ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ.

Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ್ಲಿ ಕಂಡಂತೆ ನಿಮಗೊಂದು ವಿಂಡೋ ನಿಮ್ಮ ಪರದೆಯ ಮೇಲೆ ಕಾಣಿಸ್ತದೆ.
ನಿಮಗೆ ಅಡ್ಮಿನಿಸ್ಟ್ರೆಟರ್ (ನಿರ್ವಾಹಕ) ನ ಹಕ್ಕುಗಳಿದ್ದರೆ (Administrative privileges) ನಿಮಗಿಸ್ಟ ಬಂದ ತಂತ್ರಾಂಶ ಇನ್ಸ್ಟಾಲ್ ಮಾಡಿಕೊಳ್ಳೋದು ಅಥವಾ ಬೇಡದವನ್ನ ಕಿತ್ತಾಕೋದು ಕೂಡ ಮಾಡ ಬಹುದು. ನಿಮ್ಮ ಕಂಪ್ಯೂಟರ್ನಲ್ಲಿ ಉಬುಂಟು ಇನ್ಸ್ಟಾಲ್ ಮಾಡ್ಕೊಂಡಾಗ ಮೊದಲಿಗೆ ಒಬ್ಬ ಯುಸರ್ ಸೇರಿಸ್ತೀರಲ್ಲ ಅದಕ್ಕೆ ಈ ಹಕ್ಕುಗಳು ಇರ್ತಾವೆ.


ನಿಮಗೆ ಇನ್ಸ್ತಾಲ್ ಮಾಡ್ಕೋ ಬೇಕಾದ ತಂತ್ರಾಂಶದ ಹೆಸರು ತಿಳಿದಿದ್ದರೆ, Search ಬಾಕ್ಸ್ ನಲ್ಲಿ ಹಾಕಿ ಹುಡುಕ ಬಹುದು ಕೂಡ. ಇಲ್ಲಾಂದ್ರೆ category ಲಿಸ್ಟ್ ನಲ್ಲಿ ನಿಮಗೆ ಬೇಕಾದ ತಂತ್ರಾಂಶ ಹುಡುಕಿ  ಸೆಲೆಕ್ಟ್ ಮಾಡಿ (ಚೆಕ್ ಬಾಕ್ಸ್ ನಲ್ಲಿ ಕ್ಲಿಕ್ಕಿಸುವುದರ ಮೂಲಕ), Apply Changes ಬಟನ್ ಪ್ರೆಸ್ ಮಾಡಿ

ನಾನು ಉದಾಹರಣೆಗೆ Font-Forge ಸೆಲೆಕ್ಟ್ ಮಾಡಿ Apply Change ಪ್ರೆಸ್ ಮಾಡಿದಾಗ ಮುಂದೆ ಕಾಣುವ ಚಿತ್ರ ಪರದೆಯ ಮೇಲೆ ಬಂತು.

ಇಲ್ಲಿ Apply ಕ್ಲಿಕ್ ಮಾಡಿ


ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ ಆಗಿದ್ದರೆ ಇಂಟರ್ನೆಟ್ ನಿಂದ ಬೇಕಿರುವ ತಂತ್ರಾಂಶಗಳು ಡೌನ್ ಲೋಡ್ ಆಗ್ತವೆ. ಇಲ್ಲಾಂದ್ರೆ ನಿಮ್ಮ ಉಬುಂಟು ಸಿ.ಡಿ ನ್ ಸಿ.ಡಿ ಡ್ರೈವ್ ನಲ್ಲಿರಿಸೋದನ್ನ ಮರೀ ಬೇಡಿ.

ಈಗ Font-Forge ಇನ್ಸ್ಟಾಲೇಷನ್ ಮುಗೀತು. ನೀವು ತಂತ್ರಾಂಶ ಉಪಯೋಗಿಸೋದೊಂದೆ ಬಾಕಿ.

ಕೆಲವು ಕ್ಲಿಷ್ಟಕವರಾದ ತಂತ್ರಾಂಶಗಳು ಇಲ್ಲಿಂದ ಇನ್ಸ್ಟಾಲ್ ಆಗದೇ ಇರಬಹುದು. ಅದರ ಬಗ್ಗೆ ಮತ್ತೊಮ್ಮೆ ತಿಳಿದು ಕೊಳ್ಳೋಣ.

 

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

prasannasp's picture

<<<ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ ಆಗಿದ್ದರೆ ಇಂಟರ್ನೆಟ್ ನಿಂದ ಬೇಕಿರುವ ತಂತ್ರಾಂಶಗಳು ಡೌನ್ ಲೋಡ್ ಆಗ್ತವೆ.>>>
ಆದರೆ ನನಗಿನ್ನೂ ಉಬುಂಟುವಿನಲ್ಲಿ ಇಂಟರ್ನೆಟ್ ಗೇನೆ ಕನೆಕ್ಟ್ ಮಾಡಲು ಆಗಿಲ್ಲ. modem driver ಇನ್ಸ್ಟಾಲ್ ಆಗುತ್ತಿಲ್ಲ. Adiministrator ನಿಂದ login ಆದರೂ ಉಬುಂಟು ಇರುವ ಪಾರ್ಟೇಶನ್ read only ಎಂದು ಇದೆ. ವಿವರವಾಗಿ ಮೇಲ್ ಕಳುಹಿಸುತ್ತೇನೆ. ಐಡಿ ಕೊಡಿ. Smiling

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
Laughing out loud ಎಂದಿಗೂ ನೀ ನಗುನಗುತಿರು Laughing out loud

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

omshivaprakash's picture

ಮುಂದಿನ ಆವೃತ್ತಿಯಲ್ಲಿ ನೆಟ್ವರ್ಕ್ ಗೆ ಕನೆಕ್ಟ್ ಆಗುವುದರ ಬಗ್ಗೆ ತಿಳಿಸ್ತೇನೆ. ಪತ್ರ ಹಾಕಿ ಇಲ್ಲ ಕಾಲ್ ಮಾಡಿ ನಿಮಗೆ ಸಹಾಯ ಮಾಡುವ. ಯಾವ ಮೊಡೆಮ್ ಇದೆ ಅನ್ನೋದನ್ನ ತಿಳಿಸೋದ್ ಮರೀ ಬ್ಯಾಡಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

smurthygr's picture

ಯಾಕೋ ಲೇಖನದ ಚಿತ್ರಗಳು ಕಾಣ್ತಾ ಇಲ್ಲ. firefox 3 beta 5 ಹಾಕಿಕೊಂಡದ್ದಕ್ಕೋ ಎನೋ? firefox ೨ ನಲ್ಲಿ ಪ್ರಯತ್ನಿಸಿ ನೋಡುತ್ತೇನೆ.

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

smurthygr's picture

ಈಗ ನೋಡಿದರೆ firefox2 ಕೂಡಾ firefox3 beta5 ಆಗಿಬಿಟ್ಟಿದೆ! ಹೇಗಾಯ್ತೋ ಗೊತ್ತಾಗ್ತಿಲ್ಲ! ವೈರಸ್? ಸುಮಾರು ದಿನ ಎರಡೂ ಬೇಕಾದಾಗ ಬರ್‍ತಾ ಇದ್ದವು. ಈಗ beta uninstal ಮಾಡಿ ಪುನಃ firefox2 ಹಾಕಲಿಕ್ಕಾಗುತ್ತಾ ಅಂತ ನೋಡಬೇಕು.
ಇರಲಿ, ವಿಷಯಕ್ಕೆ ಬಂದರೆ - ಚಿತ್ರಗಳು IE6ಲ್ಲಿ ಕಾಣ್ತಾ ಇವೆ. firefoxನದ್ದೇ ತೊಂದರೆ, ಯಾಕೋ?

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

smurthygr's picture

ಇನ್ನೂ ವಿಚಿತ್ರ, ಈ ಪ್ರತಿಕ್ರಿಯೆಗಳನ್ನು ಹಾಕಿದ ಮೇಲೆ firefoxನಲ್ಲೂ ಚಿತ್ರಗಳು ಬಂದಿವೆ! ಎಲ್ಲಾ ಮಾಯೆ!

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

omshivaprakash's picture

ನಿಮ್ಮ ಬ್ರೌಸರ್ನ ಕ್ಯಾಶ್ (Cache) ಖಾಲಿ ಮಾಡಿ ನೋಡ್ಬೇಕಿತ್ತು. Tools ಮೆನು ನಲ್ಲಿ Clear Private Data ಆಫ್ಚನ್ ಇದೆ ನೋಡಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

Aravinda's picture

ನೀವು ಫೈರ್ ಫಾಕ್ಸ್ 2 ಮತ್ತು 3 ಎರಡನ್ನೂ ಒಟ್ಟಿಗೆ ಹಾಕಿಕೊಳ್ಳಬಹುದು, ಆದರೆ ಎರಡನ್ನೂ ಒಟ್ಟಿಗೆ ರನ್ ಮಾಡಲಾಗುವುದಿಲ್ಲ. ಅಂದರೆ ನೀವು ಫೈರ್ ಫಾಕ್ಸ್ 2 ರನ್ ಮಾಡುತ್ತಿದ್ದಾಗ ಫೈರ್ ಫಾಕ್ಸ್ 3 ಓಪನ್ ಮಾಡಿದರೆ ಮತ್ತೊಂದು ಫೈರ್ ಫಾಕ್ಸ್ 2 ಓಪನ್ ಆಗುತ್ತೆ. ಅದೇ ತರಹ 3 ನೇ ಆವ್ರುತ್ತಿ ಓಪನ್ ಆಗಿದ್ದಾಗ 2ನೇ ಆವ್ರುತ್ತಿ ಓಪನ್ ಮಾಡಲು ಪ್ರಯತ್ನಿಸಿದರೆ ಮೊದಲು ಓಪನ್ ಆಗಿದ್ದ ಫೈರ್ಫಾಕ್ಸ್ ಓಪನ್ ಆಗುತ್ತೆ (3ನೇ ಆವ್ರುತ್ತಿ).
ಇದೇ ಸಮಸ್ಯೆಯಾ ತಿಳಿಸಿ.

ನಿಮ್ಮವನೇ,
ಅರವಿಂದ
http://www.belaku.net

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

Sunil Jayaprakash's picture

ಇಲ್ಲ ಅರವಿಂದ, ಫೈರಫಾಕ್ಸ್ ೨ ಮತ್ತು ಫೈರಫಾಕ್ಸ್ ೩ ಎರಡನ್ನೂ ಒಟ್ಟಿಗೆ ಓಡಿಸಲೂ ಕೂಡ ಸಾಧ್ಯವಿದೆ. ಗೆಳೆಯರೆ, ಹೀಗೆ ಮಾಡಿ. ನಿಮ್ಮ ಸಿಸ್ಟಮ್ಮಿನಲ್ಲಿರುವ ಫೈರಫಾಕ್ಸ್ ಎಕ್ಸಿಕ್ಯೂಟಬಲ್ಲುಗಳಿಗೆ ಈ ಕೆಳಗಿನ ಆರ್ಗ್ಯುಮೆಂಟುಗಳನ್ನು ಕಳಿಸಿ.

/firefox.exe -no-remote -P firefox2profile

/firefox.exe -no-remote -P firefox3profile

ಮೊದಲ ಬಾರಿಗೆ ಈ ರೀತಿ ಆರ್ಗ್ಯುಮೆಂಟ್ ಸೇರಿಸಿ, ಫೈರಫಾಕ್ಸನ್ನು ಓಡಿಸಿದಾಗ, ಪ್ರೊಫೈಲ್ ಕ್ರಿಯೇಟ್ ಮಾಡಲು ಕೇಳತ್ತೆ. ಆಗ ಕ್ರಮವಾಗಿ, firefox2profile ಹಾಗು firefox3profile ಹೆಸರಿನ ಪ್ರೊಫೈಲುಗಳನ್ನು ಕ್ರಿಯೇಟ್ ಮಾಡಿಕೊಳ್ಳಿ. ಮುಂದಿನ ಬಾರಿಯಿಂದ ಮತ್ತೊಮ್ಮೆ ಈ ಪ್ರೊಫೈಲ್ ಕ್ರಿಯೇಟ್ ಪ್ರಾಂಪ್ಟ್ ಬರಲ್ಲ.

ಕೊಕೊ (ಕೊನೆಯ ಕೊಸರು)
೧. ಯೂಶುವಲಿ, ವಿಂಡೋಸಲ್ಲಿ (firefox.exe) ಅಥವಾ *ನಿಕ್ಸ (firefox) ಸಿಸ್ಟಮ್ಮುಗಳಲ್ಲಿ, ಫೈರಫಾಕ್ಸಿಗೆ ಶಾರ್ಟಕಟ್ಟುಗಳು(ಸಾಫ್ಟಲಿಂಕ್) ಕ್ರಿಯೇಟ್ ಆಗಿರತ್ತೆ. ಆ ಶಾರ್ಟುಕಟ್ಟುಗಳನ್ನು ಎಡಿಟ್ ಮಾಡಿ, ಅವುಗಳಿಗೆ ಈ ಮೇಲಿನ ಆರ್ಗ್ಯುಮೆಂಟುಗಳನ್ನು ಸೇರಿಸಿಬಿಡಿ. ಆಗ ಪದೇ ಪದೇ ಆರ್ಗ್ಯುಮೆಂಟುಗಳನ್ನು ಪಾಸೋದು ತಪ್ಪತ್ತೆ.
೨. ಮೇಲೆ ತಿಳಿಸಿದ ಪ್ರೊಫೈಲ್ ಹೆಸರು ಸಜೆಸ್ಟೀವ್ ಅಸ್ಟೇ. ನೀವು ನಿಮ್ಮ ನೆಚ್ಚಿನ ಹೆಸರು ನೀಡಬಹುದು.

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

smurthygr's picture

ಹೌದು, ಹಾಗೇ ಆಗಿತ್ತು. firefox3 ನಿಲ್ಲಿಸಿದ ಮೇಲೆ firefox2 ಬಂತು. ಚಿತ್ರ ಬರದಿರಲು ಕಾರಣ ನಿಧಾನದ ಅಂತರ್ಜಾಲ ಇರಬಹುದೇನೋ? (broadband ಆದರೂ) ಕೆಲವೊಮ್ಮೆ ತುಂಬಾ ನಿಧಾನವಾಗಿರುತ್ತೆ. ಅಥವಾ login ಆಗದೆ ಸಂಪದ ಜಾಲಾಡಿದರೆ (browse ಮಾಡಿದರೆ) ಹೀಗಾಗುತ್ತೋ ಎನೋ?
ವಿಷಯ ತಿಳಿದ ಮೇಲೆ firefox ಎರದೂ ಆವೃತ್ತಿಗಳನ್ನು ಒಟ್ಟಿಗೇ ಓಡಿಸುವ ಅವಶ್ಯಕತೆಯೇನೂ ಇಲ್ಲ. ಆದರೂ ಹೇಗೆ ಓಡಿಸಬಹುದು ಅಂತ ತಿಳಿಸಿದ್ದಕ್ಕೆ ನನ್ನಿ!

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

ಶ್ರೀನಿವಾಸ ವೀ. ಬ೦ಗೋಡಿ's picture

ಶರಣು ಶಿವು ಅವರಿಗೆ. ಲೇಖನ ಚೆನ್ನಾಗಿದೆ.
ನಿನ್ನೆ ತಾನೆ ಉಬುಂಟು ಹಾಕಿಕೊಂಡು ಕಲಿತಿದ್ದೀನಿ. ಕೆಲವೊಂದು ಸಂದೇಹಗಳಿವೆ.
೧. ವಿಂಡೋಸ್‌ನಲ್ಲಿ exe, msi ತರ, ಉಬುಂಟುನಲ್ಲಿ ಇನ್‌ಸ್ಟಾಲೆಬಲ್ ಫೈಲ್ ಎಕ್ಸ್‌ಟೆನ್ಶನ್ ಏನು?
೨. dosbox ಹಾಕಿಕೊಳ್ಳಲು dosbox-0.72.tar.gz.gz ಡೌನ್‌ಲೋಡ್ ಮಾಡಿದೆ. ಈಗ ಮುಂದೆ ಏನು ಮಾಡಬೇಕು?

ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್

omshivaprakash's picture

ನಮಸ್ಕಾರ,

೧. ವಿಂಡೋಸ್‌ನಲ್ಲಿ exe, msi ತರ, ಉಬುಂಟುನಲ್ಲಿ ಇನ್‌ಸ್ಟಾಲೆಬಲ್ ಫೈಲ್ ಎಕ್ಸ್‌ಟೆನ್ಶನ್ ಏನು?

.deb ಉಬುಂಟುವಿನ ಇನ್ಸ್ಟಾಲಬಲ್ ಫೈಲ್ ಎಕ್ಸ್ಟೆನ್ಷನ್.

೨. dosbox ಹಾಕಿಕೊಳ್ಳಲು dosbox-0.72.tar.gz.gz ಡೌನ್‌ಲೋಡ್ ಮಾಡಿದೆ. ಈಗ ಮುಂದೆ ಏನು ಮಾಡಬೇಕು?

ಮೊದಲು ನೀವಿದನ್ನ Extract ಮಾಡಿ, ನಂತರ ಅದರಲ್ಲಿರುವ README ಫೈಲ್ ನೋಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳ ಬೇಕಾಗುತ್ತೆ.

ನಿಮಗೆ ಇದು ಕಿರಿ ಕಿರಿ ಎನಿಸಿದರೆ, ಕೆಳಗಿನ ಕಮ್ಯಾಂಡನ್ನ ನಿಮ್ಮ ಉಬುಂಟುವಿನ ಟರ್ಮಿನಲ್ ನಲ್ಲಿ ರನ್ ಮಾಡಿ, ಇಂಟರ್ನೆಟ್ ಇದ್ದರೆ ಡಾಸ್ಬಾಕ್ಸ್ ಸುಲಭವಾಗಿ ಇನ್ಸ್ಟಾಲ್ ಆಗತ್ತೆ.

sudo aptitude install dosbox

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

Syndicate content