ಪದಬೆಳಗು:೨: ಬದುಕು!
‘ಬದುಕಿ’ನಲ್ಲಿ ಏನು ವಿಶೇಷ ಅಂದಿರಾ?
ನಾನಾಗ ಶಿವಮೊಗ್ಗದಲ್ಲಿದ್ದೆ. ನಮ್ಮ ಕಾಲೇಜಿನ ಕನ್ನಡ ಅಧ್ಯಾಪಕರೊಬ್ಬರು ಈ ಇಂಗ್ಲಿಷ್ ಅಧ್ಯಾಪಕನ ಹತ್ತಿರ ಬಂದು ‘ಬರ್ದಿಲರು’ ಅಂದರೆ ಏನು ಸಾರ್ ಎಂದು ಕೇಳಿದರು. ಅವರು ಅಂದು ಕನ್ನಡ ವಿದ್ಯಾರ್ಥಿಗಳಿಗೆ ಗೋವಿಂದ ಪೈ ಅವರ ‘ಬರ್ದಿಲರು’ ಪದ್ಯ ಪಾಠ ಮಾಡಬೇಕಾಗಿತ್ತು. ನನಗೂ ಗೊತ್ತಿರಲಿಲ್ಲ. ಅವರನ್ನೂ ಕರೆದುಕೊಂಡು ಲೈಬ್ರರಿಗೆ ಹೋಗಿ ಕಿಟಲ್ ನಿಘಂಟು ಹುಡುಕಿದೆ. ಬರ್ದಿಲ ಅಂದರೆ ದೇವತೆ ಅನ್ನುವ ಅರ್ಥ ದೊರೆಯಿತು. ‘ಬರ್ದು’ ಅಂದರೆ ಸಾವು, ‘ಇಲ’ ಅನ್ನುವುದು ನಿಷೇಧವನ್ನು ಸೂಚಿಸುವ ಪದ ಅನ್ನುವ ವಿವರಣೆ ಹೊಳೆಯಿತು. ಇಲ ಅನ್ನುವುದೇ ಈಗ ಇಲ್ಲ ಎಂದಾಗಿದೆ. ಕೇಶಿರಾಜ ನಾಣಿಲಿವೆಣ್ =ನಾಚಿಕೆ ಇಲ್ಲದ ಹೆಣ್ಣು, ಪಲ್ಲಿಲಿವಾಯ್=ಹಲ್ಲಿಲ್ಲದ ಬಾಯಿ ಅನ್ನುವ ಉದಾಹರಣೆ ಕೊಟ್ಟಿದ್ದು ನೆನಪಿಗೆ ಬಂದಿತು.
ಸರಿ. ಬರ್ದಿಲ ಎಂದರೆ ‘ಸಾವು ಇಲ್ಲದವನು’ ಅಂದರೆ ದೇವತೆ ಅನ್ನುವುದು ಸರಿ. ಬರ್ದುಂಕು, ಬರ್ದುಕು, ಬದುಕು ಇದು ರೂಪಗೊಂಡದ್ದರ ಬಗ್ಗೆ ಕುತೂಹಲ ಹುಟ್ಟಿತು.
ಬರ್ದು-ಸಾವು ಇರುವುದು ಬದುಕು! ಉಂಕು ಅನ್ನುವುದು ಪದಗಳ ಕೊನೆಗೆ ಸೇರುವ ಪ್ರತ್ಯಯ. ಅವುಂಕು (ಅಮುಕು) ಇತ್ಯಾದಿ ಪದಗಳಲ್ಲಿ ಕಾಣುತ್ತದೆ. ಹಾಗಾದರೆ ಬದುಕು ಪದದ ಅರ್ಥವ್ಯಾಪ್ತಿ ಎಷ್ಟು ವಿಶೇಷ ಅನ್ನಿಸತೊಡಗಿತು.
ಸಾವಿನಿಂದ ಆವೃತ್ತವಾದದ್ದು, ಸಾವನ್ನು ಒಳಗೊಂಡದ್ದು, ಸಾವು ಇರುವಂಥದ್ದು ಅದೇ ಬದುಕು. ಬದುಕು ಅನ್ನುವ ಪದ ತನ್ನ ಹೊಟ್ಟೆಯೊಳಗೆ ‘ಸಾವು’ ಇಟ್ಟುಕೊಂಡಿದೆಯೋ, ಅಥವಾ ‘ಸಾವು’ ಅನ್ನುವುದರ ಹೊಟ್ಟೆಯೊಳಗೆ ಬದುಕು ಅಡಗಿದೆಯೋ! ಸಾವು ಬೇರೆಯಲ್ಲ, ಬದುಕು ಬೇರೆಯಲ್ಲ ಎರಡೂ ಒಂದೇ ಎಂಬಂತೆ ವಿರುದ್ಧವಾದವನ್ನೆಲ್ಲ ಒಂದೇ ಪದದೊಳಗೆ ಅಡಗಿಸಿಕೊಂಡಿರುವ ಕನ್ನಡ ಎಷ್ಟು ವಿಚಿತ್ರ, ಎಷ್ಟು ಶ್ರೀಮಂತ!

- olnswamy ರವರ ಬ್ಲಾಗ್
- Login or register to post comments
- 353 hits
- Email this blog





RSS:
ಪ್ರತಿಕ್ರಿಯೆಗಳು
ಉ: ಪದಬೆಳಗು:೨: ಬದುಕು!
ಈ ಒರೆ ಕನ್ನಡಕ್ಕೆ ನೆಂಟಾದ ಬೇರೆ ನುಡಿಗಳಲ್ಲೂ ಇದೆ..( ತೆಲುಗು - ಬರ್ತುಕು, ಬರ್ದುಕು )
ಇಲ್ಲಿ ನೋಡಿ..
http://dsal.uchicago.edu/cgi-bin/philologic/getobject.pl?c.2:1:121.burro...
Ka.
( ಬಾೞ್)
bār̤, bār̤u, barduku, bar̤duṅku, barduṅku, baduku, badaku, badiku, baduṅku to live, be alive, subsist, make a livelihood, remain alive, revive, return to life;
bār̤(u) living, life, livelihood, state of living prosperously or happily, marriage, property;
ಬಾೞಿ
bār̤i person who lives, etc.;
ಬಾೞಿವೆ/ಬಾೞ್ವೆ...
bār̤ive, bār̤ve, bār̤ike, bār̤ke, bār̤te, bār̤uvike, bār̤vike living, life, livelihood, household;
baduku, badaku, barduku living, life, livelihood, property, goods;
badukisu, badikisu to cause to live, support, save from death, raise to life; bar̤ to live, begin to live prosperously;
bardu, baddu increase, greatness, perfection, proficiency, skill.
ಆದ್ರೆ ಇವರು ಬರ್ದುಂಕು ಅನ್ನೋದು ಬರ್ದು+ಉಂಕು ಇಂದ ಬಂದಿದೆ ಎಂದು ಹೇಳಿಲ್ಲ.
ಇವರಂತೆ ವಾ/ಬಾೞ್ ಬೇರಿಂದೇ ಇದು ಬಂದಿರೋದು. ನೀವು ಹೇಳಿದೆ ಉಂಕು ಒಟ್ಟು(ಪ್ರತ್ಯಯ) ಬರ್ದು( ಬಾೞ್ ಇಂದ ಬಂದುದು ) ದಕ್ಕೆ ಸೇರಿರಬೋದು.
ಇನ್ನು ಬರ್ದು( ಸಾವು)
http://dsal.uchicago.edu/cgi-bin/philologic/getobject.pl?c.2:1:73.burrow
ಇನ್ನು ನಿಮ್ಮ ಬರ್ದಿಲರು ಇದು ಕೂಡ ಸರಿಗಾಣದು..
ಇಲ್ = ಮನೆ
ಬರ್ದು + ಇಲ್ = ಬರ್ದಿಲ್ => ಸಾವು + ಮನೆ => ಸಾವಿನ ಮನೆ => ಸತ್ತವರು ಹೋಗಿ ಸೇರುವ ಮನೆ ಎಂದು ಅದು ಸ್ವರ್ಗ( ಬಹುಶಃ ನಮಗೆ ನರಕದ ಕಲ್ವನೆ ಇಲ್ಲದೇ ಇರಬೋದು ಆ ಹೊತ್ತಿನಲ್ಲಿ )
ಬರ್ದಿಲ = ಸತ್ತವರ ಮನೆ/ಸ್ವರ್ಗದಲ್ಲಿರುವವ
ಒಮ್ಮೆ ಕೋವೆಂ "ಪದಾರ್ಥ ಚಿಂತಾಮಣಿ" ತಿರುಗಿಸಿ ನೋಡ್ತೀನಿ..
ಆದ್ರೆ Burrow ಮತ್ತು Emeneau ಹೇಗೆ ಹೇಳಿದ್ದಾರೆ.!
ಉ: ಪದಬೆಳಗು:೨: ಬದುಕು!
ಹಾಗೆ
ಮುಗಿಲು = ಮುಗಿ + ಇಲ್(ಮನೆ) = ಮುಗಿದ ಮೇಲೆ ಹೋಗುವ ಮನೆ. ಎಂದು ಬಿಡಿಸಬೋದೇನೋ.
ಬಾನಿಲು?
ಹಿತ್ತಿಲು, ಮುಂದಿಲು, ಬಾಗಿಲು, ಬಚ್ಚಿಲು, ಗುಡಿಸಿಲು, ಇವೆಲ್ಲ ಈ ಇಲು( ಮನೆ) ಒರೆ ಕೂಡಿ ಬಂದಿದೆ ಎನ್ನಬೋದೇನೋ!
ಉ: ಪದಬೆಳಗು:೨: ಬದುಕು!
>>> ಹಿತ್ತಿಲು, ಮುಂದಿಲು, ಬಾಗಿಲು, ಬಚ್ಚಿಲು, ಗುಡಿಸಿಲು, ಇವೆಲ್ಲ ಈ ಇಲು( ಮನೆ) ಒರೆ ಕೂಡಿ ಬಂದಿದೆ ಎನ್ನಬೋದೇನೋ
ಎನ್ನಬೋದೇನೋ ಅಲ್ಲ! ಎನ್ನಬೇಕು!
ಹಿತ್ತಿಲು <- ಪಿತ್ತಿಲ್ ಇಲ್ಲಿನ ಹಿಂದೆ? = ಮನೆಯ ಹಿಂದೆ
ಬಾಗಿಲು <- ವಾಯಿಲ್ ಇಲ್ಲಿನ ಬಾಯೊ = ಮನೆಯ ಬಾಯಿ - ಅದು ಬಾಗಿಲು ತಾನೇ?
ಹೊಸ್ತಿಲು ಕೂಡಾ ಹೀಗೇ ಬಂದಿರುವುದು. ವಿಗ್ರಹವಾಕ್ಯ್ಸ್ ಗೊತ್ತಿಲ್ಲ.
ಬಚ್ಚಿಲು, ಗುಡಿಸಿಲುಗಳಿಗೂ ಹೇಗೋ ನಾನರಿಯೆ.
-ಹಂಸಾನಂದಿ
ಉ: ಪದಬೆಳಗು:೨: ಬದುಕು!
ಪುಗು/ಪೊಕ್( ಒಳಹೊಕ್ಕು) + ಇಲ್ = ಪುಗಿಲ್
ಹಾಗೇ ಹೋ/ಪೋ + ಇಲ್ = ಪೊಸ್ತಿಲು. ಇಲ್ಗೆ ಹೋಗಲು ಇರುವುದು...!
http://dsal.uchicago.edu/cgi-bin/philologic/getobject.pl?c.1:1:1655.burr...
ವಾಯಿಲು ಸರಿ... ಆದ್ರೆ.. ಕದ ಅನ್ನೋದು( ಕದವು/ಕದ ತಮಿಳು ಮತ್ತು ಕನ್ನಡ ಎರಡರಲ್ಲೂ) ಬಳಕೆಯಲ್ಲಿದೆ.
ಇಲು ಸೇರಿ ಅದವು ಬಲು ಇವೆ.
ತಮಿಳಲ್ಲಿ ಇಲ್ಲಂ( ನಮ್ಮಲ್ಲಿ ಇರುವ ಆ ನಿಲಯ, ಈ ನಿಲಯ.. ನಿಲಯವೂ ಕನ್ನಡವೇ ನಿಲಯ್ ( ನೆಲೆಯ ಬೇರು, ನೆಲಯ್) ಬಂದುದು ಎಂದು ಹೇಳದರೆ ತಪ್ಪಲ್ಲವಂತೆ )
ತಲುಗಲ್ಲಿ ಇಂಟು, ಇಲ್ಲು
ಉ: ಪದಬೆಳಗು:೨: ಬದುಕು!
ಹಂಸಾನಂದಿಯರೆ...
ನಾವು ಹೊಸಿಲು ಅನ್ನೋದು..( ಹೊಸ್ತಿಲು ಅಂತ ನಾನು ಆಡುನುಡಿಯಲ್ಲಿ ಕೇಳಿಲ್ಲ )
ಈ ಹೊಸಿಲು ಹೀಗೆ ಬಂದಿಯರಬೋದು...
ಪೋಯ್ + ಇಲು = ಪೋಯಿಲು > ಹೋಸಿಲು > ಹೊಸಿಲು ( ವಯಿರ್ => ಬಸಿರ್, ಪಯಿರ್ => ಹಸಿರ್ ಹಾಗೆ )
ಹಾಗೆ ಕನ್ನಡದಲ್ಲಿ ಸುಮ್ನೆ ತ್ ಬಂದು ಸೇರೋದುಂಟು...
ದೊಡ್ಡತನ => ದೊಡ್ಡಸ್ತನ
ಉ: ಪದಬೆಳಗು:೨: ಬದುಕು!
ನೀವು ಹೇಳುವುದು ಸರಿ ಇರಬಹುದು ( ಹೆಚ್ಚಾಗಿ ಬಂದ 'ಸ' ಬಗ್ಗೆ). ನಮ್ಮಲ್ಲಿ ಹೊಸಲು, ಹೊಸಿಲು, ಹೊಸ್ತಿಲು ಎಲ್ಲವೂ ಬಳಕೆಯಲ್ಲಿ ಕೇಳಿದ್ದೇನೆ.
ಆದ್ರೆ ಈ ಪೊಯ್ + ಇಲು ರೀತಿಯ ಬಿಡಿಸುವಿಕೆ ಅಷ್ಟಾಗಿ ಸರಿ ತೋರಲಿಲ್ಲ .. ಪೋಯ್ -> ಇದಕ್ಕೆ ಏನು ಅರ್ಥ ಕೊಡುತ್ತಿದ್ದೀರ?
ತಮಿಳಲ್ಲಿ ಪೊಯ್ ಇದೆ - ಆದರೆ ಅದು ಸುಳ್ಳು ಎಂಬ ಅರ್ಥ.
ಕನ್ನಡದ ಪೊಯ್, ಅಥವ ಹೊಯ್ (ಹೊಯ್ಸಳ ಗಮನಿಸಿ) ಅದರಲ್ಲಿ ಬರುವ ಅರ್ಥವೂ ಈ ಹೊಸಿಲಿಗೆ ಹೊಂದುತ್ತಿಲ್ಲವಲ್ಲ.
ಆಂದಹಾಗೆ ತಮಿಳಿನಲ್ಲಿ ಇದಕ್ಕೆ ಸಮಾಂತರ ಪದವಿಲ್ಲ - ಹೊಸಿಲಿಗೆ ಅಲ್ಲಿ ವಾಸಪ್ಪಡಿ ಎಂದು ಹೆಸರು!
-ಹಂಸಾನಂದಿ
ಉ: ಪದಬೆಳಗು:೨: ಬದುಕು!
ಹುಂ...
ಪುಯಿ(ಪೊಯ್) => ಹುಸಿ! ( ಮೂಲದ್ರಾವಿಡದಲ್ಲಿ.. ಎ, ಮತ್ತು ಒ ಇದ್ಯ? ಇ => ಎ, ಉ=>ಒ ಮಾರ್ಪುಗಳು ಅಲ್ವ? )
ಇಗೋ ನೋಡಿ..
http://dsal.uchicago.edu/cgi-bin/philologic/getobject.pl?c.1:1:1692.burr...
Ta. putavu, puta, putavam, putā
4274 Ta. putavu, puta, putavam, putā door, gate. Ka. pudi the side of a door. DED 3510.
ಪುದಿಲು/ಪುತಿಲು => ಪೊಸ್ತಿಲು?
http://dsal.uchicago.edu/cgi-bin/philologic/getobject.pl?c.1:1:1693.burr...
ಪುತು( ಹೊಸ ) => ಪುತಿಲು => ಪೊಸ್ತಿಲು?
http://dsal.uchicago.edu/cgi-bin/philologic/getobject.pl?c.1:1:1699.burr...
ಪುಯ್(separation) ಇದಾ?