ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಂದು ಇಂದು

ಬಾಲ್ಯ ನಮ್ಮ ಬದುಕಿನ ಸಮಗ್ರತೆಯ ಒಂದು ಸಂಕೀರ್ಣ ಬಿಂದು. ಅಂದು ಬಾಲ್ಯಕ್ಕೆ ಸಂದಿದ್ದ ಅನೇಕ ಸಂಕೇತ ಗೀತೆಗಳು ಇಂದು ಮೌನ ಗಾತೆಗಳಾಗಿವೆ.

ನಮ್ಮೆಲರ ಬಾಲ್ಯ ಬಹುತೇಕ ನಮ್ಮ ಒಳಗಿನ ತುಡಿತಗಳ
ಬಣ್ಣ ಬಣ್ಣದ ಚಿತ್ರಪಟಗಳೂ ಹೌದು.

ಇಂದು ಅಂದಿನಂತಿಲ್ಲ, ಅಂದಿನ ಸರಳ ಬದುಕಿನ ಸುಂದರತೆ
ಇಂದಿನ ಸಂಕೀರ್ಣತೆಯಲ್ಲಿ ಎಲ್ಲೋ ಕಳೆದುಹೋಗಿದೆ.

ಇಂದಿನ ಬಾಲ್ಯ ಸರಸರನೆ ಕಂಪುಟರ್ ಗೇಂಗಳ ತೀವ್ರತೆಯಲ್ಲಿ, ಪರೀಕ್ಷೆಗಳ ಹಾವಳಿಯಲ್ಲಿ ಬದುಕಿನ ಜಂಜಾಟದಲ್ಲಿ, ನಡೆಯುವ ಬದಲು ಓಡುವ ಕಾಲದಲ್ಲಿ
ಬಹು ಬೇಗನೆ ಕಳೆಯುತ್ತಿದೆ.

ಅಂದು ಅಮ್ಮ ಅಪ್ಪಂದಿರ ಜೊತೆ ಸಕಲ ಕುಟುಂಬದ ಮಂದಿಯೆಲ್ಲರೊಡನೆ ಕಳೆಯುತ್ತಿದ್ದ ಬಾಲ್ಯದ ಸಂಪು ಇಂದಿಲ್ಲ

ಇಂದು ಹೊರದೇಶಕ್ಕೆ ವಲಸೆ ಬಂದ ನಾವು ಹಕ್ಕಿ ಗೂಡುಗಳಲ್ಲಿ ಕುಳಿತು ಮೆಲ್ಲನೆ ನಮ್ಮ ಬಾಲ್ಯವನ್ನು ಮೆಲುಕುವಾಗ ಅದರ ಸೊಗಸೇ ಬೇರೆ.

ಇಂದಿನ ಮಕ್ಕಳು ಅಜ್ಜ, ಅಜ್ಜಿ , ಮಾವಂದಿರ ಒಲುಮೆಯನ್ನು ಕಾಣದೆ ಬೆಳೆಯುವ ಕೋಡ್ಗಂಬಗಳಾಗುತ್ತಿರುವುದು ಅಧುನೀಕತೆಯ ವೈಷಿಷ್ಟ್ಯ.

ಇಂದಿನ ಅಜ್ಜಿ ಅಜ್ಜಂದಿರು ಕೂಡ ಅಂದಿನತಿಲ್ಲ ಬಿಡಿ, ಅಂದಿನ ಇಂದಿನ ಔಲ್ಯಗಳು ಬೇರೆಯಗಿವೆ. ಅಂದು ಕುಟುಂಬದ ಎಲ್ಲ ಸದಸ್ಯರ ಒಟ್ಟು ಬೆಳವಣಿಗೆ ಇತರ ಕುಟುಂಬದವರ ಜವಾಬ್ದಾರಿಯೂ ಆದದ್ದಿತ್ತು ಆದರೆ ಇಂದು ಕುಟುಂಬ ಎನ್ನುವುದು ಸಣ್ಣ ದ್ವೀಪವಾಗಿ ಮಾನವತೆಯ ಎಷ್ಟೋ ಮೌಲ್ಯಗಳು ಕೂಡ ಕರಗುತ್ತಿವೆ.

ಮಾನವ ಕೂಡ ತಾನೆ ಒಂದು ದ್ವೀಪವಾಗಿ ಬಾಲ್ಯ ಈ ದ್ವೀಪದ ಚುಕ್ಕೆಯಾಗಿ ಬದುಕಿನ ನಿರಂತತೆಯಲ್ಲಿ ಕಾಣೆಯಾಗುತ್ತಿದೆ ನೋಡಿ...

ಕನ್ನ್ಡದಲ್ಲಿ ಬರೆಯೋದು ತುಂಬ ಕಷ್ಟ!...(

No votes yet
in

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅಂದು ಇಂದು

malathi shimoga's picture

ಖಂಡಿತ,
ಸಂಬಂಧಗಳ ಮೌಲ್ಯವೆ ಕುಸಿಯುತ್ತಿದೆ. ಬದುಕು ಸಂಕುಚಿತಗೊಳ್ಳುತ್ತಿದೆ.

ಉ: ಅಂದು ಇಂದು

asuhegde's picture

>>ಕನ್ನ್ಡದಲ್ಲಿ ಬರೆಯೋದು ತುಂಬ ಕಷ್ಟ!...(<<

ಕನ್ನಡದಲ್ಲಿ ಬರೆದದ್ದನ್ನು ಓದೋದು ಅಂದೂ-ಇಂದೂ ತುಂಬಾ ಇಷ್ಟ.

ಚಿಂತನ ಶೀಲರು ಚಿಂತನ ಮಂಥನ ನಡೆಸಬೇಕು

hariharapurasridhar's picture

[ಇಂದಿನ ಮಕ್ಕಳು ಅಜ್ಜ, ಅಜ್ಜಿ , ಮಾವಂದಿರ ಒಲುಮೆಯನ್ನು ಕಾಣದೆ ಬೆಳೆಯುವ ಕೋಡ್ಗಂಬಗಳಾಗುತ್ತಿರುವುದು ಅಧುನೀಕತೆಯ ವೈಷಿಷ್ಟ್ಯ]

ನಾನು ಇದನ್ನು ನಮ್ಮ ದುರ್ದೈವ ಅನ್ಕೋತೀನಿ. ನೋಡಿ ಮನೆಯಲ್ಲಿ ಒಂದು ಮಗು ಜನ್ಮ ತಾಳುತ್ತೆ. ಅದು ಗಂಡಾದರೂ ಆಗಲೀ, ಹೆಣ್ಣಾದರೂ ಆಗಲೀ ಅದು ಇನ್ನು ಮುಂದೆ ಏಕಾಂಗಿ.ವರ್ಷ ತುಂಬುವುದರೊಳಗೆ ಬೇಬಿ ಕೇರ್ ಸೆಂಟರ್ ಗೆ ಸೇರಿ ಅಲ್ಲಿ ಬಾಟಲ್ ಹಾಲು ಕುಡಿಯುತ್ತಾ,ಆಯಾ ಕೈಲಿ ಬೆಳೆದು, ಸಂಜೆ ಮನೇ ಸೇರಿ ನಿದ್ರೆ ಮಾಡುತ್ತೆ. ಮತ್ತೆ ಬೆಳಿಗ್ಗೆ ಅದೇ ಪುನರಾವರ್ತನೆ. ಬೇಬಿ ಕೇರ್ ಸೆಂಟರ್ ನಲ್ಲಿ ಯಾವ ಸಂಸ್ಕಾರ ಸಿಗುತ್ತೋ ಅದನ್ನು ಕಲಿಯುತ್ತೆ. ಮನೆಯಲ್ಲಿ ಅಪ್ಪ, ಅಮ್ಮ ಅಂತಾ ಕರೆಯೋದಕ್ಕೂ ಇರ್ದೇ ಇದ್ದಾಗ ಅದು ಅಪ್ಪ-ಅಮ್ಮ ಇದ್ದೂ ಅನಾಥವೇ.ಅದರ ಪ್ರಪಂಚ ಅಂದ್ರೆ ಯಾವ್ದು? ಬೇಬಿ ಕೇರ್ ಸೆಂಟರ್. ಅಪ್ಪಾ, ಅಮ್ಮನ ಸಹವಾಸವೂ ಕಮ್ಮಿ.
ಒಡಹುಟ್ಟಿದವರಾರೂ ಇಲ್ಲವೇ ಇಲ್ಲ. ಇನ್ನು ಅಣ್ಣ,ತಮ್ಮ,ಅಕ್ಕ,ತಂಗಿ ಅಂತಾ ಯಾರನ್ನು ಕರೆಯಬೇಕು? ಅವಕಾಶವೇ ಇಲ್ಲವಲ್ಲಾ? ಅಣ್ಣ,ತಮ್ಮ,ಅಕ್ಕ,ತಂಗಿ ನೇ ಇಲ್ದಿದ್ದಾಗ ಮುಂದೆ ಚಿಕ್ಕಪ್ಪ,ದೊಡ್ದಪ್ಪ,ಚಿಕ್ಕಮ್ಮ,ದೊಡ್ದಮ್ಮ, ಅತ್ತೆ,ಮಾವ- ಅಂತಾ ಯಾವ ಸಂಬಂಧವೂ ಸಹಜವಾಗಿಯೇ ಇಲ್ಲ. ಅಪ್ಪ-ಅಮ್ಮ ಇದ್ದೂ ಅನಾಥರಾದದ್ದಷ್ಟೇ ಅಲ್ಲ, ಒಡಹುಟ್ಟಿದವರಿಲ್ಲದೆ ಬಂಧು-ಬಳಗ ಅರ್ಥವೂ ಗೊತ್ತಾಗದಂತಾ ವಾತಾವರಣ. ಅದರ ಮುಂದಿನ ಪರಿಣಾಮಗಳನ್ನೆಲ್ಲಾ ನೋಡ್ತಾನೇ ಇದ್ದೀವಿ. ಹುಟ್ಟಿದ್ದೇ ಏಕಾಂಗಿಯಾಗಿ.ಅಪ್ಪ-ಅಮ್ಮನ ಪ್ರೀತೀನೂ ಇಲ್ಲದಿದ್ದಮೇಲೆ ಮುಂದೆ ಯಾರಾದರೂ ಪ್ರೀತಿ ಮಾಡುವವರು ಸಿಕ್ಕಿದರೆ ಸಾಕು ಅಂತಾ ಜೀವ ಕಾದಿರುತ್ತೆ. ಮುಂದೆ ಏನು ಬೇಕಾದರೂ ಆಗಬಹುದು. ಇದು ನಮ್ಮ ಸಮಾಜದ ಒಂದು ದೊಡ್ದ ದುರಂತ ಕಥೆ. ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದ್ದ ಕುಟುಂಬ ಪದ್ದತಿಯ ಮೇಲಿನ ದೊಡ್ದ ಪ್ರಹಾರ.ನಮ್ಮ ಮೂಲ ಕೇಂದ್ರವಾದ ಕುಟುಂಬವೇ ಕುಸಿದಮೇಲೆ ಇನ್ನು ಸಮಾಜದ ಕಥೆಏನು? ಚಿಂತನ ಶೀಲರು ಚಿಂತನ ಮಂಥನ ನಡೆಸಬೇಕು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ