ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ?
ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ "Gnome Subtitles" ಅನ್ನೋ ತಂತ್ರಾಂಶ. ಇದರೊಡನೆ ನಿಮಗೆ ಬೇಕಾಗೋದು ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲಿಕ್ಕೆ ಉಪಯೋಗಿಸುವ SCIM .
ಗ್ನೋಮ್ ಸಬ್ ಟೈಟಲ್ - ಗ್ನು ಹುಟ್ಟು ಹಬ್ಬಕ್ಕೆ ತಯಾರಿಸಿದ ಸ್ಟೀಫನ್ ಫ್ರೈ ಅವರೊಂದಿಗಿನ ಸಂದರ್ಶನ "ಫ್ರೀಡಂ ಫೈ" ಅನ್ನ ಮೇಲಿನ ಚಿತ್ರದಲ್ಲಿ ಎಡಿಟ್ ಮಾಡಲಾಗುತ್ತಿದೆ.
ಇದನ್ನ ನಿಮ್ಮ ಲಿನಕ್ಸ್ ನಲ್ಲೂ ಇನ್ಸ್ಟಾಲ್ ಮಾಡ್ಕೋಬೇಕೆ? ಕೆಳಗಿನ ಕಮ್ಯಾಂಡನ್ನ ಟರ್ಮಿನಲ್ ನಲ್ಲಿ ರನ್ ಮಾಡಿ.
sudo aptitude install gnome-subtitles
ಕನ್ನಡಕ್ಕೆ ಅನೇಕ ವಿಷಯಗಳನ್ನ ಚಿತ್ರದ/ಡಾಕ್ಯುಮೆಂಟರಿ ವಿಡಿಯೋಗಳ ಮೂಲಕ ತರಲಿಕ್ಕೆ ಈ ತಂತ್ರಾಂಶ ಉಪಯೋಗಕ್ಕೆ ಬರಲಿ ಎಂದು ಆಶಿಸುತ್ತಾ.
- omshivaprakash's blog
Printer-friendly version- Login or register to post comments
- 694 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ಸಕತ್ !!
ಇದನ್ನ ತಿಳಿಸಿದ್ದಕ್ಕೆ ಧನ್ಯವಾದ ಓಂ
-
ವಸಂತ
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ನಂನಿ...
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ಶಿವು, ನೀನು srt ಅಂದಾಗ ಅನುವಾದಕ್ಕೆ ಯಾಕೆ srt ಬಳಸ್ತಿದಾನೆ ಎಂದು ಯೋಚನೆ ಮಾಡುವಂತಾಯಿತು. ಈಗ ವಿಷಯ ಕ್ಲಿಯರ್ ಆಯ್ತು :-)
ವೀಡಿಯೋ ಜೊತೆಗೂಡಿಸಿ ಒಮ್ಮೆ ಪೋಸ್ಟ್ ಮಾಡು! ಗ್ನು ಹುಟ್ಟುಹಬ್ಬದ ಸಮಯ ಸಂಗತಿ ಒಂದಷ್ಟು ಜನಕ್ಕೆ ತಿಳಿಯುವುದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
:)
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
Hi Omprakash,
Do you know how to write Kannada in emacs? Currently I use "Google Indic Transliterature" (http://www.google.co...) when I have to write something in Kannda. So I was wondering if emacs can be configured to write text in Kannada.
If you know about any other tools in Linux for using Kannada, please let me know.
Regards,
Shridhar
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ಶಿವ್, ಮಸ್ತ್.. ನನ್ನಿ,.. ಹೆಚ್ಚಿನವರು ವಿಂಡೋಸ್ ಬಳಸಿ ಗೊತ್ತಿರುವವರು, ಇದನ್ನು ವಿಂಡೋಸ್ ನಲ್ಲಿ ಹೇಗೆ ಮಾಡಬಹುದು, ತಿಳಿಸುತ್ತೀರ?..
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
ಕನ್ನಡವನ್ನ ಈಮ್ಯಾಕ್ಸ್ ನಲ್ಲಿ ಟೈಪಿಸಲಿಕ್ಕಾಗಲಿಕ್ಕಿಲ್ಲ. ಅದಕ್ಕೆ UTF8 ಸಪೋರ್ಟ್ ಇದೆಯಾ ನೋಡ ಬೇಕು.
ನೀವು ಇತರೆ ಗ್ನು ತಂತ್ರಾಂಶಗಳಲ್ಲಿ ಅರಾಮಾಗಿ ಟೈಪಿಸಬಹುದು. ನೀವು ಏನ್ ಮಾಡ್ಲಿಕ್ಕೆ ಟ್ರೈ ಮಾಡ್ತಿದೀರಾ ಅಂತ ಹೇಳಿ ಅದಕ್ಕೆ ಬೇಕಿರೋ ಮಾಹಿತಿ ಕೊಡುವ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
As I know emacs has support of UTF8 fonts. Also I had read somewhere that you can configure which font to be used in emacs. But I wanted to know if there is any "transliteration" support. Currently I use "baraha pad" or "google indic transliterature" for writing any thing in Kannada. So wanted to know if emacs can be of any help.
Basically I want to use emacs as a text editor for Kannada unicode.
Regards,
Shridhar