ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › omshivaprakash ರವರ ಬ್ಲಾಗ್

ಲಿನಕ್ಸಾಯಣ

ಲಿನಕ್ಸನ್ನು ಕನ್ನಡಿಗರಿಗೆ ವಿವರಿಸುವ ಸಣ್ಣ ಪ್ರಯತ್ನ

ಕನಸುಗಳ ನನಸಾಗಿಸುತ್ತ - ೨

June 10, 2008 - 8:23am — omshivaprakash

ಅದೊಂದು ಹೊಸ ಅನುಭವ. ದಿನನಿತ್ಯದ ಕೆಲಸಗಳನ್ನು ಬಿಟ್ಟು ಹೊಸ ಕಾರ್ ತಗೊಂಡು ರಸ್ತೆಗಿಳಿದ ದಿನ. ಚಿಕ್ಕಂದಿನಿಂದ ಕೈನಲ್ಲಿ ಪ್ಲಾಸ್ಟಿಕ್ ಕಾರ್ ಹಿಡ್ಕೊಂಡು ಡ್ರೈವ್ ಮಾಡಿದ್ದೋ ಮಾಡಿದ್ದು. ಕಾಲೇಜಿಗೆ ಬರೋವರ್ಗು ಬೈಕ್ ಕೂಡ ಕೈಗೆ ಬಂದಿರಲಿಲ್ಲ. ಪಿ.ಯು ನಲ್ಲಿ ಲೈಸೆನ್ಸ್ ಇಲ್ಲದೆ ೩ ನಿಮಿಷದಲ್ಲಿ ಅಪ್ಪನ ಸ್ಕೂಟರ್ ನಲ್ಲಿ ಮನೆಯಿಂದ ಕಾಲೇಜ್ ತಲುಪೋದು. ಪೋಲೀಸ್ ನವರ ಕಣ್ಣು ತಪ್ಪಿಸಿ ಪಕ್ಕದ ರೋಡ್ ನಲ್ಲಿ ಗಾಡಿ ಓಡಿಸ್ತಿದ್ದಿದ್ದು ನೆನಪಿಸಿ ಕೊಂಡ್ರೆ ಇನ್ನೂ ನಗು ಬರತ್ತೆ. ಡ್ರೈವಿಂಗ್, ಟ್ರಾಫಿಕ್ ಇವುಗಳ ಸಹವಾಸವೇ ಬೇಡ ಅಂತ ದಿನಾಲೂ ಬಿ.ಎಂ.ಟಿ.ಸಿ, ಇಲ್ಲ ಆಫೀಸಿನ ಕಾರ್ ಉಪಯೋಗಿಸ್ತಿದ್ದ ನಾನು ಇದ್ದಕ್ಕಿದ್ದಂತೆ ಡ್ರೈವಿಂಗ್ ಸ್ಕೂಲ್ ಸೇರಿ ಲರ್ನರ್ಸ್ ಲೈಸೆನ್ಸ್ ತಗೊಂಡು, ಡ್ರೈವಿಂಗ್ ಕಲಿತು, ನಾನೇ ಕಾರ್ ತಗೊಂಡಾಗ ನನ್ನೊಡಗೂಡಿ ನನ್ನ ಪರಿಚಯದ ಎಲ್ಲ ಆಪ್ತರಿಗೆ, ಕುಟುಂಬದವರಿಗೆ, ಸಹೋದ್ಯೋಗಿಗಳಿಗೆ ಎಲ್ಲರಿಗೂ ಆಶ್ಚರ್ಯ.

ಶೋರೂಮ್ ನಿಂದ ಗಾಡಿ ಆಫೀಸಿನವರೆಗೂ ತರ್ಲಿಕ್ಕೆ ಬೆಳಗ್ಗೆನೆ ಹೋದ್ರೂ ಅದು ಇದು ಚೆಕ್ ಮಾಡ್ತಾ ಮಧ್ಯಾನ್ಹವಾಗಿವಾಗಿ ಹೋಗಿತ್ತು. ಎಲ್ಲೂ  ಸ್ಕ್ರಾಚ್ ಇಲ್ಲ ಅಂತ ನೋಡ್ ಕೊಂಡು, ಎಲ್ಲೋ ಎನೋ ಸಣ್ಣ ದನ್ನ ಗಮನಿಸೋದ್ರೊಳಗೆ ನನ್ನ ಗೆಳೆಯನಿಗೆ ಆಫೀಸ್ ನಿಂದ ಕರೆ, ಅವನು ಹೊರಡ್ತಿದ್ದಾಂಗೆ ಕಾರು ರೆಡಿ. ಆದ್ರೆ ನಮ್ಮ ಕೆಲಸ ಆಗಿರಲಿಲ್ಲ. ಮತ್ತೆ ಅದನ್ನ ಶೋರೂಮಿನವನಿಗೆ ತೋರಿಸಿ, ಸಂಜೆ ಬಂದು ಕಾರ್ ತಗೋತೀನಿ ಅಂದು ಹೊರಟಿದ್ದು ಮತ್ತೆ ವಾಪಸ್ ಬಂದು ಕಾರನ್ನ ಕೈಗೆ ತಗೋಳೋವರ್ಗೂ ಸಮಾಧಾನ ಇಲ್ಲ. ಕಾರ್ ತಗೊಂಡಿದ್ದಾಯಿತು, ಇನ್ನ ಡ್ರೈವ್ ಮಾಡ್ಬೇಕಿತ್ತು ಬೇರಾರೂ ಇಲ್ಲ ನಾನೆ ಮಾಡ್ಬೇಕು. ಮನಸ್ಸು ಹಿಂಜರೀಲೇ ಇಲ್ಲ. ನನ್ನ ಜೊತೆ ಬಂದ ಸಹೋದ್ಯೋಗಿ ಕ್ಯಾಮರ ಕ್ಲಿಕ್ಕಿಸಿ (ಮೊದಲನೇ ಚಿತ್ರ ಹಾಕಿದ್ದೆನಲ್ಲ ಅವತ್ತು ಅವನೇ ತೆಗೆದಿದ್ದು) ಬಂದು (ಸ್ವಲ್ಪ ಹೆದರ್ಕೊಂಡೇನೆ) ನನ್ನ ಪಕ್ಕ ಕುಳಿತ. ಟ್ರಾಫಿಕ್ ಕೂಡ ಸಣ್ಣದಾಗಿ ಹೆಚ್ಚಾಗ್ತಿತ್ತು. ಯು ಟರ್ನ್ ತಗೊಂಡು ಸ್ವಲ್ಪ ಮುಂದೆ ಹೋದ್ಮೇಲೆ ನನ್ನ ಮೊದಲ (ಗಾಡಿ ತಗೊಂಡ್ಮೇಲಿನ ಮೊದಲು) ಟ್ರಾಫಿಕ್ ಸಿಗ್ನಲ್. ಅಲ್ಲಿ ಮುಂದೆ ಎಡಕ್ಕೆ ವಾಲಬೇಕು, ಸರಿ ನಿದಾನವಾಗಿ ಮುಂದುವರೆದೆ. ಕ್ಲಚ್ಚು, ಬ್ರೇಕು ಮತ್ತೆ ಸ್ಟಿಯರಿಂಗು ಎಲ್ಲ ಹತ್ತಿ ಮುಟ್ಟಿದಂತಹ ಅನುಭವ. ಡ್ರೈವಿಂಗ್ ಸ್ಕೂಲಿನ ಕಾರ್ ನೆನಪಿಗೆ ಬಂತು. ಅದರಲ್ಲಿ ಸಿಗ್ನಲ್ ಕ್ರಾಸ್ ಮಾಡೋದು ದೊಡ್ಡ ಕೆಲಸ. ಸುಸ್ತಾಗಿ ಬಿಡ್ತಿತ್ತು. ಈಗ ಎಲ್ಲ ಸಲೀಸು. ಪವರ್ ಸ್ಟಿಯರಿಂಗ್ ಇಷ್ಟು ಚೆಂದಗಿರತ್ತೆ ಅಂತ ಅನ್ನಿಸಿರ್ಲೇ ಇಲ್ಲ. (ಟೆಸ್ಟ್ ಡ್ರೈವ್ ಮಾಡಿದ್ದಾಗ ಕಂಪೆನಿಯ ಡ್ರೈವರ್ ನ ತಾಳ್ಮೆ ಪರೀಕ್ಷೆ ಮಾಡಿದ್ದೆ Smiling ಸ್ಟಿಯರಿಂಗ್ ಮೇಲೆ ಗಮನ ಕಡಿಮೆ ಇತ್ತು.) ಸ್ವಲ್ಪ ದೂರ ಬರೋದ್ರೊಳಗೆ, ಇದು ತುಂಬಾ ಸುಲಭ ಅನ್ನಿಸ್ತಾ ಹೋಗಿ ಆಫೀಸ್ ಗೆ ಬರೋದ್ರೊಳಗೆ ಎಲ್ಲ ಗೇರ್ ಗಳನ್ನ ಬಳಸಿಯಾಗಿತ್ತು. ರಸ್ತೆಯಲ್ಲಿ ಮಾತ್ರ ಯಾರ ಕೂಗೂ ಇಲ್ಲ. ಅಂದ್ರೆ ಸೇಫಾಗಿ ಹೋಗಿ ಸೇರಿದೆ ಅಂತಾಯ್ತು. ಆಫೀಸಿಗೆ ಬಂದ ನಂತರ ಮೊದಲು ಮಾಡಿದ ಕೆಲಸ ಸಂಪದದ ನನ್ನ ಕನ್ನಡ ಬ್ಲಾಗು ಮತ್ತು ಇಂಗ್ಲೀಷ್ ಬ್ಲಾಗ್ ನಲ್ಲಿ ನನ್ನ ಕಾರಿನೊಡನೆ ತೆಗೆದ ಚಿತ್ರವನ್ನ ಗಿಂಪ್ ನಲ್ಲಿ ಎಡಿಟ್ ಮಾಡಿ ಹಾಕಿದ್ದು.  ನಂತರ ಸಿಹಿ ಹಂಚಿ ತಿನ್ನೋ ಕಾರ್ಯಕ್ರಮ. ಇಲ್ಲಿಂದ ಮುಂದೆ ಮನೆ ಸೇರಿದಾಗ ರಾತ್ರಿ ೨ ಘಂಟೆ. ಅದರ ಬಗ್ಗೆ ಸಂಜೆ ಬರೀತೇನೆ. ನನ್ನ ಕೆಲಸ ಶುರು ಮಾಡಬೇಕಿದೆ.

  • ಅನುಭವ ಕಥನ
~.~
  • omshivaprakash ರವರ ಬ್ಲಾಗ್
  • Login or register to post comments
  • 451 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 10, 2008 - 12:52pm — vikashegde

ಉ: ಕನಸುಗಳ ನನಸಾಗಿಸುತ್ತ - ೨

vikashegde's picture

ಹಂಗೇ ವೀಕೆಂಡಲ್ಲಿ ಕಾರ್ ಒರೆಸಿದ್ದು, ತೊಳೆದಿದ್ದು ಎಲ್ಲಾ ಬರೀತೀರಾ ಅಂತ ಅನ್ಕೋತಿವಿ. Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು
  • ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಡ್ರಿಂಕ್ ಡ್ರೈವ್ !
  • ಹೂವಿನ ಹುಡುಗಿ....
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 127 ಅತಿಥಿಗಳು ಆನ್ಲೈನ್ ಇರುವರು.


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator