ಅನುವಾದ ಅಕಾಡೆಮಿ ಏನು ಮಾಡಬಹುದು?
ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು.
ಈ ಅಕಾಡೆಮಿಗಾಗಿ ಯಾವ ಧ್ಯೇಯೋದ್ದೇಶಗಳನ್ನು ಸರ್ಕಾರ ಗೊತ್ತು ಮಾಡಿದೆಯೋ ತಿಳಿಯದು. ಇನ್ನೂ ಮೊದಲ ಸಭೆ ನಡೆಯಬೇಕಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ನಿಜವಾಗಿ ಆಸಕ್ತರಾದ ಸಂಪದ ಬಳಗದ ಸದಸ್ಯರು ಈ ಅಕಾಅಡೆಮಿ ಯಾವ ಕಾರ್ಯಗಳನ್ನು ಮಾಡಬಹುದೆಂಬ ಬಗ್ಗೆ ಸಲಹೆಗಳನ್ನು ನೀಡಿದರೆ ಉಪಕಾರವಾಗುತ್ತದೆ.
ಅಕಾಡೆಮಿಗಳೆಂದರೆ ಕೇವಲ ಬಹುಮಾನ ನೀಡುವ ಸಂಸ್ಥೆಗಳಾಗಿಬಿಟ್ಟಿರುವುದು ವಿಷಾದಕರ. ಬಹುಮಾನ ಮನ್ನಣೆಗಳನ್ನು ನೀಡುವುದು ಮುಖ್ಯವೇ ಆದರೂ ಅದೊಂದೇ ಕೆಲಸವಾಗಬಾರದು
ಕನ್ನಡಕ್ಕೆ ಉಪಯುಕ್ತವಾಗುವಂಥ ಯಾವ ಬಗೆಯ ಕೆಲಸಗಳನ್ನು ಭಾಷಾಂತರ ಅಕಾಡೆಮಿ ಕೈಗೆತ್ತಿಕೊಳ್ಳಬಹುದು ಎಂಬ ಬಗ್ಗೆ ಗೆಳೆಯರಿಂದ ಸಲಹೆ ಸೂಚನೆಗಳನ್ನು ನಿರೀಕ್ಷಿಸಿದ್ದೇನೆ. ನನ್ನನ್ನೂ ಈ ಅಕಾಡೆಮಿಯ ಒಬ್ಬ ಸದಸ್ಯನ್ನಾಗಿ ಸರ್ಕಾರ ನೇಮಿಸಿರುವುದಂರಿಂದ ಈ ಬಗ್ಗೆ ಸಹಜವಾಗಿಯೇ ನಿಮ್ಮ ಅನಿಸಿಕೆಗಳನ್ನು ತಿಳಿಯಲು ಆಸಕ್ತಿ, ಕುತೂಹಲ.
ಬರೆಯುವಿರಷ್ಟೆ?

- olnswamy ರವರ ಬ್ಲಾಗ್
- Login or register to post comments
- 768 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಅನುವಾದ ಅಕಾಡೆಮಿಯ ಬಗ್ಗೆ ...
ಮೊದಲು ಸ್ವಾಮಿಯವರಿಗೆ ಅಭಿನಂದನೆಗಳು. ಅನುವಾದವೆಂದೊಡನೆ ನನಗೆ ಫಕ್ಕನೆ ನೆನಪಾದದ್ದು ನಿರಂಜನರ ಸಂಪಾದಕತ್ವದಲ್ಲಿ ಪ್ರಕಟವಾದ ವಿಶ್ವಕಥಾಕೋಶ. ನಾನು ಹೈಸ್ಕೂಲಿನಲ್ಲಿದ್ದಾಗ ಈ ಮಾಲಿಕೆಯ ಎಲ್ಲಾ ಪುಸ್ತಕಗಳನ್ನೂ ತಪ್ಪದೇ ಓದಿದ್ದೆ. ಇಂತಹ ಅಮೂಲ್ಯ ಕೃತಿಗಳನ್ನು ಪ್ರಕಟಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಹಾಗೆಂದ ಮಾತ್ರಕ್ಕೆ ಕಥೆ ಕವನಗಳನ್ನು ಮಾತ್ರ ಅನುವಾದಿಸಬೇಕೆಂದು ಹೇಳುತ್ತಿಲ್ಲ. 'ಕನ್ನಡ'ದ ಮೂಲಕ ಜಗತ್ತಿನ ಅತ್ಯುತ್ತಮ ಕೃತಿಗಳನ್ನು ಗ್ರಹಿಸುವ ಕೆಲಸ ಆಗಬೇಕಿದೆ. ಇಂಗ್ಲಿಷ್ ಭಾಷೆಯಲ್ಲಿಂದು ಲಭ್ಯವಿರುವ ಕೃತಿಗಳ ವೈವಿಧ್ಯ, ವ್ಯಾಪ್ತಿ, ಮೌಲ್ಯಗಳನ್ನು ಗಮನಿಸಿದರೆ ನಮಗೆ, ಕನ್ನಡಿಗರಿಗೆ, ಇಂತಹ ಕೃತಿಗಳು ನಮ್ಮದೇ ಭಾಷೆಯಲ್ಲಿ ನಮ್ಮದೇ ಅನುಭವಗಳ ಮೂಲಕ ಗ್ರಹಿಸುವ ಅಗತ್ಯ ಎಷ್ಟಿದೆಯೆಂದು ತಿಳಿಯುತ್ತದೆ. ಏಕೆಂದರೆ, ಇಂಗ್ಲಿಷನಲ್ಲಿರುವ ಬಹುತೇಕ ಕೃತಿಗಳೂ ಬೇರೆ ಭಾಷೆಗಳಿಂದ ಅನುವಾದಗೊಂಡಿರುತ್ತವೆ. ಇನ್ನೊಂದು ಮುಖ್ಯ ವಿಚಾರ - ನಮಗೆ ಇತರೆ ಭಾರತೀಯ ಭಾಷೆಗಳಲ್ಲಿರುವ ಕೃತಿಗಳೂ ಸಿಗಬೇಕು. ಹಾಗೆಯೇ ಕನ್ನಡದ ಮಹತ್ವದ ಕೃತಿಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕು.
ಇವಿಷ್ಟು ನನ್ನ ಸಧ್ಯದ ಅನ್ನಿಸಿಕೆಗಳು. ಸ್ವಾಮಿಯವರನ್ನು ಹಾಗು ಅಕಾಡೆಮಿಯ ಎಲ್ಲಾ ಸದಸ್ಯರನ್ನು ಮತ್ತೊಮ್ಮೆ ಅಭಿನಂದಿಸುತ್ತಾ ನಿಮ್ಮೆಲ್ಲರಿಂದ ಒಳ್ಳೆಯ ಯೋಜನೆಗಳು ರೂಪುಗೊಂಡು ಅನುಷ್ಟಾನಕ್ಕೆ ಬರಲೆಂದು, ಕನ್ನಡಿಗರೆಲ್ಲರ ಬೆಂಬಲ, ಸಹಕಾರ ನಿಮ್ಮೊಂದಿಗಿರುತ್ತದೆಂದು ಆಶಿಸುತ್ತೇನೆ.
- ಪ್ರಶಾಂತ
ಅನುವಾದ ಹಾಗು ವ್ಯಾಖ್ಯಾನ...
ಆತ್ಮಿಯರೇ, ಅನುವಾದ ಅಕಾಡೆಮಿಯ ಆರಂಭಕ್ಕೆ ನನ್ನ ಅಭಿನಂದನೆಗಳು.
ನಾನು ಮುಖ್ಯವಾಗಿ ಕಾಣುವ ವಿಚಾರವೆಂದರೆ,
* ಆಕಾಡೆಮಿ, ಯಾವುದೇ ಕೃತಿಯ ಅನುವಾದದ ಹಾದಿಯಲ್ಲಿ ಅದರ ವ್ಯಕ್ತಿಗತ ವ್ಯಾಖ್ಯಾನವಾಗದಂತೆ (Interpretation) ಜಾಗರೂಕತೆವಹಿಸುವುದು ಅತ್ಯಗತ್ಯ.
ವಂದನೆಗಳೊಂದಿಗೆ,
ರವಿಶಂಕರ
ಅನುವಾದ ಅಕಾಡೆಮಿ
ಹಲವು ವರ್ಷಗಳಿಂದ ಅನುವಾದ ಮಾಡಿಕೊಂಡೇ ಬಂದಿರುವ ನನಗೆ ಅನುವಾದ ಅಕಾಡೆಮಿ ಒಳ್ಳಯ ಯೋಜನೆಯಾಗಿ ಕಾಣುತ್ತಿದೆ. ಆದರೆ ಎಲ್ಲ ಅಕಾಡೆಮಿಗಳಂತೆ ಇದೂ ಸರ್ಕಾರದ ಒಂದು ಹಳೆ ಬಾವುಟ ಆಗದಿರಲಿ ಎಂದು ಆಶಿಸುವೆ.
ನಾನು ಪ್ರವಾಸ ಹೊರಡುವ ಗಡಿಬಿಡಿಯಲ್ಲಿರುವೆ. ಹೀಗಾಗಿ ನನ್ನ ಆಭಿಪ್ರಾಯ ಹಾಗೂ ಸಲಹೆಗಳನ್ನು ಅಕ್ಟೋಬರ್ ಮೂರನೇ ವಾರ ನೀಡುವೆ. ಸಮಕಾಲೀನ ಅಂದರೆ ಕಳೆದ ಒಂದು ದಶಕದ ಉತ್ತಮ ಕೃತಿಗಳನ್ನು ಅನುವಾದ ಮಾಡುವ ಬಗ್ಗೆ ತಾವು ಗಮನ ನೀಡಬಹುದೆ? ಯಾಕೆಂದರೆ ಇತ್ತೀಚೆಗೆ ಅನುವಾದ ಎಂದರೆ ಹಳೆಯ ಜನಪ್ರಿಯ ಪುಸ್ತಕವನ್ನು ಅನುವಾದಿಸುವುದೇ ಆಗಿದೆ.
ಒ ಏಲ್ ಎನ್
ಒ ಏಲ್ ಎನ್ ಸ್ವಾಮಿಯವರಿಗೆ ಅಭಿನಂದನೆಗಳು.
ಏನು ಮಾಡಬಹುದು ಅಂತ ಸಲಹೆ ಕೇಳಿದ್ದೀರಾ. ಪ್ರಾಮಾಣಿಕವಾದ ಆಶಯಕ್ಕೆ ನನ್ನ ಅಭಿಪ್ರಾಯ ಹೀಗಿದೆ:
೧. ಇಂಗ್ಲಿಷ್ ಹಾಗೂ ಹಿಂದಿ ಬಿಟ್ಟು ಇತರ ಭಾರತೀಯ ಭಾಷೆಯ ಸಾಹಿತ್ಯ ಕನ್ನಡಕ್ಕೆ ಅನುವಾದಗೊಳ್ಳ ಬೇಕು
(ಹಿಂದಿ ಇಂಗ್ಲಿಷ್ ಗಳನ್ನು ಬಿಡುವುದು ನಾವೆಲ್ಲ ಶಾಲೆಯಲ್ಲಿ ಕಲಿತಿದ್ದೇವೆ, ಬೇಕಿದ್ದರೆ ಮೂಲ ಲೇಖನಗಳನ್ನೇ ಓದಬಹುದು ಎಂಬ ಕಾರಣಕ್ಕಾಗಿ)
೨. ಕನ್ನಡದ ಉತ್ತಮ ಹಾಗೂ ಇತ್ತೀಚೆಗಿನ ಜನಪ್ರಿಯ ಹಾಗೂ ವೈಚಾರಿಕ ಸಾಹಿತ್ಯ ಮುಖ್ಯವಾಗಿ ಇಂಗ್ಲಿಷಿಗೆ ಹಾಗೂ ಹಿಂದಿಗೆ ಅನುವಾದಗೊಳ್ಳಬೇಕು.
(ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷಿಗೆ ಯಾಕೆ ಅಂದರೆ ಇದರಿಂದ ಬಹಳಷ್ಟು ಭಾರತೀಯರನ್ನು ತಲುಪಬಹುದು ಹಾಗೂ ಕನ್ನಡದ ರುಚಿ ಹಿಡಿಸಬಹುದು)
೩. ಪುಸ್ತಕಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕಾದದ್ದು ಬಹಳ ಮುಖ್ಯ.
೪. ನಿಮ್ಮ ಒತ್ತು ಕನ್ನಡದ ಪುಸ್ತಕಗಳನ್ನು ಇತರ ಭಾಷೆಗೆ ಅನುವಾದಿಸುವುದರತ್ತ ಇರಲಿ.
ಮತ್ತೊಮ್ಮೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
ಗೋಪೀನಾಥ ರಾವ್.
ನನ್ನ ಅಭಿಪ್ರಾಯ
ನನ್ನ ಅಭಿಪ್ರಾಯವನ್ನು ಎಲ್ಲರಿಂದ ಮೊದಲೇ ನಾನು ಇಲ್ಲಿ ದಾಖಲಿಸಿದ್ದೇನೆ. ಇನ್ನೇನಾದರೂ ನೆನಪಾದರೆ ಬರೆಯುತ್ತೇನೆ. ಉಳಿದಂತೆ ಈಗಾಗಲೇ ಹಲವರು ಬರೆದಿರುವ ಎಲ್ಲ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.
ಸಿಗೋಣ,
ಪವನಜ
-----------
Think globally, Act locally