19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

December 4, 2008 - 4:11am
olnswamy

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ

[ತೀವಿ-ತುಂಬಿ]

ಜೇಡರ ದಾಸಿಮಯ್ಯ ಆದ್ಯ ವಚನಕಾರ. ಬಸವ ಮೊದಲಾದ ಸುಪ್ರಸಿದ್ಧ ಶರಣೆರಲ್ಲರಿಗಿಂತ ಹಿಂದಿನವನು. ಗುಲಬರ್ಗಾ ಜಿಲ್ಲೆಯ ಮುದನೂರು ಈತ ಹುಟ್ಟಿದ ಊರು. ತಂದೆ-ಕಾಮಯ್ಯ, ತಾಯಿ-ಶಂಕರಿ, ಹೆಂಡತಿ-ದುಗ್ಗಳೆ. ನೇಯ್ಗೆಯ ಕಸುಬಿನ ವಚನಕಾರ ಈತ. ರಾಮನಾಥ ಅನ್ನುವುದು ಜೇಡರ ದಾಸಿಮಯ್ಯನ ಅಂಕಿತ. ಈತನ ೧೭೬ ವಚನಗಳು ದೊರೆತಿವೆ.

ಸಭೆಯಲ್ಲಿ ಸಾವಿರ ಜನ ಇರಬಹುದು. ಆದರೆ ಅವರೆಲ್ಲರೂ ದಾನಕೊಡುವುದಕ್ಕೆ ಮುಂದೆಬರುವವರಲ್ಲ. ಯುದ್ಧಕ್ಕೆ ಲಕ್ಷ ಜನ ಹೋಗಬಹುದು. ಹಾಗೆ ಹೋದವರೆಲ್ಲ ಸಾಯುವವರಲ್ಲ. ಯುದ್ಧದಲ್ಲಿ ಶತ್ರುವನ್ನು ಇರಿಯಬಲ್ಲವರು ನೂರರಲ್ಲಿಯೋ ಸಾವಿರದಲ್ಲಿಯೋ ಒಬ್ಬರಿದ್ದರೆ ಹೆಚ್ಚು. ಹುಣಿಸೆಯ ಮರದಲ್ಲಿ ಬಿಟ್ಟ ಹೂಗಳೆಲ್ಲ ಹುಣಿಸೆಯ ಕಾಯಿ ಆಗುವುದೇ? ಇದು ಜೇಡರ ದಾಸಿಮಯ್ಯ ಕೇಳುವ ಪ್ರಶ್ನೆ. ಇಲ್ಲ ಅನ್ನುವ ಉತ್ತರ ಕೇಳುವ ಧಾಟಿಯಲ್ಲಿಯೇ ಹೊಳೆಯುತ್ತದೆ.
 
ಹೀಗೆ ದಾನ ನೀಡದ ಜನ, ಯುದ್ಧದಲ್ಲಿ ಸಾಯದ ಸೈನಿಕ, ಶತ್ರವನ್ನು ಕೊಲ್ಲದ ವೀರ ಇವರು ತಿರಸ್ಕಾರಕ್ಕೆ ಅರ್ಹರೇನು? ದಾಸಿಮಯ್ಯನ ಧೋರಣೆ ಹಾಗೆ ಇದ್ದಂತಿಲ್ಲ. ಸಫಲತೆ, ಯಶಸ್ಸು ಇವೇ ಬಲು ದೊಡ್ಡ ಮೌಲ್ಯಗಳು ಎಂಬ ಭ್ರಮೆಗೆ ಸಿಲುಕಿರುವ ಈ ಕಾಲಕ್ಕೆ ಅಗತ್ಯವಾಗಿ ಬೇಕಾದ ಮಾತು ಇಲ್ಲಿದೆ ಎಂದೆನಿಸುತ್ತಿದೆ.

ಸಫಲತೆ ಅಪೂರ್ವ. ಹಣ್ಣಾಗದ ಹೂಗಳು, ಕೊಲ್ಲದ, ಸಾಯದ ವೀರರು, ದಾನಕೊಡದೆ ಇರುವ ಸಾವಿರ ಜನ ಇವರೆಲ್ಲ ವ್ಯರ್ಥವೆಂದಲ್ಲ.  ‘ಲೀಲೆಯಲಿ ಯಾವುದೂ ವಿಫಲವಲ್ಲ' ಅನ್ನುವ ಮಾತು ನೆನಪಿಗೆ ಬರುತ್ತಿದೆ. ಅರ್ಥವಿರುವ ಒಂದು ಮಾತಿಗೆ ಅರ್ಥವಿರದ ಸಾವಿರ ಮಾತುಗಳು, ಒಂದು  ಸಫಲತೆಗೆ ಸಾವಿರ ವಿಫಲತೆಗಳು ಇದು ನಿಸರ್ಗದ ನಿಯಮವೇ ಇರಬಹುದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithasr on
>>ಸಫಲತೆ, ಯಶಸ್ಸು ಇವೇ ಬಲು ದೊಡ್ಡ ಮೌಲ್ಯಗಳು ಎಂಬ ಭ್ರಮೆಗೆ ಸಿಲುಕಿರುವ ಈ ಕಾಲಕ್ಕೆ ಅಗತ್ಯವಾಗಿ ಬೇಕಾದ ಮಾತು ಇಲ್ಲಿದೆ ಎಂದೆನಿಸುತ್ತಿದೆ. >>ಲೀಲೆಯಲಿ ಯಾವುದೂ ವಿಫಲವಲ್ಲ' ಒಳ್ಳೆಯ ವಚನ ಮತ್ತು ವಿಚಾರ. -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಕೆಲವು ತಪ್ಪೊಪ್ಪು ಮತ್ತು ಱಕಾರ ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ ಇಱಿಯಬಲ್ಲರೆ ನೂಱಕ್ಕೊಬ್ಬ ಸಹಸ್ರಕ್ಕೊಬ್ಬ ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ತಪ್ಪೊಪ್ಪು ಏನು? 'ಱ'ಕಾರ ನಿಮಗೆ ಇಷ್ಟವಾದರೆ ಬಳಸಲಿಕ್ಕೆ ಅಡ್ಡಿಯಿಲ್ಲ. ಆದರೆ ಎಲ್ಲರಿಗೂ ಬಳಸಿ ಎಂದು ಹೇರುವುದು ಸರಿಯಲ್ಲ. - HPN ನನ್ನ ಬ್ಲಾಗುಗಳು: [:http://sampada.net/b...|ಪರಿವೇಶಣ] | [:http://hpnadig.net/blog|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ನಾನು ಹೇಱುತ್ತಿಲ್ಲ. ಮೂಲತಾಳೆಗಱಿಯಲ್ಲಿರುವುದು ಱ. ಅಲ್ಲದೇ ಱ ಮತ್ತು ರ ಅಕ್ಷರಗಳಲ್ಲಿ ಆ ಕಾಲದಲ್ಲಿ ಅರ್ಥವ್ಯತ್ಯಾಸವಿತ್ತು. ಇನ್ನೊಂದು ತಪ್ಪು ಹಣಿಸೆಹಣ್ಣು. ಅದು ಹುಣಿಸೆಹಣ್ಣು ಆಗಬೇಕು. ಟೀಕಿಸುವ ಮುನ್ನ ಚೆನ್ನಾಗಿ ಕಣ್ಣು ಹಾಯಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಹಣಿಸೆ ಅಲ್ಲ. ಹುಣಿಸೆ ಆಗಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಆಯಾ ಕಾಲಕ್ಕೆ ತಕ್ಕಂತೆ ಇದ್ದದ್ದನ್ನು ಇದ್ದಹಾಗೆ ರಕ್ಷಿಸುವುದು ನಮ್ಮ ಕರ್ತವ್ಯ. ಅಕಸ್ಮಾತ್ ಶಿವಶರಣರು ’ಱ’ ಮತ್ತು ’ರ’ ನಡುವೆ ಅರ್ಥವ್ಯತ್ಯಾಸ ಮಾಡಿಲ್ಲವೆಂದಾದರೆ ನಾನು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತೇನೆ. ನಾನು ಹೇೞುತ್ತಿರುವುದು ಸರಿಯಿದ್ದರೆ HPN ಅವರು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಮಾನ್ಯ ಹರಿಪ್ರಸಾದ ನಾಡಿಗರೇ ಸಂಪದದ ಸೃಷ್ಟಿಕರ್ತ. ನೀವವರನ್ನೇ ಬರೆಯುವುದು ಬೇಡವೆನ್ನಕೂಡದು. ಬಹುಶಃ ಸ್ವಾಮಿಯವರು ಹಲವರಿಗೆ ಱ ಕಾರವನ್ನು ತಿಳಿಯುವಲ್ಲಿ ತೊಡರೆಂದು ಹಾಗೆ ಬರೆಯುತ್ತಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ನೀವು ನಾಡಿಗರೊಂದಿಗೆ ಸಿಟ್ಟಾದದ್ದು ಸರಿಯಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಅಲ್ಲಿ ಇನ್ನೊಂದು ತಪ್ಪಿದೆ. ಹುಣಿಸೆ ಎಂದಿರಬೇಕಾದ್ದು ಹಣಿಸೆ ಎಂದಿದೆ. ಅದು ನಾನು ಹೇೞಿದ ತಪ್ಪು. ಇನ್ನು ಱಕಾರ ಯಥಾವತ್ತಾಗಿ ಬೞಸಿ ಎಂದು. ಶಿವಶರಣರು, ಸರ್ವಜ್ಞ, ಕುಮಾರವ್ಯಾಸ, ರತ್ನಾಕರವರ್ಣಿ ಇವರೆಲ್ಲ ಱ ಮತ್ತು ರ ನಡುವಿನ ಉಚ್ಚಾರ ಹಾಗೂ ಅರ್ಥವ್ಯತ್ಯಾಸ ಅಱಿತುಕೊಂಡಿದ್ದವರು. ಅವರು ಬೞಸಿದ ಕನ್ನಡವನ್ನು ಹಾಗೇ ತೋಱಿಸುವುದು ನಮ್ಮ ಕರ್ತವ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಅದಕ್ಕೆ ನನ್ನ ಬೆಂಬಲವಿದೆ. ಆದರೆ ನಾಡಿಗರು ನಮ್ಮ ಮನೆಯೊಡೆಯ. ಅವರನ್ನೇ ಮನೆಗೆ ಬರಬೇಡಿ ಎಂದರೆ ಹೇಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಸುಮ್ಮನೆ ಸವಾಲೊಡ್ಡಲೇನು? :) ;) :D.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಸವಾಲು ಕೊಂಚ ಬಿಗಿ ಆಯ್ತು :-) ನಾಡಿಗರೆ ದಯವಿಟ್ಟು ಹೊಟ್ಟೆಗೆ ಹಾಕ್ಕೊಳ್ಳಿ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
[quote=ಕನ್ನಡಕಂದ]ಆಯಾ ಕಾಲಕ್ಕೆ ತಕ್ಕಂತೆ ಇದ್ದದ್ದನ್ನು ಇದ್ದಹಾಗೆ ರಕ್ಷಿಸುವುದು ನಮ್ಮ ಕರ್ತವ್ಯ. ಅಕಸ್ಮಾತ್ ಶಿವಶರಣರು ’ಱ’ ಮತ್ತು ’ರ’ ನಡುವೆ ಅರ್ಥವ್ಯತ್ಯಾಸ ಮಾಡಿಲ್ಲವೆಂದಾದರೆ ನಾನು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತೇನೆ. ನಾನು ಹೇೞುತ್ತಿರುವುದು ಸರಿಯಿದ್ದರೆ HPN ಅವರು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸಬೇಕು.[/quote] [quote=ಕನ್ನಡಕಂದ]ಸುಮ್ಮನೆ ಸವಾಲೊಡ್ಡಲೇನು?[/quote] ತಮಾಶೆಗೂ ಈ ಮಾತನಾಡಬೇಡ್ರಿ... -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಸರಿ. HPN ಅವರ ಕ್ಷಮೆ ಕೋಱಿದ್ದೇನೆ. ಅವರು ದಯವಿಟ್ಟು ಮಾತಾಡಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕುಳ್ಳಿರ್ದ ಅಲ್ಲಿ ಕುೞ್ೞಿರ್ದ ಅಲ್ಲವೇ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಱ್ಱ್ ಕನ್ನಡದಲ್ಲಿ ತ್ತ್ ಆಗುತ್ತದೆ. ೞ್ ಕ್ಕೆ ಯಾವ ಭಾಷೆಯಲ್ಲೂ ೞ್ೞ್ ಇಲ್ಲ. ಅದನ್ನು ಉಚ್ಚರಿಸಲೇ ಕಷ್ಟಪಡುತ್ತೀರಾ? ಇನ್ನು ಒತ್ತಿ ಹೇೞುವುದು ಅಸಂಭವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕುೞಿ ಅಂದರೆ to sit ಎಂದು ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಅಲ್ಲ. ಕುೞಿ, ಗುೞಿ, ಕುಣಿ, ಗುಣಿ=ಗುಂಡಿ. ಉದಾಹರಣೆಗೆ ಯಾರೇ ನಕ್ಕಾಗ ಕೆನ್ನೆಯಲ್ಲಿ ಗುೞಿ (ಕುೞಿ) ಬಿದ್ದರೆ ಚಂದ ಕಾಣುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಕನ್ನಡಕಂದರೆ, [quote] ಱ್ಱ್ ಕನ್ನಡದಲ್ಲಿ ತ್ತ್ ಆಗುತ್ತದೆ [/quote] ಇದು ಯಾವಾಗಲೂ ಹೀಗೇ ಆಗುತ್ತಾ ? ( ಕೆಲವು ಉದಾಹರಣೆಗಳು ಗೊತ್ತು ಪೆಱ್ಱ್ = ಹೆತ್ತ, ಮಱ್ಱು= ಮತ್ತು ಮೊದಲಾದುವು) -ಯಾವಾಗಲೂ ಹೀಗೇ ಎಂದು ತಿಳಿದಿರಲಿಲ್ಲ. ತಮಿಳಿನಲ್ಲಿ ಱ್ಱ್ ಅನ್ನುವುದು ಟ್ರ ಎನ್ನುವ ಉಚ್ಚಾರವನ್ನು ಪಡೆಯುತ್ತೆ - ಆದರೆ ಬರೆಯುವುದು ಮಾತ್ರ ಱ್ಱ್ ಎಂದೇ ; ಉದಾ: ತಿರುವೊಱ್ಱಿಯೂರ್ = ತಿರುವೊಟ್ರಿಯೂರ್ -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಮಾನ್ಯ ಹಂಸಾನಂದಿಗಳೇ ಕನ್ನಡ ಕಂದರವರು ಹೇಳುತ್ತಿರುವುದು ಮೂಲದ್ರಾವಿಡದಲ್ಲಿರುವ ಱ್ಱ್ ಗಳು ಕನ್ನಡದಲ್ಲಿ ತ್ತ್ ಆಗುವುದೆಂದು.. ಹಾಗೆ ಕುನ್‌ಱು => ಕುಂದು ಹೀಗೆ ಅನುನಾಸಿಕದ ಹಿಂದ್ ಱ್ ಬಂದರೆ ಅದು ದಕಾರವಾಗುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
"ೞ್ ಕ್ಕೆ ಯಾವ ಭಾಷೆಯಲ್ಲೂ ೞ್ೞ್ ಇಲ್ಲ. ಅದನ್ನು ಉಚ್ಚರಿಸಲೇ ಕಷ್ಟಪಡುತ್ತೀರಾ?" ಸದ್ಯ ನಮ್ಮ ಕಷ್ಟವರ್ಥವಾಯಿತಲ್ಲ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಚನ್ನಾಗಿವೆ ವಚನವು ಮತ್ತದರ ವಿವರಣೆಯೂ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by olnswamy on
ಬೆರಳಚ್ಚಿನ ದೋಷ, ‘ಹುಣಿಸೆ’ ಅನ್ನುವುದು ‘ಹಣಿಸೆ’ ಯಾಗಿತ್ತು. ತಿದ್ದಿರುವೆ. ಱ ಮತ್ತು ೞ, ರ ಮತ್ತು ಳ ಗಳ ಬಳಕೆಯಲ್ಲಿ ಅರ್ಥ ವ್ಯತ್ಯಾಸ ಇದೆ. ನಿಜ. ಅವುಗಳ ಬಳಕೆ ತಪ್ಪಿ ಸುಮಾರು ೫೦೦ ವರ್ಷಗಳಾಗಿರುವುದೂ ನಿಜ. ಇಂದಿನ ಓದುಗರನ್ನು ಪ್ರಾಚೀನ ಕೃತಿಗಳತ್ತ ಸೆಳೆಯುವಾಗ ಇಂದಿನ ಬರವಣಿಗೆಯ ಸಂಪ್ರದಾಯವನ್ನೇ ಬಳಸುವುದು ಸೂಕ್ತ. ಇಂದಿನ ಬಳಕೆಯಲ್ಲಿಲ್ಲದ ಅಕ್ಷರಗಳು ಸಾಲಿಗೊಂದೆರಡರಂತೆ ಕಂಡು ಓದುಗರು ವಿಮುಖರಾಗುವುದು ಬೇಡ, ಅಲ್ಲವೇ? ಇನ್ನು ಮುಂದೆ ಅರ್ಥ ವಿವರಣೆ ನೀಡುವಾಗ ಮಾತ್ರ ಆಯಾ ಪದಗಳಲ್ಲಿರುವ ಱ ಮತ್ತು ೞ ಗಳನ್ನು ಬಳಸೋಣ, ಪಠ್ಯದಲ್ಲಿ ಸುಗಮ ಓದಿಗೆಂದು ಇಂದಿನ ಸಂಪ್ರದಾಯವನ್ನೇ ಪಾಲಿಸೋಣ. ಇಂಗ್ಲಿಷಿನಲ್ಲಿ ಕೂಡ this, that ಗಳಲ್ಲಿರುವ th ಧ್ವನಿಗೆ ಪ್ರತ್ಯೇಕವಾದ ಎರಡು ಲಿಪಿ ಸಂಕೇತಗಳೇ ಇದ್ದವು. ಈಗ ಮುದ್ರಿತವಾಗುವ ಯಾವ ಪ್ರಾಚೀನ ಕೃತಿಯ ಮುದ್ರಣದಲ್ಲೂ ಆ ಲಿಪಿ ಸಂಕೇತ ಕಾಣುವುದಿಲ್ಲ. ಅವು ಇರುವ ಪುಸ್ತಕ ಬೇಕೆಂದರೆ ನಿಧಿಗೆ ಸಂಶೋಧನೆ ನಡೆಸಿದಂತೆ ನಡೆಸಬೇಕು! ಬದಲಾದ ಲಿಪಿಯನ್ನು, ಜನ ಬಳಸುವ ಲಿಪಿಯನ್ನು ಬಳಸಬೇಕೆನ್ನುವುದು ನನ್ನ ನಂಬಿಕೆ. ಅಲ್ಲದೆ ನೋಡಿ, ವಚನವೊಂದು ನಮಗೆ ಹೇಳುವ ಅರ್ಥ ಮುಖ್ಯವಾಗಬೇಕೇ ಹೊರತು ಕೇವಲ ಸಂಕೇತಗಳ ರೂಪ ಲಕ್ಷಣಗಳಲ್ಲ ಅಲ್ಲವೇ! ಅರ್ಥದ ಅನ್ವೇಷಣೆಯಲ್ಲಿ ಸೋಲು-ಗೆಲುವುಗಳ ಮಾತಿಲ್ಲ. ಅದೇ ಇಂದಿನ ವಚನ. ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಱಕಾರ ಬೞಕೆ ತಪ್ಪಿ ಸುಮಾರು ೩೦೦-೪೦೦ ವರ್ಷಗಳಷ್ಟೇ. ೞಕಾರ ಬೞಕೆ ತಪ್ಪಿ ಸುಮಾರು ೮೦೦ ವರ್ಷಗಳು ಸಂದಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಸರ್ , ಸರ್ಯಾಗಿ ಹೇಳಿದಿರಿ.. ಶಬ್ದ ಮುಖ್ಯವಲ್ಲ ; ಅರ್ಥ ಮುಖ್ಯವೆಂದು ತಥಾಗತನು ಹೇಳಿದನು :) --------ಇಲ್ಲಿ ನಾನು ದುಡುಕಿ ಬರೆದ ಸಾಲುಗಳನ್ನು ತೆಗೆದು ಹಾಕಿದ್ದೀನಿ--- "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕೆಲವರು ಕಂಚವೂ ವ್ಯಾಕರಣದಲ್ಲಾಸಕ್ತಿಯಿಲ್ಲದಿದ್ದರೂ ಯಾಕೆ ಬಂದು ವ್ಯಾಕರಣವಲ್ಲತ್ಯಾಸಕ್ತರನ್ನು ಕಾಡಿಸುತ್ತರೋ ಪ್ರಶ್ನಿಸುತ್ತಾರೋ ಹಾಗೆ.! ಎರಡು ಕಡೆಯವರೂ ಸರಿಯಾಗೇ ಇದ್ದೀವಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
"ವ್ಯಾಕರಣವಲ್ಲತ್ಯಾಸಕ್ತರೇ" ನಿಮ್ಮ ಕಾಗುಣಿತದತ್ತ "ಕಂಚ" ಗಮನ ಇರಲಿ ಇತ್ತಿನವರು ಒಂದು ಗುಂಜಿ ಹೆಚ್ಚು ಸರಿಯಾಗಿ ಇದೀವಿ :) "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಲ್ರೀ ನಂಗೆ ವ್ಯಾಕರಣ ಇಷ್ಟವಿಲ್ಲ ಸಕ್ಕತ್ ಕಷ್ಟ ಮಣ್ಣು ಮಸಿ ಅನ್ನೋರು... ನನ್ನ ಸಾಲುಗಳಲ್ಲಿ ಕಾಗುಣಿತದ ತಪ್ಪು ಹುಡಕಿದ್ದು, ಸೂಚಿಸಿದ್ದು ಸರಿಯೋ? ಅದೂ ಅಲ್ಲದೇ ಸುಮ್ನೆ. ಏನು ತಪ್ಪು? ವ್ಯಾಕರಣವಲ್ಲಿ + ಅತ್ಯಾಸಕ್ತರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಇಲ್ಲಿ ಸಮಸ್ಯೆಯಿರುವುದು ಇದ್ದದ್ದನ್ನು ಇದ್ದಹಾಗೆ ಹೇೞಿ ಎಂದು. ಱ ಮತ್ತು ೞ ಜನಸಾಮಾನ್ಯರಲ್ಲಿ ಸಂಪೂರ್ಣವಾಗಿ ಮಱೆಯಾಗಿಲ್ಲ. ಭಾಷಾದೃಷ್ಟಿಯಿಂದಲೂ ವಿಷಯವನ್ನು ವಿಚಾರಿಸಬೇಕಾಗುತ್ತದೆ. ಶಿವಶರಣರ ಹಾಗೂ ನಡುಗನ್ನಡಕಾಲಕ್ಕೆ ’ಱ’ ವ್ಯಾಪಕವಾಗಿ ಬೞಕೆಯಲ್ಲಿತ್ತು. ಕನಿಷ್ಠಪಕ್ಷ ಶಿವಶರಣರು ಕನ್ನಡ ಬೞಸಿದಂತೆ ವಚನಗಳನ್ನುದಾಹರಿಸಿ. ನಿಮ್ಮ ಟೀಕೆ ಟಿಪ್ಪಣಿಯಲ್ಲಿ ಱ ಮತ್ತು ೞ ಬಿಟ್ಟುಬಿಡಿ. ನಿಮಗೆ ಱ ಮತ್ತು ರ ಹಾಗೂ ೞ ಮತ್ತು ಳ ಅರ್ಥ ಮಾಡಿಕೊಳ್ಲಲು ಕಷ್ಟವಾಗುವುದಾದರೆ ಅರ್ಥ ನೋಡಿ ನಿಘಂಟು ನೋಡಿ ಯಥಾವತ್ ರೂಪ ಕಾಪಾಡಿ. ಮೂಲಾರ್ಥದೊಡನೆ ಶಿವಶರಣರು ಬೞಸಿದ ಕನ್ನಡವನ್ನೇ ಬೞಸಿ. ಕಟುವಾಗಿ ಟೀಕಿಸಿದ್ದರೆ ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.