ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್- ನಿಮಗಿದು ತಿಳಿದಿದೆಯೇ?

sandisk.jpg

 Unetbootin - ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ?

 ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ?

ವರ್ಚುಅಲ್ ಬಾಕ್ಸ್ - ಸಂಪದದಲ್ಲಿ ಬರುತ್ತಿರೋ ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ ಇಷ್ಟೋತ್ತಿಗಾಗಲೇ ಇದರ ಹೆಸರು ನಿಮ್ಮ ಬಾಯಿಂದ ಹೊರಡಿರಬೇಕು.  ಹೊಸಬರಿಗೆ ಅದೂ ಸ್ವಲ್ಪ ಕಿರಿ ಕಿರಿ ಅನ್ನಿಸ್ಬಹುದು. ಹಾಗಿದ್ರೆ ಅಂತವರಿಗೆಲ್ಲ ಗು/ಲಿನಕ್ಸ್ ನ ಔತಣವನ್ನ ಹೇಗೆ ಬಡಿಸೋದು ಅನ್ನೊದು ಮುಂದಿನ ಪ್ರಶ್ನೆ. 

 ಇದಕ್ಕೆ ಒಂದು ಉತ್ತರ ಹೇಳ್ತೀರಾ?

-> ಲೈವ್ ಸಿ.ಡಿ ಉಪಯೋಗಿಸ್ಬಹುದಲ್ವಾ?

ಸಂಪದದ ಟೆಕ್ ತಂಡ ಹೊರತಂದ ಡೆಬಿಯನ್ ಚಿಗುರು ಕೂಡಾ ಲೈವ್ ಸಿ.ಡಿ ಯೇ. ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಯಲ್ಲಿ ಬೂಟ್ ಮಾಡಿದರಾಯಿತು. 

 ಇದು ಸ್ವಲ್ಪ ನಿಧಾನವಾಗಿ ಕೆಲ್ಸ ಮಾಡುತ್ತೆ ಅಂತ ಈಗ ನೀವೆಲ್ಲ ನನ್ನ ಮುಖ ನೋಡ್ತಿರ ಬೇಕಲ್ವಾ? ;) ಫ್ರೋಫೈಲ್ ಫೋಟೋದಲ್ಲಿದೀನಲ್ಲ ಅಲ್ಲೇ ಗುರಾಯಿಸ್ತಿರೋ ಹಾಗಿದೆ... ತಮಾಷೆಗೆ ಹೇಳಿದೆ. ಅದಕ್ಕೂ ಉತ್ತರ ಇದೆ ಸಮಾಧಾನವಾಗಿ ಮುಂದೆ ಓದಿ.

ಉಬುಂಟು, ಸಂಪದದ ಡೆಬಿಯನ್ ಚಿರುಗು ಇನ್ನೂ ಹತ್ತು ಹಲವಾರು ಗ್ನು/ಲಿನಕ್ಸ್ ಆವೃತ್ತಿಗಳು ಲೈವ್ ಸಿ.ಡಿ ರೂಪದಲ್ಲಿ ಇಂದು ನಿಮಗೆ ಸಿಗುತ್ತವೆ. ಅವನ್ನು ನಮ್ಮ ಯು.ಎಸ್.ಬಿ ಡ್ರೈವ್ ಗೆ ಹಾಕಿ ಕೊಂಡರೆ ಕಂಪ್ಯೂಟರ್ನಲ್ಲೇ ಕೆಲಸ ಮಾಡಿದಂತಾಗುತ್ತದೆಯಲ್ಲವೇ?  ಆದ್ರೆ ಅದನ್ನ ಹೇಗೆ ಮಾಡೋದು? ಬೇರೆಯವರಿಗೆ ಅವರ usb ಡ್ರೈವ್ ಗೆ ಲಿನಕ್ಸ್ ಹ್ಯಾಗೆ ಹಾಕಿಕೊಡೋದು ಅನ್ನೋದಕ್ಕೆ ಸರಿಯಾದ ಉತ್ತರ Unetbootin

 ಇದು ವಿಂಡೋಸ್/ಲಿನಕ್ಸ್ ಎರಡು ಆಪರೇಟಿಂಗ್ ಸಿಸ್ಟಂಗಳಿಗೂ ಲಭ್ಯವಿದ್ದು, ಉಪಯೋಗಿಸಲಿಕ್ಕೆ ತುಂಬಾ ಸರಳವಾಗಿದೆ. ಉಪಯೋಗಿಸಲು ಮಾಡಬೇಕಾದದ್ದಿಷ್ಟೇ -

೧) ಮೊದಲು ಇದನ್ನು ಡಾನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. 

೨)  ನಿಮ್ಮ ಬಳಿ ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇದ್ರೆ ನಿಮಗೆ ಬೇಕಾದ  ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಅನ್ನು ನೇರವಾಗಿ ಡೌನ್ಲೋಡ್ ಮಾಡಿಕೊಂಡು ಅದನ್ನು usb ಡ್ರೈವ್ ಗೆ ಇನ್ಸ್ಟಾಲ್ ಮಾಡಿಕೊಳ್ಳಬಹುದು. 

ಅಥವಾ

ನಿಮ್ಮ ಬಳಿಯಿರುವ ಉಬುಂಟು ಅಥವಾ ಚಿಗುರು ಸಿ.ಡಿಯನ್ನು ನಿಮ್ಮ ಹಾರ್ಡಿಸ್ಕ್ ಗೆ ಕಾಪಿ ಮಾಡಿಕೊಳ್ಳಬೇಕು ISO ಆಗಿ. ಇದನ್ನು ನಿಮ್ಮ ಸಿ.ಡಿ ಬರೆಯುವ ತಂತ್ರಾಂಶ ಮಾಡಬಲ್ಲದು. ಸಿ.ಡಿ ಕಾಪಿ ಮಾಡುವ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ. ಇದಾದ ನಂತರ  ಐ.ಎಸ್.ಓ ಇಮೇಜ್ ಎಲ್ಲಿದೆ ಆನ್ನೋದನ್ನು unetbootin ಗೆ ತಿಳಿಸಿ.

 ೩) ಯಾವ ಡ್ರೈವ್ ಗೆ ಇದನ್ನು ಬರೆಯಬೇಕು ಎಂದು ಹೇಳಿ. 

ಕೆಳಗಿನ ಚಿತ್ರದಲ್ಲಿ Type : ನತ್ತ ಕಣ್ಣಾಯಿಸಿ. ನಾನು USB ಡ್ರೈವ್ ಸೆಲೆಕ್ಟ್ ಮಾಡಿಕೊಂಡಿದ್ದು, ನನ್ನ ಲಿನಕ್ಸ್ ನಲ್ಲಿ ಅದು /dev/sdb1 (ಇದರ ಬಗ್ಗೆ ಚಿಂತೆಬೇಡ ಅ ಲಿಸ್ಟ ನಲ್ಲಿ ಇದು ನಿಮಗೆ ಸಿಗುತ್ತದೆ. ಎರಡು ಯು.ಎಸ್.ಬಿ ಡ್ರೈವ್ ಇದ್ದರೆ ಒಂದನ್ನು ತೆಗೆಯಿರಿ ಒಂದನ್ನು ಮಾತ್ರ ಉಪಯೋಗಿಸಿ. confusion ಬೇಡ ಅಂತ) ಆಗಿದೆ. 

unetbootin

 

ಇದೆಲ್ಲಾ ಮಾಡಿದ ನಂತರ ಓಕೆ ಬಟನ್ ಕ್ಲಿಕ್ ಮಾಡಿ. ಐ.ಎಸ್.ಓ ಉಪಯೋಗಿಸಿದ್ದರೆ ೨-೩ ನಿಮಿಷಗಳಲ್ಲೇ ನಿಮ್ಮ ಯು.ಎಸ್.ಬಿ ಡ್ರೈವ್ ರೆಡಿಯಾಗುತ್ತದೆ.

ಡಿಸ್ಕ್ ಅನ್ನು un-mount ಮಾಡಿ ನಿಮ್ಮ ಸಿಸ್ಟಂ ಅನ್ನು USB ಡೈವ್ ನೊಂದಿಗೆ ಬೂಟ್ ಮಾಡಬೇಕು.   ಸಿ.ಡಿ ಇಂದ ಸಿಸ್ಟಂ ಬೂಟ್ ಮಾಡ್ತೀರಲ್ಲಾ ಹಾಗೆ.

ಗ್ನು/ಲಿನಕ್ಸ್ ಯು.ಎಸ್.ಬಿ ಇಂದ ಬೂಟ್ ಆಗೊದನ್ನ ಹೀಗೆ ಕೆಲವೇ ಕ್ಷಣಗಳಲ್ಲಿ ನೀವು ಕಾಣಬಹುದು.

ನಿಮಗೆ ಇದರಲ್ಲಿ ಪ್ರಶ್ನೆಗಳಿದ್ದಲ್ಲಿ ಕೇಳಿ ಉತ್ತರ ಪಡೆದುಕೊಳ್ಳಿ. 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೫೮

keshav's picture

ಧನ್ಯವಾದಗಳು!
- ಕೇಶವ

ಉ: ಲಿನಕ್ಸಾಯಣ - ೫೮

amg's picture

ಶಿವು ಮಾಹಿತಿಗೆ ಧನ್ಯವಾದ. ಒ೦ದು ಸ೦ದೇಹ uNetbootin, ಬೂಟ್ ಆರ್ಡರ್ ನ ತಾನೇ ಬದಲಾಯಿಸುತ್ತೋ ಇಲ್ಲ ನಾವೇ ಬದಲಾಯಿಸಿಕೊಳ್ಳಬೇಕೋ?

-amg

ಉ: ಲಿನಕ್ಸಾಯಣ - ೫೮

omshivaprakash's picture

ಹೊಸ usb ಡೈವ್ಗೆ ಇನ್ಸ್ಟಾಲ್ ಮಾಡಿ ನೋಡಿದ್ದೇನೆ ಅಷ್ಟೇ.. ಆದ್ದರಿಂದ ನನಗೆ ಕಂಡು ಬಂದಿದ್ದು ಲೈವ್ ಸಿ.ಡಿಯ ಬೂಟ್ ಲೋಡರ್ (ಸ್ವಲ್ಪ ಮಾರ್ಪಾಡುಗಳೊಂದಿಗೆ) ಈಗಾಗಲೇ ಇರುವ ಲಿನಕ್ಸ್ ಇರುವ ಲ್ಯಾಪ್ಟಾಪ್ ನ ಅಥವಾ ಡೆಸ್ಕ್ಟಾಪ್ ಮೇಲೆ ಪ್ರಯೋಗ ಮಾಡಿಲ್ಲ.

ಉ: ಲಿನಕ್ಸಾಯಣ - ೫೮

ಶ್ರೀನಿಧಿ's picture

ಶಿವು ಪ್ರಶ್ನೆ ಬೇರೆ ಅನ್ಸುತ್ತೆ.

Boot Loader order ನೀವೇ BIOSನಲ್ಲಿ ಬದಲಾಯಿಸಿಕೊಳ್ಳಬೇಕು. ಸಾಮಾನ್ಯವಾಗಿ ಈಗಿರುವ ಎಲ್ಲಾ ಸಿಸ್ಟಂಗಳಲ್ಲೂ ಈ ಆಯ್ಕೆ ಇದೆ.

ಉ: ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್- ತಿಳಿದಿದೆಯೇ?

smurthygr's picture

ನನಗೊಂದು ಸಂದೇಹ. ಈ ರೀತಿ iso ಮಾಡಿಕೊಂಡು ಬಳಸಿದಾಗ, ನಮಗೆ mp3 ಇತ್ಯಾದಿ ಬಳಸಲು ಸಾಧ್ಯವೇ? ಉದಾಹರಣೆಗೆ ಉಬುಂಟುನಲ್ಲಿ mp3 ಬೇರೆ download ಮಾಡಿ ಸೇರಿಸಿಕೊಳ್ಳಬೇಕು, ಅದನ್ನೂ ಸೇರಿಸಿ iso ಮಾಡಿಕೊಳ್ಳಬೇಕಾ?

ಉ: ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್- ತಿಳಿದಿದೆಯೇ?

omshivaprakash's picture

ಮೂರ್ತಿಯವರೆ,

ಇಲ್ಲಿ ನಾವು iso ಮಾಡ್ತಿಲ್ಲ. ಹಾರ್ಡಿಸ್ಕ್ ಗೆ ಉಬುಂಟು ಹಾಕಿಕೊಳ್ಳುವಂತೆಯೇ ಇಲ್ಲಿ USB ಗೆ ಉಬುಂಟು ಇನ್ಸ್ಟಾಲ್ ಮಾಡಿಕೊಳ್ಳುತ್ತಿದ್ದೇವೆ. ಅದನ್ನೊಮ್ಮೆ ಬೂಟ್ ಮಾಡಿ, ಬೇಕಾದ ಸಾಪ್ಟ್ವೆರ್ ಇತ್ಯಾದಿ ಇನ್ಸ್ಟಾಲ್ ಮಾಡಿಕೊಂಡ ನಂತರ ಅದನ್ನೇ ಮುಂದೆ ಬಳಸ ಬಹುದು. ನೀವು ಸರಿಯಾಗಿ ಓದಿಕೊಳ್ಳಲಿಲ್ಲ ಅನ್ನಿಸ್ತಿದೆ. ಮತ್ತೊಮ್ಮೆ ಓದಿ ಬಿಡಿ.
ನಿಮ್ಮ,
ಶಿವು

ಉ: ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್

smurthygr's picture

2-3 ನಿಮಿಷದಲ್ಲೇ ಇನ್ಸ್ಟಾಲ್ ಆಗುತ್ತೆ ಅಂದಿದ್ದೀರಲ್ಲಾ, ಅದಕ್ಕೆ ನಾನು ತಪ್ಪು ತಿಳಿದುಕೊಂಡಿದ್ದೆ! ಯು.ಎಸ್.ಬಿ. ಗೇ ನಮಗೆ ಬೇಕಾದ ತಂತ್ರಾಂಶ ಎಲ್ಲಾ ಹಾಕಿಕೊಂಡು ಉಪಯೋಗಿಸುವಂತಾದರೆ ಸೂಪರ್! ಇನ್ನು ಇದರಲ್ಲಿ swap ಎಲ್ಲಾ ಹೇಗೆ? ನಾನೇ ಪ್ರಯೋಗಿಸಿ ನೋಡಿ ಅನಂತರ ಪ್ರಶ್ನಿಸುತ್ತೇನೆ.

ಉ: ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್

omshivaprakash's picture

ಸ್ವಾಪ್ ಇರೋದಿಲ್ಲ್.. ಯಾಕಂದ್ರೆ ಇಲ್ಲಿ ನಾವು ಉಪಯೋಗಿಸ್ತಿರೋದು ಲೈವ್-ಸಿ.ಡಿ ಟ್ಕ್ನಿಕ್ ಅನ್ನೇ... ಲೈವ್-ಸಿ.ಡಿ ಯನ್ನ ಸೀದಾ ನಿಮ್ಮ ಯು.ಎಸ್.ಬಿ ಗೆ ಕಾಪಿ ಮಾಡಿ ಕೊಡತ್ತೆ unetbootin..