22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತೊಣಚಿ ಡೈರಿ

March 16, 2009 - 4:57pm
nagenagaari

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ ಪಕ್ಸಗಳೂ ಸೇರ್ಕಂಡು ‘ದುಡ್ಡಿದೋರ್, ದುಡ್ ಹೊಡೆಯೋರ್ ಪಕ್ಷ’ ಮಾಡ್ಕಂಡು ಬಿಟ್ರೆ ಒಳ್ಳೇದಲ್ವಾ? ಜನ್ಕೂ ಯಾವ್ ಪಕ್ಸಕ್ಕೆ ಓಟ್ ಒತ್ತದು ಅನ್ನೋ ಟೆನ್ಷನ್ ಕಡಿಮಿ ಆಗ್ತದೆ. ಈ ಟಿವಿ, ಪೇಪರ್‌ನೋರ್ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅಂತ ಗಂಟ್ ಗಟ್ಲೆ ಗಂಟ್ಲು ಹರ್ಕಂಡು, ಪೆನ್ನು ಮುರ್ಕಂಡು ಕಶ್ಟ ಪಡೋದು ತಪ್ತದೆ. ಅಲ್ವಾ?

ತೃತೀಯ ರಂಗಕ್ಕೆ ಯಾವುದೇ ವಿಷನ್ ಇಲ್ಲ: ಪ್ರಣಬ್ ಮುಖರ್ಜಿ

ಒಕ್ಕೂಟ ರಚನೆ ಮಾಡೋಕೆ ರಾಜಕೀಯ ಪಕ್ಷ ಕಟ್ಕಣಕೆ ದುಡ್ಡು ಕಾಸು, ಹೆಂಡ, ಸೀರೆ ಬೇಕೋ ಹೊರ್ತು ವಿಷನ್ನು, ಪಾಲಿಸೀಸು ಬೇಕು ಅಂತ ಯಾವೋನ್ ಹೇಳ್ದವ?

ಅಧಿಕಾರ ಹಿಡ್ಕಬೇಕು, ಕುರ್ಚಿ ಮೇಲೆ ಕುತ್ಕಬೇಕು, ದುಡ್ ಮಾಡ್ಕೋ ಬೇಕು ಇದ್ಕಿಂತ ದೊಡ್ ವಿಷನ್ನು, ಪಾಲಿಸಿ, ಆದರ್ಶ ಇರೋಕ್ ಸಾಧ್ಯ ಐತಾ?

ಈ ಯುಪಿಎ ಹುಟ್ದಾಗ್ ಇರ್ದೇ ಇದ್ದ ವಿಷನ್ನುಗಳಾ ಇವು? ಜನ ಇಂಥದ್ದೆಲ್ಲಾ ಇಲ್ಯೂಶನ್ನಿಗೆ ಬಲಿಯಾಗ್ತಾರೆ ಇನ್ನೂ ಅಂದ್ಕಂಡೀರಾ?

ಮಳೆ ಬರ್ಸೋಕೆ ಕಪ್ಪೆ ಮದ್ವೆ

ಸಿಟೀಲ್ ಕುಂತು ಕೀಬೋರ್ಡ್ ಕುಟ್ಟುವ ನಿಂಗೆ ಇದ್ನ ಓದಿದ್ರೆ ಬಿದ್ ಬಿದ್ ನಗೋಷ್ಟು ಸಿಲ್ಲಿ ಅನ್ಸುತ್ತೆ ಅಲ್ವಾ? ಆದ್ರೂ ಹೇಳ್ತೀನ್ ಕೇಳಿ, ಈ ಜನ ಮಾಡ್ತಿರೋದ್ಕು ನೀವ್ ಬುದ್ಧಿವಂತ್ರು, ಪೇಟೆ ಜನ ಮಾಡ್ತಿರೋದ್ಕು ವ್ಯತ್ಯಾಸ ಇದ್ಯಾ?

ಇವ್ರು ಮಳೆ ಇಲ್ಲದ್ ನಾಡಿಗೆ ನೀರ್ ಸಿಕ್ಲಿ ಅಂತ ಎರಡ್ ಕಪ್ಪೆ ಹಿಡ್ದು ಮದ್ವೆ ಮಾಡ್ತಾರೆ. (ಮದ್ವೆ ಇಲ್ದೆ ಅವೇನ್ ಮಕ್ಳೇ ಮಾಡಲ್ವಾ ಅಂನ್ಬೇಡ್ರಿ. ಶ್ರೀರಾಮ್ ಸೇನೆ ಮುತಾಲಿಕ್ ಕಿವಿಗೆ ಬಿದ್ರೆ ಪ್ರಾಣಿಗಳ್ಲೂ ಹೆಣ್ಣು ಗಂಡು ರಾಖಿ ಅಥ್ವಾ ತಾಳಿ ಇಲ್ದೇ ಒಡಾಡೋಕ್ ಬಿಡಲ್ಲ ಆತ!) ಮಳೆ ಬರುತ್ತೊ ಇಲ್ವೋ ಗೊತ್ತಿಲ್ಲ. ಮಳೆ ಬರ್ಲಿ ಅನ್ನೋ ಉದ್ದೇಶಾಂತೂ ಅವ್ರಲ್ಲಿ ಇರ್ತದೆ. ನೀವ್ ಮಾಡಾದೇನು? ಸರ್ಕಾರ ಒಳ್ಳೇ ಆಡಳಿತ ಕೊಡ್ಲಿ ಅಂತಂದ್ ಓಟ್ ಹಾಕ್ತೀರಿ, ಪ್ರತಿ ಸಲಾನೂ ಇವ್ರು ತಮ್ ಬುದ್ಧಿ ತೋರ್ಸಿದ್ರೂ ಮನೆ ಎದ್ರು ಬಂದ್ ಹಲ್ ಕಿರಿದ್ರೆ ಮತ್ತೆ ನಂಬ್ತೀರಿ…

ಈಗ್ ಹೇಳ್ರಿ ಯಾರು ಮೂಢ್ರು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Chandrashekharss on
:-) ಚೆನ್ನಾಗಿದೆ.... > ಇನ್ಯಾರು??? ಸುಮ್ನೆ ವೊಟ್ ಹಾಕ್ದೆ ಅವ್ರು ಹೀಗೆ ಕರಪ್ಟು, ಹಾಗೆ ಹೀಗೆ ಅಂತಾ ಮಾತಾಡೊ ಬದಲು ವೊಟ್ ಹಾಕಿ ಅದರ ಮೂಲಕ ನಿಮ್ಮ ಹಕ್ಕನ್ನು ಚೆಲಾಯಿಸಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on
ಎಲ್ರೂ ತಮ್ ತಮ್ ಹಕ್ಕನ್ನು ಚೆಲಾಯಿಸಲು ಹೊರಡಬೇಕಾಗಿ ನಮ್ ಚಂದ್ರಶೇಖರ್ ಸಾರ್‌ರಿಂದ ಕಟ್ಟಪ್ಪಣೆ ಜಾರಿಯಾಗಿದೆ... ಬಿದ್ ಬಿದ್ ನಗೋದು ನಮ್ ಆಜನ್ಮ ಸಿದ್ಧ ಹಕ್ಕು ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chandrashekharss on
ಕಟ್ಟಪ್ಪನೆ ಕೊಡೊದಕ್ಕೆ ನಾನ್ಯಾರಿ????..:-( ಯಾರೂ ಮತ ಚಲಾಯಿಸದೆ ಸುಮ್ನೆ ರಾಜಕಿಯ ಹೀಗೆ, ಹಾಗೆ ಅಂತಾ ಇರ್ತಾರಲ್ಲ ಅವರಿಗೆ ನನ್ನ request(ಹಾಗೆ ಒಂದಿಷ್ಟು ಚಿಮಾರಿ) ಅಷ್ಟೆರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on
ನಿಮ್ ‘ಚಿ’ಮಾರಿ ನಮಗಿಷ್ಟವಾಯ್ತು ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chandrashekharss on
>> ಧನ್ಯವಾದಗಳು ‘ಚಿ’ಮಾರಿ ಇಷ್ಟ ಆಗಿದ್ದಕ್ಕೆ..:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on
:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shivakumar.Revadi on
ಎಲ್ಲ ನದಿಗಳೂ ಕೊನೆಗೆ ಸೇರೋದು ಸಮುದ್ರಾನೇ. ಎಲ್ಲ ದಾರಿಗಳೂ ಕೊನೆಗೊಳ್ಳೋದು ಸ್ಮಶಾನಾನೇ. ಎಲ್ಲ ಧರ್ಮದ ಬೋಧನೆಗಳ ಕೊನೆ ದೇವ್ರೇನೇ. . . . . ಹಾಗೇ ಎಲ್ಲ ಪಕ್ಷಗಳ ಸಿದ್ದಾಂತಗಳೂ ಕೊನೆಗೊಳ್ಳೋದು ಹಣಾನೇ? ಅಧಿಕಾರಾನೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on
ಹೌದೌದು, ಎಲ್ಲಾ ಹೇಳಿಕೆಗಳ ಕೊನೆ ಜನರಲೈಸೇಷನ್ನೇ! ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.