Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › narendra ರವರ ಬ್ಲಾಗ್

ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

April 22, 2007 - 9:53am — narendra

ಹಿಂದೆಲ್ಲ ಸಂಜೆ ಹೊತ್ತು ಆ ದಿನದ ಕೆಲಸ, ಚಾ ಕಾಫಿ ಮುಗಿದದ್ದೇ ಯಾವತ್ತಿನಂತೆ ಪುಟ್ಟುಭಟ್ಟರ ಅಂಗಡಿ ಮುಂಗಟ್ಟಿನ ಬೆಂಚುಗಳ ಮೇಲೆ ಕೂತು, ನೆಲಗಡಲೆ ತಿನ್ನುತ್ತಲೋ ಪೇಪರು ಓದುತ್ತಲೋ ಇಂದಿರಮ್ಮನ ಆಡಳಿತದಿಂದ ಹಿಡಿದು ಕಲ್ಲರಬೈಲಿನ ಸಂಕಪ್ಪನ ಕೊನೇ ಮಗಳು ಯಾರೊಂದಿಗೋ ಓಡಿಹೋದದ್ದರ ವರೆಗೆ ನಾಲ್ಕಾರು ಮಂದಿ ಹಿರಿಯರು ಸೇರಿ ಅದೂ ಇದೂ ಮಾತನಾಡುವುದಿತ್ತು. ಮಕ್ಕಳಾಗಿದ್ದ ನಮಗೆ ಆಗ ಅದೆಲ್ಲ ಅರ್ಥವಾಗದಿದ್ದರೂ ಈಗ ಅದರಲ್ಲಿದ್ದ ಒಂದು ಸುಖ ಕಾಡುತ್ತದೆ. ನಗರದ ನಡುವೆ ಬದುಕುತ್ತಿರುವವರಿಗೆ ಇಂಥ ಸುಖ ಇಲ್ಲ.

ಕತ್ತಲಾಗುವುದರೊಳಗೆ ಗೂಡು ಸೇರಿಕೊಂಡರೆ ಪ್ರಪಂಚ ತೆರೆದುಕೊಳ್ಳುವುದು ಟೀವಿ ಸ್ಕ್ರೀನ್‌ನಲ್ಲೇ. ಯಾರೋ ಕುಳಿತು ಚರ್ಚಿಸುವುದನ್ನು, ಮೈಕ್‌ಗೆ ಎದುರು ಸಿಕ್ಕಿದವರು ಹೇಳುತ್ತಿರುವುದನ್ನು, ಎಳೆ ಪ್ರಾಯದ, ನೋಡಲು ಮಾಡರ್ನ್ ಆಗಿರುವ ಆಂಕರ್‌ಗೆ ಅನಿಸಿದ್ದನ್ನು ಕೇಳುತ್ತ ಹೊತ್ತು ಕಳೆಯುವುದಷ್ಟೇ. ನಿಮಗನಿಸಿದ್ದನ್ನು ಯಾರ ಬಳಿ ಹೇಳುವುದು? ಹೇಳಿದರೆ ಕೇಳುವುದಕ್ಕಾದರೂ ಯಾರಿಗೆ ಪುರುಸೊತ್ತಿದೆ? ಅಷ್ಟಕ್ಕೂ ನೀವು ಹೇಳಬೇಕೆಂದುಕೊಂಡಿದ್ದನ್ನೆಲ್ಲ ಅಲ್ಲಿ ಯಾರ್‍ಯಾರೋ ಅರೆಬರೆಯಾಗಿ ಹೇಳಿಬಿಟ್ಟಿದ್ದಾರೆಂದೂ ಅನಿಸುತ್ತಿರುತ್ತದಲ್ಲ!

ಪತ್ರಗಳೂ ಬರುವುದಿಲ್ಲ ಈಗ. ನಮ್ಮ ನಿಮ್ಮಲ್ಲಿ ಮಾತೂ ಕಡಿಮೆ. ಹೆಚ್ಚು ಮಾತನಾಡುವುದು, ಸ್ನೇಹ, ಪರಿಚಯ ಎಂದೆಲ್ಲ ಹೊರಡುವುದೇನಿದ್ದರೂ ಎಲ್ಲೈಸಿ ಏಜೆಂಟರ, ಸೇಲ್ಸ್ ಮ್ಯಾನ್‌ಗಳ ಶೈಲಿ ಎನಿಸುತ್ತದೆ. ಹಾಗಾಗಿ ಪರಿಚಯವಿಲ್ಲದವರ ಮುಗುಳ್ನಗೆಯನ್ನೂ ಅನುಮಾನದಿಂದಲೇ ಎದುರಿಸುತ್ತ ಎಲ್ಲಿ ನಮ್ಮ ತುಟಿಯೂ ಸಮಯಕ್ಕೆ ಮೊದಲೇ ಬಿರಿಯುವುದೋ ಎಂದು ಆತಂಕಗೊಳ್ಳುತ್ತೇವೆ.

ಆದರೂ ನಾವು ಕೆಲವರು ಈಮೇಲುಗಳಲ್ಲಿ, ಪತ್ರಗಳಲ್ಲಿ ಸಂವಾದ ನಡೆಸುವುದನ್ನು ಬಿಟ್ಟಿಲ್ಲ. ನಮ್ಮನ್ನು ಬೆಳೆಸುವಂತಿದ್ದರೆ ಜಗಳವಾಡುವ ಹುಮ್ಮಸ್ಸು ಕಳೆದುಕೊಂಡಿಲ್ಲ. ಇದೆಲ್ಲ ನಮ್ಮನ್ನು ಇನ್ನಷ್ಟು ಬೆಸೆಯುವುದನ್ನು ಕಂಡು ಅಚ್ಚರಿಗೊಂಡು ಇಲ್ಲಿ ಈಗ ಹೀಗೆ, ನಿಮ್ಮೆದುರು....

ಬಹಳ ಹಿಂದೆ ಹೊಸಹಳ್ಳಿ ದಾಳೇಗೌಡರು ಒಂದು ಪ್ರಶ್ನೆ ಕೇಳಿದ್ದರು. ನಿಮ್ಮ ಪ್ರಕಾರ ಧರ್ಮ ಎಂದರೆ ಏನು? ವಿದ್ಯಾರ್ಥಿ ಧರ್ಮ, ಶಿಕ್ಷಕನ ಧರ್ಮ, ಗೃಹಿಣಿಯ ಧರ್ಮ, ಮನೆಯ ಯಜಮಾನನ ಧರ್ಮ, ಒಬ್ಬ ಮಠಾಧಿಪತಿಯ ಧರ್ಮ ಎಂದೆಲ್ಲ ಬರೆದಿದ್ದೆ. ಕಳೆದ ವರ್ಷ ಬ್ರಹ್ಮಾವರದಲ್ಲಿ ಒಂದು ವಿಚಾರಗೋಷ್ಠಿ ನಡೆಯಿತು. ಜಾಗತೀಕರಣ ಮತ್ತು ಕಲೆ, ಸಂಸ್ಕೃತಿ, ಶಿಕ್ಷಣ. ಅಲ್ಲಿ ಪದವಿ ತರಗತಿಯಲ್ಲಿ ಕಲಿಯುತ್ತಿರುವ ಒಬ್ಬಳು ವಿದ್ಯಾರ್ಥಿನಿ ಎದ್ದು ನಿಂತು ಒಂದು ಪ್ರಶ್ನೆ ಕೇಳಿದಳು. "ಸರ್, ನೀವೆಲ್ಲ ಹಿಂದೂ ಧರ್ಮ ಹಿಂದೂ ಧರ್ಮ ಎನ್ನುತ್ತೀರಲ್ಲ, ಅದಕ್ಕೂ ಈ ಸಂಘ ಪರಿವಾರದವರು ಹೇಳುವ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸ ಏನು ಸರ್, ನನಗೆ ಈ ಬಗ್ಗೆ ಗೊಂದಲವಿದೆ, ಯಾರಾದರೂ ಉತ್ತರಿಸುತ್ತೀರಾ " ಎಂದು ಕೇಳಿದಳು. ನೀವು ಉತ್ತರಿಸಿ.

ಈಚೆಗೆ ಮಿತ್ರರೊಬ್ಬರು ಈ ಕತೆಯನ್ನು ನನಗೆ ನೆನಪಿಸಿದರು. ಉಪನಿಷತ್ತಿನ ಒಂದು ಕತೆ. ಉದ್ಧಾಲಕ ಎಂಬ ಒಬ್ಬ ಮುನಿ. ಒಮ್ಮೆ ಆತನ ಆಶ್ರಮಕ್ಕೆ ಒಬ್ಬ ಅತಿಥಿ ಬರುತ್ತಾನೆ. ಉದ್ಧಾಲಕ ಮತ್ತು ಆತನ ಪತ್ನಿ ಅತಿಥಿಯನ್ನು ಸಹಜವಾಗಿಯೇ ಚೆನ್ನಾಗಿ ಆದರಿಸುತ್ತಾರೆ, ಉಪಚರಿಸುತ್ತಾರೆ. ರಾತ್ರಿಯಾಗುತ್ತದೆ, ಅತಿಥಿಗೆ ಹಾಸುಗೆಯೂ ತಯಾರಾಗುತ್ತದೆ. ಮಾತ್ರವಲ್ಲ, ಉದ್ಧಾಲಕನ ಪತ್ನಿ ಅತಿಥಿಯನ್ನು ಎಲ್ಲ ರೀತಿಯಲ್ಲೂ ಸಂತುಷ್ಟಗೊಳಿಸುವುದಕ್ಕಾಗಿ ತಯಾರಾಗುತ್ತಾಳೆ. ಆಗ ಅವರ ಮಗ ಶ್ವೇತಕೇತು ಇದನ್ನು ವಿರೋಧಿಸುತ್ತಾನೆ. ತನ್ನ ತಂದೆಯ ವಿರುದ್ಧವೇ ಬಂಡೇಳುತ್ತಾನೆ. ಆಗ ಉದ್ಧಾಲಕ ಹೇಳುತ್ತಾನೆ, "ಮಗನೇ, ಇದು ನಮ್ಮ ಧರ್ಮ. ನಾವಿದನ್ನು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದೇವೆ ಮತ್ತು ಇದು ನಮ್ಮ ಕಾಲದ ಮೌಲ್ಯವಾಗಿದೆ. ನಿನ್ನ ಕಾಲದ ಮೌಲ್ಯಗಳು ಬೇರೆ. ಹಾಗಾಗಿ ನಿನ್ನ ಧರ್ಮ ಬೇರೆ. ನೀನು ಅದನ್ನೇ ಆಚರಿಸು. ಆದರೆ ನಮಗೆ ನಮ್ಮ ಧರ್ಮವನ್ನು ಆಚರಿಸಲು ಬಿಡು. ನಾವು ನಿನಗೆ ನಿನ್ನ ಧರ್ಮವನ್ನು ಬಿಡು ಎಂದಿದ್ದುಂಟೇ? ಹಾಗೆಯೇ ನೀನು ನಮಗೆ ನಮ್ಮ ಧರ್ಮವನ್ನು ನಡೆಸಲು ಬಿಡು"

ಈಗ ನಿಮ್ಮ ಮಾತು, ಕಾದಿರುತ್ತೇನೆ.

Ornamental seperator
  • narendra ರವರ ಬ್ಲಾಗ್
  • Login or register to post comments
  • 516 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 23, 2007 - 12:11pm — shreekant.mishrikoti

ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

shreekant.mishrikoti's picture

ಇತ್ತೀಚೆಗೆ ಒಂದು ಪುಸ್ತಕದಲ್ಲಿ ಧರ್ಮ ಕುರಿತು ಬೇಂದ್ರೆಯವರ ಅರ್ಥ ವಿವರಣೆ ಸಿಕ್ಕಿತು . ಅದು ಹೀಗಿದೆ .

ಧಾರಣಾತ್ ಇತಿ ಧರ್ಮಃ - ಅಂದರೆ ಹೊಂದಾಣಿಕೆಯೇ ಧರ್ಮ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
April 23, 2007 - 6:36pm — narendra

ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

narendra's picture

ಶ್ರೀಕಾಂತ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಕೆಲವು ಕಾದಂಬರಿಗಳನ್ನು ಇಟ್ಟುಕೊಂಡು ಈ ಚರ್ಚೆಯನ್ನು ಬೆಳೆಸುವವನಿದ್ದೇನೆ. ಈಗಾಗಲೇ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಕೆಲವು ಲೇಖನಗಳು ಪ್ರಕಟವಾಗಿವೆ ಕೂಡ. ನಿಮ್ಮ ಪ್ರತಿಕ್ರಿಯೆ ನನಗೆ ತುಂಬ ಮೌಲಿಕವಾದ ವಿಚಾರ ತಿಳಿಸಿಕೊಟ್ಟಿದೆ, ಇಷ್ಟವಾಯಿತು. ಬರೆಯುತ್ತಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
April 23, 2007 - 7:39pm — mahesha

ಉ:

mahesha's picture

======================================
ನಂಗೆ ಆ ಜಗಜೀತ ಸಿಂಗನ ಈ ಗಜಲ್ಲು ತುಂಬ ಇಸ್ಟ...

"ಮೇನ ಹಿಂದೂ ನ ಮುಸಲ್ಮಾಂ; ಮುಝೆ ಜೀನೇ ದೋ" Sad

"ಧಾರಣಾತ್ ಇತಿ ಧರ್ಮಃ", ಅಂದರೆ ತಾನು ತಾನೇ ಕಂಡುಕೊಂಡು ತೊಟ್ಟದ್ದು ಅಂತ ತಾನೆ!

ಈಗ ಬರಿ ತೊಡಿಸುವವರೇ. ತಲೆಮಾಸಿಸಿಯಾದರೂ, ಹಿಡಿಸದಿದ್ದರೂ ಅವರ 'ತೊಡುಗೆ' ತೊಡಿಸಲು ಹಲವರು ತಯಾರು.

  • Login or register to post comments
  • link
  • Email this ಪ್ರತಿಕ್ರಿಯೆ
April 24, 2007 - 9:37am — skakkilaya

ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!

skakkilaya's picture

ಮೊದಲನೆಯದು ಇಲ್ಲದಂತದ್ದು; ಎರಡನೆಯದು, ಬೇರೆಯವರದ್ದಿದೆಯಲ್ಲ, ಅದಕ್ಕಾಗಿ ಅವರ ಜೊತೆ ಜಗಳ ಕಾಯಲಿಕ್ಕಾಗಿ ಹುಟ್ಟಿಸಿ ಬೆಳೆಸಿರುವಂತದ್ದು. ಭಾರತೀಯ ಜೀವನಕ್ರಮದ ಮೇಲೆ ಪ್ರೀತಿ-ಗೌರವ-ಹೆಮ್ಮೆಗಳಿಲ್ಲದವರಿಂದ ಬೇರೇನನ್ನು ಅಪೇಕ್ಷಿಸಬಹುದು?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನಗೂ ನಿಮಗೂ ಸಮಾನವಾದೊಂದು ಧರ್ಮ
  • ಅಪಕಾರೀ ನಾಯಕರು
  • ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
  • ಮೇರಾ ಧರಂ ಮಹಾನ್!
  • ಆಟ, ಧರ್ಮ ಮತ್ತು ರಾಜಕೀಯ
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator