Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › olnswamy ರವರ ಬ್ಲಾಗ್

ಕಣ್ಣು: ಪದ ಹಳತು, ಬಳಕೆ ಹೊಸತು

August 3, 2005 - 1:24pm — olnswamy

ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣದಾಗಿರುವ ಕೆಲವು ಪದಗಳನ್ನು ನಿಮ್ಮ ಗಮನಕ್ಕೆ ತರುವ, ಆ ಮೂಲಕ ಮತ್ತೆ ಚಾಲ್ತಿಗೆ ತರುವ ಪ್ರಯತ್ನ. ಬೇರೆ ಬೇರೆ ಸಂದರ್ಭದ ಬರವಣಿಗೆಯಲ್ಲಿ ಬಳಸಬಹುದಾದ ಇಂಥ ಪದಗಳನ್ನು ನೀವೂ ಸೂಚಿಸಿ. ಸದ್ಯಕ್ಕೆ ಕಣ್ಣು ನನ್ನ ಆಸಕ್ತಿಯ ಪದ.
ಕಣ್ಣು ಎಂಬುದರೊಡನೆ ಸೇರಿ ಸುಮಾರು ನೂರಕ್ಕೂ ಹೆಚ್ಚು ನುಡಿಬಳಕೆಗಳು ಕನ್ನಡದಲ್ಲಿವೆ.
ಕಣ್ಗಾಣು (ಕಣ್+ಕಾಣ್) = ಮನಗಾಣು ಎಂಬುದಕ್ಕೆ ವಿರುದ್ಧವಾಗಿ ಕೇವಲ ಕಣ್ಣಿಂದ ಮಾತ್ರ, ನೋಟದಿಂದ ಮಾತ್ರ ಅರಿಯುವುದು. ಮನಗಾಣುವುದು ಅನುಭವದ ಸತ್ಯ, ಕಣ್ಗಾಣುವುದು ಕೇವಲ ತೋರಿಕೆಯ ಸತ್ಯ.
ಉದಾ: ಅವನ ಪ್ರೀತಿಯನ್ನು ಮನಗಂಡೆ ಎಂದುಕೊಂಡಳು. ಆದರೆ ಅವನ ಪ್ರೀತಿ ಕೇವಲ ಕಣ್ಗಾಣುವ ಪ್ರೀತಿ.
ಕಣ್ಚಲ್ಲ = ಸರಸಾಲೋಕನ. ಕಣ್ಣಿನಲ್ಲಿ ತೋರುವ ಮುಗುಳು ನಗು.
ಉದಾ. ಹುಡುಗಿಯರ ಕಣ್ಚಲ್ಲಾಟಕ್ಕೆ ಮರುಳಾಗದವರು ಯಾರು?
ಕಣ್ಗಿಚ್ಚು = ಕೋಪ ತುಂಬಿದ ದೃಷ್ಟಿ. ಕಣ್ಣಿನಲ್ಲಿ ಕಿಡಿ ಸುರಿಸಿದ ಎಂಬ ಮಾತು ಕೇಳಿಲ್ಲವೆ, ಅದರಂಥದು, ಆದರೆ ಹೊಸತು ಅನ್ನಿಸೀತು.
ಉದಾ. ಅಪ್ಪನ ಕಣ್ಗಿಚ್ಚಿಗೆ ಮನೆಯೆಲ್ಲ ಸುಟ್ಟುಹೋಗುತ್ತದೆ ಅನಿಸಿತು.

Ornamental seperator
  • olnswamy ರವರ ಬ್ಲಾಗ್
  • Login or register to post comments
  • 871 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 3, 2005 - 4:39pm — pavanaja

ಅಪ್ಪ ಅಮ್ಮ ಕಳೆದುಹೋಗಿದ್ದ

pavanaja's picture

ಸ್ವಾಮಿ,

ನೀವು ತುಂಬ ಕಷ್ಟ ಪಟ್ಟು ಕಳೆದು ಹೋದ ಪದ ಹುಡುಕುತ್ತಿದ್ದೀರಾ. ಆದರೆ ನಿಮ್ಮ ಕಣ್ಣ ಮುಂದೆಯೇ ಕಳೆದು ಹೋಗಿರುವ ಮತ್ತು ಕಳೆದು ಹೋಗುತ್ತಿರುವ ಪದಗಳನ್ನು ನೀವು ಗಮಿನಿಸಿಲ್ಲ. ಅವುಗಳಿಗೆ ಉದಾಹರಣೆ - ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಅತ್ತೆ, ಮಾವ, ಚಿಕ್ಕಮ್ಮ, ಚಿಕ್ಕಪ್ಪ, ಇತ್ಯಾದಿ. ಇವುಗಳ ಸ್ಥಾನವನ್ನು ಡ್ಯಾಡಿ, ಮಮ್ಮಿ, ಬ್ರದರ್, ಸಿಸ್ಟರ್, ಅಂಕಲ್, ಆಂಟಿಗಳು ಆಕ್ರಮಿಸಿದ್ದಾರೆ. ಏನಂತೀರಾ?

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
August 3, 2005 - 7:11pm — olnswamy

ಸರಿ ಸ್ವಾಮಿ, ಯಾಕೆ ಗೊತ್ತೆ!

olnswamy's picture

ಸರಿ ಪವನಜ ಅವರೆ. ಅಪ್ಪ ಅಮ್ಮ ಇತ್ಯಾದಿ ಸಂಬಂಧಗಳೇ ಕಳೆದುಹೋಗಿರುವಾಗ ಸಂಬಂಧಗಳನ್ನು ಸೂಚಿಸುವ ಬಡಪಾಯಿ ಪದಗಳು ಉಳಿಯುತ್ತವೆಯೇ! ನಮ್ಮ ಸಂಬಂಧಗಳನ್ನೆಲ್ಲ ಇಂಗ್ಲಿಷಿನಲ್ಲಿ ಹೇಳುತ್ತಿರುವುದು ನಮ್ಮ ಸಂಬಂಧಗಳೆಲ್ಲ ಬದಲಾಗಬಾರದ ರೀತಿಯಲ್ಲಿ ಬದಲಾಗಿರುವುದರ ದ್ಯೋತಕವಷ್ಟೆ.
ಈ ಅಪರೂಪವಾಗುತ್ತಿರುವ ಬಳಕೆಯನ್ನು ಎತ್ತಿ ತೋರಿಸುವ ಉದ್ದೇಶ ಕನ್ನಡವನ್ನು ಕ್ರಿಯೇಟಿವ್ ಆಗಿ ಬಳಸುವ ಎಳೆಯರ ಬುದ್ಧಿ ಮನಸ್ಸುಗಳನ್ನು ಕೆಣಕುವುದು ಅಷ್ಟೆ.
ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ
August 9, 2005 - 2:34pm — ಶ್ಯಾಮ ಕಶ್ಯಪ

ಬಹುಶಃ

ಶ್ಯಾಮ ಕಶ್ಯಪ's picture

ಈ ಪದ ಕಣ್ಮರೆಯಾಗಿಲ್ಲ ಆದರೆ ಬಳಸುವುದು ಕಡಿಮೆಯಾಗಿದೆ, ಯಾಕೆ ಅಂದ್ರೆ ಅದಕ್ಕಿಂತಾ cheap ಆಗಿ 'mostly' ಅನ್ನೊ ಶಬ್ದ ಬಂದಿದೀಯಲ್ಲ ಅದಕ್ಕೆ! (ತುಟ್ಟಿ ಅನ್ನೋ ಪದದ ಬಳಕೆ ಕೂಡ ಕಡಿಮೆಯಾಗಿದೆ, ಬಹುಶಃ ಇದೇ ಕಾರಣಕ್ಕಿರಬೇಕು)

ಇಂತಿ,
ಶ್ಯಾಮ ಕಶ್ಯಪ
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 3:18pm — kannadakanda

ಉ: ಬಹುಶಃ

kannadakanda's picture

ಇದಕ್ಕೆ ಸ್ವಲ್ಪ ’ಹೆಚ್ಚುಕಡಿಮೆ’ ಮಾಡ್ಕೊಳ್ಳಿ ಸಾಮಿ.

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 3:21pm — kannadakanda

ಉ: ಕಣ್ಣು: ಪದ ಹಳತು, ಬಳಕೆ ಹೊಸತು

kannadakanda's picture

ಹಾಗೆಲ್ಲ ಪರಿತಪಿಸಿ ’ಕಂಗೆಡ’ಬೇಡಿ ಸಾಮಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶುದ್ಧ ಕನ್ನಡ?
  • ಬೇರೆ ಭಾಷೆಯ ಪದಗಳ ಬಳಕೆ
  • ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!
  • ಫೆಬ್ರವರಿ ತಿಂಗಳ ‘ಸಡಗರ’
  • ಹಳತು - ಹೊಸತು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator