ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಾವು ಹುಡುಕುತ್ತಿದೆ

ಚದುರಿ ಹಾರುತ್ತಿವೆ ಕವಿದ ಕಾರ್ಮೋಡ
ಬಾನು ಬರಡಾಗಿಸಿ ವ್ಯಂಗಿಸಿ ನಕ್ಕು
ಪಯಣಿಸುತ್ತಿವೆ ಬಾನಂಚಿನ ಕಡೆಗೆ ||
ತಿಂಗಳು ಕಲವು ಕಳೆದರೂ ಓಡುತ್ತಿರುವ
ಮುಗಿಲ ನಿಂತು ಮಳೆ ಬರದಾಗ ಉರಿ ಬಿಸಿಲು
ನೆಲವನ್ನು ಕರೆ ಕೊಂಡು ಹೋಯಿತು ಬರಗಾಲದ ಕಡೆಗೆ ||
ಹಲವು ಕಣ್ಣುಗಳು ಮೋಡಕ್ಕೆ ಕನಿಕರಿಸುತ್ತಾ
ಮಳೆ ಕಾಯುತ್ತಾ ಜಾತಕ ಪಕ್ಷಿ ಆಗಿವೆ
ಜೀವಿಗಳು ಪಯಣಿಸುತ್ತೀವೆ ಕೊನೆ ಪಯಣದೆಡೆಗೆ ||
ಬಿಸಿಲ ಉರಿ ನಾಲಿಗೆಯು ಮಣ್ಣ ತೇವ
ಹೀರಿದೊಡೆ ಹುಡಿ ಮಣ್ಣ ಸುಳಿಗೆ ಗಾಳಿಗೆ ಸಿಲುಕಿ
ಹಾರಿ ಹರಡಿವೆ ಅವಕಾಶದೆಡೆಗೆ ||
ಕೆರೆ, ಕೊಳಗಳು; ಹೊಂಡ ಹೊಳೆಗಳು.
ಒಡಲ ಜಲದ ರವಿ ಬಿಸಿ ಕಣ್ಣಿಗೆ ಅರ್ಪಿಸಿದೊಡೆ
ಕಮಲ ಸುಮವು ತಲೆ ಬಾಗಿಸಿದೆ ಪಾತಾಳದ ಕಡೆಗೆ ||
ಗಗನದಿ ವೃತ್ತ ಕಕ್ಷೆಯಲ್ಲಿ ಸುತ್ತುತಿದೆ
ರಣ ಪಕ್ಷಿ ಬೆನ್ನ ಮೇಲೆ ಯಮನ ಕುಳ್ಳಿರಿಸಿ
ಸಾವ ಹುಡುಕುತ್ತೀದೆ ಭೂಮಿ ಮೇಲೆ ||
ಬೀದಿ ಚರಂಡಿಯಲ್ಲಿ ಕೊಳೆತು ನಾರುತ್ತೀದೆ
ಶವದ ರಾಶಿ ಆದರೂ ಸಾಲದೆ ನಿರಂತರ
ನೆಡೆಯುತ್ತಿದೆ ಬೆಂಕಿಗೆ ಅವಸಾನದ ಹೋಮ ||
ಎಲ್ಲೆಲ್ಲೂ ಮಾರ್ದನಿಸುತ್ತಿದೆ ಸಾವಿನ ಅನಕ
ಬೀತಿಯಿಂದ ಪಯಣಿಸುತ್ತೀವೆ ಗಂಟು ಮೂಟೆ
ಕಣ್ಣಲ್ಲಿ ಜೀವದ ಆಸೆ ಹೊತ್ತು ||
ವೇದ ಮೂರ್ತಿ-ಬುದ್ಧಿ ಜೀವಿಯ ನೆಲೆಯಲ್ಲಿ
ನೆಡೆದವು ಯಜ್ಜ-ಸಂಶೋಧನೆ
ಕಾಳಿ(ದೇವರು)-ಕಾನನ(ಪ್ರಕೃತಿ)ದ ಪ್ರಕೋಪ ಎಂದು ||

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬರಗಾಲ

malathi shimoga's picture

ಇಂಥ ಬೀಕರ ಬರಗಾಲ ....

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ