21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲಿನಕ್ಸಾಯಣ - ೫೪ - ಉಬುಂಟು ೯.೦೪ ನಲ್ಲಿ ಕನ್ನಡ - ೨

May 4, 2009 - 1:05pm
omshivaprakash

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ.

ಬರಹ ಕೀ ಬೋರ್ಡ್ ಲೇಔಟ್ ಬೇಕು ಅಂತಂದ್ರೆ scim-m17n ಅನ್ನೋ ಒಂದು ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಬೇಕು. ಅದಕ್ಕೆ ಮೊದಲು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಓಪನ್ ಮಾಡಿ.

ನಂತರ  m17n ಅಂತ ಸರ್ಚ್ ಮಾಡಿ. ಕೆಳಗೆ  Quick Search ನಲ್ಲಿ ಈ ಪದವನ್ನು ಹಾಕಿದ ತಕ್ಷಣ, ಇದಕ್ಕೆ ಸಂಬಂಧಪಟ್ಟ ಎಲ್ಲ ತಂತ್ರಾಂಶಗಳು ನಿಮ್ಮ ಮುಂದಿರುತ್ತವೆ. 

ಆದರ ಮೇಲೆ ಕ್ಲಿಕ್ ಮಾಡಿ "Mark for Installation" ಮಾಡಿದ ನಂತರ Apply ಬಟನ್ ಪ್ರೆಸ್ ಮಾಡಿ. 

ನನಗೆ ಇನ್ನೊಂದಿಷ್ಟು ತಂತ್ರಾಂಶಗಳು ಇದರೊಂದಿಗೆ ಬೇಕು ಅಂತ ಪ್ಯಾಕೇಜ್ ಮ್ಯಾನೇಜರ್ ಹಠ ಮಾಡೋದನ್ನ ನೀವು ಕಾಣಬಹುದು. Ok ಅಂತೇಳಿ. 

 ನಂತರ ಹೊಸದಾಗಿ ಏನನ್ನು ನಿಮ್ಮ ಸಿಸ್ಟಂಗೆ ಇನ್ಸ್ಟಾಲ್ ಮಾಡುತ್ತೆ, ಯಾವ ತಂತ್ರಾಂಶವನ್ನು ಕಿತ್ತು ಹಾಕುತ್ತೆ ಅಂತ ನಿಮಗೆ ಹೇಳುತ್ತೆ. Apply ಪ್ರೆಸ್ ಮಾಡಿ.

ಪ್ಯಾಕೆಜ್ಗಳು ಇನ್ಸ್ಟಾಲ್ ಆಗ್ಲಿಕ್ಕೆ ಶುರು ಮಾಡುತ್ತವೆ. 

ಸ್ವಲ್ಪ ಹೊತ್ತಿನ ನಂತರ ಅದೆಲ್ಲ ಮುಗಿಯುತ್ತೆ. ಕೆಳಗಿನ ಸಂದೇಶ ಕಂಡ ನಂತರ Close ಪ್ರೆಸ್ ಮಾಡಿ, ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆಗಿ. 

ಈಗ ಕನ್ನಡ ಟೈಪ್ ಮಾಡ್ಲಿಕ್ಕೆ ಪ್ರಯತ್ನ ಪಟ್ಟು ನೋಡಿ. SCIM ನಲ್ಲಿ ಮೊದಲು ನಿಮಗೆ Inscript ಮತ್ತು KGP  ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಈಗ ಅದರ ಜೊತೆ kn-inscript ಅನ್ನೊ ಹೊಸ ಕೀ-ಬೋರ್ಡ್ ಲೇಔಟ್ ಕಾಣಿಸುತ್ತೆ. ಅದನ್ನ ಉಪಯೋಗಿಸಿ ಬರಹ IME ನಲ್ಲಿ ಟೈಪ್ ಮಾಡಿದ ಹಾಗೇ ಟೈಪ್ ಮಾಡಬಹುದು. 

ಇಲ್ನೋಡಿ, ನಾನು ಟೈಪ್ ಮಾಡಿದ ಮೊದಲ ಸಾಲು. 

ಮುಂದಿನ ಭಾಗದಲ್ಲಿ, ನಿಮ್ಮ ಡೆಸ್ಕ್ಟಾಪ್ ಮೆನು, ಲಾಗಿನ್ ಸ್ಕ್ರೀನ್ ಇತ್ಯಾದಿಗಳನ್ನು ಕನ್ನಡದಲ್ಲಿ ಹೇಗೆ ನೋಡೋದು ಅನ್ನೊದನ್ನ ತಿಳಿದುಕೊಳ್ಳೋಣ. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vinayak.mdesai on
>>ಮುಂದಿನ ಭಾಗದಲ್ಲಿ ಕನ್ನಡದಲ್ಲಿ ನಿಮ್ಮ ಡೆಸ್ಕ್ಟಾಪ್ ಮೆನು, ಲಾಗಿನ್ ಸ್ಕ್ರೀನ್ ಇತ್ಯಾದಿಗಳನ್ನು ಹೇಗೆ ನೋಡೋದು ಅನ್ನೊದನ್ನ ತಿಳಿದುಕೊಳ್ಳೋಣ. ಆದಷ್ಟು ಬೇಗ ಬರಲಿ ಮುಂದಿನ ಭಾಗ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಮುಂದಿನ ಭಾಗ ಬಂದಿದೆ.. ಓದಿ ಒಮ್ಮೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sriranga on
ಉಬುಂಟು ಇನ್ಸ್ಟಾಲ್ ಮಾಡಿ ಕೊಂಡ ನಂತರ ಮೊದಲು ಕಾಣೋನಿಮ್ಮ ಚಿತ್ರ ಲಾಗಿನ್ ಸ್ಕ್ರೀನ್ ಮತ್ತು ಇನ್ಸ್ಟಾಲ್ ಇಕಾನ್ ತೋರಿಸುತ್ತಿದೆ. ಆದರೆ ಉಬಂಟು XPನಲ್ಲಿ ಇನ್ಸ್ಟಾಲ್ ಮಾಡಿದ ಮೇಲೆ ಲಾಗಿನ್ ಸ್ರ್ಕೀನ್ ನಲ್ಲಿ ಇನಾಸ್ಸ್ಟಾಲ್ ಇಕಾನ್ ("Install" icon) ತೋರಿಸುವುದಿಲ್ಲ(ಕಾಣಿಸುವುದಿಲ್ಲ). XPನಲ್ಲಿ "ADD/Remove" ನಲ್ಲಿ ಉಬಂಟು ತೋರಿಸುತ್ತೆ ಅದನ್ನು ಲ್ಲಿಕ್ ಮಾಡಿದರೆ ಉಬಂಟು uninstall ಆಗುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
XP ಮೇಲೆ ಇನ್ಸ್ಟಾಲ್ ಮಾಡೋದನ್ನ ಇಲ್ಲಿ ಹೇಳಿಲ್ಲ... ಅದರ ಜೊತೆಗೆ.. ಮೇಲಿನ ಚಿತ್ರದಲ್ಲಿ ಕೊಟ್ಟ ಚಿತ್ರವನ್ನ ಇನ್ಸ್ಟಾಲ್ ಮಾಡಿದ್ದು ವರ್ಚುಅಲ್ ಬಾಕ್ಸ್ ನಲ್ಲಿ ಚಿತ್ರಪುಟಗಳು ಚೆನ್ನಾಗಿ ಬರಲೆಂದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.