ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ವೇದಿಕೆಯಾಗಿದೆ. ಸಂಪದವನ್ನು ಮೊದಲು ಹರಿಪ್ರಸಾದ್ ನಾಡಿಗ್ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಪ್ರಪಂಚಾದ್ಯಂತ ಕನ್ನಡಿಗರು ಇದುವರೆಗೂ ಬೆಳೆಸುತ್ತಾ ಬಂದಿದ್ದಾರೆ. ಸಂಪದ.ನೆಟ್ ನಲ್ಲಿ ಈಗಾಗಲೇ 5230 ಸದಸ್ಯರು ಇದ್ದು, ಸುಮಾರು 3493 ಲೇಖನಗಳು, ಸುಮಾರು 4894 ಬ್ಲಾಗ್ ಗಳನ್ನೂ ಬರೆದಿದ್ದಾರೆ. ಇವರು ಬರೆದಂತಹ ಬ್ಲಾಗ್ ಗಳಿಗೆ ಸುಮಾರು 41829 ಪ್ರತಿಕ್ರಿಯೆಗಳು ಬಂದು ಸೇರಿವೆ (ದಿನಾಂಕ 24:12:2008 ಕ್ಕೆ ಅನುಗುಣವಾಗಿ ). ಸಂಪದದಲ್ಲಿ ಪ್ರತಿನಿತ್ಯಲು ಕಡಿಮೆ ಎಂದರು 10 ರಿಂದ 15 ಬ್ಲಾಗಗಳು ಬರೆಯುತ್ತಾರೆ. ನಾನು ಸಹ ಸಂಪದದಲ್ಲಿ ಸುಮಾರು 37 ಬ್ಲಾಗ್ ಗಳನ್ನು ಮತ್ತು ಲೇಖನಗಳನ್ನು ಬರೆದಿದ್ದೇನೆ. ಸಂಪದ ನನಗೂ ಸಹ ಅಚ್ಚು ಮೆಚ್ಚಿನ ತಾಣವಾಗಿದೆ. ಈ ತಾಣದಲ್ಲಿ ವೀಕ್ಷಕರು ಮತ್ತು ಸದಸ್ಯರು ಸೇರಿ ಕಡಿಮೆ ಅಂದರು ಸುಮಾರು 100 ಜನ ಅದ್ರು ಆನ್ ಲೈನ್ ನಲ್ಲಿ ಇರುತ್ತಾರೆ. ಈ ತಾಣಕ್ಕೆ ತಿಂಗಳಿಗೆ 5.5 ಮಿಲಿಯನ್ ವೀಕ್ಷಕರು ಬೇಟಿಯನ್ನು ನೀಡುತ್ತಿದ್ದಾರೆ. ನೀವೇ ಯೋಚನೆ ಮಾಡಿ ಸಂಪದ ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಹತ್ತಿರವಾಗಿದೆ ಅಂತ. ಈ ರೀತಿಯಾಗಿ ಚಿಕ್ಕದಾದ ಬ್ಲಾಗ್ ಒಂದನ್ನ ನಮ್ಮ ಮರ ವೆಬ್ ಸೈಟ್ ನಲ್ಲಿ ಬರೆದಿದ್ದೇನೆ ಮುಂದೆ ಓದಿ ಅಭಿಪ್ರಾಯ ಬರೆಯಲು ಮರೆಯಬೇಡಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಂಪದ

ಶ್ರೀನಿಧಿ's picture

ಪ್ರಶ್ನೆ : ಸಂಪದ ಎಂದರೇನು? ಅರ್ಧ ಪುಟ ಮೀರದಂತೆ (ಅಥವಾ ಸಂಪದದ ಬ್ಲಾಗ್ ನಿಯಮ ದಾಟುವಂತೆ) ಬರೆಯಿರಿ - ೫ ಅಂಕಗಳು
:p

ವಿ.ಸೂ: ನಂತರ ನಿಮ್ಮ ಬ್ಲಾಗಿನ ಲಿಂಕನ್ನು ಸೇರಿಸಿ, hits ಹೆಚ್ಚಿಸಿಕೊಳ್ಳಿ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಉ: ಸಂಪದ

Nagaraj.G's picture

ಶ್ರೀ ನಿಧಿಯವರೇ ತಮ್ಮ ಪ್ರತಿಕ್ರಿಯೆಗೆ ನನ್ನಿ
ನಾನು ಜಸ್ಟ್ ಈಗ ತಾನೇ ಸಂಪದ ಬಗ್ಗೆ ಅರ್ಥ ಗೊತ್ತಿಲ್ಲದೆ ಬ್ಲಾಗ್ ನ್ನು ಸಂಪದದಲ್ಲಿ ಬರೆಯಬೇಕು ಅಂದುಕೊಂಡಿದ್ದೆ :( ಅಂದಹಾಗೆ ಬ್ಲಾಗನ್ನು ಪೂರ್ತಿ ಓದಿ ಪ್ರತಿಕ್ರಿಯೆ ಅಲ್ಲಿ ಸಹ ತಿಳಿಸಿ

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ