
ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವಿಧಾನಗಳನ್ನು ಮೊಂಡು ಮತ್ತು ಹಲ್ಲು ಕೊಳೆಸುವ ಬ್ಯಾಕ್ಟೀರಿಯಾಗಳನ್ನು ತೆಗೆಯಲು ಹುಡುಕುತ್ತಲೇ ಇದ್ದರು. ಈಗ ಲೈವ್ ಸೈನ್ಸ್ ಬ್ಯಾಕ್ಟೀರಿಯಾ-ಕೊಲ್ಲಬಲ್ಲ ಪ್ಲಾಸ್ಮಾ ಜೆಟ್ ಗಳು ಹಲ್ಲಿನ ದಂತಕ್ಷಯ ಇತ್ಯಾದಿಗಳನ್ನು ಓಡಿಸುವಲ್ಲಿ ಡ್ರಿಲ್ ಗಳ ಬದಲಿಯಾಗಿ ಉಪಯೋಗಿಸಲ್ಪಡುವವು ಎಂದು ತಿಳಿಸಿದೆ. ಸಂಶೋಧಕರು ಇತ್ತೀಚೆಗೆ ತಾನೆ ಟಾರ್ಚ್ ಮಾದರಿಯ, ಸಣ್ಣ ತಿಳಿ ನೇರಳೆ ಪ್ಲಾಸ್ಮಾ ಬೆಳಕಿನೆಳೆಯೊಂದನ್ನು ಹೊರಸೂಸುವ ಉಪಕರಣವೊಂದು ಬಾಯಿಯಲ್ಲಿಯ ದಂತಕ್ಷಯಕಾತಿ ಬ್ಯಾಕ್ಟೀರಿಯಾಗಳನ್ನು ಹಲ್ಲಿನ ಸ್ವರೂಪವನ್ನು ಬದಲಿಸದೆ ಕೊಲ್ಲಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಕೋಲ್ಡ್ ಪ್ಲಾಸ್ಮಾ ಜೆಟ್ ಗಳು (೧೦೦ ಪ್ಯಾರನ್ ಹೀಟ್ ಅಥವಾ ೩೮ ಡಿ. ಸೆಂಟಿಗ್ರೇಡ್) ಎಷ್ಟು ಕರಾರುವಕ್ಕಾಗಿ ಹಲ್ಲಿನ ರಚನೆಯನ್ನು ಬ್ಯಾಕ್ಟೀರಿಯಾ ಮುಕ್ತಕೊಳಿಸಬಲ್ಲವು ಎಂದು ತಿಳಿಯಲು, ಸಂಶೋದಕರು ಮನುಷ್ಯನ ದೇಹದಿಂದ ತೆಗೆದ ಹಲ್ಲುಗಳನ್ನು, ಬ್ಯಾಕ್ಟೀರಿಯಾಗಳೊಂದಿಗೆ ಬೆರೆಸಿ ಅವನ್ನು ಈ ಜೆಟ್ಗಳ ಮುಂದೊಡ್ಡಿ ಪರೀಕ್ಷಿಸಿದ್ದಾರೆ. ಒಂದು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿ ಇದರ ಫಲಿತಾಂಶ ಪರೀಕ್ಷಿಸಿದಾಗ ಕಂಡು ಬಂದ ವಿಷಯವೇನೆಂದರೆ, ಸೂಕ್ಷ್ಮಜೀವಿಗಳ ಬ್ಯಾಕ್ಟೀರಿಯಾ ಹರಡುವ ಕೋಶಗಳು ಹಾನಿಕೊಂಡಿದ್ದವು. ಪ್ಲಾಸ್ಮಾ ಜೆಟ್ ಚಾಲನೆಯಾದಾಗ ಅದು ಆಮ್ಲಜನಕವನ್ನು ಸುತ್ತಲಿನ ಗಾಳಿಯಲ್ಲಿ ಸೇರಿಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಕೋಶಗಳನ್ನು ಬೇದಿಸಿ ಬ್ಯಾಕ್ಟೀರಿಯಾ ಸುರಕ್ಷೆಯನ್ನು ಭೇದಿಸಬಲ್ಲ ಅಣುಗಳನ್ನು ಉತ್ಪಾದಿಸುತ್ತದೆ. ಸಂಶೋಧಕರ ಪ್ರಕಾರ ಈ ಸಂಶೋಧನೆ ಇನ್ನು ಮೂರರಿಂದಐದು ವರ್ಷಗಳಲ್ಲಿ ಡೆಂಟಿಸ್ಟ್ರಿಯ ಬಳಕೆಯಲ್ಲಿರುತ್ತದೆ.
ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ
February 7, 2010 - 8:07pm
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
ಪ್ರಿಯ ಓಂಶಿವಪ್ರಕಾಶ ಅವರೇ,
ಮೊನ್ನೆಯಷ್ಟೇ ಒಂದು ಹಲ್ಲು ಕೀಳಿಸಿಕೊಂಡ, ಇನ್ನೂ ನಾಲ್ಕು ಹಲ್ಲುಗಳನ್ನು ಕೀಳಿಸಿಕೊಳ್ಳಬೇಕಾಗಿರುವ, 'ನಿಮ್ಮ ಹಲ್ಲುಗಳ ಸ್ಥಿತಿ ಚಿಂತಾಜನಕವಾಗಿದೆ' ಎಂದು ಹೇಳಿಸಿಕೊಂಡಿರುವ ನಾನು, ಕಾತುರತೆಯಿಂದ ನಿಮ್ಮ ಬರಹ ಓದಿದೆ. ನನ್ನ ಹಲ್ಲುಗಳ ರಕ್ಷಣೆಗೆಂದೇ ಈ ಹೊಸ ತಂತ್ರಜ್ಞಾನ ಉದಿಸಿದೆಯೆಂಬ ಭಾವನೆ - ಆಸೆ ಮೂಡುತ್ತಲಿತ್ತು. ಅಷ್ಟರಲ್ಲಿ
<>
ಈ ತಂತ್ರಜ್ಞಾನ ವ್ಯಾಪಕ ಬಳಕೆಗೆ ಬರಲು ಇನ್ನೂ ಮೂರ್ನಾಲ್ಕೈದು ವರ್ಷಗಳು ಬೇಕಾಗಬಹುದೆಂದು ತಿಳಿದು ನಿರಾಶೆಯಾಯ್ತು.
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
ಶಾಸ್ತ್ರಿಯವರೆ,
ಕೊನೆಗೂ ನಿಮ್ಮವಲ್ಲನ್ನು ಕೀಳಿಸಿಯೇ ಬಿಟ್ಟಿರಾ...
http://sampada.net/b...
ಇನ್ನು ಉಳಿದ ನಾಲ್ಕು ಹಲ್ಲನ್ನು ಏನಾದರೂ ಕೀಳಿಸಬೇಡಿ...
ಜೆಟ್ಸ್ ವೇಗದಲ್ಲಿ ಬರಲಿದೆ.ಪ್ಲಾಸ್ಮಾ ಬಸ್ಸ್ ಅಲ್ವಲ್ಲಾ.. :)
-ಗಣೇಶ.
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
ತಮಾಷೆಗೆ
<<ಇನ್ನು ಉಳಿದ ನಾಲ್ಕು ಹಲ್ಲನ್ನು ...>>
ಏನ್ಸಾರ್! ಈಗಾಗಲೇ ಮುಂದಿನ ಹಲ್ಲುಗಳಿಲ್ಲದೇ ಸಾಕಷ್ಟು ನಗೆಪಾಟಲಿಗೆ ಈಡಾಗಿದ್ದೇನೆ. ನೀವು ಬೇರೆ, ನನಗೆ ಉಳಿದಿರೋದೇ ನಾಲ್ಕು ಹಲ್ಲುಗಳು ಅನ್ನೋ ಥರ ಹೇಳ್ತೀರಲ್ರೀ :-)
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
:)
ಉ: ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ...
ಅಯ್ಯೋ, ಈ ಸಂಶೋಧನೆ ಇನ್ನೈದು ವರ್ಷ ಮುಂಚೆ ಬಂದಿದ್ದರೆ, ನನ್ನ ಒಂದು ಹಲ್ಲು ಚೆನ್ನಾಗಿಯೇ ಉಳಿಯಬಹುದಿತ್ತು :( ಇರಲಿ, ಉಳಿದ ಹಲ್ಲುಗಳಿಗೆ ಉತ್ತಮ ಭವಿಷ್ಯವಿದೆ ಅಂತಾಯ್ತು. ಅದೇ ಸಮಾಧಾನ.