February 16, 2010 - 9:32pm
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’
..............................

ಬಿ ಮೈ ವ್ಯಾಲಂಟೈನ್!
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಬಿಸಿಲ ಬೇಗೆಯಲಿ ನೀ ಬೆವರಿಳಿಸಿ ಕೂತೆಯಾ?
ಬಿಸಿಲ ಬೇಗೆಯಲಿ ಬೆಂದು ನೀ ಬೆವರಿಳಿಸಿ ಕೂತೆಯಾ?
ಬೆವರ ನಾ ಒರೆಸಿಹೆ ನೀನೀಗ ನನ್ನೊಡನೆ ನಡೆವೆಯಾ?
:)
ಉ: ಬಿಸಿಲ ಬೇಗೆಯಲಿ ನೀ ಬೆವರಿಳಿಸಿ ಕೂತೆಯಾ?
ನಿನ್ನ ಬೆವರ ಹೀರಿ ನಾನಾಗಿರುವ ನಿನ್ನದೇ ಭಾಗ
ಓಡಿ ಹೋಗಿ ಸಂಸಾರ ಹೂಡುವ ನೀ ಬಾ ಬೇಗ
ಉ: ಬಿಸಿಲ ಬೇಗೆಯಲಿ ನೀ ಬೆವರಿಳಿಸಿ ಕೂತೆಯಾ?
ಬೆವರ ಹೀರಿದವರು ಆಗುವರು ಎಂದರೆ ಮನುಜರದೇ ಭಾಗ
ರಕ್ತ ಹೀರುವ ರಾಜಕಾರಣಿಗಳದಿನ್ನೇನು ಹೇಳಿ ವೈಭೋಗ?!
ಉ: ಬಿಸಿಲ ಬೇಗೆಯಲಿ ನೀ ಬೆವರಿಳಿಸಿ ಕೂತೆಯಾ?
ರಾಜಕಾರಣಿಗಳು ಮನುಜರೇ ಅಲ್ಲವೆಂದರಿತು
ಮೇವು ತಿಂದ ಪ್ರಕರಣದ ಮರ್ಮ ತಿಳೀತು!
ಉ: ನಗೆಚಿತ್ರ 27
ಪ್ರಾಣಿಯನ್ನು ಕಂಡರೆ ನಮಗೆ ಭಯ ಅದೇ ರೀತಿ ಪ್ರಾಣಿಗೂ ನಮ್ಮ ಕಂಡರು ಭಯ, ಆದರೆ ಪ್ರಾಣಿಯನ್ನು ನಾವು ಪ್ರೀತಿಸಿದರೆ ಮನುಷ್ಯನನ್ನು ನಂಭುವುದೆ ಬೇಡ. ಯಾಕೆಂದರೆ ಮನುಷ್ಯನಿಗಿಂತ ಪ್ರಾಣಿಗೆ ನಿಯತ್ತು ಜಾಸ್ತಿ.
ಉ: ನಗೆಚಿತ್ರ 27
ಪ್ರೀತಿಯಲ್ಲಿ ನಿಯತ್ತು ಭಾರಿ ಮುಖ್ಯ ಹೌದು.
ಆದರೆ ಇದರಲ್ಲಿ ಮತ್ತೊಂದು ಲಾಭವೂ ಉಂಟು.
ಪರ್ಸಿಗೆ ಕಂಟಕವಾಗದ, ಬೈಕಿಗೆ ಅಂಟದ ಗರ್ಲ್ ಫ್ರೆಂಡೂ ಸಿಕ್ಕಂತಾಯ್ತು!
ಉ: ನಗೆಚಿತ್ರ 27
ಕರಡಿಯು ಇನಿತೆಂದಿತು:
ಎನ್ನ ಪ್ರಾಣಕಾಂತ ನೀನು
ಬಿಡೆ ನಿನ್ನ ರೂಪವಂತ
ನೋಡೆನ್ನ ಬಿಳಿಯ ದಂತ
ನೀ ಎನ್ನ ಜಾಂಬುವಂತ
(ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಚುಟುಕ)
ಪ್ರಭು
ಉ: ನಗೆಚಿತ್ರ 27
ಹೆಹ್ಹೆ ಹೆಹ್ಹೆ :) ಪ್ರತಿಕ್ರಿಯೆ ಓದಿ ಮತ್ತೂ ನಗು ಬಂತು :)