ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl ಅಂತ ಟೈಪ್ ಮಾಡಿದ್ರೆ ಏನಾಗತ್ತೆ? ಕೆಳಗಿನ Error ನಿಮಗೆ ಕಾಣಿಸುತ್ತೆ. 

-bash: sl: command not found

ಇದನ್ನ ತಪ್ಪಿಸಿ, ರೈಲ್ ಬಿಡಬೇಕಾ? ಹೌದ್ರಿ, ನಮ್ಮ ಅರವಿಂದ  ಇದಾನಲ್ಲ, ಮೊನ್ನೆ ಒಂದು ತಂತ್ರಾಂಶ ಇನ್ಸ್ಟಾಲ್ ಮಾಡಿ ನೋಡು ಅಂದ. ಯಾವ್ದು ಅಂದ್ರಾ?  sl ಅಂತ. ಅಂದ್ರೆ "ಸ್ಟೀಮ್ ಲೊಕೊಮೋಟೀವ್" (Steam Locomotive).

ಕೆಳಗೆ ಕೊಟ್ಟಿರುವ ಚಿತ್ರ ನಿಮಗೆ ಇದನ್ನ ಸಿನಾಪ್ಟೆಕ್ ಉಪಯೋಗಿಸಿ  ಹೇಗೆ ಇನ್ಸ್ಟಾಲ್ ಮಾಡಬಹುದು ಅನ್ನೋದನ್ನ ತೋರಿಸುತ್ತದೆ. ಇಲ್ಲಾಂದ್ರೆ

sudo aptitude install sl 

ಅನ್ನೋ ಕಮ್ಯಾಂಡನ್ನ ನಿಮ್ಮ ಟರ್ಮಿನಲ್ ನಲ್ಲಿ ರನ್ ಮಾಡಿ. ನಂತರ sl ಟೈಪ್ ಮಾಡಿ ನೋಡಿ. ಉಗಿಬಂಡಿ ಬರ್ಲಿಲ್ಲಾಂದ್ರೆ ಹೇಳಿ. (ಉಬಂಟು ಮತ್ತು ಇತರೆ ಡೆಬಿಯನ್ ಮೂಲದ ಓ.ಎಸ್ ಗಳಿಗೆ ಮಾತ್ರ ಬೇರೆಯದರಲ್ಲಿ ಇದನ್ನ ನಾನಿನ್ನೂ ಬಳಸಿ ನೋಡಿಲ್ಲ) 


Steam Locomotive

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ ಮಾಡಿ)

ಚಿತ್ರದ ಆಕರ: http://nicubunu.blog...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

vasudev's picture

ಶಿವು ಚೆನ್ನಾಗಿದೆ .. image ಹೇಗೆ ತಯಾರಿಸಿದಿರಿ ಎಂದು ಹೇಳುವಿರಾ ? gimp ಬಳಸಿದಿರೇನು?
ವಾಸುದೇವ ಕಾಮತ್

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ASHOKKUMAR's picture

Quote:
ಹೌದ್ರಿ, ನಮ್ಮ ಅರವಿಂದ ಇದಾನಲ್ಲ, ಮೊನ್ನೆ ಒಂದು ತಂತ್ರಾಂಶ ಇನ್ಸ್ಟಾಲ್ ಮಾಡಿ ನೋಡು ಅಂದ. ಯಾವ್ದು ಅಂದ್ರಾ? sl ಅಂತ. ಅಂದ್ರೆ "ಸ್ಟೀಮ್ ಲೊಕೊಮೋಟೀವ್"

ತಂತ್ರಾಂಶ ಈಗಾಗಲೇ ಲಭ್ಯವಿದೆ ಅಂತನ್ನಿಸುತ್ತದೆ

*ಅಶೋಕ್

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

omshivaprakash's picture

ಹೌದು ಡೆಬಿಯನ್ ಮತ್ತು ಉಬಂಟು ರೆಪಾಸಿಟರಿಗಳಲ್ಲಿ ಇದಾಗಲೇ ಲಭ್ಯವಿದೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

Aravinda's picture

ಹೌದು, ಇದು ಈಗಾಗಲೇ ಲಬ್ಯವಿದೆ, ಮೇಲಿನ ಚಿತ್ರ ಫೆಡೋರಾದಲ್ಲಿ ಹೇಗೆ ಇನ್ ಸ್ಟಾಲ್ ಮಾಡೋದು ಅಂತ ವಿವರಿಸಿದೆ, ಉಬಂಟು ಅಥವಾ ಡೇಬಿಯನ್ ಗೂ ಲಬ್ಯ ಇದೆ. ಇನ್ ಸ್ಟಾಲ್ ಮಾಡಿ ಟ್ರೈ ಮಾಡಿ. :)

ನಿಮ್ಮವನೇ,
ಅರವಿಂದ | Aravinda
http://aravindavk.in

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

Aravinda's picture

ಹೇಗೆ ಮಾಡೋದು ಅನ್ನೋದರ ಬಗ್ಗೆ ಗೊತ್ತಿಲ್ಲ. ನನಗೆ ಸಿಕ್ಕಿದ್ದು ಇಲ್ಲಿ http://nicubunu.blog...

ನಿಮ್ಮವನೇ,
ಅರವಿಂದ | Aravinda
http://aravindavk.in

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

vasudev's picture

ಹೊ ಹಾಗೋ ನಾನು ಇದನ್ನ(image) ಶಿವೂನೇ prepare ಮಾಡ್ದ ಅಂದುಕೊಂಡೆ :D
ವಾಸುದೇವ ಕಾಮತ್

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

omshivaprakash's picture

ಉಗಿಬಂಡಿ ಹತ್ತೋ ಬರದಲ್ಲಿ ಚಿತ್ರದ ಆಕರ ಓದ್ಲಿಕ್ಕೆ ಮರೆತಂತಿದೆ ;)

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

vasudev's picture

ಹೌದು ಶಿವು ಆಮೇಲೆ ಗಮನಿಸಿದೆ.. :D ನಿಮ್ಮ ಲೇಖನದ ತಲೆಬರಹದಲ್ಲಿ ಇದ್ದಂತೆ "ತಪ್ಪು ಮಾಡಿ ನಗುತ್ತಿದ್ದೇನೆ" ;)
ವಾಸುದೇವ ಕಾಮತ್