ತೂಗುದೀಪ
ಕಣ್ಣು ಅರಳಿ ಕಣ್ಣು ಅರಳಿ
ನನ್ನ ಪ್ರೀತಿಯ ಹೊವರಳಿ
ಪ್ರೇಮವೆಂಬ ಪರಿಮಳವ
ನೀ ಸದಾ ಚೆಲ್ಲುತಿರು
ನನ್ನ ಚಿನಕುರುಳಿ ಚೆಲುವೆ
ನಿನ್ನ ಮೌನ ಕಣ್ಣ ಸನ್ನೆಯ ಪಾಠ
ತಿಳಿಯಲಿಲ್ಲ ಗೆಳತಿ,
ಆದರೆ ನಾ ಕಲಿತೆ ಜೀವನದ ಒಲವ ಪಾಠ
ಈ ಒಲವೆಂಬ ಹಣತೆಗೆ
ಬತ್ತಿ ನೀನಾದರೆ,ಎಣ್ಣೆ ನಾನಾಗುವೆ
ಈ ಪ್ರೀತಿಯ ತೂಗುದೀಪ
ನಂದದ ನಂದಾದೀಪವಾಗಲು
ನೀ ಒಪ್ಪುವೆಯಾ ಗೆಳತಿ?????
ಕಣ್ಣು ಅರಳಿ ಕಣ್ಣು ಅರಳಿ
ನನ್ನ ಪ್ರೀತಿಯ ಹೊವರಳಿ
ಪ್ರೇಮವೆಂಬ ಪರಿಮಳವ
ನೀ ಸದಾ ಚೆಲ್ಲುತಿರು
ನನ್ನ ಚಿನಕುರುಳಿ ಚೆಲುವೆ

- nithyagiri ರವರ ಬ್ಲಾಗ್
- Login or register to post comments
- 206 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: