19
June
2013

ಲಿನಕ್ಸಾಯಣ - ೨೫ - ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

October 21, 2008 - 8:16pm
omshivaprakash

ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? 

ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ.

ಇದಕ್ಕು ಮುಂಚೆ, ಉಬುಂಟುನಲ್ಲಿ ಕನ್ನಡವನ್ನ ಹೇಗೆ ತರಿಸೋದು ಅಂತ ಒಂದು ಲೇಖನ ಬರೆದಿದ್ದೆ.

ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ? ಇದನ್ನ ನೋಡಿದ್ರೆ ನೀವು ಮಾಡಬೇಕಿರೋ ಮೊದಲನೆ ಕೆಲಸ ನೆನಪಾಗತ್ತೆ.  ಇಲ್ಲಿಂದಲೇ ನಾನು ಕನ್ನಡದ ಫಾಂಟು ಇತ್ಯಾದಿಗಳನ್ನ ಇನ್ಸ್ಟಾಲ್ ಮಾಡ್ಲಿಕ್ಕೆ ಶುರು ಮಾಡೋದು.

ಈ ಲೇಖನ ನಿಮ್ಮನ್ನ ಇಲ್ಲಿಂದ ಮುಂದಕ್ಕೆ ಕರೆದು ಕೊಂಡು ಹೋಗ್ತಿದೆ. ಲಿನಕ್ಸ್ ನಲ್ಲಿ ಕನ್ನಡ ಬಂದರಷ್ಟೇ ಸಾಲದು, ಅದರಲ್ಲಿ ಕನ್ನಡವನ್ನ ಬರೀಲಿಕ್ಕೆ, ಓದ್ಲಿಕ್ಕೆ ಕೂಡ ಆಗ್ಬೇಕು ಅಲ್ವೇ? ಹಾಗಿದ್ರೆ ಮುಂದೆ ಓದಿ. ನಿಮಗೇನಾದ್ರೂ ಸಂಶಯಗಳು, ಪ್ರಶ್ನೆಗಳು ಅಥವಾ ಇತರರಿಗೆ ಬೇಕಾಗ ಬಹುದಾದ ಉತ್ತರಗಳ ನೆನಪಾದರೆ ಅದನ್ನ ಕಾಮೆಂಟ್ ರೂಪದಲ್ಲಿ ಎಲ್ಲರಿಗೂ ತಲುಪಿಸುವುದನ್ನ ಮಾತ್ರ ಮರೀಬ್ಯಾಡಿ ಮತ್ತೆ. 

ಚಿತ್ರ -೧

ಈಗ ಮೇಲಿನ ಚಿತ್ರ ನೋಡಿ. ಇಲ್ಲಿ ನಾನು ನಿಮಗೆ ಕನ್ನಡ ದಲ್ಲಿ ಟೈಪ್ ಮಾಡ್ಲಿಕ್ಕೆ ಬೇಕಾದ SCIM (Smart Common Input Method) ಅನ್ನೋ ತಂತ್ರಾಂಶವನ್ನ ನಿಮ್ಮ ಡೆಸ್ಕ್ಟಾಪ್ನೊಂದಿಗೆ ಹೊಂದಿಸಿ ಕೊಳ್ಳಲಿಕ್ಕೆ ಬೇಕಿರುವ ಮುಖ್ಯ ಸಲಕರಣೆಯನ್ನ ತೋರಿಸ್ತಿದ್ದೇನೆ.

System -> Administration -> Language Support ಈ ಸಲಕರಣೆಯಲ್ಲಿ ನೀವು ಎರೆಡು ಕೆಲಸವನ್ನ ಮಾಡಬಹುದು. ಮೊದಲನೆಯದನ್ನ ನನ್ನ ಹಿಂದಿನ ಲೇಖನವೇ ಹೇಳತ್ತೆ. ಹೌದು, ಅದು ಲ್ಯಾಂಗ್ವೇಜ್ ಸಪೋರ್ಟ್. ಅಂದ್ರೆ ಕನ್ನಡದಲ್ಲಿ ಮೆನು ಇತ್ಯಾದಿಗಳನ್ನ ತಂತ್ರಾಂಶಗಳ ಜೊತೆ ಹೊಂದಿಸಿ ಕೊಂಡು ಎಲ್ಲವನ್ನ ಲಿನಕ್ಸ್ ನಲ್ಲಿ ಕನ್ನಡಮಯ ಮಾಡೋದು. 

ಎರಡನೆಯದು ಏನಂತಂದ್ರೆ, ಲಿನಕ್ಸ್ ನಲ್ಲಿರುವ ಪ್ರತಿಯೋಂದೂ ತಂತ್ರಾಂಶಕ್ಕೆ ನೀವು ಕೀ ಬೋರ್ಡ್ ನ ಮೂಲಕ ಸಂದೇಶ ಕಳಿಸ್ತೀರಲ್ವಾ? ಉದಾಹರಣೆಗೆ, ನಾನೀಗ ಬರೆಯುತ್ತಿರುವ ಈ ಲೇಖನ. ಇದನ್ನ ಫೈರ್ ಫಾಕ್ಸ್ ಬ್ರೌಸರಿನ ಮೂಲಕ ನೇರವಾಗಿ ನನ್ನ ಸಂಪದದ ಬ್ಲಾಗಿಗೆ ಸೇರಿಸ್ತಿದ್ದೇನೆ. ಇದು ಸಾಧ್ಯವಾಗಿದ್ದು ಯುನಿಕೋಡ್ ನ ಕ್ಲಿಷ್ಟ (complex) ಪದಗಳನ್ನ ಇತರೆ ತಂತ್ರಾಂಶಗಳು ಪಡೆಯೋ ಸೌಲಭ್ಯವನ್ನ ನನ್ನ ಡೆಸ್ಕ್ಟಾಪಿಗೆ ಕೊಡುವ SCIM ತಂತ್ರಾಂಶವನ್ನ ಹಾಕಿ ಕೊಂಡಿರೊದ್ರಿಂದ (ನಿಮ್ಮ ಕಂಪ್ಯೂಟರಿಗೆ ASCII ಅಂತಂದ್ರೆ ತುಂಬಾ ಸುಲಭದ ಮಾತು. ಆದ್ರೆ ಯುನಿಕೋಡ್ ಇತರೆ ಅಂತಂದ್ರೆ ಸ್ವಲ್ಪ ಕಬ್ಬಿಣದ ಕಡಲೆ. ಈ ತೊಂದರೆಯನ್ನ ತಪ್ಪಿಸೋದು SCIM). ಇದನ್ನ ನೀವೂ ಸಾಧ್ಯಮಾಡಿಕೊಳ್ಳಲಿಕ್ಕೆ, ಮೇಲಿನ ಚಿತ್ರದಲ್ಲಿ ಕಂಡಂತೆ "Enable support to enter complex characters" ಅನ್ನೋ ಅಯ್ಕೆಯನ್ನ ಸೆಲೆಕ್ಟ್ ಮಾಡ್ಕೊಬೇಕು. ನಂತರ ಓಕ ಕ್ಲಿಕ್ ಮಾಡಿ. ಇದು ಸ್ಕಿಮ್ ಇತ್ಯಾದಿಗಳನ್ನ ನಿಮಗೆ ಇನ್ಸ್ಟಾಲ್ ಮಾಡಿ ಕೊಡತ್ತೆ. 

ಸೂಚನೆ: ನಿಮ್ಮಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ರೆ ನೀವು ಈ ಕೆಲ ಕಾನ್ಫಿಗರೇಷನ್ಗಳನ್ನ ಮಾಡ್ಲಿಕ್ಕಾಗಲ್ಲ. ನೀವೇನಾದ್ರೂ ಗ್ನು/ಲಿನಕ್ಸ್ ಹಬ್ಬಕ್ಕೆ ಬಂದು, ನಾವು ಕೊಟ್ಟ apt-on ಸಿ.ಡಿ ಯನ್ನ ತೆಗೆದು ಕೊಂಡಿದ್ರೆ ಇಂಟರ್ನೆಟ್ ಇಲ್ಲದೇನೂ ಇಲ್ಲಿ ಕೊಟ್ಟಿರುವ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಕೊಳ್ಳಲಿಕ್ಕೆ ಸಾಧ್ಯ ಅಗತ್ತೆ.

ಇನ್ಟಾಲೇಷನ್ ಮುಗಿಸಿದ ನಂತರ ನಿಮ್ಮ ಕಂಪ್ಯೂಟರ್ ಅನ್ನ ರೀಸ್ಟಾರ್ಟ್ ಮಾಡ್ಲಿಕ್ಕೆ ಅದು ನಿಮ್ಮನ್ನ ಕೇಳತ್ತೆ. ಮಾಡಿದ ನಂತರ ನಿಮ್ಮ ತೆರೆಯ ಮೇಲಿನ ಬಾರನ್ನು ಒಮ್ಮೆ ಗಮನಿಸಿ.

ಚಿತ್ರ - ೨

ಮೇಲೆ ನೀಡಿರುವಂತೆ ಕೀಬೋರ್ಡನ ಆಕಾರದ ಒಂದು ಚಿನ್ಹೆ ನಿಮ್ಮ ಕಣ್ಣಿಗೆ ಬೀಳತ್ತೆ. ಇದೇ SCIM.

ಈಗ ನನಗೆ ಇನ್ನೊಂದು ಸಣ್ಣ ತಂತ್ರಾಂಶ ಬೇಕಿದೆ. ಬರದಲ್ಲಿರುವ ಐಟ್ರಾನ್ಸ್ ಕೀಮ್ಯಾಪ್ ಇತ್ಯಾದಿ. ಅದು "M17N Input Method Engine for SCIM " ಅನ್ನೋ  scim-m17n ತತ್ರಾಂಶ ಪ್ಯಾಕೇಜಿನಿಂದ ಸಿಗತ್ತೆ. ಅದನ್ನ ಇನ್ಸ್ಟಾಲ್ ಮಾಡ್ಕೊಳ್ಬೇಕು. ಅದಕ್ಕೆ ಕೆಳಗೆ ಕೊಟ್ಟಿರುವ ಕಮ್ಯಾಂಡನ್ನ ಟರ್ಮಿನಲ್ ನಲ್ಲಿ ಟೈಪಿಸಿ. (Applications -> Accessories -> Terminal)

sudo aptitude install scim-m17n

ಈಗ ಕನ್ನಡ ಫಾಂಟನ್ನ ಇನ್ಸ್ಟಾಅಲ್ ಮಾಡ್ಕೊಳ್ಳೋಣ "Free TrueType fonts for the Kannada language" ನಿಮಗೆ ttf-kannada-fonts ತಂತ್ರಾಂಶ ಪ್ಯಾಕೇಜ್ನಲ್ಲಿ ಸಿಗತ್ತೆ. ಅದನ್ನೂ ಇನ್ಸ್ಟಾಲ್ ಮಾಡ್ಕೊಳ್ಳಿ.

sudo aptitude install ttf-kannada-fonts

ಲಿನಕ್ಸಾಯಣ - ೬ - ಪ್ರೊಗ್ರಾಮ್ ಇನ್ಸ್ಟಾಲೇಶನ್ ನಿಮಗೆ ಮೆಲ್ಕಂಡ ತಂತ್ರಾಂಶಗಳನ್ನ ಇನ್ನೂ ಸುಲಭವಾಗಿ ಹೇಗೆ ಇನ್ಸ್ಟಾಲ್ ಮಾಡ್ಕೊಬಹುದು ಅನ್ನೋದನ್ನ ತಿಳಿಸತ್ತೆ. 

ಈಗ ಮುಂದಿನ ಕೆಲಸ ಸ್ಕಿಮ್ ಅನ್ನ ಕಾನ್ಫಿಗರ್ ಮಾಡೋದು.  ಚಿತ್ರ ಎರಡಲ್ಲಿ ಕಾಣುವ ಕೀಬೋರ್ಡ್ ಚಿನ್ಹೆಯ ಮೇಲೆ Right ಕ್ಲಿಕ್ ಮಾಡಿ "SCIM Setup" ಆಯ್ಕೆ ಮಾಡಿಕೊಳ್ಳಿ. ಅದು ನಿಮಗೆ ಮತ್ತೊಂದು ಸಣ್ಣ ಸಲಕರಣೆಯನ್ನ ನಿಮ್ಮ ಮುಂದಿಡುತ್ತದೆ. ಇಲ್ಲಿ Global Setup ನಲ್ಲಿ ಕನ್ನಡವನ್ನ ಸೆಲೆಕ್ಟ್ ಮಾಡಿಕೊಂಡು, ಓಕೆ ಪ್ರೆಸ್ ಮಾಡಿ.

 ಚಿತ್ರ - ೩

ನೀವೀಗ ಕನ್ನಡ ಟೈಪ್ ಮಾಡ್ಲಿಕ್ಕೆ ತಯಾರು. ಒಮ್ಮೆ ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆಗಿ. ಇದು ಸ್ಕಿಮ್ ಟೂಲನ್ನ ರೀಲೋಡ್ ಮಾಡಿ ನಿಮ್ಮ ಹೊಸ ಕಾನ್ಫಿಗರೇಷನ್ ಕೆಲಸ ಮಾಡುವಂತೆ ಮಾಡುತ್ತೆ.

ಈಗ ಫೈರ್ ಫಾಕ್ಸ್ ನಲ್ಲಿ ಸಂಪದ ಬ್ರೌಸ್ ಮಾಡಿ. ಕನ್ನಡ ಸರಿಯಾಗಿ ಕಾಣ್ತಿರಬೇಕಲ್ಲ. ಓಪನ್ ಟೈ ಫಾಂಟಿದ್ದರಾಯಿತು ಎಲ್ಲ ಯುನಿಕೋಡ್ ವೆಬ್ ಸೈಟ್ಗಳು ನಿಮ್ಮ ತೆರೆಯ ಮೇಲೆ ಚೆನ್ನಾಗಿ ಮೂಡಿಬರುತ್ತವೆ. ಸರಿ ಈಗ ಕನ್ನಡ ಟೈಪಿಸೋಣ. ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ "ಹೊಸ ಬರಹ ಸೇರಿಸಲಿಕ್ಕ" ಅಣಿಯಾಗಿ.

ಏನಾದರೂ ಟೈಪ್ ಮಾಡಿ. ಇಂಗ್ಲೀಷ್ ನಲ್ಲಿ ಟೈಪಾಗ್ತಿದೆ ಅಲ್ವಾ? ಸರಿ ಈಗ ಒಂದು ಮ್ಯಾಜಿಕ್ ಮಾಡೋಣ. 

CTRL ಬಟನ್ ಒಂದು ಬೆರಳಿನಲ್ಲಿ ಹಿಡ್ಕೊಂಡು Space ಪ್ರೆಸ್ ಮಾಡಿ ನಿಮ್ಮ ಕೀಬೋರ್ಡ್ನಲ್ಲಿ. ಕೆಳಗೆ ಕಂಡಂತೆ ಒಂದು ಸಣ್ಣ ಟೂಲ್ ನಿಮ್ಮ ಪರದೆಯಲ್ಲಿ ಬಂದಿರಬೇಕಲ್ಲ. 

 ಚಿತ್ರ - ೪

ಸಾಮಾನ್ಯವಾಗಿ ಇಲ್ಲಿ ನಿಮಗೆ ಇಂಗ್ಲೀಷ್ ಕಾಣಿಸತ್ತ. ಭಾಷೆಯ ಮೇಲೆ ಕ್ಲಿಕ್ ಮಾಡಿ ಕನ್ನಡ ಸೆಲೆಕ್ಟ್ ಮಾಡಿಕೊಳ್ಳಿ. ಇವು ನಿಮಗೆ ಬೇರೆ ಬೇರೆ ಕನ್ನಡ ಕೀಮ್ಯಾಪ್ಗಳನ್ನ ಸೆಲೆಕ್ಟ್ ಮಾಡ್ಕೊಳ್ಲಿಕ್ಕೆ ಸಹಾಯ ಮಾಡುತ್ತೆ. 

ಮೇಲಿನ ಚಿತ್ರದಲ್ಲಿ ನಾನು kn-itrans ಅನ್ನ ಸೆಲೆಕ್ಟ್ ಮಾಡಿಕೊಂಡಿದ್ದೇನೆ. ಇದು ಬರಹ ರೂಪದ ಕೀಬೋರ್ಡ್ ಲೇಔಟ್. ಸುಲಭವಾಗಿ ನನಗೆ ಕನ್ನಡ ಟೈಪ್ ಮಾಡ್ಲಿಕ್ಕೆ ಇಂದರಿಂದಲೇ ಸಾಧ್ಯವಾಗಿದ್ದು.  ಈಗ "ಅ" ಬರೆಯಿರಿ ನೋಡೋಣ. ಹೌದು ಸಾರ್. ಬರೆ a ಟೈಪ್ ಮಾಡಿ. ನಿಮ್ಮ ತೆರೆಯ ಮೇಲೆ ನಮ್ಮೆಲ್ಲರ ನಾನ್ನುಡಿ ಕನ್ನಡ ರಾರಾಜಿಸುವುದನ್ನ ನೋಡಿ.

ಈಗ ಮತ್ತೆ ಇಂಗ್ಲೀಷ್ ಟೈಪಿಸಲಿಕ್ಕೆ CTRL ಬಟನ್ ಒಂದು ಬೆರಳಿನಲ್ಲಿ ಹಿಡ್ಕೊಂಡು Space ಪ್ರೆಸ್ ಮಾಡಿ ಮತ್ತೆ. ಇಲ್ಲ ನೇರವಾಗಿ ಭಾಷೆಯ ಬದಲಾವಣೆಯನ್ನ ಸ್ಕಿಮ್ ಟೂಲ್ ನಲ್ಲೇ ಮಾಡಬಹುದು.

ಸುಲಭವಾಯಿತಲ್ಲ ಈಗ ಲಿನಕ್ಸ್ ನಲ್ಲಿ ಕನ್ನಡ. ನಿಮಗೆ ಮತ್ತಷ್ಟು ಪ್ರಶ್ನೆಗಳಿದ್ದರೆ, ಸಂಕೋಚವಿಲ್ಲದೆ ನನಗೆ ತಿಳಿಸಿ. ನಿಮ್ಮ ಲಿನಕ್ಸ್ ಸಂದೇಹಗಳನ್ನ ನಿವಾರಿಸ್ತೇನೆ 

 ಹೆಚ್ಚಿನ ಮಾಹಿತಿ : ಸಿನಾಪ್ಟೆಕ್  ಪ್ಯಾಕೇಜ್ ಮ್ಯಾನೇಜರ್

scim-m17n ಮತ್ತು  ttf-kannada-fonts  ಇನ್ಸ್ಟಾಲ್ ಮಾಡೋದು ಕಷ್ಟ ಆಯ್ತೇ?

ಹಾಕಿದ್ರೆ ಸಿನಾಪ್ಟೆಕ್ ಪ್ಯಾಕೇಜ್ ಮ್ಯಾನೇಜರ್ ನೋಡಿ

ಮೆನು : System -> Administration -> Synaptic Package Manager
ಇದು ವಿಂಡೋಸ್ ನಲ್ಲಿನ Add/Remove Program ಇದ್ದ ಹಾಗೆ.

ಚಿತ್ರ - ೫

ನಿಮಗೆ ಬೇಕಿರುವ ತಂತ್ರಾಂಶದ ಹೆಸರನ್ನ ಸರ್ಚ್ ಮಾಡಿ ಅದನ್ನ ಸೆಲೆಕ್ಟ್ ಮಾಡಿ ಕೊಂಡು Apply ಪ್ರೆಸ್ ಮಾಡಿ.

ನಿಮಗೆ ಕೆಲ ತಂತ್ರಾಂಶಗಳು ಸರ್ಚ್ ಮಾಡಿದಾಗ ಸಿಗಲಿಲ್ಲ ಅಂದ್ರೆ, ನೀವು ಸಿನಾಪ್ಟೆಕ್ ನ ಕೆಲ ರೆಪೋಸಿಟರಿಗಳನ್ನ ಎನೇಬಲ್ ಮಾಡಿಲ್ಲ ಅಂತಾಯ್ತು.

Settings -> Repositories ಸೆಲೆಕ್ಟ್ ಮಾಡಿಕೊಳ್ಳಿ ಅಲ್ಲಿ ಕೆಳಗಿನ ಚಿತ್ರದಲ್ಲಿ ಕಂಡಂತೆ ಎಲ್ಲ ಸೋರ್ಸ್ಗಳನ್ನ ಸೆಲೆಕ್ಟ್ ಮಾಡಿ ವಿಂಡೋ ಕ್ಲೋಸ್ ಮಾಡಿ. ಅದು ನಿಮ್ಮನ್ನ "Reload" ಮಾಡ್ಲಾ ಪ್ಯಾಕೇಜ್ ಇನ್ಪಾರ್ಮೇಶನ್ ಅನ್ನತ್ತೆ. ಸರಿ ಅಂತೇಳಿ ಅದು ಮುಗಿದ ನಂತರ ನಿಮಗೆ ಬೇಕಾದ ತಂತ್ರಾಂಶಗಳು ಸಿಗ್ತವೆ.

ಚಿತ್ರ - ೬

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sudhimail on
ಕಗಪ ಮತ್ತು ಇನ್ ಸ್ಕ್ರಿಪ್ಟ್ ಲೇಔಟ್ ಬರೀ ಸ್ಕಿಮ್ ಅನುಸ್ಥಾಪನೆ ಮಾಡಿದಾಗ ಬರುತ್ತೆ ಅಲ್ವಾ? itrans ಲೇಔಟ್ ಬೇಕಂದ್ರೆ ಮಾತ್ರ scim-m17n ಅನುಸ್ಥಾಪಿಸಬೇಕು ಅನ್ಸುತ್ತೆ. ವಂದನೆಗಳೊಂದಿಗೆ, ಸುಧೀಂದ್ರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಹೌದು. ಆದ್ರೆ ಲಿನಕ್ಸ್ ಮಿಂಟ್ ನಲ್ಲಿ ಈ ಎರಡು ಲೇಔಟ್ಗಳೂ ಸ್ಕಿಮ್ ಇಸ್ಟಾಲ್ ಮಾಡಿದಾಗ ಕಾಣಿಸಲಿಲ್ಲ. ಧನ್ಯವಾದಗಳೊಂದಿಗೆ, ನಿಮ್ಮ, ಓಂ ಶಿವಪ್ರಕಾಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
ಶಿವಪ್ರಕಾಶ್, ಎಲ್ಲ ಸರಿ, ಆದ್ರೆ 'ಎಂದು' ಅಂತ ಟೈಪ್ ಮಾಡಲು ಲಿನಕ್ಸನಲ್ಲಿ ಸಾದ್ಯವಗುತಿಲ್ಲ.. ಮತ್ತೇಲ್ಲಾ ಒಕೆ.. ಒಂದು ಬೊಕ್ಸ್ ಬರ್ತಾ ಇದೆ, ಅದರೋಳಗೆ ಏನೋ ನಂಬರ್ ಬರ್ದಿದೆ.. ದಯವಿಟ್ಟು ಹೆಲ್ಪ್ ಮಾಡಿ.. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
ನನ್ನ ಅನಿಸಿಕೆಯಂತೆ, ಕನ್ನಡ ಸಪೋರ್ಟ್ ಇನ್ನು ಪೂರ್ತಿಯಾಗಿಲ್ಲ. ಬರಹ ಐ.ಎಂ.ಇ ಯನ್ನ ಉಪಯೋಗಿಸಿ ಬರೆಯುವಸ್ಟು ಸುಲಭವಲ್ಲ. ಕೆಲಕಡೆ ಬರಹದ ಕನ್ನಡ transliteration ಕೆಲಸ ಮಾಡಲ್ಲ. ಅದನ್ನ improve ಮಾಡಿದರೆ ಲಿನಕ್ಸ್ ಕನ್ನಡಕ್ಕೆ ಉಪಯೋಗಿಸಬಹುದು. ನನಗಂತು ಲಿನಕ್ಸ್ ಉಪಯೋಗಿಸಲು ತುಂಬಾ ಇಷ್ಟ, ಆದರೆ ಈ ರೀತಿ ಪರಿಹಾರವಿಲ್ಲದ ಸಮಸ್ಯೆಗೆ ಸಿಲುಕಿದಾಗ ಅದನ್ನ ಕೈ ಬಿಡುವ ಪರಿಸ್ಟಿತಿ ಬಂದು, ಸದ್ಯಕ್ಕೆ ಈ ಕೆಲದ ವಿಂಡೋಸನಲ್ಲಿ ಮಾಡುವ ಮತ್ತೆ ಸಮಯ ಸಿಕ್ಕಾಗ ಇದನ್ನ ಲಿನುಕ್ಸ್ನಲ್ಲಿ ಹೇಗೆ ಮಾಡುವದು ಎಂದು ಕಂಡುಹಿಡಿಯುವ ಎಂದು ಸುಮ್ಮನಾಗುತ್ತೇನೆ.. ಸಮಯಕ್ಕೆ ಬಾರದ ವಿದ್ಯೆ, ಅಥಯ ತಂತ್ರಾಂಶ ಇದ್ದರೆಷ್ಟು ಇಲ್ಲದಿದ್ದರೆಷ್ಟು? :) ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಅಲ್ರೀ, ನಿಮಗೆ ಗ್ನು/ಲಿನಕ್ಸಿನಲ್ಲಿ ಏನೋ ಕೆಲಸ ಮಾಡಲಾಗಲಿಲ್ಲ ಎಂದ ಮಾತ್ರಕ್ಕೆ ಎಲ್ಲರಿಗೂ ಮಾಡಲಾಗುವುದಿಲ್ಲ ಎಂದುಕೊಳ್ಳುವುದು ತಪ್ಪು. ಹಾಗೆ ನೋಡಿದರೆ ಎಲ್ಲ ತಂತ್ರಾಂಶಗಳು ಒಂದಲ್ಲ ಒಂದು ದಿನ ಕೈಕೊಡುವಂತವೇ. ಏಕೆಂದರೆ ಅವುಗಳನ್ನು ಮನುಷ್ಯರು ಬರೆದದ್ದು. "ಪರಿಹಾರವಿಲ್ಲದ ಸಮಸ್ಯೆ"ಗೆ ಪರಿಹಾರ ಹುಡುಕಿದರೆ ತಾನೆ ಪರಿಹಾರ ಸಿಗುವುದು? ಅದು ಬಿಟ್ಟು ಇದ್ದದ್ದರಲ್ಲೇ ಸಾಕು ಹೀಗೇ ಇದ್ದುಬಿಡೋಣ ಅನ್ನುವ complacency ಮುನ್ನಡೆ ಕ್ಷೀಣ ಮಾಡುತ್ತದೆ ಅಲ್ಲವೆ? ಎಲ್ಲ ತಂತ್ರಾಂಶಗಳಲ್ಲಿ ಒಂದಲ್ಲ ಒಂದು ತೊಂದರೆ ಇದ್ದದ್ದೇ - ಅದನ್ನು ಪರಿಹರಿಸಿಕೊಳ್ಳುವತ್ತ ನಮ್ಮ ಗಮನ ಇರಬೇಕು. ಈ ಬಾರಿ ನಿಮಗೆ ಸಮಯಕ್ಕೆ ಬರದೇ ಹೋದ ತಂತ್ರಾಂಶ - ಮುಂದಿನ ಸಾರಿ ಸಮಯಕ್ಕೆ ಮುಂಚೆ ನಿಮ್ಮ ಕೆಲಸ ಮುಗಿಸಿಕೊಡಬಹುದು, ಏನು ಗೊತ್ತು? ಸ್ವತಃ ನಾನು ಕಂಪ್ಯೂಟರಿನ ಎಲ್ಲ ಕೆಲಸಗಳನ್ನು ಗ್ನು/ಲಿನಕ್ಸಿನಲ್ಲೇ ಮುಗಿಸಿಕೊಳ್ಳುವುದು. ಸಂಪದ ಮಾಡಿದ್ದು ಕೂಡ ಲಿನಕ್ಸಿನಲ್ಲಿಯೇ! ಅದನ್ನು ನಡೆಸಿಕೊಂಡು ಹೋಗುತ್ತಿರುವುದು ಕೂಡ ಲಿನಕ್ಸಿನಿಂದಲೇ. ಗ್ನು/ಲಿನಕ್ಸಿನ ಸರಿಯಾದ potential ಗೊತ್ತಾಗುವುದು ಅದನ್ನು ಚೆನ್ನಾಗಿ ಬಳಸಿದ ಮೇಲೇನೆ. ಗ್ನು/ಲಿನಕ್ಸಿನಲ್ಲಿರುವ ಉತ್ತಮ ಸಂಗತಿಯೇನೆಂದರೆ ಸಮಸ್ಯೆ ಪರಿಹಾರಕ್ಕೆ ಯಾವುದೋ ಮಲ್ಟಿನ್ಯಾಶನಲ್ ಕಾಲು ಹಿಡಿದು ಕಾಯುತ್ತ ಕೂರಬೇಕಿಲ್ಲ, ನಾವುಗಳೇ ಸರಿಪಡಿಸಿಕೊಳ್ಳಬಹುದು! - HPN ನನ್ನ ಬ್ಲಾಗುಗಳು: [:http://sampada.net/b...|ಪರಿವೇಶಣ] | [:http://hpnadig.net/blog|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
I am not saying that Linux is not useful or u cant do your work on that. As of now, for me, Kannada thing did not work. So for Kannada, some BARAHA transliteration do not work, either I should wait till its improved or I myself should improve it, or I should use and get used to the supported transliterations or for time being use windows and do your work and when u get time try one of these. :)... Thats what I have done.... I will make sure one day it will work on Linux too in my machine. Sorry for typing in English, as I am in Linux now, and u know my problem :).. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
the above comment I typed completely in english, but in Linux Mozzila it shows some weired kannada characters instead of english for few sentences ..? why so.. any idea>? ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
"ಕೆಲಕಡೆ ಬರಹದ ಕನ್ನಡ transliteration ಕೆಲಸ ಮಾಡಲ್ಲ. ಅದನ್ನ improve ಮಾಡಿದರೆ ಲಿನಕ್ಸ್ ಕನ್ನಡಕ್ಕೆ ಉಪಯೋಗಿಸಬಹುದು." -> ಬರಹವನ್ನ ಲಿನಕ್ಸ್ ನಲ್ಲಿ ಉಪಯೋಗಿಸ್ತಿದೀರಾ? ನಿಮ್ಮ ಸಮಸ್ಯೆಗಳನ್ನ ಇಲ್ಲಿ ದಾಖಲಿಸಿ ಉತ್ತರ ಗೊತ್ತಿದ್ದವರು ನಿಮಗೆ ಸಹಾಯ ಮಾಡ್ತಾರೆ. ಇಷ್ಟು ವರ್ಷ ನಾನು ಬರೆದ ಎಲ್ಲ ಕನ್ನಡ ಲೇಖನಗಳು ಪತ್ರಗಳು ಇತ್ಯಾದಿ ಲಿನಕ್ಸ್ ನಲ್ಲೇ ಟೈಪಿಸಿದ್ದು. ಇದು ನನ್ನ ಅನುಭವ. ನಿಮಗೂ ಲಿನಕ್ಸ್ ನಲ್ಲಿ ಇಂತಹ ಅನುಭವ ಆಗ್ಲಿಕ್ಕೆ, ಲಿನಕ್ಸ್ ನೊಂದಿಗೆ ಅವಿನಾಭಾವ ಸಂಭಂದ ಬೆಳೆಯಲಿಕ್ಕೆ ಬಹಳ ದಿನ ಬೇಕಾಗಲ್ಲ. ಸ್ವಲ್ಪ ಓದಿಕೊಳ್ಳಿ. ಕಮ್ಯೂನಿಟಿಯ ನಾವೆಷ್ಟೋ ಜನ ನಮ್ಮ ಕೈಲಾದದ್ದನ್ನೆಲ್ಲಾ ಇಂಟರ್ನೆಟ್ ನಲ್ಲಿ ದಾಖಲಿಸಿದ್ದೇವೆ. ಅವೇ ನಿಮಗೆ ಮಾರ್ಗದರ್ಶಿ. ಅರಿವು ಮೂಡುವವರೆಗೂ ಅದು ಬ್ರಹ್ಮ ವಿಧ್ಯೆ ನಂತರ ಕೋತಿ ವಿಧ್ಯೆ :) (ತಮಾಷೆಗೆ ಹೇಳಿದೆ, ಆದರೂ ಅದು ಸತ್ಯ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಎಂದು (eMdu) ಅಂತ ಟೈಪ್ ಮಾಡಿದರೆ ಎಲ್ಲ ಕೆಲಸ ಮಾಡ್ತಿದೆಯಲ್ಲ ಸಾರ್! kn-itrans ಸೆಲೆಕ್ಟ್ ಮಾಡ್ಕೊಂಡಿದೀರಾ ತಾನೆ? ಧನ್ಯವಾದಗಳೊಂದಿಗೆ, ನಿಮ್ಮ, ಓಂ ಶಿವಪ್ರಕಾಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಹೊಸ pango ಇದ್ದರೆ ಮಾತ್ರ ಸರಿಯಾಗಿ ರೆಂಡರ್ ಆಗತ್ತೆ ಇದು, ಶಿವು. ನೆನಪಿದೆಯಲ್ಲ ಈ ಇಶ್ಯೂ? ಬಹುಶಃ ಪ್ರಸಾದ್ ಬಳಸುತ್ತಿರುವ ಆವೃತ್ತಿಯಲ್ಲಿ ಹಳೆಯ pango ಇರಬಹುದು. - HPN ನನ್ನ ಬ್ಲಾಗುಗಳು: [:http://sampada.net/b...|ಪರಿವೇಶಣ] | [:http://hpnadig.net/blog|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಹಾ! ಕೇಳೋದೇ ಮರೆತೆ. ಪ್ರಸಾದ್, ನೀವು ಉಪಯೋಗಿಸ್ತಿರುವ ಲಿನಕ್ಸ್ ಯಾವುದು? ಅದನ್ನ ತಿಳಿಸಿ ಮೊದ್ಲು ಆಮೇಲೆ ನಿಮ್ಮ ಕಷ್ಟ ಕೋಟಲೆಗಳನ್ನ ನಿವಾರಿಸುವ :) ಧನ್ಯವಾದಗಳೊಂದಿಗೆ, ನಿಮ್ಮ, ಓಂ ಶಿವಪ್ರಕಾಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
ನಾನು ಕನ್ನಡವನ್ನು ನನ್ನ್ ಕಾಲೇಜು ದಿನಗಳಿಂದಲೇ ಉಪಯೋಗಿಸುತ್ತಿದ್ದೆನೆ, ಅದನ್ನು windowsನಲ್ಲಿ. ಈಗ ಲಿನುಕ್ಸ್ ನಲ್ಲಿ ಸಹ, google use ಮಾಡಿ ಸುಮಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. most of the things are working fine except 'eMdu' and something similar to that where kannada zero comes after ಎ. ನನಗನ್ನಿಸುತ್ತದೆ, ನಾಡಿಗ್ ಅವರು ಹೇಳಿದ ಹಾಗೆ, pango ಹಳೆಯದಿರಬೇಕು. ಎಲ್ಲಾ ಕಡೆ ಈ ಶೂನ್ಯ ಹೀಗೆ ಕೈ ಕೊಡುತ್ತದೆ. ನಾನು Ubuntu 8.04.01 version ಉಪಯೋಗಿಸುತ್ತಿದ್ದೇನೆ. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
Looks like the problem is not with the input, itrans works fine.. but problem is with rendering of the font. Please let me know wat can be done for this. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
ಕನ್ನಡದ ಎಲ್ಲ ಸಮಸ್ಯೆಗಳು ದೂರವಾಗಿದೆ ಒಂದನ್ನು ಹೊರತುಪಡಿಸಿ. ಅದು ಪಾಂಗೋ (pango). ಅದನ್ನು ಹೇಗೆ ಸರಿಪಡಿಸುವದು ಎಂದು ತಿಳಿಸಿರಿ. ಎಂದು, ಸರಿಯಾಗಿ render ಆಗ್ತಾ ಇಲ್ಲ. A dotted circle comes between ಎ and o. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~ http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಪ್ರಸಾದ್, libpango1 ಪ್ಯಾಕೆಜ್ ಗಳನ್ನ ಅಪ್ಡೇಟ್ ಮಾಡ್ಕೊಳ್ಳಿ. sudo dpkg --list | grep pango -> ಇದು ನಿಮಗೆ ನಿಮ್ಮ ಸಿಸ್ಟಂ ನಲ್ಲಿರೋ ಪ್ಯಾಂಗೋ ಪ್ಯಾಕೇಜ್ಗಳನ್ನ ತಿಳಿಸತ್ತೆ. ಅವನ್ನ ಮತ್ತೆ ರೀಇನ್ಸ್ಟಾಲ್ ಮಾಡಲಿಕ್ಕೆ aptitude ಕಮ್ಯಾಂಡ್ ಬಳಸ ಬಹುದು. sudo aptitude reinstall ಇದು ತುಂಬಾ ತಲೆ ನೋವು ಅಂದ್ರೆ, ಮೇಲಿನ ಲೇಖನದಲ್ಲಿ ಹೇಳಿದ ಹಾಗೆ ಸಿನ್ಯಾಪ್ಟೆಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ. ಅಪ್ಡೇಟ್ ಕೂಡ ಅದರಿಂದಲೇ ಮಾಡಬಹುದು. ನಿಮ್ಮಲ್ಲಿ ಬ್ರಾಡ್ ಬ್ಯಾಂಡ್ ಕನೆಕ್ಷನ್ ಇದ್ದರೆ, ಉಬುಂಟುವನ್ನ ಅಪ್ಡೇಟ್ ಮಾಡ್ಕೋ ಬಹುದು. System -> Administration -> Update Manager ಸೆಲೆಕ್ಟ್ ಮಾಡಿ. ಕಮ್ಯಾಂಡ್ ಲೈನಿನಲ್ಲಿ ಉಬುಂಟು ಅಪ್ಡೇಟ್ ಮಾಡ್ಲಿಕ್ಕೆ ಕೆಳಗಿನ ಕಮ್ಯಾಂಡಗಳನ್ನ ಟರ್ಮಿನಲ್ ನಲ್ಲಿ ಬಳಸಿ. sudo aptitude update sudo aptitude upgrade ಧನ್ಯವಾದಗಳೊಂದಿಗೆ, ನಿಮ್ಮ, ಓಂ ಶಿವಪ್ರಕಾಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prashy.mh on
ನೀವು ಹೇಳಿದ ಹಾಗೆ, libpango packages ಗಳನ್ನು update ಮಾಡಿಯಾಯಿತು. ಆದರೆ ಯಾವುದೆ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿದಿಲ್ಲ. ಲಿನುಕ್ಸ್ upto date ಇದೆ. ದಯವಿಟ್ಟು ಬೇರೇನಾದರು ಪರಿಹಾರವಿದ್ದರೆ ತಿಳಿಸಿ. ಪ್ರಸಾದ್ ಶೆಟ್ಟಿ ಬಿಲ್ಲಾಡಿ ~-~-~-~-~-~-~-~-~-~-~-~-~-~-~- http://shettyprasad.... ~-~-~-~-~-~-~-~-~-~-~-~-~-~-~-
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೀನಿ ೮.೧೦ ಗೆ ಅಪ್ಡೇಟ್ ಮಾಡಿಲ್ಲ. ೨೦೦ ಎಂ.ಬಿ. ಡೌನ್ಲೋಡ್ ಆಗಬೇಕಿರುವದರಿಂದ ಮತ್ತೆ ಯಾವಾಗಲಾದರೂ ಮಾಡಿದರಾಯಿತು ಅಂತ ಬಿಟ್ಟಿದೀನಿ . ಕನ್ನಡ ಲ್ಯಾಂಗ್ವೇಜ್ ಸಪೋರ್ಟ್ ಹಾಕಿದ್ದೀನಿ . ಸಂಪದ ಸರಿಯಾಗೇ ಕಾಣ್ತಿದೆ. scim-m17n ಮತ್ತು ttf-kannada-fonts ಇನ್ಸ್ಟಾಲ್ ಮಾಡಿದ್ದೀನಿ. ಇದು SPM ನಲ್ಲಿ ತೋರಿಸ್ತದೆ. ಆದರೆ ತೆರೆಯ ಮೇಲಿನ ಬಾರ್ ನಲ್ಲಿ ನೀವು ಹೇಳೋ ಕೀಬೋರ್ಡ್ ಐಕಾನ್ ಕಾಣಿಸ್ತಿಲ್ಲವಲ್ಲ . ಎಲ್ಲಿ ತಪ್ಪಿರಬಹುದು. ? ಅದರ ಬದಲು ಉಬುಂಟು ಅಪ್ ಡೇಟ್ ಐಕಾನ್ ಇದೆ. ಯಾರಾದ್ರೂ ಸಹಾಯ ಮಾಡ್ತೀರಾ ? "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಹರಿಪ್ರಸಾದ ನಾಡಿಗರು ಸಹಾಯ ಮಾಡಿದ್ರು . ಲೋಕೇಲ್ ( ಲೋಕ್ಯಾಲೆ?) ಏನೋ ಗಡಿಬಿಡಿ ಆಗಿತ್ತು .ಇದನ್ನ ಉಬುಂಟೂ ನಲ್ಲೇ ಟೈಪು ಮಾಡಿರುವೆ ... "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಸೂಪರ್! ಅದನ್ನ ಡಾಕ್ಯುಮೆಂಟ್ ಮಾಡುವಿರಾ? ಇತರರಿಗು ನೆರವಾದೀತು. ಕಾಂಪ್ಲೆಕ್ಸ್ ಕ್ಯಾರಕ್ಟರ್ ಎನೇಬಲ್ ಮಾಡಿ ಸಿಸ್ಟಂ ರೀಸ್ಟಾರ್ಟ್ ಮಾಡಿದಾಗಲೇ ಅದು ನಿಮಗೆ ಕಾಣಿಸ್ಬೇಕಿತ್ತು. ಧನ್ಯವಾದಗಳೊಂದಿಗೆ, ನಿಮ್ಮ, ಓಂ ಶಿವಪ್ರಕಾಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಲಾಗಿನ್ ಮಾಡುವಾಗ ಕನ್ನಡವನ್ನು ಆಯ್ದುಕೊಂಡಿದ್ದರೆ ಇದ್ದರೆ ಈ ಕೀಬೋರ್ಡ್ ಕಾಣುವದಿಲ್ಲ ; ಇಂಗ್ಲೀಷ್ ಇದ್ದರೆ ಈ ಕೀಬೋರ್ಡ್ ಕಾಣುತ್ತದೆ . ಇದು ಬಗ್ ಇರಬಹುದು . ಹಾಗಿದ್ದರೆ ಸಂಬಂಧಪಟ್ಟವರಿಗೆ ತಿಳಿಸಿ. ನೋಡಿ . ಈಗ ಇದನ್ನೆಲ್ಲ ಉಬುಂಟುನಲ್ಲಿ ಟೈಪಿಸುತ್ತಿರುವೆ. ಗೋಡೆ ಸಿದ್ದವಾಗಿದೆ ಅಂತ ಕಾಣಿಸುತ್ತದೆ , ಬೇಕಾದಾಗ ತಟ್ಟಿ ಕಿತ್ತಾಕಬಹುದು ! "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.