ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್
ಲಿನಕ್ಸಾಯಣ - ೪೭ - ಏನಿದು ಸ್ವತಂತ್ರ ತಂತ್ರಾಂಶ?
“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ.
ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವೃದ್ಧಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :
- ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೦).
- ಪ್ರೊಗ್ರಾಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೧).
ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ. - ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾದ್ಯವಾಗುತ್ತದೆ (ಸ್ವಾತಂತ್ರ್ಯ ೨).
- ತಂತ್ರಾಂಶಗಳನ್ನ ಅಭಿವೃದ್ಧಿ ಮಾಡುವ, ಮತ್ತು ಪರಿಷ್ಕರಿಸಿದ ಆವೃತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. (ಸ್ವಾತಂತ್ರ್ಯ ೩). ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
- omshivaprakash's blog
Printer-friendly version- Login or register to post comments
- 306 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ


RSS: