Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › narendra ರವರ ಬ್ಲಾಗ್

ಪ್ರಾಣೇಶಾಚಾರ್ಯರು ಮತ್ತು ಚಿಮಣಾಬಾಯಿ!

June 4, 2007 - 10:48pm — narendra
gramayana.jpg

ಸಾಧಾರಣವಾಗಿ ಕ್ಷತ್ರಿಯರು ನಡೆಸುವ ಆಶ್ವಮೇಧವನ್ನು ಒಬ್ಬ ಬ್ರಾಹ್ಮಣ ಮಠಾಧೀಶರ ಗುಂಗನ್ನಾಗಿ ಚಿತ್ರಿಸಿದ ಅಶೋಕ ಹೆಗಡೆಯವರು ಕೆಳಜಾತಿಯವರು ಮುಖ್ಯವಾಹಿನಿಗೆ ಬರುವಲ್ಲಿ ಎದುರಿಸಿದ ಕಷ್ಟ ಪರಂಪರೆಗಳನ್ನು ಅದರ ಎಲ್ಲ ವೈರುಧ್ಯಗಳೊಂದಿಗೇ ದಾಖಲಿಸಿದ್ದಾರೆ. ಇಲ್ಲಿ ರಾಮಾನಾಯ್ಕನಿಗೆ ನೆರವಾಗಿ ನಿಲ್ಲುವ ಎರಡು ಶಕ್ತಿಗಳಲ್ಲಿ ಒಂದು ರಾಜೀವ ಗಾಯತೊಂಡೆಯಾದರೆ ಇನ್ನೊಂದು ಕ್ರೈಸ್ತ ಮಿಶನರಿ ಎಂಬುದು ಕೂಡ ಮುಖ್ಯವೇ. ಕಾದಂಬರಿಯ ಹಲವು ಆಯಾಮಗಳಲ್ಲಿ ಇದು ಒಂದು ಮಾತ್ರ.

ಹೆಚ್ಚಿನೆಲ್ಲ ವಿಮರ್ಶಕರು ಅಶ್ವಮೇಧ ಕಾದಂಬರಿಯನ್ನು ಅನಂತಮೂರ್ತಿಯವರ ಭಾರತೀಪುರ ಮತ್ತು ಶಾಂತಿನಾಥ ದೇಸಾಯರ ಬೀಜ ದೊಂದಿಗೆ ಸಮೀಕರಿಸುತ್ತಾರಾದರೂ ಅನೇಕ ಕಾರಣಗಳಿಗಾಗಿ ನನಗೆ ಈ ಕಾದಂಬರಿಯನ್ನು ಓದುವಾಗೆಲ್ಲ ಮತ್ತೆ ಮತ್ತೆ ನೆನಪಾದ ಕಾದಂಬರಿ ರಾವ್ ಬಹದ್ದೂರರ ಗ್ರಾಮಾಯಣ.

ಅಶ್ವಮೇಧದ ವಲ್ಲಿಗದ್ದೆ ಮತ್ತು ಗ್ರಾಮಾಯಣದ ಪಾದಳ್ಳಿಯ ನಡುವೆ ಕೆಲವು ಸಾಮ್ಯಗಳಿರುವಂತೆಯೇ ಎರಡೂ ಊರಿನ ದುರಂತ, ಶೋಷಣೆ, ರಾಜಕೀಯ, ಹಣಕಾಸು ಎಲ್ಲವೂ ಸುತ್ತುವುದು ಮಠದ ಸುತ್ತಲೇ ಅನಿಸುತ್ತದೆ. ಗ್ರಾಮಾಯಣದ ಪಡದಯ್ಯನಿಗೂ ಅಶ್ವಮೇಧದ ಮಠದ ಇಬ್ಬರು ಸ್ವಾಮಿಗಳಿಗೂ ಸ್ವಭಾವದಲ್ಲಿ ಬಹಳ ಸಾಮ್ಯಗಳಿರುವಂತೆ ಕಾಣುತ್ತದೆ. ಗ್ರಾಮಾಯಣದ ಕುರಿತು ನಮ್ಮ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಗಿರಡ್ಡಿ ಗೋವಿಂದರಾಜು ಅವರ ಮಾತುಗಳು ಸದ್ಯದ ನಮ್ಮ ಚರ್ಚೆಗೆ ಬಹಳ ಉಪಯುಕ್ತವೆನಿಸುವಂತಿವೆ.

"ಈ ಕೃತಿಯ ಮಹತ್ವವೂ ಕೂಡ ಅದು ಎಷ್ಟರ ಮಟ್ಟಿಗೆ ಬದುಕಿನ ಮಹತ್ವದ ಭಾವನಾತ್ಮಕ ಇಲ್ಲವೆ ನೈತಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದೆಂಬುದರ ಮೇಲೆ ಅವಲಂಬಿಸಿದೆ. ಹೀಗೆ ಉತ್ತಮ ಕಾದಂಬರಿಕಾರ ಪಾತ್ರ, ಸನ್ನಿವೇಶ, ಪರಿಸರಗಳ ಮೂಲಕವಾಗಿಯೇ ತನ್ನ ವೈಚಾರಿಕತೆಯ ಶಕ್ತಿ ನಮಗೆ ಅರಿವಾಗುವಂತೆ ಮಾಡುತ್ತಾನೆ. "ಗ್ರಾಮಾಯಣ"ದಲ್ಲಿ ಬರುವ ಚಿಮಣಾಳ ಮಾನಭಂಗದ ಪ್ರಸಂಗವನ್ನು ಇಲ್ಲಿ ನೆನೆಯಬಹುದು. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸೇರುವ ಊರಿನ ದೈವದ ಸಭೆ, ಇದಕ್ಕೆ ಕಾರಣ ಮಠದ ಪಡದಯ್ಯನವರು ಎಂದು ತಿಳಿದಾಗ ಏನು ಮಾಡುವದಕ್ಕೂ ಸಾಧ್ಯವಾಗುವದಿಲ್ಲ. ಯಾಕೆಂದರೆ ಪಡದಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ. ಊರಿನ ಮಹತ್ವದ ಜನಾಂಗವೊಂದರ ಆಧ್ಯಾತ್ಮಿಕ ಮೌಲ್ಯಗಳನ್ನು ಕಾಪಾಡುವ ಸಂಸ್ಥೆಯ ಪ್ರತಿನಿಧಿ. ಅವನೇ ಇಂಥ ಅರ್ಥಹೀನ ಅಪರಾಧಕ್ಕೆ ಕಾರಣವಾದದ್ದು ಅಕ್ಷಮ್ಯ. ಹಾಗಿದ್ದೂ ದೈವ ಅವನ ವಿರುದ್ಧ ನಿರ್ಣಯ ಕೈಗೊಳ್ಳಲು ಅಸಹಾಯಕವಾಗಿದೆ. ಅವನಿಗೆ ಶಾಸ್ತಿ ಮಾಡಿದಲ್ಲಿ ಮಠದ ಪಾವಿತ್ರ್ಯಕ್ಕೆ ಅವಮಾನ ಮಾಡಿದಂತೆ ಎಂದು ದೈವದ ನಂಬಿಕೆ. ಅರ್ಥವನ್ನು ಕಳೆದುಕೊಂಡಿದ್ದರೂ ಇನ್ನೂ ಬದುಕಿ ಉಳಿದಿರುವ ಮಠದಂಥ ಸಂಕೇತಗಳು ಗ್ರಾಮದ ವ್ಯಕ್ತಿಗಳ ಬದುಕಿಗೆ ತೊಡಕಾಗುವುದನ್ನು ಈ ಸನ್ನಿವೇಶ ನಾಟ್ಯೀಕರಿಸಿ ತೋರಿಸುತ್ತದೆ. ಇಂಥ ಸನ್ನಿವೇಶಗಳು ಬೆಳೆಯುತ್ತಲೇ ಹೋಗುವುದು ಈ ಸಮಾಜದ ಅವನತಿಯನ್ನು ಅನಿವಾರ್ಯಗೊಳಿಸುತ್ತದೆ." (ಸಾಹಿತ್ಯದಲ್ಲಿ ವೈಚಾರಿಕತೆ - ಮನೋಹರ ಗ್ರಂಥಮಾಲಾ ಪ್ರಕಟನೆ, ಪುಟ ೫೧-೫೨)

ಅಂದಹಾಗೆ ಗ್ರಾಮಾಯಣ ಪ್ರಕಟವಾಗಿದ್ದು ೧೯೫೭ರಲ್ಲಿ. ಸಂಸ್ಕಾರ ಅಥವಾ ವಂಶವೃಕ್ಷ ಬರುವುದಕ್ಕೂ ಸುಮಾರು ಎಂಟು ವರ್ಷಗಳಷ್ಟು ಹಿಂದೆ!

ಒಂದು ರೀತಿಯಲ್ಲಿ ಗ್ರಾಮಾಯಣ ಸಮಸ್ಯೆ ಮತ್ತು ಪರಿಹಾರದ ಜಿಜ್ಞಾಸೆಗಳನ್ನೆಲ್ಲ ಮೀರಿ ಹೊರಡುತ್ತದೆ. ಕಾದಂಬರಿಯ ಆರಂಭದ ಘಟ್ಟದಲ್ಲೇ ಅತ್ಯಾಚಾರ, ಅದೂ ಮಠದ ಸ್ವಾಮಿಗಳಿಂದ ನಡೆದಿದೆ. ಇನ್ನು ಧರ್ಮಗ್ರಂಥಗಳಲ್ಲಿ ಪರಿಹಾರ ಹುಡುಕುವುದಾದರೂ ಯಾವುದಕ್ಕೆ? ಇಲ್ಲೊಂದು ತಮಾಷೆ ಕೂಡ ಇದೆ. ಚಿಮಣಾಳನ್ನು ಬಯಸಿದವನು ಬಾಪೂ ಸಾಹೇಬ. ಅವನಿಗೇ ಚಳ್ಳೆಹಣ್ಣು ತಿನ್ನಿಸಿ ಚಿಮಣಾಳನ್ನು ಅನುಭವಿಸುವುದು ಮಾತ್ರ ಮಠದ ಸ್ವಾಮಿ. ಮಠದಲ್ಲೇ ಮದ ಮದನಿಕೆ ಮತ್ತು ಜೂಜುಗಳೆಲ್ಲ ಸಹಜ ವಿದ್ಯಮಾನಗಳೆಂಬಂತಿರುವ ಒಂದು ಜಗತ್ತಿಗೆ ಗ್ರಾಮಾಯಣ ನಮ್ಮನ್ನು ಕರೆದೊಯ್ಯುತ್ತದೆ. ಜಿಜ್ಞಾಸೆಗಳೆಲ್ಲ ಅರ್ಥಹೀನವಾಗುವ, ಹಾಸ್ಯಾಸ್ಪದವಾಗುವ ಕಟು ವಾಸ್ತವ ಕಣ್ಣೆದುರಿಗಿರುವಾಗ ಬದುಕುವ ಶ್ರೇಷ್ಠವಾದ ಒಂದು ವಿಧಾನದ ಹುಡುಕಾಟದಲ್ಲಿರುವ ಗ್ರಂಥಗಳೇನು ಕೊಡಬಲ್ಲವು ಬದುಕಿಗೆ?

ಮನುಷ್ಯ ಸಂಬಂಧಗಳಲ್ಲಿ ಹೆಣೆದುಕೊಳ್ಳುವ ಸಂದಿಗ್ಧಗಳು, ತಾತ್ವಿಕ ಸಂಕಟಗಳು ಧರ್ಮಸಂಕಟಗಳಾಗಿ ಕಂಡಾಗ ಪರಿಹಾರಕ್ಕಾಗಿ ಅನುಭವ, ಇತಿಹಾಸ, ಧರ್ಮಶಾಸ್ತ್ರಗಳನ್ನು ತಡಕಾಡುವುದು ಒಂದು ಸ್ತರವಾದರೆ ಪರಿಸ್ಥಿತಿ ಕೈಮೀರಿ ಹೋದ ಬಳಿಕ ಯಾವುದೂ ಸಹಾಯಕ್ಕೆ ಬರುವುದಿಲ್ಲ. ಅಲ್ಲಿ ಬದುಕಿನ ಲಯವೇ ಪರಿಹಾರವನ್ನೋ ಸಮಾಧಾನವನ್ನೋ ಕಂಡುಕೊಳ್ಳಬೇಕಾಗುತ್ತದೆ. ಎಲ್ಲಿಯ ಪಡದಯ್ಯ, ಎಲ್ಲಿಯ ಪ್ರಾಣೇಶಾಚಾರ್ಯರು! (ವಾರಪತ್ರಿಕೆ `ವಿಕ್ರಾಂತ ಕರ್ನಾಟಕ'ದ ಮೇ ೨೫ರ ಸಂಚಿಕೆಯಲ್ಲಿ ಪ್ರಕಟಿತ)

Ornamental seperator
  • narendra ರವರ ಬ್ಲಾಗ್
  • Login or register to post comments
  • 309 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಸ್ಕಾರ ಮತ್ತು ವಂಶವೃಕ್ಷ
  • ಬೆಣ್ಣೆಹೂವು ಮತ್ತು ಅಶ್ವಮೇಧ
  • ಒಂದು ಕಾದಂಬರಿ
  • "ಕುವೆಂಪು ಕವಿಯೇ ಅಲ್ಲ"
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
  • ಮನಹ್ಪಠಲ
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 5:21pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator