ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › nagenagaari ರವರ ಬ್ಲಾಗ್

ನಗೆ ನಗಾರಿ

ನಕ್ಕು ಬಿಡು ಒಮ್ಮೆ ಹಾಗೇ ಸುಮ್ಮನೆ.. ಕಳೆಯಲಿ ಜಗದ ದುಃಖ ಆ ಕ್ಷಣ ಮಾತ್ರಕ್ಕಾದರೂ!

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

July 23, 2008 - 12:01am — nagenagaari

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಒಂದು ಸಿನೆಮಾ ಹೇಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಬ್ರಹ್ಮನೂ ಉತ್ತರಿಸಲಾರ ಎಂಬುದು ನಗೆ ಸಾಮ್ರಾಟರ ನಂಬಿಕೆ. ಇದಕ್ಕೆ ಕಾರಣಗಳಿವೆ. ನಿರ್ದೇಶಕ ಬೆವರು ಸುರಿಸಿ ಮಾಡಿದ ಸ್ವಂತ ಚಿತ್ರಗಳು ಖಾಲಿ ಕುರ್ಚಿಗಳಿಗಾಗಿ ಮರುಗುತ್ತಾ ಥೀಯಟರಿನಿಂದ ಥಿಯೇಟರಿಗೆ ‘ಮಿಂಚಿನ ಓಟ’ದಲ್ಲಿ ತೊಡಗಿದರೆ ಎಲ್ಲಿಂದಲೋ ಕದ್ದು ತಂದ ಮಾಲು ಭಾರೀ ಯಶಸ್ಸನ್ನು ಪಡೆದು ಬಿಡುತ್ತದೆ. ನಿರ್ದೇಶಕ ‘ಕಲಾ ಸಾಮ್ರಾಟ’ನಾಗಿಬಿಡುತ್ತಾನೆ. ಕೆಲವರು ಅತ್ಯಂತ ಜಾಣ್ಮೆಯಿಂದ ‘ಕಾಪಿ’ ಪದವನ್ನು ಆ ಬಿರುದಿನ ಹಿಂದೆ ಸೇರಿಸಿ ಗೊಣಗಿಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ಸಿನೆಮಾ ಹೇಗಿದೆ ಅನ್ನೋದರ ಬಗ್ಗೆ ಸಾಮ್ರಾಟರು ವರದಿಯಲ್ಲಿ ಏನನ್ನೂ ಹೇಳಲಿಚ್ಚಿಸುವುದಿಲ್ಲ. ಮೇಲಾಗಿ ಒಂದು ಪತ್ರಿಕೆ ಸಿನೆಮಾ ಭಯಂಕರ ಚೆನ್ನಾಗಿದೆ ಅಂತ ನಾಲ್ಕೈದು ನಕ್ಷತ್ರಗಳನ್ನು ಕೊಟ್ಟರೆ ಮತ್ತೊಂದು ಪತ್ರಿಕೆ ಇದು ಇಡೀ ವರ್ಷದ ತೋಪು ಸಿನೆಮಾ ಅಂತ ನಾಲ್ಕೈದು ಕೋಳಿ ಮೊಟ್ಟೆಗಳನ್ನು ಕೊಡುತ್ತದೆ. ಕೆಲವು ‘ಹಸಿದ’ ವಾರದ ಅಚ್ಚರಿಗಳು ಪೂರ್ಣ ಚಂದ್ರನನ್ನೇ ತಂದು ಕೈಲಿಟ್ಟು ಸಿನೆಮಾ ಬೋ ಪಸಂದಾಗಿದೆ ಅಂತ ಭೋಂಗು ಬಿಡುತ್ತವೆ. ಅದನ್ನೆಲ್ಲಾ ಓದಿಕೊಂಡು ಪ್ರೇಕ್ಷಕನೇನಾದರೂ ಸೀತಾರಾಮ ಜಪ ಜಪಿಸಿಕೊಂಡು ಥಿಯೇಟರಿಗೆ ಹೋದರೆ ‘ಮೀರಾ’ಳಂತೆ ಎಲ್ಲಾ ಬಿಟ್ಟು ಬೀದಿಯಲ್ಲಿ ಹಾಡುತ್ತಾ ಸಾಗಬೇಕಾಗುತ್ತದೆಯಷ್ಟೇ.

ಇವೆಲ್ಲದರ ನಡುವೆ ‘ಪುರುಷ’ರೇ ರಚಿಸಿರುವ ಈ ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ನಿರ್ದೇಶಕರು ಕರೆದಿರುವುದರ ಹಿಂದೆ ಭಾರೀ ಮಸಲತ್ತು ನಡೆದಿದೆ ಎಂದು ನಗೆ ಸಾಮ್ರಾಟರ ಇಂದ್ರಿಯಗಳಿಗೆ ಹೊಳೆಯಿತು. ಸಿನೆಮಾ ಹುಡುಗಿಯರಿಗೆ ಮಾತ್ರ ಎಂದು ಹೇಳಿ ಪೋಸ್ಟರುಗಳಲ್ಲೆಲ್ಲಾ ಕೇವಲ ಹುಡುಗಿಯರನ್ನೇ ಹಾಕುವುದರಿಂದಾಗಿ ಅವಶ್ಯಕವಾಗಿ ಹುಡುಗರ ಗಮನ ಸೆಳೆಯಬಹುದು ಎಂಬುದು ನಿರ್ದೇಶಕರ ಬುದ್ಧಿವಂತಿಕೆ. ಹುಡುಗಿಯರ ಸಿನೆಮಾ ನೋಡುವುದಕ್ಕಾಗಿ ಎಲ್ಲಾ ಹುಡುಗಿಯರು ಕಾಲೇಜು, ಸ್ಕೂಲುಗಳನ್ನು ತಪ್ಪಿಸಿ ಕಷ್ಟ ಪಟ್ಟು ಸಿನೆಮಾ ಥಿಯೇಟರಿಗೆ ಬರುತ್ತಾರೆ. ಅದೂ ಅಲ್ಲದೆ ಕಾಲೇಜುಗಳಿಂದ ಮೈಲು ದೂರವಿರುವ ಥಿಯೇಟರುಗಳಿಗೆ ಹುಡುಗಿಯರು ನಡೆದುಕೊಂಡು ಹೋಗಬೇಕು. ಅವರ ಕಷ್ಟವನ್ನು ನೋಡಲಾಗದೆ ಚಿಗುರು ಮೀಸೆಗಳು ಪಲ್ಸರು, ಕರಿಜ್ಮಾಗಳನ್ನು ಫಳಫಳಿಸುತ್ತಾ ಅವರ ನೆರವಿಗೆ ಧಾವಿಸುತ್ತಾರೆ. ಬೈಕಿನ ಬೆನ್ನ ಮೇಲೆ ಅವರನ್ನು ಏರಿಸಿಕೊಂಡು ಥಿಯೇಟರಿನ ಎದುರು ಬಿಡುತ್ತಾರೆ. ಕ್ಯೂನಲ್ಲಿ ನಿಂತು ಬಡಿದಾಡಿ ಎರಡು ಟಿಕೇಟು ತಂದು ಒಂದನ್ನು ಹುಡುಗಿಗೆ ಕೊಟ್ಟು ಆಕೆ ಪ್ರಸನ್ನಳಾದರೆ ತನ್ನ ಟಿಕೇಟನ್ನೂ ತೋರಿಸಿ ಆಕೆಯ ಅಪ್ಪಣೆಯನ್ನು ಪಡೆದು ಥಿಯೇಟರಲ್ಲಿ ಮೂರು ತಾಸಿನ ಯಾತನೆಯನ್ನು ಸಹಿಸಿಕೊಳ್ಳುತ್ತಾನೆ. ಈ ನಡುವೆ ಇಂಟರ್ವೆಲ್‌ಗಳಲ್ಲಿ ಇರುವ ಇಪ್ಪತ್ತು ನಿಮಿಷದಲ್ಲಿಯೇ ಕಿಸೆಯನ್ನು ಬೋಳಿಸಿಕೊಂಡು ಹುಡುಗಿಯ ಎಮೋಶನ್‌ಗಳನ್ನು ನಿಯಂತ್ರಣದಲ್ಲಿರಿಸಿ ದಣಿದು ಹೈರಾಣಾಗಿ ಉಳಿದರ್ಧ ಸಿನೆಮಾದಲ್ಲಿ ಕೊಂಚ ತೂಕಡಿಸಿ ರೆಸ್ಟು ತಗೊಂಡು ಎದ್ದು ಹೊರಬರುತ್ತಾನೆ. ಈ ಮನಃಶಾಸ್ತ್ರದ ಗುಟ್ಟುಗಳನ್ನು ಅರಿತ ನಿರ್ದೇಶಕರು ಸಿನೆಮಾವನ್ನು ಸ್ಪೆಷಲೀ ಫಾರ್ ಗರ್ಲ್ಸ್ ಎಂದು ಕರೆದಿದ್ದಾರೆ.

‘ಈ ಸಿನೆಮಾ ಹುಡುಗರ ಮನಸ್ಸಿಗೆ ಹಾನಿಕಾರಕ’ ಎಂದು ನಿರ್ದೇಶಕರೇ ಎಚ್ಚರಿಸಿದ್ದರೂ ನೀವೇಕಯ್ಯಾ ಥಿಯೇಟರ್‌ಗೆ ಹೋಗುತ್ತಿದ್ದೀರಿ ಎಂದು ಸಾಮ್ರಾಟರು ಥಿಯೇಟರ್ ಮುಂದೆ ಠಳಾಯಿಸಿದ್ದ ಕೆಲವು ಯುವಕರನ್ನು ಕೇಳಲು ಮುಂದಾದರು. ಒಬ್ಬ, ‘ಅಯ್ಯೋ ಹೋಗ್ರಿ, ನಾನ್ಯಾಕೆ ಸಿನೆಮಾ ನೋಡ್ಲಿ? ಐದು ಟಿಕೆಟ್ ಇದೆ. ಬೇಕಾ ಒಂದು ಬರೀ ಐನೂರು...’ ಅಂದ. ಸಾಮ್ರಾಟರು ಆ ಬ್ಲಾಕ್ ಬೆಲ್ಟ್ ನಾಗನಿಂದ ತಪ್ಪಿಸಿಕೊಂಡು ಮತ್ತೊಬ್ಬನ ಬಳಿ ಬಂದು ಪ್ರಶ್ನಿಸಿದರು.

‘ಸಾರ್. ನಮಗೆ ಈ ಎಚ್ಚರಿಕೆಗಳೆಲ್ಲಾ ಯಾವ ಮಹಾ ಸಾರ್? ಸಿಗರೇಟ್ ಪ್ಯಾಕಿನ ಮೇಲೆ ಅಷ್ಟು ದೊಡ್ಡ ದೊಡ್ಡ ಅಕ್ಷರಗಳಲ್ಲಿ ‘ಇದು ಆರೋಗ್ಯಕ್ಕೆ ಹಾನಿಕಾರಕ’ ಅಂತ ಇದ್ದರೂ ನಾವು ದಿನಕ್ಕೆ ಎರಡೆರಡು ಪ್ಯಾಕ್ ಬೂದಿ ಮಾಡೊಲ್ಲವೇ? ಆರೋಗ್ಯವನ್ನೇ ಕೇರ್ ಮಾಡದ ನಾವು ಆಫ್ಟರಾಲ್ ಹೃದಯಕ್ಕೆ ಹಾನಿಯಾಗತ್ತೆ ಅಂತ ಸುಮ್ಮನಿರೋದಕ್ಕೆ ಆಗುತ್ತಾ? ನೋ ಚಾನ್ಸ್! ಅದ್ಕೇ ಮೊದಲನೇ ದಿನ ಮೊದಲ್ನೇ ಶೋಗೆ ಬಂದಿದ್ದೀನಿ. ಇದು ಸರ್, ಯೂಥ್ ಪವರ್ ಅಂದ್ರೆ...’ ಸಾಮ್ರಾಟರು ಆ ನವಯುವಕನ ಪ್ರವರವನ್ನು ತಮ್ಮ ರದ್ದಿ ಕಾಗದದ ಬುಕ್ಕಿನಲ್ಲಿ ಗೀಚಿಕೊಂಡು ಮತ್ತೊಬ್ಬನ ಬಳಿ ಸಾರಿದರು.

‘ಅಯ್ಯೋ ಸಾರ್, ಬರೀ ಮೋಸ. ಇದು ಹುಡುಗಿಯರಿಗಾಗಿ ಸ್ಪೆಷಲ್ ಸಿನೆಮಾ ಅಂತ ಪೋಸ್ಟರ್‌ನಲ್ಲಿ ನೋಡಿ ನಾನು ಮೊದಲ್ನೇ ದಿನದಿಂದ ಬಿಡದೆ ಐದು ದಿನ ಕಂಟಿನ್ಯೂಸಾಗಿ ಥಿಯೇಟರ್ಗೆ ಬರ್ತಿದೀನಿ, ಹುಡುಗೀರು ಬಂದಿರ್ತಾರೆ ಅಂದ್ಕಂಡು. ಒಂದಲ್ಲ, ಎರಡಲ್ಲ ಸಾರ್ ಐದು ದಿನ ಇಪ್ಪತು ಶೋಗೂ ಬಂದಿದೀನಿ... ಸಿನೆಮಾ ನೋಡೋಕಲ್ಲ, ಹುಡುಗಿಯರ ಸಿನೆಮಾ ನೋಡೋಕೆ ಬರೋ ಹುಡುಗಿಯರನ್ನ ನೋಡೋದಕ್ಕೆ ಸಾರ್. ಆದ್ರೆ ಫುಲ್ ಮೋಸಾ ಸರ್. ಐದೂ ದಿನ ಧಿಯೇಟರ್ ತುಂಬಾ ಬರೀ ಹುಡುಗರೇ ತುಂಬಿಕೊಂಡಿದ್ದಾರೆ. ಎಲ್ರಿಗೂ ತಾವು ಫೂಲ್ ಆಗಿದ್ದೀವಿ ಅಂತ ಗೊತ್ತಾಗಿ ಹೋಯ್ತು ಸಾರ್. ಈ ಡೈರಕ್ಟರು ಎರಡು ತಿಂಗ್ಳು ಲೇಟಾಗಿ ನಂಗೆಲ್ಲಾ ಏಪ್ರಿಲ್ ಫೂಲ್ ಮಾಡಿದಾರೆ ಸಾರ್!’ ಎಂದು ತನ್ನ ಅಳಲನ್ನು ತೋಡಿಕೊಂಡ ಮತ್ತೊಬ್ಬ.

ಸಾಮ್ರಾಟರು ಥಿಯೇಟರಿನ ಹಿಂದೆ ಮುಂದೆ ಅಕ್ಕ ಪಕ್ಕವೆಲ್ಲಾ ಅಲೆದಾಡಿ ವರದಿಯನ್ನು ಸಿದ್ಢ ಪಡಿಸಿ ನಗೆ ನಗಾರಿಯ ಕಛೇರಿಗೆ ಹಿಂದಿರುಗುತ್ತಿದ್ದಾಗ ಮತ್ತೊಂದು ಥಿಯೇಟರಿನಲ್ಲಿ ‘ಈ ಸಿನೆಮಾ ‘ಭಕ್ತರ’ ಸ್ಪೆಷಲ್’ ‘ಇದನ್ನು ನೋಡುವುದು ‘ನಾಸ್ತಿಕರ’ ‘ಅಸ್ತಿತ್ವಕ್ಕೇ ಹಾನಿಕಾರಕ’ ಎಂಬ ಸಿನೆಮಾ ಪೋಸ್ಟರ್ ಮೇಲಿನ ಬರಹ ಓದಿ ತಲೆ ಸುತ್ತಿ ಬಿದ್ದವರು ಕಛೇರಿಗೆ ತಲುಪಿದಾಗಲೇ ಕಣ್ಣು ಬಿಟ್ಟಿದ್ದು. ಅದೂ ಎಡಗಣ್ಣು ಮಾತ್ರ!

  • ಮೊಗ್ಗಿನ ಮನಸ್ಸು
  • ಸಿನೆಮಾ
  • ಸೈಕಾಲಜಿ
  • ಹುಡುಗರು
  • ಹುಡುಗಿಯರು
~.~
  • nagenagaari ರವರ ಬ್ಲಾಗ್
  • Login or register to post comments
  • 264 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "#73, ಶಾಂತಿನಿವಾಸ" ಸಿನೆಮಾ ಹೇಗಿದೆ?
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
  • ಡೈಸಿ ರಿಡ್ಜ್ ಡೈರಿ
  • ಹೊಸ ಸಿನೆಮಾ ವಿಮರ್ಶೆಗಳು
  • ಇಲ್ಲಿ.......
Syndicate content

ಲೇಖಕರು

nagenagaari's picture

ಪೂರ್ಣ ಹೆಸರು
ನಗೆ ಸಾಮ್ರಾಟ್

ಪರಿಚಯ

ನಗೆಯ ಹೊನಲು ಹರಿಸುವುದರಲ್ಲೇ ತೃಪ್ತಿ. ಅದಕ್ಕಾಗೇ ಈ ತಾಣ ತೆರೆದಿರುವೆ:
http://nagenagaaridotcom.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator