November 1, 2009 - 10:22pm
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ...
ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ -
ಪಾರಿವಾಳ ಹೇಳಿದ್ದು…
ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ…
ಇಲ್ಲೇ ಸುತ್ತಾಮುತ್ತ ಅಡ್ಡಾಡಿ
ಒಂದಿಷ್ಟು ಮೇಯ್ದು…
ತಂಪಾದ ಗಾಳಿಯ ಸವಿದು
ಮನಸ್ಸೋ ಇಚ್ಚೆ ಸ್ವಚ್ಚಂದವಾಗಿ ಆಡೋದು…
ನಿಮಗಿದೆಲ್ಲಾ ಸಾಧ್ಯವೇ???
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಪಾರಿವಾಳದ ಜೊತೆಗೊಂದು ಸಂವಾದ
ಇದಕ್ಯಾರೋ ಹೀಗೆ ಬರೆದಿದ್ರು:
ಇತ್ತ ಹಾರಿರುವೆ
ಏಕಾಂಗಿ
ಮೆಲ್ಲನೆ ನಡೆನಡೆದು
ಇಲ್ಲಿ
ಹುಡುಕುತ್ತಿರುವೆ ಅಡಿಗಡಿಗೆ
ನನ್ನರಿವಿನ ಜಗತ್ತು,
ನನ್ನೊಲವಿನ ಗೂಡು,
ಆ ನಲಿವಿನ ಸೂರು,
ನನ್ನವರ ನಡುವೆ ನನ್ನದೇ ಮನೆ.
:-)
ಉ: ಪಾರಿವಾಳದ ಜೊತೆಗೊಂದು ಸಂವಾದ
:)
ಉ: ಪಾರಿವಾಳದ ಜೊತೆಗೊಂದು ಸಂವಾದ
ಸಾಧ್ಯವಿಲ್ಲ ನಿಜವಾಗಿಯೂ ನಿಮ್ಮಂತೆ ನಡೆದು ಹೋಗುವುದು ನಮಗೆ
ಬೇಕೆಂದಾಗ ಹಾರಿಹೋಗಲು ರೆಕ್ಕೆಗಳು ನಮಗಿಲ್ಲ ಇರುವಂತೆ ನಿಮಗೆ
ಅದು ಸಂವಾದ ಆಗಿರದೇ ಪಾರಿವಾಳದ ಸ್ವಗತವಾಗಿತ್ತು ಇದುವರೆಗೆ
ಸಂವಾದವಾಯ್ತು ನಾವುತ್ತರಿಸಿದ ಮೇಲೆ ಅದು ಅಲ್ಲಿ ಕೇಳಿದ ಪ್ರಶ್ನೆಗೆ
:)
-ಆಸು ಹೆಗ್ಡೆ