Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎಂಟು

May 13, 2007 - 8:56am — olnswamy

“ಎಲ್ಲವೂ ಕರೆಕ್ಟಾಗಿ ಸೆಟ್ಟಾಗಿತ್ತು-ನನ್ನ ಪರಿಸ್ಥಿತಿ, ಅವಳ ಡ್ರೆಸ್ಸು, ನಮ್ಮ ಬೋಟಿಂಗು. ಬೋನಿಗೆ ಬಿದ್ದೆ. ಹಿಂದೆ ಇಪ್ಪತ್ತು ಸಾರಿ ತಪ್ಪಿಸಿಕೊಂಡಿದ್ದೆ, ಈಗ ಬಿದ್ದೆ. ಜೋಕು ಮಾಡುತ್ತಿಲ್ಲ. ಈಗಿನ ಕಾಲದ ಮದುವೆ ಅಂದರೆ ಬೋನು. ರೆಡೀ ಮಾಡಿಟ್ಟಿರುತ್ತಾರೆ. ಸಹಜವಾದ ಮದುವೆ ಹೇಗಿರುತ್ತದೆ? ಹುಡುಗಿ ವಯಸ್ಸಿಗೆ ಬಂದಳು, ಮದುವೆ ಮಾಡಬೇಕು. ಅಪ್ಪ ಅಮ್ಮ ಅರೇಂಜು ಮಾಡುತ್ತಾರೆ. ಸಿಂಪಲ್ಲು. ಈಗಲೂ ಮನುಷ್ಯರೆಲ್ಲ ಹಾಗೇ ಮಾಡುತ್ತಾರೆ. ಚೀನೀಯರು, ಹಿಂದೂಗಳು, ಮುಸಲ್ಮಾನರು, ಸಾಮಾನ್ಯ ಜನ, ಎಲ್ಲರೂ. ಇಡೀ ಮನುಷ್ಯ ಕುಲದ ಕುಟುಂಬಗಳಲ್ಲಿ ಶೇಕಡಾ ತೊಂಬತ್ತೊಂಬತ್ತು ಪಾಲು ನಡೆಯುವುದೇ ಹೀಗೆ. ಇನ್ನು ಶೇಕಡಾ ಒಂದಕ್ಕಿಂತ ಕಡಮೆ ಇದ್ದೇವಲ್ಲ, ನಾವು, ಆಧುನಿಕರು, ಕ್ರಾಂತಿಯ ಪಿತ್ಥ ಕೆದರಿದವರು, ಇದೆಲ್ಲ ತಪ್ಪು ಹೊಸ ಪದ್ಧತಿ ತರಬೇಕು ಅಂದುಕೊಂಡೆವು. ಅದೇನದು ಹೊಸ ಪದ್ಧತಿ? ಮದುವೆಗೆ ಬಂದ ಹುಡುಗಿಯರೆಲ್ಲ ಸಾಲಾಗಿ ಕೂತಿರಬೇಕು, ನಾವು ಮಾರ್ಕೆಟ್ಟಿನಲ್ಲಿ ಓಡಾಡುವವರ ಥರಾ ಒಬ್ಬೊಬ್ಬರನ್ನೇ ನೋಡುತ್ತಾ ನಮಗೆ ಬೇಕಾದವರನ್ನು ಆರಿಸಿಕೊಳ್ಳಬೇಕು. ಹುಡುಗಿಯರು ಕಾಯುತ್ತಾ, ಚಡಪಡಿಸುತ್ತಾ ಇರುತ್ತಾರೆ. ಜೋರಾಗಿ ಹೇಳುವುದಕ್ಕೆ ಧೈರ್ಯವಿಲ್ಲದೆ ಮನಸ್ಸಿನಲ್ಲೇ ‘ನನ್ನನ್ನು ಆರಿಸಿಕೊಳ್ಳೋ ಹುಡುಗಾ, ನನ್ನನ್ನ. ಅವಳನ್ನ ಬೇಡ. ಈ ತೋಳು ನೋಡು, ಈ ಸೊಂಟ ನೋಡು..’ ಅಂದುಕೊಳ್ಳುತ್ತಾ ಇರುತ್ತಾರೆ. ನಮಗೆ ಭಾರೀ ಖುಷಿಯಾಗುತ್ತದೆ. ನಮಗಾಗಿಯೇ ಇದೆಲ್ಲ ಏರ್ಪಾಡು ಅಂತ ಬೀಗುತ್ತಾ ಇರುತ್ತೇವೆ. ಆ ಕಡೆ ಈ ಕಡೆ ಓಡಾಡುತ್ತೇವೆ, ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಮಾಡುತ್ತೇವೆ, ಮಹಿಳೆಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಹೇಳುತ್ತೇವೆ. ಒಂದು ಕ್ಷಣ ಮೈಮರೆತಾಗ ತಟಕ್ಕನೆ ಬೋನಿಗೆ ಬಿದ್ದಿರುತ್ತೇವೆ!”
“ಮತ್ತೇನು ಮಾಡಬೇಕು? ಹುಡುಗಿಯರೇ ಮುಂದೆ ಬರಬೇಕೇನು?” ನಾನು ಕೇಳಿದೆ.
“ಗೊತ್ತಿಲ್ಲ. ಮದುವೆ ಅನ್ನುವುದು ಸಮಾನತೆಯ ಪ್ರಶ್ನೆಯಾದರೆ ಆ ಸಮಾನತೆ ಸಂಪೂರ್ಣವಾಗಿರಬೇಕು. ಅರೇಂಜ್‌ಮಾಡಿದ ಮದುವೆ ಅಪಮಾನಕರವಾದರೂ ನಮ್ಮ ಪದ್ಧತಿಗಿಂತ ಸಾವಿರಪಾಲು ವಾಸಿ. ಅಲ್ಲಿ ಹಕ್ಕುಗಳು ಅವಕಾಶಗಳು ಸಮಾನವಾಗಿರುತ್ತವೆ. ಹೆಣ್ಣು ತೋರಿಸುವ ನಮ್ಮ ಪದ್ಧತಿಯಲ್ಲಿ ಅವಳು ಬರೀ ಗುಲಾಮಳು, ಪ್ರದರ್ಶನಕ್ಕೆ ಇಟ್ಟ ವಸ್ತು, ಅಥವಾ ಗಂಡನ್ನು ಹಿಡಿಯಲು ಒಡ್ಡಿದ ಬೋನು. ಹೆಣ್ಣು ತಾನೇ ಗಂಡನ್ನು ಆರಿಸಿಕೊಳ್ಳುವ ಪರಿಸ್ಥಿತಿ ಇಲ್ಲದಿರುವಾಗ ಇನ್ನೊಂದು ಅಸಹ್ಯಕರ ಅಭ್ಯಾಸ ಹುಟ್ಟಿಕೊಂಡಿದೆ. ಅದನ್ನ ಗೋಯಿಂಗ್ ಇನ್‌ ಟು ಸೊಸೈಟಿ ಅಂತ ಕರೀತೇವೆ. ನಿಜವಾಗಿ ಅದು ಗಂಡನ್ನು ಬೇಟೆ ಆಡುವುದರ ಇನ್ನೊಂದು ರೂಪ ಅಷ್ಟೆ.
“ಹೆಣ್ಣಿಗೋ ಅವಳ ಅಮ್ಮನಿಗೋ ‘ನೀವು ಗಂಡಿನ ಬೇಟೆಯಾಡುತ್ತಿದ್ದೀರಿ’ ಎಂದು ಹೇಳಿ ನೋಡಿ. ದೇವರೇ! ಹಾಗೆ ಹೇಳಿದವರುಂಟೆ! ಆದರೂ ಅವರು ಬೇಟೆ ಆಡುವುದು ಬಿಟ್ಟು ಬೇರೆ ಏನೂ ಮಾಡಲಾರರು, ಅದು ಬಿಟ್ಟು ಬೇರೆ ಕೆಲಸವೂ ಇಲ್ಲ. ಹಾರಿಬಲ್ ಅಂದರೆ ಎಳೆಯ, ಬಡತನದ, ಮುಗ್ಧ ಹೆಣ್ಣುಮಕ್ಕಳೂ ಇಂಥ ವಿಚಾರ ತಲೆಗೆ ತುಂಬಿಕೊಂಡಿದ್ದಾರೆ. ಇದನ್ನಾದರೂ ಪ್ರಾಮಾಣಿಕವಾಗಿ ಮಾಡುತ್ತಾರೋ. ಇಲ್ಲ. ಇದರಲ್ಲೂ ಬರೀ ಸುಳ್ಳು, ಬರೀ ಬೊಗಳೆ. ‘ನಮ್ಮ ಹುಡುಗಿ ಭಾಳಾ ಚೆನ್ನಾಗಿದಾಳೆ!’ ‘ಆರಿಜನ್ ಆಫ್ ಸ್ಪೀಸೀಸ್? ಬಹಳಾ ಇಂಟರೆಸ್ಟಿಂಗು. ಆದರೆ ನಮ್ಮ ಲಿಲೀಗೆ ಪೇಂಟಿಂಗ್ ಅಂದರೆ ಭಾಳಾ ಇಷ್ಟ!’ ‘ನೀವು ಪ್ರದರ್ಶನಕ್ಕೆ ಹೋಗಲ್ಲವಾ? ಎಷ್ಟು ಚೆನ್ನಾಗಿದೆ ಅಂತ!’ ‘ಅಲ್ಲಿಗೆ ಬರುವ ಟ್ರೊಯ್ಕಾಗಳು, ನಾಟಕ, ಸಂಗೀತ. ಅಬ್ಬಾ, ಅದ್ಭುತ!’ ‘ನಮ್ಮ ಲಿಸ್ಸೀಗೆ ಸಂಗೀತ ಅಂದರೆ ಪ್ರಾಣ.’ ಇಂಥ ಎಲ್ಲ ಮಾತುಗಳ ಹಿಂದೆ ಇರುವುದು ಒಂದೇ ಐಡಿಯಾ: ‘ನನ್ನ ತಗೊ. ನಮ್ಮ ಲಿಸ್ಸೀನ ಆರಿಸಿಕೊ. ಅವಳು ಬೇಡ, ನನ್ನ ಒಪ್ಪಿಕೋ. ಒಂದು ಸಾರಿ ಟ್ರೈ ಮಾಡಿ ನೋಡು!’ ಎಂಥಾ ಸುಳ್ಳು, ಎಷ್ಟು ಅಸಹ್ಯ!” ಟೀ ಮುಗಿಸಿ, ಟೀ ಮಾಡುವ ಸರಂಜಾಮುಗಳನ್ನೆಲ್ಲ ಎತ್ತಿಡಲು ತೊಡಗಿದ.
(ಮುಂದುವರೆಯುವುದು)

‹ ಕ್ರೂಟ್ಸರ್ ಸೊನಾಟಾ: ಅಧ್ಯಾಯ ಏಳುಮೇಲಿನ ಪುಟಕ್ಕೆಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು ›
Ornamental seperator
  • olnswamy ರವರ ಬ್ಲಾಗ್
  • Printer-friendly version
  • Login or register to post comments
  • 594 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ್ರೂಟ್ಸರ್ ಸೊನಾಟಾ: ಅಧ್ಯಾಯ ಆರು
  • ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?
  • ಟಾಲ್ಸ್‌ಟಾಯ್: ಕ್ರೂಟ್ಸರ್‌ ಸೊನಾಟಾ: ಅಧ್ಯಾಯ ಆರು
  • ಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು
  • 7 ಮದುವೆ ಅನುಭವ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
  • omshivaprakash
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 11:35pm
  • hamsanandi
    ಉ: ದೊಡ್ಡದಾದ ಮಂಚ ???
    May 12, 2008 - 11:13pm
  • hpn
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 12, 2008 - 11:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 4 ಅತಿಥಿಗಳು ಆನ್ಲೈನ್ ಇರುವರು.

ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator