ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ. ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ?
ಅದಕ್ಕೆ ಉತ್ತರ ಇಲ್ಲಿದೆ. ಮೊದಲು ಕನ್ಸೋಲಿಗೆ ಹೋಗಿ. ನಿಮ್ಮ ಉಬುಂಟುವಿನಲ್ಲಿ ಟರ್ಮಿನಲ್ ಅನ್ನ ಇಲ್ಲಿ ಪಡೀಬಹುದು - Applications -> Accessories -> Terminal.
(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)
1) ಮೊದಲಿಗೆ ಬರಹ ಫಾಂಟ್ ಡೌನ್ ಲೋಡ್ ಮಾಡಿ
$ wget http://www.rpobangal...
2) ಡೌನ್ ಲೋಡ್ ಮಾಡಿದ ಫಾಂಟನ್ನ ಫಾಂಟ್ ಡೈರೆಕ್ಟರಿಗೆ ಹಾಕಿ. (ನಿಮ್ಮ User ಡೈರೆಕ್ಟರಿಯಲ್ಲೂ ಒಂದು ಫಾಂಟ್ ಡೈರೆಕ್ಟರಿ ಇರುತ್ತದೆ. ಕೆಳಗಿನ ಡೈರೆಕ್ಟರಿಯಲ್ಲಿ ಫಾಂಟ್ ಹಾಕುವುದರಿಂದ ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ Userಗಳು ಮತ್ತೆ ಇದೆಲ್ಲವನ್ನ ಮಾಡಬೇಕಿಲ್ಲ.)
$ sudo mv BRHKANNW.TTF /usr/share/fonts/truetype/ttf-kannada-fonts
3) ನಿಮ್ಮ ಕಂಪ್ಯೂಟರಿನ ಫಾಂಟ್ ಕ್ಯಾಶೆಯನ್ನ ಅಫ್ದೇಟ್ ಮಾಡಿ
$ fc-cache -v
ಇಲ್ಲಿ sudo ಉಪಯೋಗಿಸದಿದ್ದರೆ, ಲಾಗಿನ್ ಆಗಿರುವ User ನ ಫಾಂಟ್ ಕ್ಯಾಶೆ ಮಾತ್ರ ಅಫ್ದೇಟ್ ಆಗ್ತದೆ.
$ sudo fc-cache -v
ಇದಾದ ನಂತರ, ನಿಮ್ಮ ಬ್ರೌಸರ್ ಅನ್ನು ಕ್ಲೋಸ್ ಮಾಡಿ ಮತ್ತೆ ಪ್ರಾರಂಭಿಸಿ. ಈಗ ಮೇಲೆ ಹೇಳಿದ ವೆಬ್ಸೈಟನ್ನ ಸಂಪರ್ಕಿಸಿದಾಗ ಕನ್ನಡ ಅಕ್ಷರಗಳು ಓದಲಿಕ್ಕಾಗ್ತದೆ.
ಸರ್ಕಾರ ಬೈಲಿಂಗ್ಯುಯಲ್ ಫಾಂಟ್ ಗಳನ್ನ ಉಪಯೋಸೋದನ್ನ ನಿಲ್ಲಿಸಿ, ಯುನಿಕೋಡ್ ತಂತ್ರಾಂಶಾಧಾರಿತ ಫಾಂಟ್ಗಳನ್ನ ಬಳಸೋದನ್ನ ಪ್ರಾರಂಭಿಸ ಬೇಕು. ಇಲ್ಲಾಂದ್ರೆ ಪ್ರತಿಯೊಂದು ವೆಬ್ ಸೈಟ್ ಗೂ ಒಂದೊಂದು ಫಾಂಟ್ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸ್ಬೇಕಾಗ್ತದೆ. ದಿನಪತ್ರಿಕೆಗಳು ಕೂಡ ಆನ್ಲೈನ್ ನಲ್ಲಿ ಬೈಲಿಂಗ್ಯುಯಲ್ ಫಾಂಟ್ ನಲ್ಲಿರೋದ್ರಿಂದ ಅವನ್ನ ಓದ್ಲಿಕ್ಕೇ ಆಗಲ್ಲ. ಇದು ಕನ್ನಡದ ವೆಬ್ ಸೈಟ್ಗಳಲ್ಲೇ ಏಕೆ? ಬೇರೆ ಭಾಷೆಯ ವೆಬ್ ಸೈಟ್ ಗಳು ಇವತ್ತು ಯುನಿಕೋಡ್ ನಲ್ಲಿವೆ. ಅವರಿಗೆ ತಮ್ಮ ಭಾಷೆಯ ಜನ ವೆಬ್ಸೈಟ್ಗಳ ಉಪಯೋಗ ಸರಳವಾಗಿ ಪಡೀಬೇಕು ಅನ್ನೋ ಅರಿವಿದೆ, ಹೊಸ ತಂತ್ರಾಂಶಗಳನ್ನ ಓದಿ, ಅರಿತು, ಯಾವುದು ನಮ್ಮೆಲ್ಲರಿಗೂ ಹಿತ ಅಂತ ತಿಳಿದು ಕೆಲಸ ಮಾಡೋ ತಾಳ್ಮೆ ಇದೆ. ನಮ್ಮವರಿಗೇನು ಕೋಡೇ?
- omshivaprakash's blog
Printer-friendly version- Login or register to post comments
- 799 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ


RSS:
ಪ್ರತಿಕ್ರಿಯೆಗಳು
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ನಮಸ್ಕಾರ ಸರ್,
ನಮ್ಮ ಸರಕಾರದಲ್ಲಿ ಎಲ್ಲ ಮಬ್ಬ ನನಮಕ್ಳು ಇರೋದರಿಂದ ಹಿಂಗಾಗ್ತಿದೆ ಸರ್, ಅವರ ಚರ್ಮ ಒಳ್ಳೆ ಆನೆ ಚರ್ಮದಂತಿದೆ. ನಾವೇನೇ ಹೇಳಿದರೂ ಅದು ಅವರಿಗೆ ನಾಟೋದಿಲ್ಲ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ಹಾಗೇ ಇಂತಹ ಬರಹಗಳನ್ನು ಯೂನಿಕೋಡ್‌ಗೆ ಲಿನಕ್ಸ್ ನಲ್ಲೇ ಬದಲಾಯಿಸಲು ಸಾಧ್ಯವೇ? ಹೇಗೆ? ದಯವಿಟ್ಟು ತಿಳಿಸಿ. ಈ ಬಗ್ಗೆ ನನ್ನದೊಂದು ಚರ್ಚೆಗೆ ಪ್ರತಿಕ್ರಿಯೆಗಳೇ ಇಲ್ಲ - ಅಂದರೆ ಇದು ಸಾಧ್ಯವಿಲ್ಲ ಅಂತ ಅನ್ಕೋಬಹುದೇನೋ?
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ಮೂರ್ತಿಯವರೆ, ನಾನು ಅಷ್ಟಾಗಿ ಈ ಬಗ್ಗೆ ಕೆಲಸ ಮಾಡಿಲ್ಲವಾದ್ದರಿಂದ ನಿಮ್ಮ ಲೇಖನಗಳಿಗೆ ಉತ್ತರ ಕೊಡಲಾಗಲಿಲ್ಲ. ಇದು ಸಾಧ್ಯವಿಲ್ಲ ಅಂತಲ್ಲ, ಸ್ವಲ್ಪ ಕೆಲಸ ಮಾಡಿದರೆ ನಾವು ಇದನ್ನ ಸಾಧ್ಯವಾಗಿಸ ಬಹುದು. ಆಗಲೇ ಈ ವಿಚಾರವಾಗಿ ಕೆಲ ಪ್ರಾಜೆಕ್ಟ ಗಳು ಕಾರ್ಯೋನ್ಮುಕವಾಗಿವೆ. ಇತ್ತೀಚೆಗೆ ಉದಯವಾಣಿ ಮತ್ತು ಕನ್ನಡಪ್ರಭ ವೆಬ್ದೈಟ್ ಗಳನ್ನ ಓದಲಿಕ್ಕೆ ಅಂತ ಯುನಿಕೋಡ್ ಲಿಂಕ್ ಪೋಸ್ಟ್ ಮಾಡಿದ್ದು ನೀವು ನೋಡಿರಬಹುದು ಸಂಪದದಲ್ಲೇ. ಅದಕ್ಕೆ ಕಾರಣ ಪದ್ಮ ಅನ್ನೋ ಪ್ರಾಜೆಕ್ಟ್. ಕೆಳಗೆ ಅದರ ಲಿಂಕ್ ಕೊಟ್ಟಿದ್ದೇನೆ.
http://padma.mozdev....
ಇದು ನಿಮ್ಮ Firefox ನಲ್ಲಿ plugin ಆಗಿ ಕೆಲಸ ಮಾಡುತ್ತೆ ಅದನ್ನೇ ಉಪಯೋಗಿಸಿ ಯುನಿಕೋಡ್ ಕನ್ವರ್ಷನ್ ಗೇಟ್ವೇ ಅನ್ನ http://uni.medhas.org/ ನಲ್ಲಿ ಹಾಕಲಾಗಿದೆ.
ಇಲ್ಲಿ ಫೈಲ್ ಕನ್ವರ್ಷನ್ಗೆ ಕೂಡ ಒಂದು ಕೊಂಡಿ ಕೊಟ್ಟಿದ್ದಾರೆ
http://uni.medhas.or...
ನಿಮಗೆ ಫಾಂಟ್ ಬಗ್ಗೆ ತಿಳಿದಿದ್ದರಾಯಿತು. ಮೂಲತ ಪ್ರೊಪ್ರೈಟರಿ ಫಾಂಟ್ಗಳನ್ನ ಯುನಿಕೋಡ್ಗೆ ಕನ್ವರ್ಟ್ ಮಾಡಲು ಪದ್ಮ ಪ್ರಾಜೆಕ್ಟ್ ನಿಮಗೆ ಸಹಕಾರಿ
ಪದ್ಮ Firefox plugin ಉಪಯೋಗಿಸೋದು ಹ್ಯಾಗೆ ಅಂತ ನಿಮಗೆ ಈ ಕೊಂಡಿ ತಿಳಿಸ್ತದೆ. http://padma.mozdev....
ಬರಹ ಇತರೆ ಫೈಲ್ಗಳನ್ನ ಯುನಿಕೋಡ್ಗೆ ಕನ್ವರ್ಟ್ ಮಾಡಲಿಕ್ಕೆ ಇದು ಸಹಾಯ ಮಾಡಲಿಲ್ಲವೆಂದರೆ, ಪದ್ಮ ಪ್ರಾಜೆಕ್ಟ ನ ಸೋರ್ಸ್ ಕೋಡ್ ತೆಗೆದು ನೋಡಿ ಹೊಸ ಉತ್ತರವನ್ನ ನೀವೇ ಕಂಡ್ಕೊ ಬಹುದು.
ಸಮಯ ಸಿಕ್ಕರೆ ನಾನೂ ಇದರ ಬಗ್ಗೆ ಕೊಂಚ ತಲೆ ಕೆಡಿಸಿ ಕೊಳ್ತೇನೆ, ನಿಮ್ಮೊಂದಿಗೆ ಉತ್ತರವನ್ನ ಹಂಚಿ ಕೊಳ್ತೇನೆ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ನನಗೂ ಇದರೆಡೆ ಗಮನಹರಿಸಲು ಸಮಯ ಮಾಡಿಕೊಳ್ಳಲಾಗಿಲ್ಲ. ಅಂತರ್ಜಾಲದ ಮೂಲಕ ಪರಚಯವಿರುವ ಗ್ನು/ಲಿನಕ್ಸ್ ಹ್ಯಾಕರ್ ಲಕ್ಮೀನಾರಾಯಣ ಕಾಮತ್ ಒಂದು ಕನ್ವರ್ಟರ್ ಬರೆದಿದೀನಿ ಎಂದಿದ್ದ ಬರಹಕ್ಕೆಂದೇ (ನಾನದನ್ನು ಟೆಸ್ಟ್ ಮಾಡಿ ನೋಡಿಲ್ಲ). ಅವನನ್ನ ಕೇಳಿ ನೋಡಬೇಕು.
ಸದ್ಯಕ್ಕೆ ಬರಹದಿಂದ ಯೂನಿಕೋಡ್ ಗೆ ಕನ್ವರ್ಟ್ ಮಾಡೋದಕ್ಕೆ ಗ್ನು/ಲಿನಕ್ಸಿನಲ್ಲಿ ನೇರ ವಿಧಾನವಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
ಸರಿ, ನಾನು ಒಂದು ಉಪಾಯವನ್ನ ಕಂಡು ಕೊಂಡಿದ್ದೇನೆ.
ಬರಹದ ಫೈಲನ್ನ firefox ನಲ್ಲಿ plugin ಒಂದನ್ನ ಉಪಯೋಗಿಸಿ ಯುನಿಕೋಡ್ಗೆ ಕನ್ವರ್ಟ್ ಮಾಡಬಹುದು.
http://padma.mozdev.... ನಲ್ಲಿ ಸಿಗುವ plugin ಅನ್ನ ಈ ಕೊಂಡಿ ಇಂದ ಪಡೆಯಬಹುದು. http://downloads.moz...
ಇದನ್ನ Firefox ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಬರಹದಲ್ಲಿ ಸೇವ್ ಮಾಡಿದ ಫೈಲನ್ನ (.BRH file) File -> Open File ಮೆನು ಉಪಯೋಗಿಸಿ Firefox ನಲ್ಲೇ ತೆರೆಯಿರಿ.
ನಂತರ CTRL+A ಬಳಸಿ ಎಲ್ಲವನ್ನೂ ಸೆಲೆಕ್ಟ್ ಮಾಡಿ ಕೊಳ್ ಬೇಕು. ಆಮೇಲೆ ಸೆಲೆಕ್ಟ್ ಆದ ಕೆಂಟೆಟ್ ಮೇಲೆ "Right" ಕ್ಲಿಕ್ ಮಾಡಿ "Transform ITRANS to Kannada" ಅನ್ನೋ ಮೆನು ಆಪ್ಶನ್ ಸೆಲೆಕ್ಟ್ ಮಾಡಿದರಾಯಿತು. ಆ ಪೇಜಿನಲ್ಲಿ ಕಂಡು ಬರುವ ಲೇಖನ ನಿಮಗೆ ಯುನಿಕೋಡ್ ಕನ್ನಡದಲ್ಲಿ ಕಾಣುತ್ತದೆ. ಕಾಫಿ ಪೇಸ್ಟ್ ಮಾಡಿಕೊಂಡರಾಯಿತು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ