18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

nkumar ರವರ ಬ್ಲಾಗ್

ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ‍ಮಧೂರು

August 18, 2012 - 7:33pm
nkumar

ಕೇರಳ ರಾಜ್ಯದ ಕಾಸರಗೋಡುವಿನಿಂದ ಈಶಾನ್ಯಕ್ಕೆ ೭ ಕಿ.ಮೀ ದೂರದಲ್ಲಿರುವ ಕ್ಷೇತ್ರ ಮಧೂರು. ಇಲ್ಲಿ ಶ್ರೀಮದನಂತೇಶ್ವರನು ಪ್ರತಿಷ್ಠೆಗೊಂಡು ಪೂಜಿಸಲ್ಪಡುತ್ತಿರುವನಾದರೂ, ಗೋಡೆಯಲ್ಲಿ ಮೂಡಿಬಂದ ಶ್ರೀ ವಿನಾಯಕನೇ ಪ್ರಸಿದ್ಧನು. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. Read more about ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ‍ಮಧೂರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಮಳೆಗಾಲಕ್ಕೊಂದು ಕರಾವಳಿಯ ಕಷಾಯ

August 10, 2012 - 6:02pm
nkumar

 ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ: ಆಷಾಡ ಮಾಸದ ಮಳೆ ಮತ್ತು ಚಳಿ ಸಮಯದಲ್ಲಿ ಮೊಸರು ಸೇವಿಸದೇ ಇರುವುದು, ಕೆಲವೊಮ್ಮೆ ಬೇಳೆ ಸೇವಿಸದೇ ಇರುವುದು ಮುಂತಾದವು. ಹಿಂದಿನ ಕಾಲದಲ್ಲಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ವೃತಗಳನ್ನು ಆಚರಣೆಗೆ ತಂದಿದ್ದಾರೆ. ಮತ್ತೊಂದು ಪರಿಹಾರ ಎಂದರೆ ಮನೆಯಲ್ಲೇ ತಯಾರಿಸಿದ ಕೊತ್ತಂಬರಿ-ಜೀರಿಗೆ ಕಷಾಯ. ಇದು ದೇಹವನ್ನು ತಂಪಾಗಿಡುತ್ತಲ್ಲದೇ, ಶೀತ-ಕೆಮ್ಮಿನಿಂದಲೂ ದೂರವಿಡುತ್ತದೆ. Read more about ಮಳೆಗಾಲಕ್ಕೊಂದು ಕರಾವಳಿಯ ಕಷಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ದೇವಿ ದರ್ಶನಮ್

June 24, 2009 - 10:37am
nkumar
ಕೆಲಸದ ಒತ್ತಡದ ಮಧ್ಯೆಯೂ ವಾರಾಂತ್ಯದಲ್ಲಿ ಸ್ವಲ್ಪ ಬಿಡುವು ಸಿಕ್ಕಿತು. ಅಂದು ಒಂದೆರಡು ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡುವ ಕಾರ್ಯ ಕೈಗೊಂಡೆ. ಉಬುಂಟುವಿನಲ್ಲಿ ಸೌಂಡ್ ಕೇಳಿಸುತ್ತಿರಲಿಲ್ಲ. ಕೆಲವು ಸಿಸ್ಟಮ್‍ಗಳಿಗೆ ಸ್ವಲ್ಪ ಟ್ವೀಕ್ ಮಾಡಬೇಕಂತೆ. ಅಂತರ್ಜಾಲದಲ್ಲಿದ್ದ ಕೆಲವು ಸೂಚನೆಗಳನ್ನು ಪಾಲಿಸಿ ಉಬುಂಟುವಿನಲ್ಲಿ ಶಬ್ದ ಬರಿಸಿದ್ದಾಯಿತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೆಡೋರ-೧೧: ಇಂಸ್ಟಾಲರ್ ತೊಂದರೆಗಳು

June 17, 2009 - 9:07am
nkumar
ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು. "This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್ ಪ್ರಯತ್ನಿಸಿ ನೋಡಿದೆ. 1) Delete existing linux system and create default layout 2) Use free spcae and create default layout 3) Create custom layout
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕ್ಷೇತ್ರ ಪರ್ಯಟನೆ: ಮಧೂರು, ಅನಂತಪುರ, ಶರವು

June 15, 2009 - 6:19pm
nkumar
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - nkumar ರವರ ಬ್ಲಾಗ್