ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್
ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ.
ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ
- ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು.
- ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ ಎಲ್ಲ ಅಪ್ಡೇಟ್ ಗಳನ್ನು ನಿಮ್ಮ ಕಂಪ್ಯೂಟರ್ ಹೊಂದಿದೆ ಎನ್ನುವುದನ್ನು ನೋಡಿಕೊಳ್ಳಬೇಕು.
- ಹಾಗೆಯೇ, ಉಬುಂಟು ೯.೧೦ ಯ [ರಿಲೀಸ್ ನೋಟ್ಸ್] ಅಂದ್ರೆ ೯.೧೦ ದ ಟಿಪ್ಪಣಿ ಓದಿಕೊಳ್ಳುವುದು ಮುಖ್ಯ. ಈ ಟಿಪ್ಪಣಿ, ೯.೧೦ ನಲ್ಲಿರ ಬಹುದಾಗ ಸಾಮಾನ್ಯವಾಗಿ ಕಂಡು ಬಂದಿರುವ ತೊಂದರೆಗಳು ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ಮಾಹಿತಿ ಹೊಂದಿರುತ್ತದೆ.
೯.೦೪ ಗಿಂತ ಹಳೆಯ ಆವೃತ್ತಿ ಹೊಂದಿದ್ದರೆ, [ಅಪ್ಗ್ರೇಡ್ ನೋಟ್ಸ್ ]ಓದಿ, ಅಂತಹ ಆವೃತ್ತಿಗಳನ್ನು ಅಪ್ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.
ಉಬುಂಟು ಡೆಸ್ಕ್ ಟಾಪ್ ಗಳನ್ನು ನೆಟ್ವರ್ಕ್ ಮೂಲಕ ಅಪ್ಗ್ರೇಡ್ ಮಾಡುವುದು (ಶಿಫಾರಸ್ಸು ಮಾಡಲಾದ ಮಾರ್ಗ)
ನೆಟ್ವರ್ಕ್ ಮೂಲಕ ಉಬುಂಟು ಅಪ್ಗ್ರೇಡ್ ಮಾಡುವುದನ್ನು ಈ ಹಂತಗಳಿಂದ ತಿಳಿಯುತ್ತೀರಿ.
- System/Administration/Update Manager ಶುರು ಮಾಡಿ.
- Check ಬಟನ್ ಪ್ರೆಸ್ ಮಾಡಿ ಅಪ್ಡೇಟ್ ಗಳಿವೆ ನೋಡಿ.
- ಯಾವುದಾದರೂ ಅಪ್ಡೇಟ್ ಗಳಿದ್ದರೆ, ಅವನ್ನು Install Updates ಬಟನ್ ಪ್ರೆಸ್ ಮಾಡಿ, ಇನ್ಸ್ಟಾಲ್ ಮಾಡಿ. ಇದಾದ ನಂತರ Check ಬಟನ್ ಮತ್ತೊಮ್ಮೆ ಪ್ರೆಸ್ ಮಾಡಿ.
- ಹೊಸ ಆವೃತ್ತಿ ಇದ್ದರೆ ಅದರ ಬಗೆಗಿನ ಸಂದೇಶ ನಿಮಗೆ ಕಾಣಸಿಗುತ್ತದೆ.
- Upgrade ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಸ್ಕ್ರೀನ್ ಮೇಲೆ ಕಂಡು ಬರುವ ಸಂದೇಶಗಳನ್ನು ಪಾಲಿಸಿ.
ಬದಲಿ ಸಿ.ಡಿ/ಡಿ.ವಿ.ಡಿ ಮೂಲಕ ಅಪ್ಗ್ರೇಡ್ ಮಾಡುವುದು ಹೇಗೆ?
ನಿಮ್ಮ ಸಿಸ್ಟಂ ಇಂಟರ್ನೆಟ್ ಗೆ ಕನೆಕ್ಟ್ ಆಗಿಲ್ಲದಿದ್ದರೆ, ನೀವು ಈ ವಿಧಾನದ ಮೂಲಕ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳಬಹುದು.
- ಬದಲಿ ಇನ್ಸ್ಟಾಲೇಷನ್ ಸಿ.ಡಿ ಡೌನ್ಲೋಡ್ ಮಾಡಿಕೊಳ್ಳಿ
- ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಅನ್ನು ಸಿ.ಡಿಗೆ ಬರೆದು ಕೊಂಡ ನಂತರ ಅದನ್ನು ಅಪ್ಗ್ರೇಡ್ ಮಾಡಬೇಕಿರುವ ಕಂಪ್ಯೂಟರ್ ನ ಸಿ.ಡಿ ರೊಮ್ ಗೆ ಹಾಕಿ.
- ಅಪ್ಗ್ರೇಡ್ ಮಾಡುವ ಕಂಪ್ಯೂಟರ್ ನಲ್ಲೇ ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಇದ್ದರೆ, ಕೆಳಗಿನ ಕಮ್ಯಾಂಡ್ ಬಳಸಿ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳ ಬಹುದಾದ್ದರಿಂದ ನೀವು ಒಂದು ಸಿ.ಡಿ ಕೂಡ ಉಳಿಸಬಹುದು:
sudo mount -o loop ~/Desktop/ubuntu-9.10-alternate-i386.iso /media/cdrom0
- ನಿಮ್ಮ ಎದುರಿಗೊಂದು ಮೆಸೇಜ್ ಬಾಕ್ಸ ಬಂದು ನಿಮ್ಮ ಕಂಪ್ಯೂಟರಿನಲ್ಲಿರುವ ತಂತ್ರಾಂಶವನ್ನು ಅಪ್ಗ್ರೇಡ್ ಮಾಡುವ ಆಯ್ಕೆಯನ್ನು ನೀಡುತ್ತದೆ.
- ನಿಮ್ಮ ಸ್ಕ್ರೀನ್ ಮೇಲೆ ಕಂಡು ಬರುವ ಸಂದೇಶಗಳನ್ನು ಪಾಲಿಸಿ.
ನಿಮಗೆ ಮೇಲೆ ತೋರಿಸಿರುವ ಮೆಸೇಜ್ ಬಾಕ್ಸ್ ಕಾಣದಿದ್ದಲ್ಲಿ, Alt+F2 ಕಮ್ಯಾಂಡ್ ಬಳಸಿದ ನಂತರ ಕೆಳಗೆ ಕೊಟ್ಟಿರುವ ಕಮ್ಯಾಂಡನ್ನು ನಿಮ್ಮ ಮುಂದೆ ಬರುವ ಮೆಸೇಜ್ ಬಾಕ್ಸ ನಲ್ಲಿ ರನ್ ಮಾಡಿ.
gksu "sh /cdrom/cdromupgrade"
- omshivaprakash's blog
Printer-friendly version- Login or register to post comments
- 618 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
ಓಂ,
ಮಾಹಿತಿಗೆ ಧನ್ಯವಾದಗಳು..
ರಿಲೀಸ್ ನೋಟ್ಸ್ ಇನ್ನೂ ಓದಿಲ್ಲ.. ಓದಿ ೯.೧೦ಗೆ ಅಪ್ಗ್ರೇಡ್ ಮಾಡ್ಕೊಳ್ತೀನಿ..
-ಅನಿಲ್
ಉ: ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
ಅಂದಹಾಗೆ
sudo mount -o loop ~/Desktop/ubuntu-9.10-alternate-i386.iso /media/cdrom0
ಇಲ್ಲಿ ~/Desktop/ ಅನ್ನೋ ಜಾಗದಲ್ಲಿ ನೀವು ಎಲ್ಲಿ ಸಿಡಿ ಇಮೇಜನ್ನು ಡೌನ್ಲೋಡ್ ಮಾಡಿಕೊಂಡಿದ್ದೀರೋ ಅಲ್ಲಿನ ಹಾದಿ ಕೊಡಬೇಕು.
ಉದಾ: ನಿಮ್ಮ ಸಿಡಿ ಇಮೇಜು /media/my_path ನಲ್ಲಿದ್ದರೆ ಈ ಕೆಳಗಿನ ರೀತಿ ಕೊಡಿ.
sudo mount -o loop /media/my_path/ubuntu-9.10-alternate-i386.iso /media/cdrom0
ಉ: ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
http://www.theregist... - ??
ಉ: ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
ಈಗ ಫಿಕ್ಸ್ ಆಗಿದೆ. ಇದು "ಇದ್ದದ್ದು" ಬರೀ AMD 64 ಬಿಟ್ ಕಂಪ್ಯೂಟರ್ಗಳಿಗೆ ಮಾತ್ರ. ಧೈರ್ಯವಾಗಿ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಿ.
https://bugs.launchp...
ಉ: ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ
ಡೈರೆಕ್ಟ್ ಅಪ್ಡೇಟ್ ಮಾಡಿಕೊಂಡು ಉಬುಂಟು ೯.೧೦ ಆವೃತ್ತಿಯ ಅಲ್ಫಾ ರಿಲೀಸ್ ನಿಂದಲೇ ಉಪಯೋಗಿಸಿಕೊಂಡು ಬಂದಿದ್ದೇನೆ.. ಮೇಲೆ ಹೇಳಿದಂತೆ, ಉಬುಂಟುವಿನ ಎಲ್ಲ ಹಳೆಯ ಅಪ್ಡೇಟ್ ಇನ್ಸ್ಟಾಲ್ ಮಾಡಿ ಹೊಸ ಆವೃತ್ತಿಗೆ ದುಮುಕಿದ್ದರೆ ಈ ತಲೆನೋವು ಅವರಿಗೆ ಬಂದಿರಲಿಕ್ಕಿಲ್ಲ.. ext4, ಎನ್ಕ್ಲಿಪ್ಚನ್ ಗಳನ್ನು ನಾನು ಕೂಡ ಬಳಸುತ್ತಿದ್ದೇನೆ.. ಇಂಟರ್ನೆಟ್ ಫೋಲ್ ನಲ್ಲಿ ನೋಡುವುದಕ್ಕಿಂತ ಬಳಸಿ ನೋಡಿದರೆ ಚೆನ್ನ.. ಹಳೆಯ ಡ್ರೈವರ್ ಗಳನ್ನೆಲ್ಲಾ ತನ್ನೊಡನೆ ಇಟ್ಟುಕೊಂಡಿರುವ ಕಾರ್ಮಿಕ್ ಇಂತಹ ತೊಂದರೆ ಕೊಡಲಿಕ್ಕಿಲ್ಲ ಅನ್ನಿಸ್ತಿದೆ..