ಲಿನಕ್ಸಾಯಣ - ೪೨ - ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?
ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸಾಮಾನ್ಯವಾಗಿ ಕಾಣತ್ತೆ. ಅದಕ್ಕೆ ಉತ್ತರ ಅಂದ್ರೆ MPlayer ಬಳಸೋದು. ಇದು ಸುಲಭವಾಗಿ ಅನೇಕ ಬಗೆಯ ಮೀಡಿಯಾ ಫೈಲ್ಗಳನ್ನು ಪ್ಲೇ ಮಾಡುತ್ತ್ತೆ.
ಈಗಾಗಲೇ ಹಳೆಯ Mplayer ಇದ್ದು ಅದು ಕೆಲಸ ಮಾಡ್ತಿಲ್ಲ ಅಂದ್ರೆ Mplayer ವೆಬ್ ಸೈಟ್ ಗೆ ತೆರಳಿ, essentials ಕೋಡೆಕ್ ಡೌನ್ಲೋಡ್ ಮಾಡ್ಕೊಳ್ಳಿ. ನಂತರ ಅವನ್ನು /usr/lib/win32 ಗೆ ಕಾಪಿ ಮಾಡಿ ಮತ್ತೆ Mplayer ಶುರು ಮಾಡಿದರಾಯಿತು. ವಿಂಡೋಸ್ ಫೈಲ್ಗಳನ್ನು ಗ್ನು/ಲಿನಕ್ಸ್ ನಲ್ಲಿ ನೀವು ಪ್ಲೇ ಮಾಡ್ಲಿಕ್ಕೆ ಶುರುಮಾಡಬಹುದು.
- omshivaprakash's blog
Printer-friendly version- Login or register to post comments
- 356 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ


RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ - ೪೨
ಶಿವು,
ಅಂದ ಹಾಗೆ vlc ನು ಸಹ ಎಲ್ಲಾ ಬಗೆಯ ವೀಡಿಯೋ ಕಡತಗಳನ್ನು ಚಲಾಯಿಸಬಲ್ಲದು ಅಲ್ಲವೆ?
http://www.videolan....
ಉ: ಲಿನಕ್ಸಾಯಣ - ೪೨
ಹೌದು! vlc ವಿಂಡೋಸ್ ಮತ್ತು ಲಿನಕ್ಸ್ ಎರಡಲ್ಲೂ ಅತ್ಯುತ್ತಮವಾಗಿ ಕೆಲಸ ಮಾಡುತ್ತೆ. ಆದ್ರೆ ಅದೂ ಕೂಡ ಕೆಲ WMA ಫೈಲ್ ಗಳನ್ನು ಪ್ಲೇ ಮಾಡಲ್ಲ (WMA ಆವೃತ್ತಿ ೯). ಅದನ್ನ ನೋಡಿದ ನಂತರವೇ ನಾನು Mplayer ಟ್ರೈ ಮಾಡಿದ್ದು..