ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ.

ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ.

ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ ಬರ್ತಿದೆ. ಲಿನಕ್ಸ ನಲ್ಲಿ ಜಾದೂ ಮಾಡ್ಬಹುದು. ನಿಮಗೆ ಯಾವ್ ತಂತ್ರಾಂಶ ಬೇಕಿದೆಯೋ ಕೇಳಿ ನೋಡಿ, ತಟ್ಟನೆ ನಿಮ್ಮೆದುರಿಗೆ ತಂದಿಡತ್ತೆ "ಪೈರಸಿ ಭೂತ" ದಿಂದ ಮುಕ್ತವಾದ ಉತ್ತರಗಳನ್ನ. ಲಿನಕ್ಸ್ ಕಿರಿ ಕಿರಿ ಅನ್ನಿಸ್ತಿದೆಯೆ? ೨೪ ತಾಸು ಲಿನಕ್ಸ್ ನೊಂದಿಗೆ ಕಳೆದು ನಂತರ ತಿಳಿಸಿ. ನಿಮಗೆ ಕಿರಿ ಕಿರಿ ಅನ್ನಿಸಿದ್ದು ನಿಮಗೆ ತಂತ್ರಾಂಶ ಪ್ರಪಂಚದ ದರ್ಶನ ಮಾಡ್ಸಿದ್ರೂ ಮಾಡಿಸ್ಬಹುದು.

-೧-

ಲಿನಕ್ಸನ ಫೈಲ್ ಸಿಸ್ಟಂ (filesystem) ನಲ್ಲಿ ನಿಮಗೆ c: (ಸಿ ಡ್ರೈವ್)ಸಿಗೋದಿಲ್ಲ. ಅದು ಶುರು ಆಗೋದು / ಅನ್ನೋ ಡೈರೆಕ್ಟರಿ (ಫೋಲ್ಡರ್) ನಿಂದ. ಇದರ ಕೆಳಗಡಗಿದೆ ನಿಮ್ಮ ಲಿನಕ್ಸ್ ಮತ್ತೆಲ್ಲ ಕಡತಗಳು (ಫೈಲ್ ಮತ್ತು ಫೋಲ್ಡರ್ ಗಳು). ಇದನ್ನ ಕಿತ್ತಾಕ್ಲಿಕ್ಕೆ ಪ್ರಯತ್ನಿಸಿದ್ರೋ ಜೋಕೆ ಮತ್ತೆ ಲಿನಕ್ಸ್ ಇನ್ಸ್ಟಾಲ್ ಮಾಡ್ಬೇಕಾದೀತು! ;)

ಲಿನಕ್ಸ್ ಕಲಿಯೋಕೆ ಅದರೊಂದಿಗೆ ಆಟ ಆಡ್ಲೇ ಬೇಕು. ಆದ್ರೆ ಸ್ವಲ್ಪ ಎಚ್ಚರಿಕೆವಹಿಸೋದು ಉತ್ತಮ.

"rm -rf /" ಉಪಯೋಗಿಸಿದ್ರೆ ಏನಾಗ್ಬಹುದು ಅನ್ನೂ ಕುತೂಹಲ ಇದ್ಯಾ? ನಿಮ್ಮ ಕಂಪ್ಯೂಟರಿನಲ್ಲಿ ಪ್ರಯೋಗ ನೆಡೆಸೋ ಮೊದ್ಲು ಈ ವಿಡಿಯೋ ನೋಡಿ.

--

ಇಂತಹ ಮತ್ತೆಷ್ಟೋ ತರ್ಲೆ ವಿಷಯಗಳನ್ನ ನಿಮ್ಮ ಮುಂದೆ ಇಟ್ಟು ನಿಮ್ಮಲ್ಲಿ ಲಿನಕ್ಸ್ ಬಗ್ಗೆ ಕುತೂಹಲ ಮೂಡಿಸೋ ಆಸೆ. ನಿಮಗೆ ಏನನ್ನಿಸ್ತದಂತ ಮರೀದೇ ತಿಳಿಸಿ.

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

nagesamrat's picture

ಇದೊಂಥರಾ ಚೆನ್ನಾಗಿದೆ ಕಣ್ರೀ... ಹೀಗೆ ಟ್ರೈ ಮಾಡಿ ಅಂತ ಹೇಳುವ ಮೊದಲು ಎರಡರ ನಡುವಿನ ವ್ಯತ್ಯಾಸ, ಈಗ ವಿಂಡೋಸ್ ಬಳಸುತ್ತಿರುವವರು ಲಿನಿಕ್ಸಿಗೆ ಹಾರಿದರೆ ಏನು ಲಾಭ ಎನ್ನುವುದರ ಬಗ್ಗೆ ಸವಿವರವಾಗಿ ಬರೆಯಿರಿ... ‘ಮತಾಂತರ’ ಮಾಡುವ ಪಾದ್ರಿಯ ಹುಮ್ಮಸ್ಸು ನಿಮ್ಮಲ್ಲಿರಬೇಕು ಕಣ್ರೀ...
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaarido...
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

omshivaprakash's picture

ನಗೆ ಸಾಮ್ರಾಟರೆ, ಲಿನಕ್ಸ್ ಮತ್ತು ವಿಂಡೋಸ್ ಎರಡರ ನಡುವಿನ ವ್ಯತ್ಯಾಸಗಳ ಬಗ್ಗೆ ಬೇಗನೆ ಬರೀತೇನೆ. ಮತಾಂತರ ಅನ್ನೋಕಿಂತ ಉತ್ತಮ ಅನ್ನಿಸೋದನ್ನ ಎಲ್ಲರ ಮುಂದಿಡೋದು ನನ್ನ ಅಭ್ಯಾಸ :) ಹೀಗೆ ನಿಮ್ಮ ಅನಿಸಿಕೆಗಳನ್ನ ತಿಳಿಸ್ತಿರಿ.

ನಿಮ್ಮ,
ಓಂ ಶಿವಪ್ರಕಾಶ
http://platonic.tech...

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

ಸಂಗನಗೌಡ's picture

Quote:
ನಿಮಗೆ ಯಾವ್ ತಂತ್ರಾಂಶ ಬೇಕಿದೆಯೋ ಕೇಳಿ ನೋಡಿ, ತಟ್ಟನೆ ನಿಮ್ಮೆದುರಿಗೆ ತಂದಿಡತ್ತೆ "ಪೈರಸಿ ಭೂತ" ದಿಂದ ಮುಕ್ತವಾದ ಉತ್ತರಗಳನ್ನ.

ಅದು ಹೇಗೆ? ಮಾರ್ಕೆಟಲ್ಲಿ ಸಿಗುವ ಯಾವುದೇ softwareನಾ ನಾವು ಕೊಳ್ಳದೇ ನಕಲು ಮಾಡಿಕೊಂಡು ಬಳಸುವದನ್ನಲ್ಲವೇ ಪೈರಸಿ ಅನ್ನೋದು? ನಿಮ್ಮ ಮೇಲಿನ ಮಾತನ್ನು ತುಸು ಬಿಡಿಸಿ ಹೇಳ್ತಿರಾ?

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

omshivaprakash's picture

ಸಂಗಣ್ಣಾ, ಹೌದು, ನೀವು ಪೈರಸಿ ಬಗ್ಗೆ ಹೇಳಿದ್ದು ಸರಿ. ಆದರೆ ಲಿನಕ್ಸ್ನಲ್ಲಿ, GPL (ಜನರಲ್ ಪಬ್ಲಿಕ್ ಲೈಸೆನ್ಸ್) ಅಡಿಯಲ್ಲಿ ಸಹಸ್ರಾರು ಸ್ವತಂತ್ರ ತಂತ್ರಾಂಶಗಳು ಮುಕ್ತವಾಗಿ ಲಬ್ಯವಿವೆ. ನೀವು ನಿಮ್ಮ ದೈನಂದಿನ ಬಳಕೆಗೆ ಬೇಕಿರುವ ಅನೇಕ ತಂತ್ರಾಂಶಗಳನ್ನ ಬೇಗನೆ ಹುಡುಕುವ ಸೌಲಬ್ಯವೂ ಲಿನಕ್ಸ್ನಲ್ಲಿದೆ. FOSS ಇರುವಾಗ ಪೈರಸಿ ಯಾಕೆ ಮಾಡ್ಬೇಕು? ನಿಮ್ಮ ಪ್ರಶ್ನೆಗೆ ಸಂಪೂರ್ಣ ವಿವರಣೆಯನ್ನ ನನ್ನ ಮುಂಬರುವ ಲೇಖನಗಳಲ್ಲಿ ನೀಡ್ತೇನೆ.

ಧನ್ಯವಾದಗಳೊಂದಿಗೆ,
ನಿಮ್ಮ,
ಓಂ ಶಿವಪ್ರಕಾಶ
http://platonic.tech...

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

anivaasi's picture

ಓಂಶಿವಪ್ರಕಾಶ್,
ಚೆನ್ನಾಗಿದೆ! ನಿಮ್ಮ ವಿವರಣೆಯಿಂದ ಲಿನಕ್ಸ್ ಡಿ-ಮಿಸ್ಟಿಫೈ ಆದರಂತೂ ತುಂಬಾ ಒಳ್ಳೇದು. ನಿಮ್ಮ ಲಿನಸ್ ಟ್ರೋವಾಲ್ಡಿಸ್ ಬಗ್ಗೆಯೂ ಕೊಂಚ ಹೇಳಿ.

ಎದುರು ನೋಡುತ್ತಿರುತ್ತೇನೆ.

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

omshivaprakash's picture

ಖಂಡಿತವಾಗ್ಲೂ ಬರೀತೀನಿ ಸಾರ್, :)

ನಿಮ್ಮ,
ಓಂ ಶಿವಪ್ರಕಾಶ
http://platonic.tech...

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

shreekant.mishrikoti's picture

ಒಳ್ಳೇ ಕೆಲ್ಸ ಶುರು ಮಾಡಿದ್ದೀರಿ . ಮುಂದುವರೆಸಿ .
www.linux.org ತಾಣದಲ್ಲಿ ಮೂರು ಹಂತದ ಲಿನಕ್ಸ್ ಪಾಠಗಳಿವೆ . ಆಸಕ್ತರು ಓದಬಹುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

baktavarbaba's picture

ತುಂಬಾ ಧನ್ಯವಾದಗಳು ಲಿನಕ್ಸ್ ಬಗ್ಗೆ ಸ್ವಲ್ಪ ತಿಳಿಸಿದಕ್ಕೆ.....ಇನ್ನು ಹೆಚ್ಚು ಲಿನಕ್ಸ್ ಬಗ್ಗೆ ಹೇಳಿ... GNU General Public ಲೈಸೆನ್ಸ್ ಅಂದ್ರೆ ಏನು?
ನಿಮ್ಮ ಪ್ರೀತಿಯ
ಬಾಬಾ

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

omshivaprakash's picture

ಬಾಬಾ ಅವರೆ, ಲಿನಕ್ಸಾಯಣ -೩- ರಲ್ಲಿ ನಿಮ್ಮ ಪ್ರಶ್ನೆಗೆ ಉತ್ತರಿಸಲಿದ್ದೇನೆ :)

ಧನ್ಯವಾದಗಳೊಂದಿಗೆ,
ನಿಮ್ಮ,
ಓಂ ಶಿವಪ್ರಕಾಶ
http://platonic.tech...

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

smurthygr's picture

ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ. ಎಲ್ಲಾ ಬಿಟ್ಟಿ ಸಿಗುತ್ತೆ ಅಂದರೂ ಪೈರಸಿ ಮಾಲೇ ಬೇಕು ಅಂತ ಜನರಿಗೆ ಯಾಕೆ ಅನ್ಸುತ್ತೆ? ಲಿನಕ್ಸ್ ಬಳಸುವುದು ಈಗೀಗ ಬಹಳ ಸುಲಭ, GUI ವಿಂಡೋಸ್ ವಿಸ್ಟಾಕ್ಕಿಂತಲೂ ಚೆನ್ನಾಗಿದೆ - ಬೆರಿಲ್ ಅಥವಾ ಕಾಂಪಿಝ್ ಬಳಸಿದರೆ. ಇನ್ನು ಸ್ವಲ್ಪ ಉಪಯೋಗಿಸಿದ ಮೇಲೆ ಟೆಕ್ಸಟ್ ಕಮಾಂಡ್ ಗಳನ್ನು ಕಲೀತಾ ಬಂದರೆ ಕಂಪ್ಯೂಟರ್‌ನ ಪೂರ್ತಿ ಬಳಕೆ ಎಲ್ಲರಿಗೂ ಸಾಧ್ಯ. ಲಿನಕ್ಸ್‌ನಲ್ಲಿ ೪ ಅಥವಾ ಇನ್ನೂ ಹೆಚ್ಚು ಡೆಸ್ಕ್‌ಟಾಪ್ಗಳನ್ನು ಒಂದೇ ಮಾನಿಟರ್‌ನಲ್ಲಿ ಒಟ್ಟಿಗೇ ಬಳಸುವ ಸೌಲಭ್ಯವೂ ಅದ್ಭುತ! ವಿಂಡೋಗಳನ್ನು ಮಿನಿಮೈಸ್ / ಮ್ಯಾಕ್ಸಿಮೈಸ್ ಅಂತ ಪರದಾಡದೇ ಬೇರೆ ಬೇರೆ ಡೆಸ್ಕ್‌ಟಾಪ್ ಗಳಲ್ಲಿ ತೆರೆದು ಬೇಕಾದಂತೆ ಕೆಲಸ ಮಾಡಬಹುದು!

ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ

omshivaprakash's picture

ಮೂರ್ತಿಗಳೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಹೌದು, ಆದ್ರೆ ನಾವೆಲ್ಲ ಸೇರಿ ಲಿನಕ್ಸ್ ನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಇದರತ್ತ ನನ್ನ ಪುಟ್ಟ ಹೆಜ್ಜೆ. ನಿಮ್ಮ ಸಹಕಾರ ಕೂಡ ಅಗತ್ಯ. ನಿಮ್ಮ ಸಲಹೆಗಳನ್ನ್ ನೀಡ್ತಿರಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
http://platonic.tech...