ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

ವಿಂಡೋಸ್ ಅಪ್ಡೇಟ್ ಬಗ್ಗೆ ಗೊತ್ತಿರಬೇಕಲ್ವಾ ನಿಮಗೆ. ಅದೇ ರೀತಿ ಲಿನಕ್ಸ್ ಕೂಡ ಅಪ್ಡೇಟ್ ಮಾಡ್ಕೋ ಬಹುದು ಗೊತ್ತಾ?

System -> Administration -> Update Manager ನತ್ತ ಒಮ್ಮೆ ಕಣ್ಣಾಡಿಸಿ.

ಉಬುಂಟು ತಂಡ ಆಗಿಂದಾಗ್ಯೆ ಸೆಕ್ಯೂರಿಟಿ ಅಪ್ಡೇಟ್ಗಳು, ತಂತ್ರಾಂಶದ ಅಪ್ಡೇಟ್ ಗಳನ್ನ ನಿಮ್ಮ ಮುಂದಿಡುತ್ತದೆ. ನಿಮ್ಮ ಉಬುಂಟು ಇನ್ಸ್ಟಾಲ್ ಮಾಡಿರೋ ಸಿಸ್ಟಂ ಇಂಟರ್ನೆಟ್ಗೆ ಕನೆಕ್ಟ್ ಆಗಿದ್ರೆ ನೀವು ನಿಮ್ಮ ಅದನ್ನ ಅಪ್ಡೇಟ್ ಮ್ಯಾನೇಜರ್ ಉಪಯೋಗಿಸಿಕೊಂಡು  ಅಪ್ಡೇಟ್ ಮಾಡ್ಕೋ ಬಹುದು. 

ಮೇಲಿನ ಚಿತ್ರದಲ್ಲಿ "Check" ಕ್ಲಿಕ್ ಮಾಡಿ ನಂತರ "Install updates" ಕ್ಲಿಕ್ ಮಾಡಿದರೆ ನಿಮ್ಮ ಸಿಸ್ಟಂ ಅಪ್ಡೇಟ್ ಆಗ್ಲಿಕ್ಕೆ ಶುರು ಆಗತ್ತೆ. 

ಹನಿ:

ಅಪ್ಡೇಟ್ ಅನ್ನ ಲಿನಕ್ಸ್ ಕನ್ಸೋಲಿನಲ್ಲಿ ಮಾಡ್ಬೇಕೆ? ಕೆಳಗಿನ ಎರಡು ಕಮ್ಯಾಂಡುಗಳನ್ನ Application -> Accessories -> Terminal ತೆಗೆದ ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.

sudo aptitude update

sudo aptitude upgrade

ಮತ್ತೊಂದು ಗುಟ್ಟು:

ಉಬುಂಟುವಿನ   ಮುಂದಿನ ಆವೃತ್ತಿ ಇನ್ನೇಳು ದಿನಗಳಲ್ಲಿ ಬಿಡುಗಡೆಯಾಗ್ತಿದೆ. ಅದನ್ನ ಹೊಸದಾಗಿ ರೀ ಇನ್ಟಾಲ್ ಮಾಡ್ಕೋ ಬೇಕಾ? ಇಲ್ಲ ಸಿಸ್ಟಂ ಅಪ್ಡೇಟ್ ಮಾಡ್ಕೊಂಡ್ರೆ ಸಾಕಾ?

ಇಲ್ಲಿದೆ ನೋಡಿ ಮಜಾ. ಲಿನಕ್ಸ್ ತನ್ನ ಆವೃತ್ತಿಯನ್ನ ತನ್ನಂತಾನೇ ಅಪ್ಡೇಟ್ ಮಾಡ್ಕೊ ಬಹುದು. ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇದ್ರೆ ಸಾಕು. ಇಲ್ಲ ಅಂತಂದ್ರೆ, ಹೊಸ ಆವೃತ್ತಿಯ ಸಿ.ಡಿ ನಿಮ್ಮ ಕೈಗೆ ಸಿಕ್ಕಾಗ ಅದನ್ನ ಉಪಯೋಗಿಸಿಕೊಂಡು ಕೂಡ ಅಪ್ಡೇಡ್ ರನ್ ಮಾಡ ಬಹುದು. ಇಲ್ಲಿ ಮತ್ತೆ ಹೊಸದಾಗಿ ಲಿನಕ್ಸ್ ಇನ್ಸ್ಟಾಲ್ ಮಾಡ್ಕೊಳ್ಳೋ ಪ್ರಮೇಯ ಬರೋಲ್ಲ. 

ನಾನಾಗಲೇ ಉಬುಂಟು ೮.೧೦ದ ಬೀಟಾ(ಪರೀಕ್ಷಾರ್ಥ ಡೆವೆಲಪರ್ ಆವೃತ್ತಿ) ವನ್ನ ನನ್ನ ಲ್ಯಾಪ್ಟಾಪ್ ನಲ್ಲಿ ಅಪ್ಡೇಟ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡ್ಕೊಂಡಿದೀನಿ.ಅದಕ್ಕೆ ಮಾಡಿದ್ದಿಷ್ಟೇ.

ಟರ್ಮಿನಲ್ ನಲ್ಲಿ ಕೆಳಗಿನ ಕಮ್ಯಾಂಡ್ ಟೈಪಿಸಿದೆ :

sudo update-manager -d

ಇದು ಬರೇ ಸಾಮಾನ್ಯ ಅಪ್ಡೇಟ್ ಅಲ್ಲದೆ ಹೊಸ ಉಬುಂಟು ಆವೃತ್ತಿ ಲಭ್ಯವಿರುವುದನ್ನೂ ಸೂಚಿಸುತ್ತದೆ. ಮುಂದೆ ಏನ್ ಮಾಡ್ಬೇಕನ್ನೋದು ನಿಮ್ಮ ಕಣ್ಮುಂದೆ ಇದೆ ನೋಡಿ ಸಾರ್!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

vinayak.mdesai's picture

ಶಿವಾ,

ನನಗೆ ಒಂದು ತೊಂದರೆ ಆಗ್ತಿದೆ ಉಬುಂಟುವಿನಲ್ಲಿ.

sudo aptitude update or sudo "Any command"
Error : permission for /etc/sudoers is 0551 it should be 0440

It is not asking the password also.

ವಿನಾಯಕ ಮುತಾಲಿಕ ದೇಸಾಯಿ

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

omshivaprakash's picture

ವಿನಾಯಕರೆ,

/etc/sudoers ನ ಪರ್ಮಿಷನ್ ಬದಲಾದಂತಿದೆ. ಉಬುಂಟುವನ್ನ ರಿಕವರಿ ಮೋಡ್ನಲ್ಲಿ ಶುರು ಮಾಡಿ.
ಅಂದ್ರೆ, ನಿಮ್ಮ ಕಂಪ್ಯೂಟರ್ ಬೂಟ್ ಆಗುವಾಗ ಗ್ರಬ್ ಮೆನುನಲ್ಲಿ ಉಬುಂಟುವಿನ ಎರಡನೇ ಲೈನ್ ಇದೆಯಲ್ಲ, ಅದನ್ನ ಸೆಲೆಕ್ಟ್ ಮಾಡಿ ಎಂಟರ್ ಪ್ರೆಸ್ ಮಾಡಿ. ಮುಂದೆ ಬರುವ ಸ್ಕ್ರೀನ್ ನಲ್ಲಿ ರೂಟ್ ಆಗಿ ಲಾಗಿನ್ ಆಗ್ಲಿಕ್ಕೆ ಹೇಳಿ. ನಂತರ ಕೆಳಗಿನ ಕಮ್ಯಾಂಡ್ ರನ್ ಮಾಡಿ.

chmod 0440 /etc/sudoers

ನಿಮ್ಮ ಸಿಸ್ಟಂ ರೀಬೂಟ್ ಮಾಡಿ. ಅದಕ್ಕೆ reboot ಟೈಪಿಸಿದರಾಯಿತು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

smurthygr's picture

ನಾನು ಉಬುಂಟು ಜೊತೆಗೆ KDE ಮತ್ತು XFCE ಕೂಡಾ ಹಾಕಿಕೊಂಡಿದ್ದೇನೆ. ಈಗ ಇದನ್ನು update ಮಾಡಲು ಸಾಧ್ಯವೇ? ಉಬುಂಟು ಒಳಗಿಂದ update ಮಾಡಲೇ?

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

smurthygr's picture

ಈಗ ನಾನೇ ನೋಡಿದೆ - ೧೦೮೧ MB download ಮಾಡಬೇಕಂತೆ - ಎಲ್ಲಾ ಆಗುತ್ತೆ ಅಂತ ಕಾಣುತ್ತೆ. ಉಚಿತ ಅಂತರ್ಜಾಲ ಇರುವಾಗ (ರಾತ್ರಿ) ಯಾವಾಗಾದರೂ ಮಾಡಬೇಕು. ಅಂದಹಾಗೆ upgrade ಮಾಡಿದರೆ ಒಳ್ಳೆಯದೋ ಹೊಸದನ್ನು clean instal ಮಾಡಿದರೆ ಒಳ್ಳೆಯದೋ? ನನ್ನ ಕಡತಗಳೆಲ್ಲಾ ವಿಂಡೋಸ್ ಪಾರ್ಟಿಷನ್ ಗಳಲ್ಲಿವೆ.

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

omshivaprakash's picture

ಬರೀ ಅಪ್ಡೇಟ್ ಮಾಡ್ಕೊಳ್ಳಿ ಸಾಕು. ಮೊದಲಾಗಿದ್ರೆ ಹೊಸದಾಗಿ ಇನ್ಸ್ಟಾಲ್ ಮಾಡ್ಕೊಳ್ಳಿ ಅಂತಿದ್ದೆ. ಈಗ ಬರ್ತಿರೋ ಅಪ್ಡೇಟ್ ತುಂಬಾ ಚೆನ್ನಾಗಿದೆ ಮತ್ತು ನನಗೆ ಯಾವ್ದೇ ಪ್ರಾಬ್ಲಮ್ ಆಗಿಲ್ಲ. ಹೊಸ ಇನ್ಸ್ಟಾಲೇಷನ್ ರೀತಿಯೇ ಇದು ಕೆಲಸ ಮಾಡತ್ತೆ ಮತ್ತೆ ಈಗಾಗಲೆ ಇನ್ಸ್ಟಾಲ್ ಮಾಡ್ಕೊಂಡಿರೋ ಸಾಫ್ಟ್ವೇರ್ಗಳನ್ನ ಮತ್ತೆ ಇನ್ಸ್ಟಾಲ್ ಮಾಡ್ಕೊ ಬೇಕಿಲ್ಲ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

smurthygr's picture

ನಾನು ಉಬುಂಟು ಲಿನಕ್ಸ update ಮಾಡಲಿಕ್ಕೆ ಸುರುಮಾಡಿ ಎಲ್ಲಾ ಸೇರಿ ಸುಮಾರು 1.1 ಜಿಬಿ download ಮಾಡಿಕೊಂಡು ಅದು install ಆಗಿ ಇನ್ನೇನು ಮುಗಿಯಿತು ಅನ್ನುವಾಗ ಕರೆಂಟ್ ಹೋಯ್ತು! ಮತ್ತೆ ಉಬುಂಟುಗೆ ಲಾಗ್ ಇನ್ ಆಗಲೇ ಇಲ್ಲ - safe mode ಕೂಡಾ ಕೆಲಸ ಮಾಡಲಿಲ್ಲ. ಹಾಗಾಗಿ ಹೊಸ 8.10 ವರ್ಷನ್ ಹಾಕಿಕೊಂಡೆ. ಹಳೆಯದರಲ್ಲಿ ಸೇರಿಸಿಕೊಂಡಿದ್ದ ಕುಬುಂಟು, xfce ಎಲ್ಲಾ ಹೋಯಿತು. (ಸ್ವಲ್ಪ ತಾಳ್ಮೆಯಿಂದ ಫೋರಂಗಳನ್ನು ಹುಡುಕಿದ್ದರೆ command line ಮೂಲಕ ಸರಿ ಮಾಡಲಾಗುತ್ತಿತ್ತೋ ಏನೋ ಅಂತ ಈಗ ಅನ್ನಿಸುತ್ತಾ ಇದೆ) ಇರಲಿ ನಿಧಾನವಾಗಿ ಇನ್ನೊಮ್ಮೆ ಒಂದೊಂದಾಗಿ ಸೇರಿಸಿಕೊಳ್ಳಬಹುದು. ಮುಖ್ಯವಾಗಿ nvidia driver ಮತ್ತು ಕನ್ನಡ ಹೆಚ್ಚಿನ ತೊಂದರೆ ಕೊಡದೆ ಕೆಲಸ ಮಾಡುತ್ತಿವೆ. ಹೊಸ ಉಬುಂಟು ಇಂಟ್ರೆಪಿಡ್ ಐಬೆಕ್ಸ್ ಹಳೆಯದಕ್ಕಿಂತ fast ಇರುವಂತಿದೆ. free ಆಗಿ update ಮಾಡಿಕೊಳ್ಳುವುದು ನಿಜಕ್ಕೂ ದೊಡ್ಡ ಸಂಗತಿ.