಾಮರ ಕಣ್ಣಿಗೆ ಕಾಣಿಸಿದ ಸೂರ್ಯೋದಯದ ದೃಶ್ಯ ಇದು
ಓರ್ಚಾದಲ್ಲಿ ಶ್ರೀರಾಮ ಮಂದಿರ

1501-1531 ರಲ್ಲಿ ರುದ್ರಪ್ರಥಾಪ ಸಿಂಗ್ ಕಟ್ಟಿಸಿದ ಅರಮನೆ
 
ಶಿಥಿಲಗೊಂಡಿರುವ ಅರಮನೆಯ ಒಂದು ಭಾಗ
ಅರಮನೆಯ ಕಡೆ ಹೋಗಲು ದಾರಿ
 
ರಾಜಮಂದಿರದ ಒಳನೋಟ
 
ಸಂಜೆಯಲ್ಲಿ  ಓರ್ಚಾ ನಗರದ ವಿಹಂಗಮ ನೊಟ
 
ಅರಮನೆಯ ಮೇಲಿನ ಗೋಪುರಗಳು 
 
ಶ್ರೀರಾಮನು ಓರ್ಚಾದಲ್ಲಿ ಬಂದು ನೆಲೆಸಿದಾಗ ಅಡುಗೆ ಮಾಡುತ್ತಿದ ಸ್ಥಳ
 
ಓರ್ಚಾವನ್ನು ಒಮ್ಮೆ ಸುತ್ತಿ ಬಂದು ಕುಂತು ಸುದಾರಿಸಿಕೊಳ್ಳುತ್ತಾ  ಇಲ್ಲಿನ ಚಾಟ್ ತಿಂದರೆ ಅದರ ಮಜಾನೇ ಮಜಾ..... 
 
ಓರ್ಚಾದಲ್ಲಿ ಶಾಪಿಂಗ್ ಮಾಡಲು ಹೆಚ್ಚಾಗಿ ಸಿಗುವುದೇ ಪುರಾತನ ಕಾಲದ ವಸ್ತುಗಳು
 

 

ಇಲ್ಲಿ ಮಾರಾಟಕ್ಕೆ ಇರುವಂತಹ ಈ ಪುರಾತನ ಕಾಲದ ವಿಗ್ರಹಗಳು ಸಾವಿರಾರು ವರ್ಷಗಳ ಹಿಂದಿನವು 
 
ನಮ್ಮ ರೇಡಿಯೋ ತಂಡ ಓರ್ಚಾ ನೋಡಿ ನಂತರ ಕುಣಿದು ಕುಪ್ಪಳಿಸಿದರು 
 

  

ನಾನಿದ್ದ ಅತಿಥಿ ಗೃಹದ ಮುಂದೆ ಒಂದೇ ವಿಧವಾದ ಹೂಗಳು ಇದ್ದವು ಒಂದಕ್ಕೆ ಸಂಗಾತಿ ಇತ್ತು ಇನ್ನೊಂದು ಒಬ್ಬಂಟಿ

ಉತ್ತರಪ್ರದೇಶದ ಝಾನ್ಸಿಯಲ್ಲಿ ರಾಣಿ ಝಾನ್ಸಿರಾಣಿ ಲಕ್ಷ್ಮಿಬಾಯಿಯ ಕೋಟೆಯ ದೃಶ್ಯ
 
ಝಾನ್ಸಿರಾಣಿ ಲಕ್ಷ್ಮಿಬಾಯಿ ಕೋಟೆಯ ಹೆಬ್ಬಾಗಳು  
 
ಝಾನ್ಸಿರಾಣಿ ಲಕ್ಷ್ಮಿಬಾಯಿ ಕೋಟೆಯ ಒಳಗಿನ ದೃಶ್ಯ 
 
ನನ್ನ ಕ್ಯಾಮರಾಗೆ ಸೆರೆಸಿಕ್ಕಿದ ಸೂರ್ಯಾಸ್ತಮ
 
 
ನೀವೇನಾದ್ರು ಮದ್ಯಪ್ರದೇಶ್ ಹೋದ್ರೆ ತಪ್ಪದೇ ಓರ್ಚಾ ನಗರವನ್ನು ಬೇಟಿಯನ್ನು ಮಾಡಿ. ಓರ್ಚಾ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದ್ದಲ್ಲಿ ಇಲ್ಲಿ ನೋಡಿ

 

 

Your rating: None Average: 4 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

hpn's picture

ಹೂವಿನ ಚಿತ್ರ ಫೋಕಸ್ ಹೊರಟು ಹೋಗಿದೆ.

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

rasikathe's picture

chennaagive,

raama maMdra swalpa dark aagide.

~meena.

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಹೌದು ಮೀನಾ ಮೇಡಂ ನಾನು ಸಂಜೆಯಲ್ಲಿ ತೆಗೆದೆ ಅದಕ್ಕೆ ಈ ರೀತಿ ಬಂದಿದೆ ಆದ್ರೂ ನನಗೆ ತುಂಬಾ ಹಿಡಿಸಿದ ಚಿತ್ರ ಇದು.

ನಾಗರಾಜ್

ತಮ್ಮ ಪ್ರತಿಕ್ರಿಯೆಗೆ ನನ್ನಿ...
ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಹೌದು ನಾಡಿಗ್ ರವರೇ ಮತ್ತೆ ಮತ್ತೆ ಪ್ರಯತ್ನ ಮಾಡಿದೆ ಆದ್ರೆ ಯಾಕೋ ಸರಿಬರಲಿಲ್ಲ ಬಂದಿದ್ರಲ್ಲಿ ಇದೇ ಚೆನ್ನಾಗಿತ್ತು ಹಾಕಿದೆ ;)

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

hariharapurasridhar's picture

ನಾಗರಾಜ್,
ನಿಮ್ಮ ಪ್ರಯತ್ನ ಚೆನ್ನಾಗಿದೆ. ನನಗೂ ಹೋದಲ್ಲೆಲ್ಲಾ ಫೊಟೋ ತೆಗೆಯುವ ಚಾಳಿ ಇದೆ. ಆದರೆ ಸಂಪದದಲ್ಲಿ ಒಂದೇ ಕಡೆ ಒಂದರ ಕೆಳಗೆ ಒಂದು ಫೋಟೋ ಹಾಕೋ ಟೆಕ್ನಿಕ್ ಗೊತ್ತಿಲ್ಲ. ನನಗೆ ಅರ್ಥವಾಗುವಂತೆ ತಿಳಿಸ್ತೀರಾ? ಇದೇ ಪ್ರಶ್ನೆಗೆ ಹಿಂದೆ ಮಿತ್ರರೊಬ್ಬರು ಉತ್ತರಿಸಿದ್ದರು. ಸರಿಯಾಗಿ ಗಮನಿಸಲಿಲ್ಲ.ಈಗ ತಿಳಿಸುವಿರಾ. ಇಲ್ಲಿ ಬೇಡವೆಂದರೆ ಮೇಲ್ ಮಾಡಿ.
ಧನ್ಯವಾದಗಳು

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಶ್ರೀಧರ್ ಸಾರ್ ಇದು ತುಂಬಾನೇ ಸುಲಭ ಮೊದಲಿಗೆ ನಾನೂ ಸಹ ಗೊತ್ತಿಲ್ಲದೇ ಪಡಬಾರದ ಕಷ್ಟ ಪಟ್ಟೇ :( ಸುಮಾರು ಜನರನ್ನ ಕೇಳಿದೆ ಆದೂ ಗೊತ್ತಾಗಲಿಲ್ಲ ಆಮೇಲೆ ಪ್ರಯತ್ನ ಮಾಡಿದೆ ಗೊತ್ತಾಯ್ತು. :( ಸಾರ್ ಮೊದಲಿಗೆ ನಿಮ್ಮಲ್ಲಿರುವ ಪೋಟೋಗಳನ್ನ ಸಂಪದದಲ್ಲಿ ಹಾಕಿ ಆಮೇಲೆ ನೀವು ಪ್ರೀ ಇದ್ದಾಗ ನನೊಂದು ಕಾಲ್ ಮಾಡಿ ಹೇಳ್ತೇನೆ ಎರಡು ನಿಮಿಷದಲ್ಲಿ ಮುಗಿಸಬಹುದು ಇಲ್ಲಿ ಹೇಳಿದ್ರೆ ಸರಿಯಾಗಿ ಅರ್ಥ ಆಗೋದಿಲ್ಲ.

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

manjunathams's picture

ತುಂಬಾ ಚೆನ್ನಾಗಿವೆ,ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

manjunathams's picture

ಅಂದಹಾಗೆ ಚಿತ್ರಗಳಲ್ಲಿರುವ ಒಂಟಿ ಹೂವಿನ ಚಿತ್ರವನ್ನ ನಿಮ್ಮ ಸಂಘದ ಲೋಗೊವಾಗಿ ಬಳಸಿಕೊಳ್ಳುವ ಇರಾದೆ ಏನಾದರು ಇದೆಯೇ?

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ತಮ್ಮ ಪ್ರತಿಕ್ರಿಯೆಗೆ ತುಂಬಾನೇ ಧನ್ಯವಾದಗಳು ಮಾ.ಸು.ಮಂಜುನಾಥರವರೆ... ಒಳ್ಳೆ ಆಲೋಚನೆ ಮಾಡಿದ್ದೀರಾ ನೀವೆಲ್ಲಾ ಒಪ್ಪುವುದಾದ್ರೆ ನಮ್ಮ ಸಂಘಕ್ಕೆ ಇದೇ ಹೂವಿನ ಲೋಗೋವನ್ನು ಇಡೋಣ. ;) ನಮ್ಮ ಇತರೇ ಸದಸ್ಯರು ಏನಂತಾರೇ ಕೇಳೋಣ.....

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

nkumar's picture

ಬಹಳ ಚೆನ್ನಾಗಿದೆ ಚಿತ್ರಗಳು. ಸೂರ್ಯೋದಯ ಸೂರ್ಯಾಸ್ತ ಚಿತ್ರಗಳು ಬೊಂಬಾಟ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಧನ್ಯವಾದ ನಂದಕುಮಾರ್ ರವರೇ.....

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

manjunath s reddy's picture

ಚಿತ್ರಗಳು ಸಕ್ಕತ್ತಾಗಿವೆ ನಾಗರಾಜ್.. :)

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ತುಂಬಾನೇ ಧನ್ಯವಾದ ರೆಡ್ಡಿ
ನೀವು ಬರೀತೀರಾ ನಾನು ಕ್ಲಿಕ್ಕಿಸಿದೆ ಅಷ್ಟೆ ;)

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

anil.ramesh's picture

ನಾಗರಾಜ,
ಚಿತ್ರಗಳು ಚೆನ್ನಾಗಿವೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಚಿತ್ರಗಳು ಇಷ್ಟವಾದವು. :)
ಹೂವು ಔಟ್ ಆಫ್ ಫೋಕಸ್ ಆಗಿದೆ.

-ಅನಿಲ್.

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಧನ್ಯವಾದ ಅನೀಲ್ ರವರೇ
ನೀವು ಹೇಳಿದ ಹಾಗೆ ಹೂವು ಔಟ್ ಆಫ್ ಫೋಕಸ್ ಆಗಿದೆ. ಏನ್ ಮಾಡೋದು ಸ್ವಲ್ಪ ಹೊತ್ತು ಸುಮ್ಮನೆ ಇರಪ್ಪ ಅಲಗಾಡಬೇಡ ಅಂತ ಎಷ್ಟೆ ಹೀಳಿದ್ರು ಕೇಳಲಿಲ್ಲ ಅದಕ್ಕೆ ಹೀಗೆ ;)

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

ಅರವಿಂದ್'s picture

ನಾಗರಾಜ್

ಚಿತ್ರಗಳು ಸಕ್ಕತ್, ಅನಿಲ್ ಹೇಳಿದ ಹಾಗೆ ಕೆಲವು ಔಟ್ ಆಫ್ ಫ್ರೇಮ್ ಇದೆ ಪರವಾಗಿಲ್ಲ, ನಾವು ಓರ್ಚಾಗೆ ಹೋಗುವವರೆಗೂ ಇದೇ ಚಿತ್ರಗಳು ನಮ್ಮ ಮನದಲ್ಲಿರುತ್ತವೆ.

ಅರವಿಂದ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಹಾಗೇ ಮಾಡು ಅರವಿಂದ್ :)

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

drushya pradeep's picture

ಚಿತ್ರಗಳು ತುಂಬಾ ಚೆನ್ನಾಗಿದೆ ನಾಗರಾಜ್....

ಶ್ರೀಧರ್ ಸರ್ ಗಿರೋ ಸಂದೇಹನೇ ನಂಗೂ ಪ್ರಾಬ್ಲಮ್ಮೂ...:( :( :(

ನನ್ನಿ
ದೃಶ್ಯ ಪ್ರದೀಪ್ :)

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ದೃಶ್ಯ ಚಿತ್ರ ಅಪ್ ಲೋಡ್ ಮಾಡಿ ಆದ ಮೇಲೆ, ನೀವು ಅಪ್ ಲೋಡ್ ಮಾಡಿದ ಚಿತ್ರವನ್ನು ಓಪನ್ ಮಾಡಿ ನಂತರ ಚಿತ್ರದ ಮೇಲೆ ಕರ್ರ್ಜರ್ ಇಟ್ಟು ರೈಟ್ ಕ್ಲಿಕ್ ಮಾಡಿ ಅಲ್ಲಿ copy image location ಅಂತ ಇರತ್ತೆ ಅದನ್ನ ಕ್ಲಿಕ್ ಮಾಡಿ, ಕಾಪಿ ಆಗಿರತ್ತೆ ಅದನ್ನ ತಂದು ನೀವು ಬ್ಲಾಗ್ ಬರೆಯುವ ಹತ್ರ ಮೊದಲಿಗೆ enable rich-text ಕ್ಲಿಕ್ ಮಾಡಿ ಮೇಲೆ ಮರ ಚಿತ್ರದ ಹೈಕಾನ್ ಇರತ್ತೆ ಅದನ್ನ ಕ್ಲಿಕ್ ಮಾಡಿದರೆ ಒಂದು ಬಾಕ್ಸ್ ಒಪನ್ ಆಗತ್ತೆ, ಆ ಬಾಕ್ಸ್ ನಲ್ಲಿ Image URLಅನ್ನೋ ಕಡೆ ನೀವು ಕಾಪಿ ಮಾಡಿದ (copy image location) ಅನ್ನು ಪೇಸ್ಟ್ ಮಾಡಿ ನಂತರ ಕೆಳಗೆ ಇನ್ನೊಂದು ಬಾಕ್ಸ್ ಇರತ್ತೆ Alignment ಅಂತ ಅಲ್ಲಿ ನಿಮಗೆ ಪೋಟೋ ಯಾವ ಕಡೆ ಬೇಕೋ ನೋಡಿ ಅದನ್ನ ಸೆಲೆಕ್ಟ್ ಮಾಡಿ insert ಒತ್ತಿ ನಿಮ್ಮ ಪೋಟೋ ಅಲ್ಲಿ ಬಂದಿರತ್ತೆ ;)
ಅದೇ ರೀತಿಯಾಗಿ ಎಷ್ಟು ಪೋಟೋ ಬೇಕೋ ಅಷ್ಟನ್ನು ಹಾಕಿ :)

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

shaamala's picture

ನಾಗರಾಜ್ ಅವರೇ,

ನಿಮ್ಮ ದೃಶ್ಯ ಕಥನ ಚೆನ್ನಾಗಿದೆ. ಶ್ರೀರಾಮ ಅಯೋಧ್ಯೆ ಬಿಟ್ಟು ಓರ್ಚಾಗೆ ಹೋಗಿ ನೆಲಸಿದನೆ ಅಥವಾ ಭೇಟಿ ಕೊಟ್ಟಿದ್ದನೆ? ಯಾವಾಗ? ಅಡುಗೆ ಮಾಡಿದವರು ಯಾರು? ಮಾಹಿತಿ ತಿಳಿದಿದ್ದರೆ ದಯವಿಟ್ಟು ಬರೆಯಿರಿ.

ಮಾರಲಿಕ್ಕೆ ಇಟ್ಟಿರುವ ವಿಗ್ರಹಗಳು ಸಾವಿರಾರು ವರ್ಷ ಹಳೆಯದು ಅಂತೀರಾ? :jawdrop: ನಮ್ಮ ಪುರಾತತ್ವ ಇಲಾಖೆ ಏನು ಮಾಡ್ತಾ ಇದೆಯೋ?

ಶಾಮಲ

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ಶ್ಯಾಮಲರವರಿಗೆ ಧನ್ಯವಾದಗಳು
ಅಯೋದ್ಯ ಬಿಟ್ಟು ಬಂದು ಸುಮಾರು ದಿನಗಳ ಕಾಲ ನೆಲೆಸಿದ್ದನಂತೆ ಆಗ ಅಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಮಾಡುತ್ತಿದ್ದ ಅಡಿಗೆ ಮನೆ ಅದು ಅಡುಗೆ ಮಾಡುವವರು ಯಾರು ಅಂತ ನನಗೆ ತಿಳಿಯದು ಈಗಲೂ ಸಹ ಅಲ್ಲಿ ಶ್ರೀರಾಮರ ಶಿಲೆ ಇದೆ ಪ್ರತಿನಿತ್ಯ ಪೂಜೆಪುರಸ್ಕಾರ ನಡೆಯತ್ತೆ. ಇನ್ನೊಂದು ಸಂಗತಿ ಏನಂದ್ರೆ ಪೂಜೆ ಆದ ನಂತರ ಮೊದಲು ಪೋಲಿಸ್ ಒಬ್ಬ ದೇವರಿಗೆ ಸೆಲ್ಯೂಟ್ ಮಾಡುತ್ತಾನೆ ಅಂದ್ರೆ ಯಾರಾದ್ರು ಗಣ್ಯ ವ್ಯಕ್ತಿಗೆ ಮಾಡಿದ ರೀತಿ ಆನಂತರ ಎಲ್ಲರಿಗೂ ಮಂಗಳಾರತಿ ನೀಡುತ್ತಾರೆ.
<<<<ಮಾರಲಿಕ್ಕೆ ಇಟ್ಟಿರುವ ವಿಗ್ರಹಗಳು ಸಾವಿರಾರು ವರ್ಷ ಹಳೆಯದು ಅಂತೀರಾ? ನಮ್ಮ ಪುರಾತತ್ವ ಇಲಾಖೆ ಏನು ಮಾಡ್ತಾ ಇದೆಯೋ? >>>>

ಒಂದು ಅಂಗಡಿಯಲ್ಲಿ ಮಾತ್ರ ಅಲ್ಲ ರೀ ಪ್ರತಿ ಅಂಗಡಿಯಲ್ಲಿಯೂ ಮಾರಾಟವಾಗತ್ತೆ ನಮ್ಮ ಸರ್ಕಾರದ ಪರಿಸ್ಥಿತಿ ಅಷ್ಟು ಬಿಡಿ ಏನೂ ಸಹ ಮಾಡಲ್ಲ ..... :(

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

shaamala's picture

ನಾಗರಾಜ್ ಅವರೇ,

ಇದು ಬಹಳ ಸ್ವಾರಸ್ಯಕರ ವಿಷಯ. ಶ್ರೀರಾಮನು ವನವಾಸದ ಸಮಯದಲ್ಲಿ ಅತ್ರಿ ಋಷಿಗಳ ಬೋಧನೆಯ ಮೂಲಕ ಶಿವನ ಒಲವನ್ನು ಸಂಪಾದಿಸಿಕೊಂಡ ಸ್ಥಳ ಓರ್ಚ! ಅದರಿಂದಾಗಿ ಶ್ರೀರಾಮನಿಗೆ ಓರ್ಚಾದ ಮೇಲೆ ಬಹಳ ಅಭಿಮಾನ. ಓರ್ಚಾದ ರಾಣಿಯೊಬ್ಬಳಿಗೆ ಒಮ್ಮೆ ಕನಸಾಗಿ ಶ್ರೀರಾಮನು ಓರ್ಚಾಗೆ ಬರುವ ಅಸೆ ಹೇಳಿಕೊಂಡಿದ್ದರಿಂದ ಆ ರಾಣಿ ಶ್ರೀರಾಮನಿಗೆ ಓರ್ಚಾದಲ್ಲಿ ದೇವಸ್ಥಾನ ಕಟ್ಟಿಸುತ್ತಾಳೆ. ಬಹುಶಃ ಪೋಲಿಸ್ ಸೇವೆ ಅಲ್ಲಿಂದ ಶುರುವಾಗಿರಬಹುದು. ಇನ್ನೊಂದು ಕಥೆಯ ಪ್ರಕಾರ ರಾಣಿಯು ಆಸೆ ಪಟ್ಟು ದೇವಸ್ಥಾನ ಕಟ್ಟಿಸಿದರೂ, ಶ್ರೀರಾಮನು ಅಯೋಧ್ಯೆ ಬಿಟ್ಟು ಬರಲು ಒಪ್ಪುವುದಿಲ್ಲ, ಹೀಗಾಗಿ ಅಲ್ಲಿ ಚತುರ್ಭುಜ ವಿಷ್ಣುವಿನ ಮೂರ್ತಿ ಪ್ರತಿಷ್ಠೆಯಾಗತ್ತೆ!

ಧನ್ಯವಾದಗಳು,

ಶಾಮಲ

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Seetharmorab's picture

ನಾಗರಾಜ್...
ಫೋಟೋಗಳು ತುಂಬಾ ಚೆನ್ನಾಗಿದೇರೀ ಮತ್ತೆ ಮತ್ತೆ ನೋಡ್ಬೇಕು ಅನ್ಸತ್ತೆ.

>>>ನಾಗರೀಕ ಮಾನವಾ ಭೂಮಿಯಲ್ಲಿ ಬಾಳುವುದನು ಕಲಿಯಲಿಲ್ಲವೇಕೇ<<<
ಸೀತ ಆರ್. ಮೊರಬ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

Nagaraj.G's picture

ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಸೀತ ಆರ್. ಮೊರಬ್ ರವರೆ.......
>>>ನಾಗರೀಕ ಮಾನವಾ ಭೂಮಿಯಲ್ಲಿ ಬಾಳುವುದನು ಕಲಿಯಲಿಲ್ಲವೇಕೇ<<< ಕಲೀತಾ ಇದ್ದಾನೇ ಅದೂ ಸಹ ಡಿಪ್ರೆಂಟಾಗಿ.......

ನಾಗರಾಜ್

ಉ: ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

bescom's picture

ಎಲ್ಲಾ ಚಿತ್ರಗಳು ಚೆನ್ನಾಗಿವೆ.