26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

-ಹೃದಯ ಮಾಧವ-

November 5, 2010 - 11:15am
Nagendra Kumar K S

ಮಾಧವ

ಮುರಳೀಲೋಲ

ಎಲ್ಲಿರುವೆಯೋ?
ನೀನು ಹೇಗಿರುವೆಯೋ?
ತಿಳಿಯುವ ತವಕವು ಮನದಲ್ಲಿ ಮೂಡಿದೆ ಇಂದು
ರಾಧಾಮಾಧವ ಎಲ್ಲಿ ಹುಡುಕಲಿ ನಿನ್ನ
ಎಲ್ಲಿ ಹುದುಗಿರುವೆ?
ನೀನಿಲ್ಲದೆ ಬದುಕಿರಲಾರೆನು ಎಂದೆಂದೂ

ಸುತ್ತ ತಿರುಗುವ ಉದ್ಬುದ್ದ ತಿರುಗುವ
ಗಾಳಿಯ ನಿಲ್ಲಿಸಿ ಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯ ಬೀಸಿ ತಣಿಸಿ ಕಾಣದೆ ಮರೆಯಾಯಿತು

ಉಧ್ಯಾನವನದಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ
ಸುಮವನ್ನು ಕೇಳಿದೆ" ಕೃಷ್ಣನೆಲ್ಲಿ? ನೀ ಕಂಡೆಯಾ?" ಎಂದು
ನಗುಮೊಗದಿ ಅರಳಿ ಪರಿಮಳವ ಪಸರಿಸಿತು

ಮಾಮರದಲ್ಲಿ ಕುಳಿತ ಕೋಗಿಲೆಯನ್ನು ಕೇಳಿದೆ
"
ಕೃಷ್ಣನೆಲ್ಲಿಹನು? ನೀ ಕಂಡೆಯಾ?" ಎಂದು
ಮಧುರ ಕಂಠದಿ ಸುಸ್ವರ ಗಾಯನ ಮಾಡಿತು

ಆಗಸದಲ್ಲಿ ಪಯಣಿಸುವ ಕರಿ-ಬಿಳಿ ಮೋಡಗಳ ಕೇಳಿದೆ
"
ಹೇಳಿರಿ ಗೆಳೆಯರೇ ಮಾಧವನೆಲ್ಲಿಹನೆಂದು?"
ಆಗಸದಲ್ಲಿ ಕುಣಿಯುತ್ತಾ ತಂಪದ ಮಳೆಗೈದವು

ಕಾನನದಿ ತಿರುಗುವ ನವಿಲನ್ನು ಕೇಳಿದೆ
"
ಗೆಳೆಯಾ ನೀನಾದರೂ ಹೇಳು ಮಾಧವನೆಲ್ಲಿಹನೆಂದು?"
ನೂರು ಕಣ್ಣುಗಳ ತೆರೆದು ತಕಥೈ ತಕಥೈ ನರ್ತನ ಮಾಡಿತು

ನೂರು ಹಾದಿಯ ಸವೆಸುತಾ ಸಾಗುವ ನದಿಯನ್ನು ಕೇಳಿದೆ
"
ಹೇಳೇ ನೀರೇ ಮಾಧವನೆಲ್ಲಿಹನೆಂದು?"
ಮಧುರದಿ ತಂಪನ್ನೆರೆಯುತಾ ಸಾಗರದ ಕಡೆ ಓಡಿತು

ಅಂಡಲೆದು ಸುಸ್ತಾಗಿ ನನ್ನ ಮನವನೇ ಕೇಳಿದೆ
"
ಎಲ್ಲಿಹನು ಮಾಧವನು?"
ನಿನ್ನೊಳಗೇ ಇಹನು ಅಂತರಂಗದ ಕಣ್ಣು ತೆರೆದು
ನೋಡೆಂದಿತು ಹೃದಯವು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Nagendra Kumar K S on

font size ಕಡಿಮೆ ಮಾಡುವುದು ಹೇಗೆ ದಯವಿಟ್ಟು ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.