ಈಗಿನಂತೆ 5 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನ್ಯಾನೋ ಕಥೆಗಳು
shanbhag7's picture
ವಿ.ಸುಮಂತ ಶ್ಯಾನುಭಾಗ್
06
Nov
2009
ಪುಟ

1) "ಕರ್ತವ್ಯಂ ದೈವಮಾಹ್ನಿಕಂ "...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,318
ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ...
Chamaraj's picture
ಚಾಮರಾಜ ಸವಡಿ
29
Dec
2009
ಪುಟ

...

ಪ್ರತಿಕ್ರಿಯೆಗಳು: 22
ಹಿಟ್ಸ್ : 1,845
ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ
addoor's picture
ಅಡ್ಡೂರು ಕೃಷ್ಣ ರಾವ್
17
Oct
2011
ಲೇಖನ

ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ...

ಪ್ರತಿಕ್ರಿಯೆಗಳು: 14
ಹಿಟ್ಸ್ : 698
ಸುನೀತ ನೆನಪುಗಳಲ್ಲಿ ಅಶ್ವಥ್‌ ಜೀವಂತ
Chamaraj's picture
ಚಾಮರಾಜ ಸವಡಿ
29
Dec
2009
ಪುಟ

...

ಪ್ರತಿಕ್ರಿಯೆಗಳು: 27
ಹಿಟ್ಸ್ : 1,973
ಮನೆ ಮದ್ದು (೨) - ಅಮೃತ ಬಳ್ಳಿ
rajalaxmi's picture
ರಾಜಲಕ್ಷ್ಮಿ
18
Oct
2011
ಲೇಖನ

       ...

ಪ್ರತಿಕ್ರಿಯೆಗಳು: 9
ಹಿಟ್ಸ್ : 397
ಉಡುಪಿ ಕೃಷ್ಣನ ದರ್ಶನ
rajeshnaik111's picture
09
Jun
2010
ಪುಟ

...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,379
ತೀರ ಸಾಮಾನ್ಯವಾದ ತೆರೆದಿದೆ ಮನೆ ಓ ಬಾ ಅತಿಥಿ ಕವನವನ್ನು ಕುರಿತು
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
22
Jan
2006
ಬ್ಲಾಗ್ ಬರಹ
ಕೆಲವು ದಿನಗಳ ಹಿಂದೆ ಸಂಪದದ ಓದುಗರೊಬ್ಬರು ಕುವೆಂಪು ಅವರ ಈ ಕವಿತೆಯ ಕೆಲವು ಪದಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಆಗ ಕವಿತೆ ಕೈಗೆ ಸಿಕ್ಕಿರಲಿಲ್ಲ, ಸಿಕ್ಕ ಮೇಲೆ ನಾನು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,748
ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
26
May
2006
ಪುಟ
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,639
ಶ್ರೀಕಾಂತ ಕೃತಿ ಸೌರಭ
hamsanandi's picture
ಹಂಸಾನಂದಿ
28
Nov
2009
ಪುಟ

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,078
ಬೇಸಿಗೆ
hpn's picture
ಹರಿ ಪ್ರಸಾದ್ ನಾಡಿಗ್
05
May
2006
ಬ್ಲಾಗ್ ಬರಹ

ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ!

ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,559

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಲಿನಕ್ಸಾಯಣ - ೨೩ - ಬುದ್ದಿವಂತರಿಗೆ ಮಾತ್ರ - ಟೆಸ್ಟ್ ಡಿಸ್ಕ್(testdisk) - ಗ್ನು ಪಾರ್ಟೀಷನ್ ರಿಕವರಿ ಟೂಲ್

ಲಿನಕ್ಸಾಯಣ - ೨೩ - ಬುದ್ದಿವಂತರಿಗೆ ಮಾತ್ರ - ಟೆಸ್ಟ್ ಡಿಸ್ಕ್(testdisk) - ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ.

ಮೊನ್ನೆ ಹಾರ್ಡಿಸ್ಕ್ ಪಾರ್ಟೀಷನ್ ಮಾಡಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಲಿಕ್ಕೆ ಹೊರಟ ಗೆಳೆಯನೊಬ್ಬ ಮಾಡಿದ ಸಣ್ಣ ತಪ್ಪೊಂದು ಅವನ ಎಲ್ಲ ಪಾರ್ಟೀಷನ್ ಗಳನ್ನ "ಕಾಣದಂತೆ ಮಾಯ ಮಾಡಿತ್ತು". ಇದು ನನಗೂ ೫-೬ ವರ್ಷಗಳ ಹಿಂದೆ ಅನುಭವಕ್ಕೆ ಬಂದ ವಿಷಯ. ಆಗ ಏನೇನೋ ಸಾಫ್ಟ್ವೇರ್ಗಳನ್ನ ಡೌನ್ ಲೋಡ್ ಮಾಡಿ ಡಿಸ್ಕ್ ರಿಕವರಿ ಮಾಡ್ಲಿಕ್ಕೆ ಆಗದೆ, ನಾನು ಪ್ರೊಪ್ರೈಟರಿ ಸಾಫ್ಟ್ವೇರೊಂದನ್ನೂ ಕೊಂಡದ್ದಿದೆ. ಆದ್ರೆ ಈಗ ನೀವು ನನ್ನನ್ನ ಕೇಳಿದ್ರೆ ನಾನು ನಿಮಗೆ ಗ್ನು ನ testdisk (ಟೆಸ್ಟ್ ಡಿಸ್ಕ್)  ಕಡೆಗೊಮ್ಮೆ ನೋಡಿ ಅಂತ ಹೇಳ್ತೇನೆ. ನೀವಿದಕ್ಕೆ ನಯಾ ಪೈಸೆ ಕೂಡ ಖರ್ಚು ಮಾಡಬೇಕಿಲ್ಲ. ನಿಮ್ಮ ಹಾರ್ಡಿಸ್ಕ್ ನ ಡಾಟ ಮರಳಿ ಪಡೆಯ ಬಹುದು.

ನಾನು ಮಾಡಿದ್ ಇಷ್ಟು. ಕಂಪ್ಯೂಟರ್ ಅನ್ನ ಉಬುಂಟು ಲೈವ್ ಸಿ.ಡಿ ಯಲ್ಲಿ ಬೂಟ್ ಮಾಡಿ, ಅದನ್ನ ನನ್ನ ನೆಟ್ವರ್ಕ್ ಗೆ ಕನೆಕ್ಟ್ ಮಾಡಿದೆ. ಇಂಟರ್ನೆಟ್ ಇರೋದು ಕಂಡ ತಕ್ಷಣ, Gnome-Terminal ತೆಗೆದು testdisk ಇನ್ಸ್ಟಾಲ್ ಮಾಡಿದೆ. 

sudo aptitude install testdisk

ಆನಂತರ ,

sudo testdisk /dev/sda

ಟೈಪ್ ಮಾಡಿದೆ. ಇಲ್ಲಿ /dev/sda ಕಂಪ್ಯೂಟರಿನಲ್ಲಿದ್ದ ಹಾರ್ಡಿಸ್ಕ್ (ಪಾರ್ಟೀಷನ್ಗಳು ಮಾಯ ಆಗಿದ್ದು ಇದರಿಂದಲೇ).

ಇದು  ಡಾಟ ರಿಕವರಿ ಯುಟಿಲಿಟಿಯೊಂದನ್ನ ಪ್ರಾರಂಭಿಸಿತು.

ಇಲ್ಲಿ ಕಂಡು ಬರುವ ಕೆಲ ಆಪ್ಶನ್ ಗಳನ್ನ ಓದಿ ಕೊಂಡರಾಯಿತು ಸುಲಭವಾಗಿ ಕಳೆದು ಹೋದ ಪಾರ್ಟೀಷನ್ ಗಳನ್ನ ಮರಳಿ ಪಡೆಯಬಹುದು.

testdisk ವೆಬ್ ಸೈಟ್ ಗೊಮ್ಮೆ ಬೇಟಿ ಕೊಟ್ಟು ಈ ಯುಟಿಲಿಟಿಯ ವಿಂಡೋಸ್ ಮತ್ತು ಲಿನಕ್ಸ್ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಇಟ್ಕೊಳ್ಳಿ. ಮುಂದೇ ಇದೆ ತೊಂದರೆ ಯಾದರೆ ಇಂಟರ್ನೆಟ್ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ.

ವಿ.ಸೂ : ಇದರ ಬಗ್ಗೆ ಹೆಚ್ಚಿನ ಸಹಾಯವನ್ನ ಇದೇ ಪುಟದಲ್ಲಿ ದಾಖಲಿಸಿಲ್ಲದಿರುವುದಕ್ಕೆ ಕಾರಣ, ಇದು ಬುದ್ದಿವಂತರಿಗೆ ಮಾತ್ರ. ನೀವೇ ಕೊಂಚ ಓದಿ ಕೊಳ್ಳುವಷ್ಟು ಮತ್ತು ಪಲಿತಾಂಶಕ್ಕೆ ಕಾಯುವ ತಾಳ್ಮೆ ನಿಮ್ಮಲ್ಲಿ ಖಂಡಿತಾ ಇರಬೇಕು.

Average: 5 (2 votes)
786 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
smurthygr's picture
23
Feb
2010
6:27

ಉ: ಲಿನಕ್ಸಾಯಣ - ೨೩ - ಬುದ್ದಿವಂತರಿಗೆ ಮಾತ್ರ - ಟೆಸ್ಟ್ ...

ಇದು ತುಂಬಾ ಉಪಯುಕ್ತ ತಂತ್ರಾಂಶ. ಪಾರ್ಟಿಷನ್‌ಗಳು ಯಾವುದೇ ಕಾರಣಕ್ಕೆ ಹಾಳಾಗಿದ್ದರೂ 'parted magic' ಎನ್ನುವ ಇನ್ನೊಂದು ಮುಕ್ತ ತಂತ್ರಾಂಶ ಬಳಸಿ boot ಆಗಿ ಅದರ ಜೊತೆಯಲ್ಲೇ ಇರುವ testdisk ಉಪಯೋಗಿಸಿ ಕಳೆದು ಹೋಗಿದ್ದ ಕಡತಗಳನ್ನು ಮರಳಿ ಪಡೆಯಲು ಸಾಧ್ಯ. parted magic ಜೊತೆಯಲ್ಲಿ ಇನ್ನೂ ಅನೇಕ ಉಪಯುಕ್ತ ಮುಕ್ತ ತಂತ್ರಾಂಶಗಳಿರುತ್ತವೆ. ಎಲ್ಲವನ್ನೂ ಸರಿಯಾಗಿ ತಿಳಿದುಕೊಂಡು ಬಳಸಿ - ಇಲ್ಲವಾದರೆ ಇದ್ದ dataವೂ ಹೋದೀತು... ವಿವರಗಳಿಗೆ ನೋಡಿ:
http://partedmagic.c...

prasannasp's picture
03
Jun
2010
7:50

ಉ: ಲಿನಕ್ಸಾಯಣ - ೨೩ - ಬುದ್ದಿವಂತರಿಗೆ ಮಾತ್ರ - ಟೆಸ್ಟ್ ...

testdisk ನಿಜವಾಗ್ಲೂ ನನಗೆ ಉಪಯೋಗಕ್ಕೆ ಬಂದಿತ್ತು. ನಾನು ವಿಂಡೋಸ್ನಲ್ಲಿ testdisk ಉಪಯೋಗಿಸಿ 4 ಪಾರ್ಟಿಷನ್‌ಗಳನ್ನು ರಿಕವರ್‍ ಮಾಡಿಕೊಂಡಿದ್ದೆ. ಆದರೆ ಉಬುಂಟುನಲ್ಲಿ sudo aptitude install testdisk ಕೊಟ್ಟಾಗ ಅದೇನನ್ನೋ enable ಮಾಡ್ಬೇಕು ಅಂತ ಹೇಳಿತು. ಅದು ಹೇಗೆ ಅಂತ ಗೊತ್ತಾಗದೇ ಪೂರ್ತಿ ಡಿಸ್ಕನ್ನೇ ಇನ್ನೊಂದು ವಿಂಡೋಸ್ ಸಿಸ್ಟಮ್ಮಿಗೆ ಕನೆಕ್ಟ್ ಮಾಡಿ ರಿಕವರ್‍ ಮಾಡಿದ್ದೆ.