ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

n.nagaraja shetty sablady ರವರ ಬ್ಲಾಗ್

ನನ್ನ ಮದುವೆಗೆ ಬನ್ನಿ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ


 


"ಜೀವನದ ಪ್ರೀತಿಯನ್ನು ಹಂಚಿಕೊಂಡು,


 


ಬದುಕಿನ ಹಸಿರು ಉಳಿಸಿಕೊಳ್ಳಲು,


 


ಸಮಾನ, ಸಹಬಾಳ್ವೆ ಬೆಳಸಿಕೊಳ್ಳಲು,


 


ಬಾಳ ವನದಲ್ಲಿ ಸಂಭ್ರಮದ ತಂಗಾಳಿಯಾಗಿ,


 


ಬರುತಿಹ ನನ್ನ ಬಾಳ ಸಂಗಾತಿ ಮಮತಳೊಂದಿಗೆ


 


ನಾನು ಮದುವೆ ಎಂಬ ಬಂಧನಕ್ಕೆ


 


ಸಪ್ತಪದಿ ತುಳಿದು ಅಡಿ ಇಡಲು ನಿಮ್ಮ- ಹಾರೈಕೆಗಾಗಿ


 


ಕಾದಿರುವೆ, ಬನ್ನಿ ನಮ್ಮಿಬ್ಬರನ್ನು ಹರಸಿ ಹಾರೈಸಿ


   ಮುಂದೆ ಓದಿ »

ಬರಗಾಲ

ಸಾವು ಹುಡುಕುತ್ತಿದೆ

ಚದುರಿ ಹಾರುತ್ತಿವೆ ಕವಿದ ಕಾರ್ಮೋಡ
ಬಾನು ಬರಡಾಗಿಸಿ ವ್ಯಂಗಿಸಿ ನಕ್ಕು
ಪಯಣಿಸುತ್ತಿವೆ ಬಾನಂಚಿನ ಕಡೆಗೆ ||
ತಿಂಗಳು ಕಲವು ಕಳೆದರೂ ಓಡುತ್ತಿರುವ
ಮುಗಿಲ ನಿಂತು ಮಳೆ ಬರದಾಗ ಉರಿ ಬಿಸಿಲು
ನೆಲವನ್ನು ಕರೆ ಕೊಂಡು ಹೋಯಿತು ಬರಗಾಲದ ಕಡೆಗೆ ||
ಹಲವು ಕಣ್ಣುಗಳು ಮೋಡಕ್ಕೆ ಕನಿಕರಿಸುತ್ತಾ
ಮಳೆ ಕಾಯುತ್ತಾ ಜಾತಕ ಪಕ್ಷಿ ಆಗಿವೆ  ಮುಂದೆ ಓದಿ »

Nalkuhani

ನಮ್ಮನ್ನು ಆಳುವವರು
ಆಡುವರು ಸದನದಲ್ಲಿ
ಕೈಗೆ ಸಿಕ್ಕ ಮೈಕು
ಕುರ್ಚಿಗಳಿಂದ
------------

ಹಿಂದೊಮ್ಮೆ ಕತ್ತಿ
ದೊಣ್ಣೆ ಬಂದೂಕು
ಹಿಡಿದವರೆ!
ನಮ್ಮನಿಗ ಆಳುತ್ತಿಹರು
ಅವುಗಳನೆಲ್ಲ ತಮ್ಮ
ಹಿಂಬಾಲಕರ
ಕೈಗೆ ತೂರಿ!!

ಶಿಕ್ಷಣ ಮತ್ತು ಜೀವನ

ಜೀವನ ಕಲಿಸದ ಡಿಗ್ರಿಗಳು

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮುಂದೆ ಮೂಡುವುದು ಒಂದು ದೊಡ್ಡ ಪ್ರಶ್ನೆಯೋ? ಅಥಾವ ದೊಡ್ಡ ಶೂನ್ಯವೋ?!.  ಮುಂದೆ ಓದಿ »

ಬಾರೆ ರಾಧೆ

ಹೋಗೋಣ ಬಾರೆ
ಗೆಳತಿ ರಾಧಾ ಮೋಹನ
ಸನಿಹಕೆ |
ರಂಗಿನಾಟ ನಿರತ
ತುಂಗಾ ನದಿ
ತೀರಕೆ |
ವೇಣುಗಾನಕೆ
ಸೋತ ಗೋವುಗಳ
ದಂಡಿನಲ್ಲಿಗೆ |
ರಂಗಿನಾಟದಿ
ಮರೆತ ಗೋಪರ
ಗುಂಪಿನಲ್ಲಿಗೆ |
ರಾಧಾ ಮೋಹನರು ಈಗಿಲ್ಲ
ನಾವು ಆಟ ಆಡೋಣ
ಬಾರೇ ಗೆಳತಿ |
ತುಂಗಾ ತೀರದೀ ಜಲದಾಟ
ಆಡಿ ತನುಮನ ತಣಿಸೋಣ
ಬಾರೇ ಗೆಳತಿ |
ನೀನೇ ರಾಧೆ ನಾನೇ ಮೋಹನ
ಒಮ್ಮೆ ನುಡಿಸಲೇ ವೇಣು
ಹಾಡುತ್ತ ಬಾ ರಾಧೆ |  ಮುಂದೆ ಓದಿ »

Syndicate content