19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ‌ ಬದುಕಿನ ಪುಟಗಳಿಂದ…1

April 21, 2009 - 11:30pm
natekar

ಪ್ರಿಯ ಓದುಗರೇ,

ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನವಾಗಿರಬಹುದು. ಓದಿ… ನಿಮ್ಮ ಮನದಲ್ಲಿ ಪುಟಿದೇಳುವ ಭಾವನೆಗಳನ್ನು ವ್ಯಕ್ತಪಡಿಸಿ….

೧ ಆಸ್ತಿಕನಿಂದ ನಾಸ್ತಿಕನೆಡೆಗೆ

ನಾನು ಚಿಕ್ಕಂದಿನಲ್ಲಿ ಬೆಳೆದದ್ದು ಧಾರ್ಮಿಕ ವಾತಾವರಣದಲ್ಲಿ. ಚಿಕ್ಕಂದಿನಲ್ಲಿ ಅಜ್ಜಿಯ ಮನೆಗೆ ಹೋದಾಗಲೆಲ್ಲಾ ದೇವಸ್ಥಾನಗಳ ದರ್ಶನ. ದೇವರ ಬಗ್ಗೆ ಕೂತೂಹಲ. ಚಿಕ್ಕಮ್ಮನ ಸಂಗ್ರಹದಲ್ಲಿದ್ದ ಪುಸ್ತಕಗಳ ಪಠಣ. ವಿವೇಕಾನಂದರ ಭಕ್ತಿಯೋಗ, ರಾಜಯೋಗ, ಇತ್ಯಾದಿ ಪುಸ್ತಕಗಳನ್ನು ಆಸಕ್ತಿಯಿಂದ ಓದಿದ್ದೆ. ಬಹುಶ: ನನ್ನ ಅಜ್ಜಿ ಊರು ಕೇರಳದಲ್ಲಿದ್ದು ನನಗೆ ಮಲಯಾಳಂ ಬರದಿರುವುದು, ಅಲ್ಲಿ ಗೆಳೆಯರಾರೂ ಇಲ್ಲದಿರುವುದು ಪುಸ್ತಕ ಓದಿಗೆ ಆಸಕ್ತಿ ಮೂಡಿಸಿತೇನೋ? ಗೀತೆ, ಬೈಬಲ್ ಗಳನ್ನೂ ಓದಿದೆ. ದೇವರ ಬಗ್ಗೆ ಮತ್ತಷ್ಟು ಕೂತೂಹಲ. ನನ್ನ ಕಾಲೇಜ್ ಲೈಬ್ರರಿಯಲ್ಲಿ ಜಗತ್ತಿನ ಹಲವಾರು ಧರ್ಮಗಳನ್ನು ಪರಿಚಯಿಸುವ ಪುಸ್ತಕ ಓದಿದೆ. ದೇವಸ್ಥಾನಕ್ಕೆ ಹೋದಾಗಲೆಲ್ಲಾ ದೇವರಲ್ಲಿ ಏನು ಬೇಡುವುದು? ನನಗೆ ಬುದ್ಧಿ, ಧನ ಕೊಡು ಎಂದರೆ ನಾನೊಬ್ಬ ಸ್ವಾರ್ಥಿಯಾಗುತ್ತೇನೆ. ನಾನು ಎಲ್ಲರಿಗೂ ಬುದ್ಧಿ, ಧನ ಕೊಡು ಎಂದು ಬೇಡುತ್ತಿದ್ದೆ. ಆಗ ನನಗೂ ಸಿಗುತ್ತಲ್ಲವೇ ಎಂದಿರಬಹುದು.

ಪಿಯುಸಿ ಓದಬೇಕಾದರೆ ನಾನು ಪಾಠ ಓದಿದ್ದು ಕಡಿಮೆ. ಆರ್ಯಸಮಾಜ, ಬ್ರಹ್ಮಕುಮಾರಿ, ರಾಮಕೃಷ್ಣ ಆಶ್ರಮದಲ್ಲಿ ಪ್ರವಚನಗಳನ್ನು ಕೇಳಲು ಹೋಗುತ್ತಿದ್ದೆ. ಪ್ರಥಮ ಡಿಗ್ರಿ ಓದುತ್ತಿದ್ದಾಗ ರಾಮಕೃಷ್ಣ ಆಶ್ರಮದಲ್ಲಿ ಪ್ರವಚನಕ್ಕೆ ಹೋಗಲು ಯಾವ ಹುಡುಗರು ಸಿದ್ಧರಿರಲಿಲ್ಲ. ಆಗ ನಾನೇ ಹೋಗಿದ್ದೆ. ಆದರೆ ಆಗ ಆಸಕ್ತಿ ಇಲ್ಲದವರೆಲ್ಲಾ ಈಗ ಪ್ರಚಂಡ ಆಸ್ತಿಕರಾಗಿ ದೇವರ ಪೂಜೆ ಮಾಡಿ ತಮ್ಮ ಜೀವನ ಸಾರ್ಥಕಗೊಳಿಸುತ್ತಿದ್ದಾರೆ.

ನಾನು ಡಿಗ್ರಿಯ ಕೊನೆಯ ವರ್ಷದಲ್ಲಿ ನಾಸ್ತಿಕನಾದವನು ಇಂದಿಗೂ ಇನ್ನೂ ಗಟ್ಟಿ ನಿಲುವಿನ ನಾಸ್ತಿಕನಾಗಿದ್ದೇನೆ. ಜಗತ್ತಿನ ಬಡತನ, ಕೆಟ್ಟತನವನ್ನು ಹೋಗಲಾಡಿಸಲು ಆಗದ ಸರ್ವಶಕ್ತನಲ್ಲದ ಆ ದೇವರು ನನ್ನ ಎದುರು ಬಂದರೆ ಕಪಾಳಕ್ಕೆ ಬಿಗಿರಯುತ್ತೇನೆ ಎಂಬ ವಾಕ್ಯವನ್ನು ಒಳಗೊಂಡ ನನ್ನ ಲೇಖನವನ್ನು ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸಲು ವಿರೋಧ ವ್ಯಕ್ತಗೊಂಡಾಗ ನಾನು ಪ್ರತಿಭಟಿಸುವ ಬೆದರಿಕಯೊಡ್ಡಿ ಪ್ರಕಟಿಸುವಂತೆ ಮಾಡಿದ್ದೆ.

ನನ್ನ ಯೌವ್ವನದ ದಿನಗಳನ್ನು ದೇವರ ಹುಡುಕಾಟದಲ್ಲಿ ಕಳೆದ ನಾನು, ೨೦ರ ವಯಸ್ಸಿನಲ್ಲಿ ದೇವರು ಎಂಬುದು ಮನುಷ್ಯನು ತನ್ನ ಕಲ್ಪನೆಯಲ್ಲಿ ಹುಟ್ಟುಹಾಕಿದ ಅದ್ಭುತ ಸಂಶೋಧನೆ ಎಂಬ ತೀರ್ಮಾನಕ್ಕೆ ಬಂದೆ. ವಿವಿಧ ಧರ್ಮಗಳ ದೇವರ ಬಟ್ಟೆ, ವಾಹನಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಮನುಷ್ಯನ ಕಲ್ಪನೆಯ ಮಿತಿಯಲ್ಲಿರುವುದನ್ನು ಗಮನಿಸಿದೆ. ರೋಮ್ ನಿಂದ ಭಾರತದವರೆಗೆ ದೇವರುಗಳ ವಾಹನ (ಪ್ರಾಣಿ) ಆಯಾ ದೇಶದಲ್ಲಿ ಲಭ್ಯವಿರುವುದೇ ಆಗಿದೆ. ವಿದೇಶಿ ವಾಹನಗಳನ್ನು ಯಾವ ದೇವರೂ ಉಪಯೋಗಿಸುತ್ತಿರಲಿಲ್ಲ. ಈಗ ಜಾಗತೀಕರಣದ ಫಲವಾಗಿ ಹೊಸ ದೇವರುಗಳು ಹುಟ್ಟಿದ್ದರೆ, ವಿದೇಶಿ ಪ್ರಾಣಿಗಳನ್ನು ವಾಹನವಾಗಿ ಉಪಯೋಗಿಸಬಹುದೇನೋ? ಭಾರತದ ದೇವರು ಕುದುರೆ ಮೇಲೂ, ರೋಮ್ ದೇವರು ಇಲಿಯ ಮೇಲೆ ಪ್ರಯಾಣಿಸುತ್ತಿದ್ದರೆ ನೋಡಲು (ಪೂಜಿಸಲು?) ಇನ್ನೂ ಸುಂದರವಲ್ಲವೇ?

ಮುಂದುವರಿಯುತ್ತದೆ…… ನನಸಾಗದ ಸೈಕಲ್ ಪ್ರಯಾಣ, ಪತ್ರವುಂಟುಮಾಡಿದ ಅವಾಂತರ, ಜಾತಕಗಳನ್ನು ಸುಟ್ಟು ನೀರು ಬಿಸಿ ಮಾಡಿ ಕುಡಿದದ್ದು... ಇತ್ಯಾದಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಮಾಯ್ಸ೨ on
ನಿಮ್ಮ ಅನುಭವವನ್ನು ಹೊಂದುವುದು ನನ್ನ ಅನುಭವ.... ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ಇಷ್ಟೊಂದು ಆಸ್ತಿಕ ಹಿನ್ನಲೆ ಉಳ್ಳ ನೀವು ಡಿಗ್ರಿ ಕೊನೆ ವರ್ಷದಲ್ಲಿ ನಾಸ್ತಿಕರಾಗಿದ್ದು ಹೇಗೆ ಸರ್? ಆಸ್ತಿಕತೆಯೆಂಬುದು ವೈಚಾರಿಕತೆಯ ಕೊಲೆ ಎಂಬುದು ನನ್ನ ಭಾವನೆ! ನಾಸ್ತಿಕತೆಯನ್ನೂ ನಂಬಿಕೆಯನ್ನಾಗಿಸಿಕೊಂಡರೆ ಆಸ್ತಿಕತೆಯಷ್ಟೇ ತೊಡಕುಂಟುಮಾಡುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
"ನಾಸ್ತಿಕತೆಯನ್ನೂ ನಂಬಿಕೆಯನ್ನಾಗಿಸಿಕೊಂಡರೆ ಆಸ್ತಿಕತೆಯಷ್ಟೇ ತೊಡಕುಂಟುಮಾಡುತ್ತದೆ" ಸಕ್ಕತ್ ಮಾತು.. ಹೌದು. ನಾಸ್ತಿಕತೆ ಬರಿಯ ಪುರಾವೆಯಿಲ್ಲದ ನಂಬಿಕೆಯಾಗಿರಬಾರದು ಆಸ್ತಿಕತೆಯ ಹಾಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ನಿಮ್ಮ ಭಾವನೆಯನ್ನು ಗೌರವಿಸುತ್ತೇನೆ. 'ಆಸ್ತಿಕತೆ' ಬದಲು 'ಮೌಢ್ಯ' ಎಂದಿದ್ದರೆ ಸೂಕ್ತವಾಗುತ್ತಿತ್ತೇನೋ !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಅಲ್ಲಿ ಆಸ್ತಿಕತೆ ಸೂಕ್ತವಾಗಿದೆ.. ಅವರು ಆಸ್ತಿಕತೆಯ ಬಗ್ಗೆ ಬರೆಯುವಾಗ ಆ ಪದವನ್ನು ತಾನೇ ಬಳಸಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಆಸ್ತಿಕತೆ ವಿಚಾರವಾದಕ್ಕೆ ವಿರುದ್ಧ ಎಂದು ನಾನು ಒಪ್ಪಲಾರೆ. ದೇವರ ಮೇಲೆ ನಂಬಿಕೆ ಇಟ್ಟವನು ದೇವರ ಬಗೆಗಿನ ನಾಸ್ತಿಕರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ. ಹಾಗೆ ಉತ್ತರ ಕೊಡದೆ ವಿಚಾರಗಳನ್ನ ತುಳಿಯುವವನು ಮೂಢ. ತರ್ಕವೇ ಇಲ್ಲದೆ ತಾನು ನಂಬಿದ್ದೇ ಸತ್ಯ ಎಂದುಕೊಳ್ಳುವುದು ( ಆಸ್ತಿಕನೆ ಆಗಲಿ ನಾಸ್ತಿಕನೇ ಆಗಲಿ ) ಮೌಢ್ಯ. ಆಸ್ತಿಕನಾದ ಮಾತ್ರಕ್ಕೆ ಅವನು ವಿಚಾರಗಳನ್ನ ತುಳಿಯುವುದಿಲ್ಲ. ಮೂಢ ನಾದ್ದರಿಂದ ತುಳಿಯುತ್ತಾನೆ. ಆದ್ದರಿಂದ ಆಸ್ತಿಕತೆ ಬದಲು ಮೌಢ್ಯ ಸೂಕ್ತ ಅಂತ ನನಗನ್ನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
.. ಆದರೆ ಅಲ್ಲಿ ಆಸ್ತಿಕತೆ ಪದದ ಬಳಕೆ ಸೂಕ್ತ. ಹಾಗು ಆಸ್ತಿಕತೆ ವಿಚಾರವಾದಕ್ಕೆ ವಿರುದ್ಧವೇ ಏಕೆಂದರೆ ಅದು ಪುರಾವೆ ಇಲ್ಲದನ್ನು ನಂಬು ಎಂಬ ಮೌಢ್ಯ ಹತ್ತಿಸುವ ಸರಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಇಲ್ಲ... ಪುರಾವೆ ಇಲ್ಲದ್ದನ್ನು, ತರ್ಕ ಇಲ್ಲದ್ದನ್ನು ನಂಬು ಅಂತ ಮೌಢ್ಯ ಹೇಳುತ್ತದೆ ಆಸ್ತಿಕತೆಯಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಆಸ್ತಿಕತೆಗೆ ಆಧಾರವಾದ ದೇವರೆಂಬ ಸಂಗತಿಗೆ ಪುರಾವೆ ಮತ್ತು ತಕ್ಕತರ್ಕ ಒದಗಿಸಿರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ಹೌದೆ? ನೀವು ಆಸ್ತಿಕರಾದಲ್ಲಿ, ನಿಮ್ಮ ದೇವರಿರುವುದಕ್ಕೆ ಪುರಾವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಹೌದು ನಾನು ಆಸ್ತಿಕ. ನನ್ನ ದೇವರನ್ನು ನಂಬಿ ಎಂದು ನಾನು ಹೇಳಲಿಲ್ಲ. ನಂಬಲು ನನಗೆ ನನ್ನದೇ ಕಾರಣಗಳಿವೆ. ನಂಬದಿರಲು ನಿಮಗೂ ಕಾರಣಗಳಿರಬಹುದು. ನನ್ನ ವಿಚಾರಗಳು ನಿಮ್ಮ ವಿಚಾರಗಳನ್ನ ಕೊಲೆ ಮಾಡುವುದಿಲ್ಲ ಎಂದು ಹೇಳಬಯಸಿದೆ ಅಷ್ಟೇ!!! ಸುಮ್ಮನೆ ನಾನು ಹೇಳಿದ್ದನ್ನು ನಂಬಿ ಎಂದು ಒತ್ತಾಯ ಮಾಡಿದ್ದರೆ ನಾನು ಮೂಢ ನಾಗುತ್ತಿದ್ದೆ! ದೇವರನ್ನು ನಂಬಬೇಡಿ ಎಂದು ನೀವು ನನಗೆ ಒತ್ತಾಯ ಮಾಡಿದರೆ ನೀವು ಮೂಢ ರಾಗುತ್ತೀರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ಪುರಾವೆ ಮತ್ತು ತರ್ಕದ ಮಾತಾಡಿರಿ...! ದೇವರಿಲ್ಲ ಎಂದು ನಂಬಿ ಎಂದು ಹೇಳುತ್ತಿಲ್ಲ.. ಅದಕ್ಕೆ ಪುರಾವೆ ಇಲ್ಲ. ಅದಕ್ಕೆ ಪುರಾವೆಯಿಲ್ಲದೇ ಇರೋದನ್ನು ನಂಬೋದು ಮೌಢ್ಯ. ದೇವರಿಲ್ಲದೇ ಇರೋದು ದಿಟ.. ಅದನ್ನು ತಿಳಿದುಕೊಳ್ಳಿರಿ! ಪುರಾವೆ ಇದ್ರೆ ತೋರಿಸಿ..!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ನನ್ನನ್ನು ಒತ್ತಾಯಿಸಿ ನೀವು ಮೂಢ ರಾಗುತ್ತಿದ್ದಿರಿ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ನಿಮ್ಮನ್ನು ಒತ್ತಾಯ ಮಾಡ್ತಿಲ್ಲ.. ತರ್ಕವಾಗಿ ಹೇಳ್ತಿದ್ದೀವಿ... ಪುರಾವೆ ಇಲ್ಲದನ್ನು ನಂಬಿಕೊಂಡುವರು ಮೂಢರು.. ! ನಿಮ್ಮನ್ನು ನಾವ್ಯಾರು ಒತ್ತಾಯಿಸುತ್ತಿಲ್ಲ.. ನೀವೇ ಒತ್ತಾಯ ಮಾಡಿ, ದೇವರು ಎಂಬ ಸಂಗತಿಗೆ ಪುರಾವೆ ನೀಡಲಾಗದ್ರು ಅದು ಮೌಡ್ಯವಲ್ಲವೆಂದು ಹೇಳುತ್ತಿದ್ದೀರಲ್ಲ.!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ಇದಕ್ಕೆ ಉತ್ತರ ನೀಡಲು ಸಲ್ಪ ಸಮಯ ಬೇಕಾಗಬಹುದೇನೋ! ಕಮೆಂಟಿನಲ್ಲಿ ಹೇಳಲಾರೆ. ಸಮಯ ಕೊಡುತ್ತೀರಿ ಅಂತ ನಂಬಿ ಕೊಳ್ಳಲೆ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ನನ್ನ ನಂಬಿಕೆ ನನಗೆ, ನಿಮ್ಮ ನಂಬಿಕೆ ನಿಮಗೆ. ಪ್ರಶ್ನಿಸಿದರೆ ನೀವು ಮೂಢರಾಗುತ್ತೀರಿ ಅಂತ ಹೆದರಿಸ್ತಿದೀರಿ. ವೈಚಾರಿಕತೆಯ ಬಗ್ಗೆ ಮಾತಾಡ್ತಿರೋದು ಇಲ್ಲಿ, ನಿಮಗೆ ಮರೆತಿರೋ ಹಾಗಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ಒತ್ತಾಯಿಸಿದರೆ ಮೂಢ ರಾಗುತ್ತೀರಿ ಎಂದಿದ್ದು. ಪ್ರಶ್ನಿಸಿದರೆ ಅಂತ ಹೇಳಿಲ್ಲ. > ನೀವು ಗಮನ ಕೊಡುತ್ತಿಲ್ಲ. ಈಗ ಹೇಳಿದ್ದು ಆಸ್ತಿಕನಾದ ಮಾತ್ರಕ್ಕೆ ವೈಚಾರಿಕತೆಯನ್ನು ಕೊಲ್ಲುತ್ತಾನೆ ಎಂಬ ಕಲ್ಪನೆ ತಪ್ಪು ಅಂತ. ವೈಚಾರಿಕತೆ ಬಗ್ಗೆ ನಾನು ಮಾತಾಡಿಯೇ ಇಲ್ಲ. ಮಾತನಾಡುವ ಆಸಕ್ತಿಯೂ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ವೈಚಾರಿಕತೆ ಬಗ್ಗೆ ನಾನು ಮಾತಾಡಿಯೇ ಇಲ್ಲ. ಮಾತನಾಡುವ ಆಸಕ್ತಿಯೂ ಇಲ್ಲ>> ನೀವು ಆಸ್ತಿಕರಾದ್ದರಿಂದ ನಿಮಗೆ ವೈಚಾರಿಕತೆಯಲ್ಲಿ ಆಸಕ್ತಿ ಇಲ್ಲ. ನಿಮ್ಮ ನಂಬುಗೆಗಳನ್ನು ಪ್ರಶ್ನಿಸುವುದು, ಚರ್ಚಿಸುವುದು, ಅಲ್ಲಗೆಳೆಯುವುದು ಇದನ್ನೆಲ್ಲ ನೀವು ಸಹಿಸಲಾರಿರಿ, ಇದನ್ನೆ ವೈಚಾರಿಕತೆಯ ಕೊಲೆ ಅಂದಿದ್ದು ನಾನು. ನಿಮ್ಮನ್ನು ನಾಸ್ತಿಕರಾಗಿ ಎಂದು ಒತ್ತಾಯಿಸುತ್ತಿಲ್ಲ, ನಿಮ್ಮ ಆಸ್ತಿಕತೆಯನ್ನು ಪ್ರಶ್ನಿಸಿದ್ದಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ಈ ಹುಡುಗುಬುದ್ದಿ ಇನ್ನೂ ನಿಮ್ಮಲ್ಲಿ ಇದೆಯಾ? ಹೈಸ್ಕೂಲ್ ನಲ್ಲಿ ನಾನೂ ಹೀಗೆಯೇ ಯೋಚಿಸುತ್ತಿದ್ದೆ. ಈಗ ಇಲ್ಲ. > ನೀವು ಕಥೆಗಳನ್ನು ಎಂಜಾಯ್ ಮಾಡಲಿಲ್ಲವೇ ಹಾಗಿದ್ದರೆ ? ಇವೇ ದೇವರು ಅಲ್ಲ. ಮನುಷ್ಯನ ಕಲ್ಪನೆಯ ದೇವರ ವಿವಿಧ ರೂಪಗಳು. ಮನುಷ್ಯನ ಸೃಜನಶೀಲತೆಯ ರಚನಾತ್ಮಕತೆಯ ಮೊದಲ ಮೆಟ್ಟಿಲು ಈ ರೀತಿಯ ಕಲ್ಪನೆಗಳು ಅಂತ ನನಗನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
>>> ಇವೇ ದೇವರು ಅಲ್ಲ. ಮನುಷ್ಯನ ಕಲ್ಪನೆಯ ದೇವರ ವಿವಿಧ ರೂಪಗಳು. ಮನುಷ್ಯನ ಸೃಜನಶೀಲತೆಯ ರಚನಾತ್ಮಕತೆಯ ಮೊದಲ ಮೆಟ್ಟಿಲು ಈ ರೀತಿಯ ಕಲ್ಪನೆಗಳು ಅಂತ ನನಗನ್ನಿಸುತ್ತದೆ. ಹಾಗಾದರೆ ದೇವರು ಯಾವುದು ಹರ್ಷರವರೇ? ನಿಮ್ಮ ‘ದೇವರು’ ಕೂಡ ನಿಮ್ಮ ಸೃಜನಶೀಲತೆಯ ರಚನಾತ್ಮಕತೆಯಿಂದ ಹುಟ್ಟಿದ ಕಲ್ಪನೆ ಆಗಿರಬಹುದಲ್ಲವೇ? ನಿಮ್ಮ ದೇವರ ಗ್ರಹಿಕೆಗೂ ‘ಇವೇ ದೇವರು ಅಲ್ಲ’ ಎಂಬ ಹೇಳಿಕೆಗೂ ಏನು ಸಂಬಂಧವಿದೆ? ನಿಮ್ಮ ಗ್ರಹಿಕೆಯಲ್ಲಿ ದೇವರು ಹೇಗೆ ಭಿನ್ನ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by natekar on
ಅದು ಹುಡುಗು ಬುದ್ಧಿಯ ಪ್ರತಿಕ್ರಿಯೆ. ದೇವರ ಬಗ್ಗೆ ಸ್ಪಷ್ಟವಾದ ನಿಲುವು ಇಲ್ಲದಾಗ ಬರೆದ ಭಾವನಾತ್ಮಕ ಪ್ರತಿಕ್ರಿಯೆ. ಈಗ ಅಸ್ತಿತ್ವ ಇಲ್ಲದ ದೇವರ ಕೆನ್ನೆಗೆ ಹೊಡೆಯುವುದಾದರೂ ಹೇಗೆ? ನಾನು ದೇವರು ಎನ್ನುವುದರ ಆಂಗ್ಲ ಪದ "God" ಅದ್ಭುತ ಎಂದು ಕೊಳ್ಳುತ್ತೇನೆ. ಯಾಕೆಂದರೆ ಉಲ್ಟಾ ಓದಿ. ಬಾಲ ಅಲ್ಲಾಡಿಸುವ ಸುಮ್ಮ ಸುಮ್ಮನೆ ಬೊಗಳುವ ನಾಯಿ ನೆನಪಿಗೆ ಬರುತ್ತದೆ!!! ಕಥೆಗಳನ್ನು ಪ್ರತಿ ಮಕ್ಕಳೂ ಓದಿ ಖುಷಿಪಡುತ್ತಾರೆ. ನಾನೂ ಎಂಜಾಯ್ ಮಾಡಿದ್ದೇನೆ. ದೊಡ್ಡವರಾದ ಮೇಲೆ ಕಥೆ ಬಗ್ಗೆ ಆಸಕ್ತಿ ಕಮ್ಮಿಯಾಗುತ್ತದೆ. ದೇವರನ್ನು ಒಲಿಸುವ ಪೂಜೆ, ಹೋಮ, ಇನ್ನಿತರ ಕ್ರಿಯೆಗಳ ಬಗ್ಗೆ ಒಲವು ತೋರುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ಎಂಥ ಅಭಿರುಚಿ! ನನ್ನಲ್ಲಿ ಮಾತಿಲ್ಲ ಬಿಡಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ನಟೇಕರ್ ಅವರೇ ಇಲ್ಲಿ ನಾನು ಚರ್ಚೆ ಮಾಡಬಯಸುವುದಿಲ್ಲ . ಆದರೆ ಒಂದು ಸಾಮಾಜಿಕ ನೀತಿ ಸಂಹಿತೆಯನ್ನು ತಮ್ಮ ಮುಂದಿಡಲು ಬಯಸುತ್ತೇನೆ >>ನಾನು ದೇವರು ಎನ್ನುವುದರ ಆಂಗ್ಲ ಪದ "God" ಅದ್ಭುತ ಎಂದು ಕೊಳ್ಳುತ್ತೇನೆ. ಯಾಕೆಂದರೆ ಉಲ್ಟಾ ಓದಿ. ಬಾಲ ಅಲ್ಲಾಡಿಸುವ ಸುಮ್ಮ ಸುಮ್ಮನೆ ಬೊಗಳುವ ನಾಯಿ ನೆನಪಿಗೆ ಬರುತ್ತದೆ!!! ಸಮಾಜದ ಬಹಳಷ್ಟು ಜನರ ನಂಬಿಕೆಯನ್ನು ನಾಯಿಗೆ ಹೋಲಿಸಿದ್ದೀರಾ . ಇದು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ದೇವರಿದ್ದಾನೆಯೋ ಇಲ್ಲವೋ ಎಂಬ ವಿಷಯದ ಬಗ್ಗೆ ಚರ್ಚೆ ಮಾಡಿ. ಎಲ್ಲಾ ರೀತಿಯ ಜನರೂ ಇದನ್ನು ಓದುತ್ತಾರೆ .ಆದ್ದರಿಂದ ನಂಬಿಕೆಯ ಅವಹೇಳನ ಸಲ್ಲದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ನಿಮ್ಮ ಅನುಭವಗಳು ಓದಲು ಕುತೂಹಲಕರವಾಗಿವೆ. ಆದರೆ ಇಷ್ಟು ಚುಟುಕಾಗಿ ಆಸ್ತಿಕನಾಗಿದ್ದ ನಾನು ನಾಸ್ತಿಕನಾದೆ ಎಂದು ಬರೆದರೆ ಸಾಲದು ಅನ್ನಿಸುತ್ತದೆ. ನಿಮ್ಮ ರೂಪಾಂತರದ, ಆಲೋಚನೆಯ ಬದಲಾವಣೆಯ ಪ್ರಕ್ರಿಯೆಯನ್ನು ಹಂತಗಳನ್ನು ವಿವರವಾಗಿ ಬರೆದರೆ ಸಹಾಯಕವಾಗಬಹುದು. ನಾನಿಲ್ಲಿ ನಿಮ್ಮ ವಯಕ್ತಿಕ ನಿಲುವಿನ ಬಗ್ಗೆ ತೀರ್ಪು ಕೊಡಬಯಸುವುದಿಲ್ಲ. ಆದರೆ ನನ್ನ ಅನುಭವಕ್ಕೆ ಬಂದ ಸಂಗತಿಯೊಂದಿದೆ. ದೇವರು ಎಂಬುದು ಕಲ್ಪನೆ. ಅದು ಅಸ್ತಿತ್ವದಲ್ಲಿಲ್ಲ ಸರಿ. ತನ್ನನ್ನು ತಾನು ಆಸ್ತಿಕ ಎಂದುಕೊಂಡವನು ಆ ಕಲ್ಪನೆಗೆ ಜೋತು ಬಿದ್ದಿರುತ್ತಾನೆ. ಆ ಕಲ್ಪನೆಯಲ್ಲಿ ತನ್ನ ಅಸ್ತಿತ್ವದ ಕೇಂದ್ರವನ್ನು ಸ್ಥಾಪಿಸಿಕೊಳ್ಳುತ್ತಾನೆ. ಇಲ್ಲದ ಸಂಗತಿಯನ್ನು ಇದೆ ನಂಬುತ್ತಾನೆ. ಅದು ಇದೆ ಎನ್ನುವುದಕ್ಕೆ ಆತನಿಗೆ ಆಧಾರಗಳು ಇಲ್ಲ. ಇನ್ನು ನಾಸ್ತಿಕನಾದವನಿಗೆ ನಿಸರ್ಗದ ರಹಸ್ಯಗಳನ್ನು ಅರಿಯುವುದಕ್ಕಿಂತ, ತನ್ನ ಪ್ರಜ್ಞೆಯನ್ನು ಉನ್ನತ ಸ್ಥರಕ್ಕೆ ಏರಿಸಿಕೊಳ್ಳುವುದಕ್ಕಿಂತ ಈ ಇಲ್ಲದ ‘ಕಲ್ಪನೆ’ಯನ್ನು ಖಂಡಿಸುವುದೇ ಕಾಯಕವಾಗುತ್ತದೆ. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಧಾರ್ಮಿಕ ನಂಬಿಕೆಯನ್ನು, ದೇವರ ಕಲ್ಪನೆಯನ್ನು, ನೈತಿಕತೆಯ ಪಾಠವನ್ನು ವಿರೋಧಿಸುವುದು ವೈಚಾರಿಕವಾಗಿ ಆವಶ್ಯಕ. ಆದರೆ ಅದೇ ವೈಚಾರಿಕತೆಯಲ್ಲ. ಇದು ನಾನು ಕಂಡುಕೊಂಡಿರುವ ಸಂಗತಿ. ನಿಮ್ಮ ಬರವಣಿಗೆ ಹೀಗೇ ಸಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srikanth on
ಮಾಯ್ಸ್, ಸುಪ್ರೀತ್, ಹಾಗು ಹೇಮ, ಶ್ರೀಹರ್‍ಷ ಅವರು ಹೇಳಬಂದ ಮಾತು ವಿವರಿಸಲು ಸ್ವಲ್ಪ ಕಷ್ಟ. "life of Pi" ಎಂಬ ಪುಸ್ತಕ ಸಿಕ್ಕರೆ ಖಂಡಿತ ಓದಿ, ಬಹುಶಃ ಆದು ಹರ್‍ಷರ "viewpioint" ಅನ್ನು ಚನ್ನಾಗಿ ವಿವರಿಸುತ್ತೆ ಎಂದು ನನ್ನ ಅನ್ನಿಸಿಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ಆ ಪುಸ್ತಕದ ಬಗ್ಗೆ ಸಣ್ಣ ಪರಿಚಯ ಕೊಟ್ಟಿದ್ದರೆ ಓದುವುದಕ್ಕೆ ಶುರುಮಾಡಲು ನೆರವಾಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by natekar on
ಸುಪ್ರಿತರವರೇ ಇದು ಯಾವ ಪುಸ್ತಕದಿಂದ ಅಲ್ಲ. ನನ್ನ ಬದುಕಿನ ಪುಟಗಳಿಂದ. ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿ ಬೇಗ ಬೇಗ ಬರೆಯಬೇಕೆಂಬ ಹುಚ್ಚು ಆಸೆ ಹುಟ್ಟಿದೆ. ನೋಡೋಣ... ನಟೇಕರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ಇದು ಲೈಫ್ ಆಫ್ ಪೈ ಪುಸ್ತಕದ ಪ್ರಸ್ತಾಪಕ್ಕೆ ನೀಡಿದ ಪ್ರತಿಕ್ರಿಯೆ ಶ್ರೀಕಾಂತ್‌ರಿಗೆ, ನಿಮಗಲ್ಲ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on
> ಕಹಿ ಸತ್ಯ ಇದು ... ತುಂಬಾ ಉತ್ತಮ ಮಾತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
"ಇನ್ನು ನಾಸ್ತಿಕನಾದವನಿಗೆ ನಿಸರ್ಗದ ರಹಸ್ಯಗಳನ್ನು ಅರಿಯುವುದಕ್ಕಿಂತ, ತನ್ನ ಪ್ರಜ್ಞೆಯನ್ನು ಉನ್ನತ ಸ್ಥರಕ್ಕೆ ಏರಿಸಿಕೊಳ್ಳುವುದಕ್ಕಿಂತ ಈ ಇಲ್ಲದ ‘ಕಲ್ಪನೆ’ಯನ್ನು ಖಂಡಿಸುವುದೇ ಕಾಯಕವಾಗುತ್ತದೆ." ಓಹೋ.. ಅದಕ್ಕೆ ನಿಸರ್ಗದ ರಹಸ್ಯವನ್ನು ಅರಿತ ವಿಜ್ನಾನಿಗಳಲ್ಲಿ ಹೆಚ್ಚಿನವರು ನಾಸ್ತಿಕರು, ರಿಚರ್‍ಡ್ ಡಾಕಿನ್ಸ್, ನ್ಯೂಟನ್, ಡಾರ್‍ವಿನ್ ಮುಂತಾದವರ ತರಹ.... ಎಶ್ಟು ಮಂದಿ ನಾಸ್ತಿಕರು ನಿಸರ್ಗದ ರಹಸ್ಯಗಳನ್ನು ತಿಳಿಸುವ ವಿಜ್ನಾನದ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ? ಎಶ್ಟು ಮಂದಿ ತಮ್ಮ ವಿಜ್ನಾನ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ಮಾಡಿಕೊಂಡೂ ನಾಸ್ತಿಕರಾಗಿಲ್ಲ? ಎಶ್ಟು ಮಂದಿಯನ್ನು ಗಮನಿಸಿದ್ದೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ಇದಕ್ಕೆ ಉತ್ತರ ನೀಡಬೇಕೇ? ನನ್ನನ್ನು ಅವಾಯ್ಡ್ ಮಾಡುವ ಉದ್ದೇಶ ಇದೆ ನಿಮಗೆ, ಸುಮ್ಮನೆ ನಾನ್ಯಾಕೆ ನಿಮ್ಮ ಪ್ರಯತ್ನಕ್ಕೆ ಕಲ್ಲು ಹಾಕಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
:D ಹೆಚ್ಚಿನ ವಿಜ್ಞಾನಿಗಳೆಲ್ಲ ನಾಸ್ತಿಕರು ಹಾಗೂ ನಿಸರ್ಗದ ರಹಸ್ಯ ಮಿಕ್ಕವರಿಗಿಂತ ಚನ್ನಾಗಿ ತಿಳಿದವರು. ಇನ್ನು ತಾಂತ್ರಿಕವಾಗಿ ಮುಂದಿರುವ ದೇಶಗಳಲ್ಲೆಲ್ಲ ನಾಸ್ತಿಕರು ಹೆಚ್ಚಿದ್ದಾರೆ.. ಸದ್ಯ.. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gnanadev on
ಇನ್ನೆಷ್ಟು ದಿನ ಈ ಅಸ್ತಿಕ ನಾಸ್ತಿಕ ವಾದ ಚರ್ಚೆ ಮಹೇಶ್? ಬಹುಶಃ ಇದು ಸ೦ಪದದ ಖಾಯಮ್ ಒ೦ದು ಅ೦ಕಣವಾದ೦ತಿದೆ. ನೀವು ನಾಸ್ತಿಕರಾಗೇ ಇರಿ ಅದು ನಿಮ್ಮ ಸ್ವಾತ೦ತ್ರ್ಯ ಮತ್ತು ಆಯ್ಕೆ, ದೃಷ್ಟಿಕೋನ. ಇದನ್ನೇ ಬೇರೊಬ್ಬರ ಮೇಲೆ ಹೇರುವ ಅಥವಾ ಬ್ರೇನ್ ವಾಶ್ ಮಾಡುವ ಪ್ರಕ್ರಿಯೆ ಒ೦ದು ತರಹೆಯ ಫ್ಯಾಸಿಸಮ್ ಆಗುತ್ತದೆ. ಆಸ್ತಿಕ ಆಸ್ತಿಕನಾಗೇ ಇರಲು ಬಿಡಿ ಅದು ಅವನ ಬದುಕಿನ ಆಯ್ಕೆಯಾಗಿದ್ದರೆ, ನಮ್ಮ ಯಾರೊಬ್ಬರ ಹಸ್ತಕ್ಷೇಪಕ್ಕೂ ಅರ್ಥವಿಲ್ಲ. ಒ೦ದು ವೇಳೆ ಆಸ್ತಿಕನ ನ೦ಬಿಕೆ ನಿಲುವುಗಳು ನಿಮ್ಮ ಅ೦ದ್ರೆ ನಾಸ್ತಿಕರಿಗೆ ಧಕ್ಕೆ ಅಥವಾ ಅಡಚಣೆ ಮಾಡಿದರೆ ಅದು ಖ೦ಡನೀಯ. ನ೦ಬುವುದು ಮನುಷ್ಯನ ಮೂಲಭೂತ ಹಕ್ಕೂ ಮತ್ತು ಒ೦ದು Human Instinct ಎ೦ದು ನಾನು ಭಾವಿಸುತ್ತೇನೆ. ಆದರೆ ಆ ನ೦ಬುಗೆ ಇನ್ನೊಬ್ಬರ ನ೦ಬುಗೆಗೆ, ಬದುಕಿಗೆ, ಇನ್ನೊಬ್ಬರ ನೆಮ್ಮದಿಗೆ ರೋಡ್ ಹ೦ಪ್ ಆಗಬಾರದು ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by natekar on
ನಿಮ್ಮ ಸಲಹೆ ಸೂಕ್ತವಾಗಿದೆ. ನನ್ನ ಬದಲಾವಣೆಯ ಘಟ್ಟಗಳನ್ನು ವಿವರವಾಗಿ ಬರೆದರೆ ಪುಟಗಟ್ಟಲೆ ಬರೆಯಬಹುದು. ಆದರೆ ಅಂತರಜಾಲದಲ್ಲಿ ಓದಲು ಚುಟುಕಾಗಿರಲಿ ಎಂದು ಬರೆದಿದ್ದೇನೆ. ಆಸ್ತಿಕ ಮತ್ತು ನಾಸ್ತಿಕರ ನಿಮ್ಮ ವಿಚಾರವನ್ನು ನಾನು ಪೂರ್ಣವಾಗಿ ಒಪ್ಪುತ್ತೇನೆ. ಸ್ವಾತಂತ್ರ್ಯವನ್ನು ನಾವು ಗೌರವಿಸುವಾಗ ಸುಳ್ಳನ್ನು ನಂಬುವ ಸ್ವಾತಂತ್ರ್ಯವೂ ಒಳಗೊಂಡಿರುತ್ತದೆಯಲ್ಲವೇ? ನೀವು ಕಂಡುಕೊಂಡಿರುವ ಸಂಗತಿ ನನಗೂ ಇಷ್ಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath.kunigal on
ನಿಮಗೆ ದೇವರು ಕಾಣಿಸಲಿಲ್ಲ ಅಂತ ನಾಸ್ತಿಕರಾದಿರೋ..? ತುಂಬಾ ತಮಾಶೆಯಾಗಿದೆ..!! ನೀವು ಚಿಕ್ಕ ವಯಸ್ಸಿನಲ್ಲೇ ಏನೆಲ್ಲಾ ಓದಿದ್ದೀರಿ ಅಂತ ಹೇಳಿದ್ದೀರಿ, ಆದರೆ ಅವೆಲ್ಲವನ್ನ ಅರಗಿಸಿಕೊಂಡ ಪಕ್ವತೆ ನಿಮ್ಮಲ್ಲಿಲ್ಲ ಎನ್ನೋದು ನಿಮ್ಮ ಬರವಣಿಗೆಯಲ್ಲಿ ಸ್ಪಶ್ಟವಾಗಿ ಗೋಚರಿಸುತ್ತೆ. ನೀವು ರಾಮಕ್ರಿಷ್ಣ ಪರಮಹಂಸರ ಮತ್ತು ವಿವೇಕಾನಂದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಅಗತ್ಯವಿದೆ ಅನಿಸುತ್ತಿದೆ. ಸಾಧ್ಯವಾಗದಿದ್ದಲ್ಲಿ ನಾಸ್ತಿಕತೆಯ ಚರಮ ಘಟ್ಟವನ್ನೇ ತಲುಪಲು ಯತ್ನಿಸಿ ದೇವರ ದರ್ಶನವಾಗುವುದು ಖಂಡಿತ. ಬಹುಶಹ ನನ್ನ ಮಾತಿನ ಒಳ ಅರ್ಥ ತಿಳಿದಿರೆಂದು ಭಾವಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by natekar on
ದೇವರು ಕಾಣಿಸಲಿಲ್ಲ ಎಂದು ನಾಸ್ತಿಕರಾಗುವುದಾದರೆ ಜಗತ್ತಿನ ಎಲ್ಲರೂ ಎಂದೋ ನಾಸ್ತಿಕರಾಗುತ್ತಿದ್ದರು. ನಿಮ್ಮನ್ನೂ ಸೇರಿ. ನಿಮಗೆ ದೇವರ ದರ್ಶನವಾಗಿದ್ದರೆ ತಿಳಿಸಿ. ದೇವರ ರೂಪ ಹೇಗಿತ್ತು? ಜಗತ್ತಿನ ಅಸಂಖ್ಯಾತ ಜನರಿಗೆ ಉಪಕಾರವಾಗಬಹುದು (ಉಪ್ಪುಕಾರ!). ಯಾವುದಾದರೂ ಕಾಡಿಗೆ ಹೋಗಿ ಎಲ್ಲವನ್ನೂ ಮರೆತು ದೇವರನ್ನು ಜಪಿಸಿದರೆ ದೇವರು ಕಾಣಬಹುದು?? ಅದಕ್ಕೆ ಚಿತ್ತಭ್ರಮೆ ಎನ್ನುತ್ತಾರೆ. ಸಿನಿಮಾ ನೋಡಿ "ಹೇಮಮಾಲಿನಿ"ಯ ಬಗ್ಗೆ ಯೋಚಿಸಿ ಆಶಿಸುತ್ತಿದ್ದರೆ ಅವಳು ಕನಸಿನಲ್ಲಿ ಬರಬಹುದು. ಅದಕ್ಕೆ "ಕನಸಿನರಾಣಿ ಹೇಮಾಮಲಿನಿ" ಎಂದು ಬಿರುದು ಪಡೆದಿದ್ದರು. ಯಾವ ಪರಮಘಟ್ಟವೂ ಇಲ್ಲ, ಚರಮ ಘಟ್ಟವೂ ಇಲ್ಲ. ಎಲ್ಲವೂ ಭ್ರಮೆಯ ಘಟ್ಟ. ನಿಮ್ಮ ಮಾತಿನ ಒಳ ಅರ್ಥ ತಿಳಿಯಲಿಲ್ಲ. ನೇರ ಅರ್ಥ ಬರೆಯಿರಿ. ಎಲ್ಲರಿಗೂ ಸುಲಭವಾಗಿ ಅರ್ಥವಾಗಲಿ. ಸತ್ಯ ಸರಳವಾಗಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath.kunigal on
ದೇವರ ಅಸ್ತಿತ್ವದ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಮತ್ತು ಅಂತಹ ದಾರ್ಷ್ಟ್ಯತೆಯ ಸೋಗೂ ನನಗೆ ಬೇಕಿಲ್ಲ, ಆದರೆ ಈ ವಿಚಾರವಾಗಿ ತಮ್ಮೆಲ್ಲಾ ಜೀವನವನ್ನ ಮುಡಿಪಾಗಿಟ್ಟ ಅದೆಷ್ಟೋ ಮಹಾನ್ ದಾರ್ಶನಿಕರ ಜೀವನಾನುಭವಗಳನ್ನು ನನ್ನದೇ ಸ್ವಂತ ಅನುಭವಗಳಿಗೆ ಹೋಲಿಸಿ ಮಾತನಾಡಬಲ್ಲೆ. ನಮ್ಮ ದೇಶದಲ್ಲಿ ಯಾರು ಏನಾಗಬಯಸಿದರೂ ಅಡ್ಡಿ ಇಲ್ಲ. ಅಂತಹ ಅಪರಿಮಿತ ಬೌದ್ಧಿಕ ಸ್ವಾತಂತ್ರ್ಯ ಇನ್ನೆಲ್ಲೂ ನಿಮಗೆ ಸಿಗಲಾರದೇನೋ... ಎಂತೆಂತಹ ಮಹಾನ್ ದಾರ್ಶನಿಕರು ಹುಟ್ಟಿದ ಈ ನಾಡಿನಲ್ಲಿ ಚಾರ್ವಾಕನಂತವರಿಗೂ ನಾವು ಮನ್ನಣೆಯನ್ನಿತ್ತಿದ್ದೇವೆ. ನಿರ್ಧಿಷ್ಟ ವೈಚಾರಿಕತೆಗೆ ಕಟ್ಟುಬಿದ್ದು ಯಾರನ್ನೂ ಶಿಲುಬೆಗೋ ಅಥವಾ ಗಲ್ಲಿಗೋ ಏರಿಸುವಷ್ಟು ಸಂಕುಚತೆಯನ್ನ ನಮ್ಮ ಸಂಸ್ಕೃತಿ ನಮಗೆ ಮೊದಲಿಂದಲೂ ಕಲಿಸಲಿಲ್ಲ. ಇಷ್ಟೆಲ್ಲಾ ಬೌದ್ಧಿಕ ಸ್ವಾತಂತ್ರ್ಯವನ್ನ ನಾಸ್ತಿಕರೇ ಆಳುತ್ತಿರುವ ಚೀನ ದೇಶದಲ್ಲಿಯೋ ಅಥವಾ ಆಸ್ತಿಕತೆಯಿಂದ ಒಂದಂಚೂ ಅಲುಗಾಡಲಾಗದ ಮಧ್ಯ ಪ್ರಾಚ್ಯ್ ರಾಷ್ಟ್ರಗಳಲ್ಲಿ ಕನಿಷ್ಟ ಯೋಚಿಸಲಾದರೂ ಸಾಧ್ಯವೇ? ಬಹು ಹಿಂದಿನಿಂದಲೂ ನಮ್ಮ ದಾರ್ಶನಿಕರನೇಕರು ತಥಾಕತಿಥ ನಾಸ್ತಿಕರ ವೈಚಾರಿಕ ಆಕ್ರಮಣಗಳಿಂದ ನಮ್ಮ ಧರ್ಮವನ್ನ ಇಲ್ಲಿಯವರೆಗೆ ವೈಚಾರಿಕ ಚರ್ಚೆ, ಅಭಿಪ್ರಾಯ ಮಂಡನೆಗಳಿಂದಲೇ ಕಾಪಾಡಿಕೊಂಡು ಬಂದಿರುವುದಕ್ಕೆ ನಮ್ಮ ಧರ್ಮದ ಚಿರಂಜೀವಿ ಅಸ್ತಿತ್ವವೇ ಸಾಕ್ಷಿಯಲ್ಲವೇ? ಕೇವಲ ನಾಸ್ತಿಕತೆಯನ್ನೋ ಅಥವಾ ಆಸ್ತಿಕತೆಯನ್ನೋ ಪಟ್ಟು ಬಿಡದೆ ಜಪಿಸುತ್ತಿದ್ದರೆ ನಮ್ಮ, ನಮ್ಮ ರಾಷ್ಟ್ರದ ಅಸ್ತಿತ್ವಕ್ಕೆ ಅದೆಂದೋ ಧಕ್ಕೆ ಬಂದಿರುತ್ತಿತ್ತು ಎಂದು ಒಮ್ಮೆಯೂ ಅನಿಸಿಲ್ಲವೆ? ನಿಮ್ಮ ಪ್ರಕಾರ ದೇಶ ಕಂಡ ಮಹಾನ್ ದಾರ್ಶನಿಕರಿಗೆಲ್ಲಾ ಚಿತ್ತ ಭ್ರಮಣೆಯಾಗಿತ್ತೇ? ಬೆಳಗೆದ್ದು ಭೂಮಿ, ಭಾನು, ಬೆಟ್ಟ, ನದಿಗಳಿಗಳನ್ನು ಕೃತಜ್ಞತಾ ಭಾವದಿಂದ ದೇವರೆಂದು ತಿಳಿದು ನಮಿಸೋ ನಮ್ಮೆಲ್ಲಾ ತಾಯಂದಿರಿಗೆ ಚಿತ್ತ ಭ್ರಮಣೆಯಾಗಿದೆಯೇ? ಅತ್ತ ಪಶ್ಚಿಮದಲ್ಲಿ ತಮ್ಮ ನಾಸ್ತಿಕತೆಗೆ ಆತ್ಮವಿಲ್ಲವೆಂದು ನಮ್ಮ ಆಸ್ತಿಕತೆಯನ್ನ ಅಪ್ಪಿ ಬರುತ್ತಿರುವವರು ನಿಮಗೆ ಕಾಣಿಸುತ್ತಿಲ್ಲವೇ? (ಇತ್ತೀಚೆಗಷ್ಟೇ 'ಡೇವಿಡ್ ಫ್ರಾಲಿ'ಯವರು ಬರೆದ 'ನಾನೇಕೆ ಆಸ್ತಿಕನಾದೆ'? ಪುಸ್ತಕವನ್ನ ಒಮ್ಮೆ ಓದಿರೆಂದು ನನ್ನ ಪುಟ್ಟ ಸಲಹೆ.) ಅಷ್ಟಕ್ಕೂ, ಮೊದಲೇ ಹೇಳಿದ ಹಾಗೆ ನಿಮ್ಮಷ್ಟದಂತೆ ನೀವು ಬದುಕಲು ನೀವು ಸರ್ವ ತಂತ್ರ ಸ್ವತಂತ್ರರು. ನಿಮ್ಮ ವೈಚಾರಿಕತೆಯನ್ನ ಮತ್ತೊಬ್ಬರ ಮೇಲೆ ಹೇರದ ಹೊರತು..... ವೈಚಾರಿಕ ನೆಲೆಗಟ್ಟಿನಲ್ಲಿ ಚರ್ಚೆಗೆ ಸಿದ್ದ. ಆದರೆ ನಿಮ್ಮ ಕುಹಕ ವ್ಯಂಗ್ಯಗಳ ಧೋರಣೆ ಬೇರೆಯದೇ ಅರ್ಥ ನೀಡುತ್ತಿದೆ. ನಿಮ್ಮ ವೈಚಾರಿಕತೆಯನ್ನೊಪ್ಪದವರನ್ನ ವ್ಯಂಗ್ಯ ಮಾಡುವುದೇ ನಿಮ್ಮ ಉದ್ದೇಶವಾದಲ್ಲಿ ನನ್ನ ಕನಿಕರವಿದೆ...ಕ್ಷಮಿಸಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ಉತ್ತಮ ಪ್ರತಿಕ್ರಿಯೆ. ಈ ವಿಷಯದಲ್ಲಷ್ಟೇ ಅಲ್ಲ ಎಲ್ಲಾ ವಿಷಯದಲ್ಲೂ ಚರ್ಚೆಗೆ ಪೂರಕವಾದ ಮಾತಾವರಣವನ್ನು ಉಳಿಸಿಕೊಂಡು ಹೋಗುವುದು ಚರ್ಚೆಯ ಮೊದಲ ಹೆಜ್ಜೆ ಎಂದು ನನಗನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on
> ತುಂಬಾ ಒಳ್ಳೆಯ ಮಾತು ... ಅವರ ಬರಹ/ಕುಹಕಗಳೇ ಅವರ ವೈಚಾರಿಕತೆ/ಪ್ರಭುದ್ದತೆಗೆ ಹಿಡಿದ ಕನ್ನಡಿ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on
"ದೇವರು ನನ್ನ ಎದುರು ಬಂದರೆ ಕಪಾಳಕ್ಕೆ" ದೇವರಿಗೆ "ಕಪಾಳ" ಇದೆ ಅಂತಾ ನಿಮ್ಗೇ ಹೆಂಗೆ ಗೊತ್ತು ? ದೇವರು ಅಕಸ್ಮಾತ್ ಇದ್ದರು ನಿಮ್ಮ ಎದುರಿಗೆ ಬರುವುದಿಲ್ಲಾ ...ಕಾರಣ ನೀವು ಅವನಿಗೆ ಹೊಡಿಯುವ ಪ್ರಯತ್ನ ಮಾಡ್ತಿರಾ . ಪುರಂದರದಾಸ ರಂತೆ "ಕೃಷ್ಣ ಬಾರೋ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ " "ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ಕೃಷ್ಣ ಬಾರೋ" ದೇವರನ್ನು ಕರೆಯೋಕ್ಕು ನಯ ನಾಜುಕು ಕಲೆ ಬೇಕು . ABC :: " ಆ ನನ್ನ ಮಗ xyz ನನ್ನ ಮುಂದೆ ಬಂದರೆ ಎಕ್ಕಡದಾಗೆ ಹೊಡಿತ್ತೇನೆ " ಅಂತಾ ABC ಹೇಳುವಾಗ xyz ಹಿಂದೆ ಇರುತ್ತಾನೆ. XYZ : ಅಲ್ಲಾ ಮುಂದೆ ಬಂದರೆ ಹೋಡಿಯುವ ಇವನ ಹಿಂದೆನೇ ಇರುವ. ಅದೇ ರೀತಿ ದೇವ್ರು ನಿಮ್ಮ ಎದುರು ಬರೋದಿಲ್ಲಾ ...ಹಿಂದೆ ಇರಬಹುದು. ನಿಮ್ಮ ಹಿಂದೆ ಏನಿದೆ ನಿಮ್ಗೇ ಸರಿಯಾಗಿ ಗೊತ್ತಾ ? ಹಿಂದೆ ಅಂದರೆ ಕಾಲ + ಸ್ಥಳ + ದೇಶ + ಪರಿಸ್ಥಿತಿ ಎರಡು ಆಗುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಹಂಗಲ್ಲ ಮುರುಳಿ ... ದೇವರು ಬಂದು ಮುಟ್ಟಿ ಅಥವಾ ಕಿವಿಯಲ್ಲಿ ಕೂಗಿ ಹೇಳಬೇಕಂತೆ....ನಾನಿದಿನಪ್ಪ ನನ್ನ ನಂಬಿ ಪ್ಲೀಸ್ ಪ್ಲೀಸ್ ...ಅಂತ.. ಎಲ್ಲರೂ ಒಂದೇ ಸಾರಿಗೆ ಸುಖವಾಗಿರುವುದು ಪ್ರಕೃತಿ ನಿಯಮಕ್ಕೆ ವಿರುದ್ಧ ಎಂಬ ಕಾಮನ್ ಸೆನ್ಸ್ ಇದ್ದವರು ಹೆಂಗೆ ದೇವರ ಕಪಾಳಕ್ಕೆ ಹೊಡಿತಾರೆ ? ಇದು ವಿವೇಚನೆ! ನೀವು ಬದುಕಿದ್ದಿರಿ ಎಂಬುದಕ್ಕೆ ಸಾಕ್ಷಿ ಪುರಾವೆ ಬೇಕು. ಪುರಾವೆ ಇದ್ದರೆ ಬದುಕಿನ ಡೆಫಿನಿಶನ್ ಬದಲಿಸಿಬಿಡ್ತಾರೆ ಹುಷಾರ್!!! ಪಂಚೆಂದ್ರಿಯಗಳಿಗೆ ನಿಲುಕದ್ದು ಭಾಳ ಇದೆ ಜಗತ್ತಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
"ಪಂಚೆಂದ್ರಿಯಗಳಿಗೆ ನಿಲುಕದ್ದು ಭಾಳ ಇದೆ ಜಗತ್ತಲ್ಲಿ. " ನಿಮಗೆ ಹೆಂಗೆ ಗೊತ್ತಾಯ್ತು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಕಾಮನ್ ಸೆನ್ಸ್ .... ಕಾಮನ್ ಸೆನ್ಸ್ ಗೆ ಪುರಾವೆ ಇಲ್ಲ. .. ಇದೂ ಪಂಚೆಂದ್ರಿಯಗಳಿಗೆ ನಿಲುಕದ್ದೆ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on
ದಿಟವಾಗಲೂ ನೀವು ಹೀಗೆ ನಂಬಿಕೊಂಡಿದ್ದೀರ? http://en.wikipedia.... Albert Einstein states: "Common sense is the collection of 'prejudices' acquired by age eighteen."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
ಐನ ಸ್ಟೀನ್ ಹೇಳಿದ ಕೂಡಲೇ ದಿಟವಾಗಿರಲೇ ಬೇಕು ಅಂತ ಏನು ಇಲ್ಲ . Common sense (or, when used attributively as an adjective, commonsense, common-sense, or commonsensical), based on a strict construction of the term, consists of what people in common would agree on: that which they "sense" (in common) as their common natural understanding ಇದು ತಪ್ಪು ಅರ್ಥ. ಸಾಮಾನ್ಯ ಜ್ಞಾನ, ಮುಂದಾಲೋಚನೆ, ಅನುಭವ (ತನ್ನ ಮತ್ತು ಇನ್ನೊಬ್ಬರ) ಸರಳವಾದ ತರ್ಕ ಇವೆಲ್ಲ (ಇನ್ನೂ ಇರಬಹುದು) ಸೂಕ್ಷ್ಮವಾಗಿ ಸೇರಿ ಕಾಮನ್ ಸೆನ್ಸ್ ಆಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on
natekarರವರೆ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಮನುಷ್ಯನಲ್ಲಿ/ಮನುಷ್ಯತ್ವದಲ್ಲಿ ವಿಶ್ವಾಸ ಇಲ್ಲದವರಿಗೆ ದೇವರು, ಆಧ್ಯಾತ್ಮದ ನೆರವು ಬೇಕಾಗುತ್ತದೆ. ಅದು ಹಾಗಲ್ಲ ಎಂದು ಕೂಗಾಡುತ್ತಾರೆ, ಇರಲಿ. ದೇವರ ವಾಹನಗಳಿಗೆ ಚಾರಿತ್ರಿಕವಾಗಿ tribal totemic ಮೂಲಗಳಿವೆ. ಆನೆ, ಹಾವು, ಗರುಡ, ಇಲಿ ಇವೆಲ್ಲಾ ಬುಡಕಟ್ಟುಗಳ ಗುರುತುಗಳು. ಅವನ್ನೇ ಮುಂದೆ ಪುರಾಣಗಳಲ್ಲಿ ರಂಜಕವಾಗಿ ಚಿತ್ರಿತವಾದವು. ಇದು ಪೂರ್ವ-ಚರಿತ್ರೆಯಲ್ಲಿ ಬರುವ ಸಂಗತಿಗಳು ಎಂದು ಹಿಂದೆ ಓದಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on
> ಹಾಸ್ಯಾಸ್ಪದ. ಕಲಾಮ್ ತಾತ , ಪುರಂದರದಾಸರು, ತ್ಯಾಗರಾಜರು, ಗಾಂಧಿಜಿ, ತಿಲಕರು, ವಿನೋಭಾ ಭಾವೆ , ಸತ್ಯಕಾಮ, ಬೇಂದ್ರೆ ಇನ್ನೂ ಅನೇಕ ದೊಡ್ಡವರು ದೇವರಲ್ಲಿ ವಿಶ್ವಾಸ ಇಟ್ಟಿದ್ದರು. ಇವರೆಲ್ಲ ಮನುಷ್ಯತ್ವ ಇಲ್ಲದವರೇ ? ಮನುಷ್ಯರ ಬಗ್ಗೆ ನಂಬಿಕೆ ಇಲ್ಲದವರೇ ? ನಾಸ್ತಿಕರು ಮನುಷ್ಯತ್ವದ ಬಗ್ಗೆ ವಿಶ್ವಾಸ ಇತ್ತವರು ಅಲ್ಲವೇ ? ನಾಸ್ತಿಕ ಮಾವೋ , ಸ್ಟಾಲಿನ್, ಲೆನಿನ್ , ಏಷ್ಟು ಜನರ ಸಾವಿಗೆ ಕಾರಣರಾದರು ? ಎಷ್ಟು ರಕ್ತ ಹರಿಸಿದರು !!! ನಾಸ್ತಿಕರಿಗೆ ಕಾಮನ್ ಸೆನ್ಸ್ ಇಲ್ಲ ಎಂಬುದು ಮತ್ತೆ ಪ್ರೂವ್ ಆಯಿತು. !!!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by natekar on
ಜೈಲಿನಲ್ಲಿರುವ ಕ್ರಿಮಿನಲ್ ಗಳ ಮಾಹಿತಿ ಸಂಗ್ರಹಿಸಿದಾಗ, ನಾಸ್ತಿಕರ ಸಂಖ್ಯೆ ಅತ್ಯಂತ ಕಡಿಮೆ ಇದ್ದು ಹೆಚ್ಚಿನವರು ಆಸ್ತಿಕರಾಗಿದ್ದದ್ದು ಕಂಡು ಬಂತು. ಇದರಿಂದ ನಿಮ್ಮಂತೆ ಯಾರೋ ಕೆಲವರ ಕಡೆ ಬೊಟ್ಟು ಆಸ್ತಿಕರೆಲ್ಲಾ ಮಾನವೀಯ ಮೌಲ್ಯವುಳ್ಳವರು ಎಂದು ಭ್ರಮಿಸುವ ನಿಮ್ಮ ತೀರ್ಮಾನದಂತೆ ನಾನು ನಾಸ್ತಿಕರೆಲ್ಲಾ ಮಾನವೀಯ ಮೌಲ್ಯವುಳ್ಳವರು ಎಂಬ ತೀರ್ಮಾನಕ್ಕೆ ನಾನು ಬರುತ್ತಿಲ್ಲ. ಮಾನವೀಯತೆ ಆಸ್ತಿಕ-ನಾಸ್ತಿಕ ನಂಬಿಕೆಗಳಿಂದ ಹೊರತಾಗಿದ್ದು, ಅದು ಅವನ ಪರಿಸರದಿಂದ ಅವನಲ್ಲಿ ಉಂಟಾಗುವ ಮೌಲ್ಯ ಎಂಬುದನ್ನು ತಿಳಿಸಲು ಬಯಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages