ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಪರಿಚಯ

ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)

ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ಫೈರ್ಫಾಕ್ಸ್ (firefox) ಬ್ರೌಸರ್ ಚಾಲೆಂಜ್

ನನ್ನ ಫೈರ್ಫಾಕ್ಸ್ ಬ್ರೌಸರ್ ತೆಗೆದ್ರೆ ಸರ್ರ್ ಅಂತ ೭೦-೮೦ ಟ್ಯಾಬ್ಗಳು ಲೋಡ್ ಆಗ್ಲಿಕ್ಕೆ ಶುರು ಮಾಡ್ತಾವೆ. ಇವತ್ತಂತೂ ೧೦೦ ದಾಟಿತ್ತು.. ನಿಮಗೂ ಇಷ್ಟೇಲ್ಲಾ ಟ್ಯಾಬ್ (tab) ಓಪನ್ ಮಾಡ್ಲಿಕ್ಕೆ ಸಾಧ್ಯ ಆಗಿದ್ಯಾ? ನಿಮ್ಮ ಬ್ರೌಸರ್ನಲ್ಲಿ ಅಂತ. ಫೈರ್ ಫಾಕ್ಸ್ ಉಪಯೋಗಿಸೋ ಕೆಲವರಿಗೆ ಅದು ಕೆಲವುಸಲ ಕಿರಿಕಿರಿ ಅನ್ನಿಸಿರಬಹುದು. ಅದನ್ನ ಹ್ಯಾಗೆ ಸರಿ ಪಡಿಸ್ಕೊಂಡ್ರಿ ಅಂತ ಹೇಳ್ತೀರಾ? ಇಲ್ಲಾ ಇನ್ನೂ ಇಷ್ಟು ಟ್ಯಾಬ್ ತಗೀಲಿಕ್ಕೆ ಸಾಧ್ಯಾನೇ ಇಲ್ಲಾ ಅಂತ ಚರ್ಚೆಗಿಳಿಯೋರ್ಯಾರಾದ್ರೂ ಇದೀರಾ? ಈ ವಿಡಿಯೋ ನೋಡಿ. ನನ್ನ ಸಿಸ್ಟಂ ನಲ್ಲಿರೋ ಫೈರ್ಫಾಕ್ಸ್ ಟ್ಯಾಬ್ಗಳನ್ನು ಇಲ್ಲಿ ಕಾಣಬಹುದು.

ಫೈರ್ಫಾಕ್ಸ್ ಆಪ್ಟಿಮೈಜ್ (optimize) ಮಾಡೋದು ಹ್ಯಾಗೆ ಅಂತ ಮುಂದೆ ತಿಳಿಸ್ತೀನಿ.

Your rating: None Average: 5 (1 vote)