ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಸಮುದಾಯ ಅನುವಾದ ವ್ಯವಸ್ಥೆಯನ್ನು ಬಳಸುತ್ತಿರುವ ಗೂಗಲ್ ಕನ್ನಡ ಅನುವಾದದಲ್ಲಿ ಹಲವು ತಪ್ಪುಗಳು ಗಮನಕ್ಕೆ ಬರುವುದು (ಕೆಳಗಿನ ಚಿತ್ರ ನೋಡಿ). ಗೂಗಲ್ ಬಹುಶಃ ಅನುವಾದಗಳನ್ನು ಜನರ ಬಳಕೆಗೆ ತೆರವುಗೊಳಿಸುವ ಮೊದಲು ಅದನ್ನು ಪರಿಷ್ಕರಿಸರಿಸುವತ್ತ ಗಮನ ಹರಿಸಿದರೆ ಈ ತಪ್ಪುಗಳು ಆಗಲಿಕ್ಕಿಲ್ಲ. ಬ್ಲಾಗ್ ಇತ್ಯಾದಿಗಳನ್ನು ಬರೆದು ತಮ್ಮ ಭಾಷೆಯನ್ನು ಬಳಸಿ ಗೂಗಲ್ ಜೊತೆಗಿನ "ಸಂಭಂದ"ವನ್ನು ಹೆಚ್ಚಿಸಿಕೊಳ್ಳುತ್ತಿರುವ ಕನ್ನಡಿಗರು ನಾವುಗಳು ಗೂಗಲ್ ಕಂಪೆನಿಗೆ ಒಂದು ಸಂದೇಶ ಕಳುಹಿಸೋಣವೆ ಈ ಬಗ್ಗೆ?
- omshivaprakash's blog
- Login or register to post comments
- 557 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಖಂಡಿತ... ಏನಾದ್ರೂ ಮಾಡ್ಲೇ ಬೇಕು
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ನನಗೆ ತಿಳಿದ ಪ್ರಕಾರ ಗೂಗಲ್ ನಲ್ಲಿ ಕನ್ನಡವನ್ನು ಕನ್ನಡಿಗರೇ ಭಾಷಾಂತರಿಸಿದ್ದಾರೆ !!!
ಬಶೀರ್ ಕೊಡಗು, ದುಬೈ
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
>> ಸಮುದಾಯ ಅನುವಾದ ವ್ಯವಸ್ಥೆಯನ್ನು ಬಳಸುತ್ತಿರುವ ಗೂಗಲ್
ಓಂ ಬರೆದಿರುವುದೂ ಅದನ್ನೇ! :-)
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಹೌದಲ್ವಾ??? ಗಮನಿಸಲಿಲ್ಲ... :)
ಬಶೀರ್ ಕೊಡಗು, ದುಬೈ
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಹೌದಲ್ವಾ??? ಗಮನಿಸಿರಲಿಲ್ಲ... :)
ಬಶೀರ್ ಕೊಡಗು, ದುಬೈ
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
http://home.live.com
ಇಲ್ಲಿ ಕನ್ನಡವನ್ನು ಆರಿಸಿಕೊಂಡು ನೋಡಿರಿ. ಮಯ್‌ಕ್ರೋಸಾಪ್ಟ್ ಅವರ ಮಿಂದಾವು(ವೆಬ್ ಪೇಜ್)
ನನಗೆ ಅಡ್ಡಿಯಿಲ್ಲ. ಸುಮಾರಾಗಿ ಚನ್ನಾಗಿದೆ ಅನ್ನಿಸಿತು
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಓ೦...
ಇಲ್ಲಷ್ಟೇ ಅಲ್ಲ..ಬಹಳ ಕಡೆ.. ಈ ಸಮಸ್ಯೆ.. ಇದೆ..
G-mail ನ "ಚಾಟ್" invisible ಮಾಡಿ ನೋಡಿ.. "ನೀವು ಈಗ ಕಾಣಿಸಲ್ಪಡುತ್ತೀದ್ದೀರಿ" ಅ೦ತೇನೋ ಓದುತ್ತಿದ್ದ ನೆನಪು..
ಹಿ೦ದೆ, ಈ ಭಾಷಾ೦ತರದ ಆಯ್ಕೆ ಇದ್ದದ್ದು ಈಗ ನಿಮ್ಮ ಲೇಖನ ನೋಡಿದ ಮೇಲೇ ಶತಾಯಗತಾಯ ಹುಡುಕಲೇಬೇಕು ಅ೦ತ ತೀರ್ಮಾನಿಸಿ.. ಅನಿಸಿಕೆ ಪುಟ, ಒ೦ದೆಡೆ ಹಾಗೇ ತೆರೆದಿಟ್ಟು.. ಇನ್ನೊ೦ದೆಡೆ.. ಹುಡುಕಾಟ ಆರ೦ಭಿಸಿದೆ..
ಪ್ರಯತ್ನ ಫಲಿಸಿದ್ದು ನನ್ನ ಅದೃಷ್ಟ..
ಈ ಲಿ೦ಕ್ ಗಮನಿಸಿ.. http://www.google.co...
ಇಲ್ಲಿ.. ನೀವು ಸ್ವಲ್ಪ ಕಸರತ್ತು ಮಾಡಬಹುದು..
Google Main site : http://www.google.co... (ಕನ್ನಡಕ್ಕಾಗಿನ ಲಿ೦ಕ್)
Groups UI : http://www.google.co... (ಕನ್ನಡಕ್ಕಾಗಿನ ಲಿ೦ಕ್)
ಹಾಗೇ.. ಇನ್ನೂ ಕೆಲವು ಇದೆ.. ಆದರೆ, ಹಿ೦ದೆ ಇದ್ದ ಹಲವು ಬೇರೆ "Google Products" ಈಗ ಇಲ್ಲ.. "ಪ್ರಾಜೆಕ್ಟ್" ಮುಗಿದೆದೆ ಅ೦ತ "ಲಿ೦ಕ್" ಕೂಡ ತೆಗೆದಿದ್ದಾರೆ..
ಹಾಗಾಗಿ, G-mailನ ಲಿ೦ಕ್ ಈಗ ಇಲ್ಲ.. ತಪ್ಪನ್ನ ನಾವು ಸರಿ ಪಡಿಸಲು ಸಾಧ್ಯ ಇಲ್ಲ.. ಯಾರಿಗೆ ಸ೦ರ್ಪಕಿಸಬೇಕು ತಿಳಿಲಿಲ್ಲ..
ಹಾಗೇ ಇನ್ನೊ೦ದು ವಿಚಾರ.. ಎಲ್ಲೋ ಓದಿದ ನೆನಪು.. ಗೂಗಲ್‌ನ ಮುಖ್ಯ ಅಧಿಕಾರಿಯೊಬ್ಬರು(ಬಹುಷಃ ನಮ್ಮ ಭಾರತದ national level head) ಕನ್ನಡದವರೇ ಅ೦ತ ಓದಿದ ನೆನಪು.. ಯಾರಾದ್ರು ಸಹಾಯ ಮಾಡಬೇಕಿದೆ ಈ ವಿಚಾರದಲ್ಲಿ.
ಮೊದಲೇ ಕ್ಷಮಿಸಿ ಅ೦ತ ಕೇಳಿಬಿಡುತ್ತೇನೆ... ನಾನು ಭೇಟಿ ಕೊಟ್ಟು ಬಹಳನೇ ದಿನ ಆಗಿರೋದಾದ್ದರಿ೦ದ ಸದ್ಯದ ಸ್ಥಿತಿ ಅಲ್ಲಿಯದು ಏನು ಅ೦ತ ತಿಳಿದಿಲ್ಲ..
ನಿಮಗೆ ಇವೆಲ್ಲದರ ಅ೦ದಾಜಿದ್ದಲ್ಲಿ ಪ್ರಯತ್ನಿಸೋಕ್ಕೆ ಅಡ್ಡಿ ಇಲ್ಲ..
ಅನುಮಾನವಿದ್ದಲ್ಲಿ.. ಸಹಾಯ ಮಾಡಲು ಸ೦ಪದಿಗರು ಬಹುಮ೦ದಿ ತಯಾರಿದ್ದಾರಲ್ಲ.. (ನನ್ನೂ ಸೇರಿಸಿ, ತಿಳಿದಿರೋದು ಅಲ್ಪವಾದರೂ ಸರಿಯೆ, ಹ೦ಚೋಕ್ಕೇಕೆ ಅ೦ಜಿಕೆ ಅಲ್ವೇ?)
ಇದರ ಬಗ್ಗೆ.. ಇನ್ನೊ೦ದಿಷ್ಟು ವಿಚಾರಗಳು ಬ೦ದರೆ ಉತ್ತಮ..
ನಿಮ್ಮೊಲವಿನ,
ಸತ್ಯ..
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಚಾಟ್ನನಲ್ಲಿ ಈಗ "ನೀವು ಅದೃಶ್ಯವಾಗಿದ್ದೀರಿ" ಅ೦ತ ಬರುತ್ತಿದೆ..
ಯಾವಾಗಿ೦ದ ಬದಲಾಯಿತೋ ಗಮನಿಸಿಲಾಗಲಿಲ್ಲ.. ಇತ್ತೀಚಿನದ್ದಿರಬೇಕು..
ಹಾಗಾದರೆ.. ಎಲ್ಲೋ ದಾರಿ ಇದೆ ಅ೦ತ ಅನ್ನಿಸುತ್ತಿದೆ..
ತಿಳಿದವರು.. ತಿಳಿಸೋ ಕಷ್ಟ ತೆಗೋಳಿ..
ನಿಮ್ಮೊಲವಿನ,
ಸತ್ಯ..
ಉ: ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ
ಅಬ್ಬ! 'ಹುಡುಗಾಟಕ್ಕೆ ಸಂಭಂದಿಸಿದ' ಆಗಿಲ್ಲವಲ್ಲ ;) . ಅಷ್ಟರಮಟ್ಟಿಗೆ ಕನ್ನಡಿಗರು ಅದೃಷ್ಟವಂತರು :D