ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್
ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ಬೆಳಗ್ಗೆಯಿಂದ ಇದುವರೆಗೂ ಬರೆಯುತ್ತೇನೆ, ಬರೆಯಬೇಕೆಂದು ಅಂದುಕೊಂಡ ಲೇಖನಗಳನ್ನು ಬರೆಯಬೇಕೆಂದು ಕೂತರೂ ಆಗಲಿಲ್ಲ. ಬರೆದದ್ದು ಒಂದೆರಡು ಇಂಗ್ಲಿಷ್ ಬ್ಲಾಗುಗಳು, ಸಂಪದದಲ್ಲಿ ಮತ್ತೊಂದೆರಡು ಕವನ, ಬ್ಲಾಗ್ ಹಾಗೂ ಒಂದು ಟೆಕ್ ಸುದ್ದಿ. ಎಷ್ಟೋ ದಿನದಿಂದ ದೂರ ಸರಿದಿದ್ದ ತಲೆನೋವಿನ ಸೋಂಕು ಮತ್ತೆ ಕಾಣಿಸಿಕೊಂಡಿತ್ತು. ನಿದ್ದೆ ಚೆನ್ನಾಗಿಯೇ ಮಾಡಿದ್ದರೂ ಇದು ನನ್ನನ್ನು ಕಾಣಬೇಕೆಂದಿದ್ದರೆ ಅದು ಹವಾಮಾನದ ಕಾರಣವಿರಲೇಬೇಕು.. ತುಂಬಾ ಸೆಕೆ.. ಫ್ಯಾನ್ ಕೆಳಗೆ, ಎದುರಿಗೆ ಕೂರಲು ಮನಸ್ಸಿಲ್ಲ. ಒಂದೆರಡು ಸಿನಿಮಾವನ್ನೂ ಅಗಾಗ ಅತ್ತ ಕಡೆ ಗಮನವೀಯ್ದು ನೋಡಿದ್ದಾಯ್ತು.. ಮತ್ತೆ ಮಲಗಲಿಕ್ಕೆ ಮನಸ್ಸು ನನಗೇಕೋ ಬರೋದೇ ಇಲ್ಲ ನೋಡಿ. ನೆನ್ನೆ ನಾಗೇಶ್ ಹೆಗಡೆಯವರ ಮನೆಯಲ್ಲಿ ಮಾತಾನಾಡಿದ ಕೆಲವು ವಿಷಯಗಳ ಬಗ್ಗೆ ಚಿಂತನೆ ಕೆಲಹೊತ್ತು. ಅವರು ಕೊಟ್ಟ "ಕರುಣಾಳು ಬಾ ಬೆಳಕೆ" ಕಡೆಗೊಮ್ಮೆ ನೋಟ.
ಇನ್ನೇನು ಒಂದು ವರ್ಷ ತುಂಬುವ ನನ್ನ ಚಲುವಿಗೆ ಸ್ವಲ್ಪ ಶೃಂಗಾರ ಮಾಡಿಸಿದ್ದಾಯ್ತು.. ನಾಲ್ಕು ಸಾವಿರದ ಕತ್ತರಿ ನನ್ನ ಜೇಬಿಗೆ... ಬೆಳಗ್ಗೆ ರಿಲಯನ್ಸ್ ಡೇಟಾ ಕಾರ್ಡ್ ಅನ್ನು ಲಿನಕ್ಸ್ ನಲ್ಲಿ ಉಪಯೋಗಿಸಿ ೨ಎಂ.ಬಿ ಕನೆಕ್ಷನ್ ಪಡೆದು ಸಂತಸ ಪಟ್ಟಿದ್ದಾಯ್ತು. ಅದರ ಬಗ್ಗೆ ಕನ್ನಡದಲ್ಲೂ ಒಂದು ಲೇಖನ ಲಿನಕ್ಸಾಯಣದಲ್ಲಿ ಬರುತ್ತಿದೆ.
ಇದೆಲ್ಲದರ ಮಧ್ಯೆ ರಜೆ ತಗೊಂಡ್ರು ಅಫೀಸಿನಲ್ಲಿ ನೆಡೆಯುತ್ತಿರುವ ಕೆಲಸಗಳ ಬಗ್ಗೆ ಕೊಂಚ ಮಾಹಿತಿಯನ್ನಾದರೂ ಸಂಗ್ರಹಿಸುವ ಅಂದ ಕೆಲಸ ಸರಾಗವಾಗಿ ನಾ ಮಾಡದೆಯೇ ಆಗಿ ಹೋಯ್ತು.. ಮೊಬೈಲ್ ಮತ್ತೆ ಮೆಸೆಂಜರ್ ಇದೆಯಲ್ಲ..
ಸರಿ, ತಲೆ ನೋವು ಅಂದು ಇದೆಲ್ಲಾ ಮಾಡ್ಬೇಕಾ ಅಂತಂದ್ರೆ.. ಏನ್ಮಾಡೋದು ಸಾರ್! ನಿದ್ದೆಯೇ ಬರ್ಲಿಕ್ಕಿಲ್ಲ.. ಏನ್ಮಾಡ್ಲಿ ಅಂತ ಇದ್ದಾಗ ಮೆಸೆಂಜರ್ ನಲ್ಲಿದ್ದ ಗೆಳೆಯರಗೆಲ್ಲಾ ಒಂದೊಂದೆ ಮೆಸೇಜಿನಾಟ. ಅದರ ಮಧ್ಯೆ ತಲೆ ನೋವು ಮರೆತದ್ದು.. ಅಮ್ಮ ಎರಡು ಮೂರುಸಲ ಚಾ ಮಾಡಿ ಕೊಟ್ಟರು ಹುಂ ಗುಟ್ಟಲಿಲ್ಲ ನನೀ ತಲೇ ನೋವು.. ಸರಿ ಅದಕ್ಕಂತಲೇ ಒಂದು ಬ್ಲಾಗ್ ಬರೆದು ನನ್ನ ಮನದಲ್ಲಿ ನೆಡೆದದ್ದನ್ನೆಲ್ಲಾ ಬರೆದಿಡುವ ಅಂತ ಬರೆದದ್ದು ಇಲ್ಲಿವರೆಗೂ ಬಂತು ನೋಡಿ...
ನಿಮಗೆ ತಲೆ ನೊವು ಬರ್ಲಿಲ್ಲ ಅಂದು ಕೊಳ್ತೀನಿ...
ನಿಮ್ಮ,
ಶಿವು
- omshivaprakash's blog
- Login or register to post comments
- 436 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ಲ್ಯಾಪ್ ಟಾಪ್ ಮತ್ತೆ ಮೊಬೈಲ್ ನ ಮನೇಲಿಟ್ಟು ಹೊರ್ಗಡೆ ಒಂದು ರೌಂಡ್ ಹೋಗಿ ಬನ್ರಿ... ;)
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ಶಿವು ಸಾರ್ ಇದನ್ನು ಬರೆದಾದರು ನಿಮ್ಮ ತಲೆನೋವು ಸ್ವಲ್ಪ ಆದ್ರು ಕಡ್ಮೆ ಆಗಿರಬಹುದು ಅನ್ಕೊಲ್ತೇನೆ.. :)
<<<ಮೆಸೆಂಜರ್ ನಲ್ಲಿದ್ದ ಗೆಳೆಯರಗೆಲ್ಲಾ ಒಂದೊಂದೆ ಮೆಸೇಜಿನಾಟ. ಅದರ ಮಧ್ಯೆ ತಲೆ ನೋವು ಮರೆತದ್ದು..>> :) ನಾನು ಯಾವ ಆಟದಲ್ಲಿದ್ದೆ?? :)
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ಕಾಮೆಂಟು ಕುಟ್ಟೋ ಆಟ :)
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
:(
:D
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ವಾರದ ನಿದ್ರೆ ಬಾಕಿ ಇದ್ದಿದ್ರಿಂದ ಮಧ್ಯಾಹ್ನ ಊಟ ಮಾಡಿ ಮಲಗಿದ್ದೆ.
’ದೀಪ ಹಚ್ಚೋ ಹೊತ್ತಾಯ್ತು. ಏಳೋ’ ಅಂತ ಅಮ್ಮ ಎಬ್ಬಿಸಿದರು. ಆಗಲೇ ಎಚ್ಚರವಾಗಿದ್ದು.
-ಅನಿಲ್
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ತಲೆ ನೋವು ಬರೋಕೆ ಮುಂಚೇನೆ ಬರಹ ಮುಗಿದುಹೋಯ್ತು.
ಉ: ರಜೆಯ ಮಧ್ಯದಲ್ಲೂ ಮನಸ್ಸಿಗೆ ರಜೆಯಿಲ್ಲ
ತಲೆ ಇದ್ರೆ ತಲೆನೋವು ಅಲ್ವಾ ಸರ್...
ಹಂಗೇನೂ ಆಗಿಲ್ಲಾ ಆದ್ರೆ ನೀವು ನನ್ನ ಕನಸ್ನ್ಯಾಗ ಬಂದಿದ್ರಿ...ನಿನ್ನೆ...
ಲಿನಕ್ಸ ಅನ್ನು pen drive ನಲ್ಲಿ ಹಾಕಿ ಬೂಟ್ ಮಾಡೋದನ್ನ ಹೇಳ್ತಾಯಿದ್ರಿ...
ಯಾರೋ ನನಗೆ boot ಮಾಡಿದಂಗಾತು..ಕಣ್ಣು ತೆರೆದೆ..
ಲೇ ಹಾಸಿಗೆ ಎಲ್ಲೈತಿ ನೀ ಎಲ್ಲಿ ಮೊಕ್ಕೊಂಡೀದಿ??
ಎದ್ದು ಸೀದಾ ಮೊಕ್ಕೋ ಅಂತ ನಮ್ಮ ಪವನ್ಯಾ ಆರ್‍ಡರ್ ಮಾಡಿದಾ..
ಹೀ ಅಂತ ಹಲ್ಲುಗಿಂಜಿ ಮತ್ತ ನಿದ್ದೀಗೆ ಹೋದ್ಯಾ..