ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

ಇದು ಲಿನಕ್ಸಾಯಣ - ೧೨ ರಲ್ಲಿ ಬರಹ ಎನ್ಕೋಡಿಂಗ್ ಬಗ್ಗೆ ತಿಳಿಸಿದ್ದೆನಲ್ಲ ಅದೇ ರೀತಿ.

ಮೊದಲು ಕನ್ಸೋಲಿಗೆ ಹೋಗಿ, ಕೆಳಕಂಡ ಕಮ್ಯಾಂಡ್ ಗಳನ್ನ ರನ್ ಮಾಡಿ.

(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)

1) ಮೊದಲಿಗೆ ನುಡಿ ಫಾಂಟ್ ಡೌನ್ ಲೋಡ್ ಮಾಡಿ

$ wget http://freeganita.com/ka/NUDI%20KVK%20E.TTF  

(ಈ ಫಾಂಟ್ ಹೆಸರಿನಲ್ಲಿರುವ ಬಿಡಿ ಪದಗಳನ್ನ ಒಂದು ಗೂಡಿಸಿದರೆ ಸೂಕ್ತ  ಅದನ್ನ ಈ ಕೆಳಕಂಡ ಹಾಗೆ ಮಾಡ ಬಹುದು)

$mv NUDI\ KVK\ E.TTF NUDI_KVK_E.TTF

2) ಡೌನ್ ಲೋಡ್ ಮಾಡಿದ ಫಾಂಟನ್ನ ಫಾಂಟ್ ಡೈರೆಕ್ಟರಿಗೆ ಹಾಕಿ. (ನಿಮ್ಮ User
ಡೈರೆಕ್ಟರಿಯಲ್ಲೂ ಒಂದು ಫಾಂಟ್ ಡೈರೆಕ್ಟರಿ ಇರುತ್ತದೆ. ಕೆಳಗಿನ ಡೈರೆಕ್ಟರಿಯಲ್ಲಿ
ಫಾಂಟ್ ಹಾಕುವುದರಿಂದ ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ Userಗಳು ಮತ್ತೆ
ಇದೆಲ್ಲವನ್ನ ಮಾಡಬೇಕಿಲ್ಲ.)

$ sudo mv NUDI_KVK_E.TTF /usr/share/fonts/truetype/ttf-kannada-fonts

3) ನಿಮ್ಮ ಕಂಪ್ಯೂಟರಿನ ಫಾಂಟ್ ಕ್ಯಾಶೆಯನ್ನ ಅಫ್ದೇಟ್ ಮಾಡಿ

$ sudo fc-cache -v

ಇದಾದ ನಂತರ, ನಿಮ್ಮ ಬ್ರೌಸರ್ ಅನ್ನು ಕ್ಲೋಸ್ ಮಾಡಿ ಮತ್ತೆ ಪ್ರಾರಂಭಿಸಿ. ಈಗ ವೆಬ್ಸೈಟನ್ನ ಸಂಪರ್ಕಿಸಿದಾಗ ಕನ್ನಡ ಅಕ್ಷರಗಳು ಓದಲಿಕ್ಕಾಗ್ತದೆ.

ಉದಾಹರಣೆಗೆ :  freeganita.com

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

Sunil Jayaprakash's picture

ವಾವ್. ತುಂಬಾ ಒಳ್ಳೆಯ ಮಾಹಿತಿ ನೀಡ್ತಾ ಇದ್ದೀಯಾ. ಓಂಶಿವು. ಲಿನಕ್ಸಾಯಣ ಕಲ್ಪಿಗೆ ಸಾವಿರ ಹಿಟ್ಗಳು ಸಿಗಲಿ ಎಂದು ಆಶಿಸುತ್ತೇನೆ. ಮೊದಲನೆಯ ಕಮಾಂಡಿನಲ್ಲಿ ಎರಡು ಬಾರಿ wget wget ಏಕೆ ಕೊಡಬೇಕು ?

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

Aravinda's picture

ಸುನಿಲ್ ಸಕತ್ರೀ ನಿಮ್ಮ ಅಬ್ಸರ್ವಶನ್, :)
ಒಂದು wget ಸಾಕು ಟೈಪಿಂಗ್ ಮಿಸ್ಟೇಕ್ ಅನ್ಸುತ್ತೆ

ನಿಮ್ಮವನೇ,
ಅರವಿಂದ
http://www.belaku.net

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

omshivaprakash's picture

ಹದ್ದಿನ ಕಣ್ಣು ನಿಮ್ದು. ಈಗ ಸರಿ ಮಾಡಿದೀನಿ ಸಾರ್.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

Aravinda's picture

ಈತರ ಒಬ್ಬೊಬ್ರು ಒಂದೊಂದು ಎನ್ಕೋಡಿಂಗ್ ಮಾಡಿದ್ರೆ ಪ್ರೊಗ್ರಾಮಿಂಗ್ ಮಾಡೋರ ಗತಿಯೇನು?
ಎಲ್ಲಾ ಪ್ರೊಗ್ರಾಮಿಂಗ್ ಬಾಷೆಗಳೂ ಯುನಿಕೋಡ್ ಸಪೋರ್ಟ್ ಕೊಡುತ್ತಿರುವಾಗ ಪ್ರೋಗ್ರಾಮ್ ಮಾಡಲು ಸುಲಭ, (ಅಂದರೆ ಒಂದು ಭಾಷೆಗೆ ಮಾಡಿದ ಪ್ರೋಗ್ರಾಮ್ ಇನ್ನೊಂದು ಭಾಷೆಗೂ ಕೆಲಸ ಮಾಡುತ್ತೆ ). ಆದರೆ ಅದು ಯುನಿಕೋಡ್ ಅಲ್ಲದಿದ್ದರೆ ಕಷ್ಟ.

ನಿಮ್ಮವನೇ,
ಅರವಿಂದ

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

Aravinda's picture

ಈತರ ವೆಬ್ ಪೇಜ್ ಮಾಡಿದವರ ಈಮೈಲ್ ಐಡಿ ತಗೊಂಡು ಪತ್ರ ಬರೆದರೆ ಹೆಂಗೆ?
ಅಕಸ್ಮಾತ್ ಅವರೇನಾದರೂ ತಿಳೀದೇ ಈ ಕೆಲಸ ಮಾಡಿದ್ರೆ ಸರಿಪಡಿಸಿಕೊಳ್ಳುತ್ತಾರೆನೋ... :)

ನಿಮ್ಮವನೇ,
ಅರವಿಂದ

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

omshivaprakash's picture

ಹೌದು ಅರವಿಂದ್, ಎಲ್ಲರಿಗೆ ಯುನಿಕೋಡ್ ಬಗ್ಗೆ ತಿಳಿಸಿ ಹೇಳ್ಬೇಕು. ಈಗಲೇ ಓದ್ಲಿಕ್ಕಾಗದ ಹಲವಾರು ವೆಬ್ ಸೈಟ್ ಗಳಿವೆ. ಅವು ಮುಂದೆ ಸಾವಿರಾರಾಗದಿರಲಿ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

sprasad's picture

ಶಿವು,
ಪ್ರಜಾವಾಣಿಯ ಈ ತಾಣವು (http://www.prajavani...) ಸರಿಯಾಗಿ ಕಾಣಲು ಏನು ಮಾಡಬೇಕು?

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

omshivaprakash's picture

ನೆನ್ನೆ ಇದನ್ನೂ, ಉದಯವಾಣಿಯನ್ನೂ ಓದಲು ಪ್ರಯತ್ನಿಸುತ್ತಿದ್ದೆ. ಇನ್ನೂ ಸಾಧ್ಯ ಆಗಿಲ್ಲ. ನಿಮಗೆ ಇದರ ಬಗ್ಗೆ ಆದಷ್ಟೂ ಬೇಗ ಅಪ್ದೇಟ್ ಕೊಡ್ತೇನೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

hpn's picture

ಶಂಕರ್, ಶಿವು, ಉದಯವಾಣಿ ಓದೋಕೆ ಈ ಫಾಂಟ್ ಡೌನ್ಲೋಡ್ ಮಾಡಿ ಮೇಲೆ ಶಿವು ಹೇಳಿದಂತೆಯೇ ಮಾಡಿದರೆ ಆಯಿತು.

ಪ್ರಜಾವಾಣಿಗೆ ಸದ್ಯಕ್ಕೆ ಏನೂ ಪರಿಹಾರ ಇಲ್ಲ! ಹಿಂದೆ ಶ್ರೀ ಡೆಕ್ಕನ್ ಅನ್ನೋ ಹೆಸರಿಟ್ಟು ಆಕೃತಿಪದ್ಮಿನಿ ಬಳಸುತ್ತಿದ್ದರು. ಈಗ ಮತ್ತೆ ಫಾಂಟ್ ಸ್ವಲ್ಪ ಬದಲಾಯಿಸಿಬಿಟ್ಟಿದ್ದಾರೆ. ತಮಾಷೆ ಅಂದರೆ ಬದಲಾಯಿಸಿದ ಫಾಂಟನ್ನು ಡೌನ್ಲೋಡಿಗೆ ಕೂಡ ಕೊಡೋದಿಲ್ಲ ಅವರು.

ಆದರೆ ಪ್ರಜಾವಾಣಿ Internet Explorerನಲ್ಲಿ ಮಾತ್ರ ಸರಿಯಾಗಿ ಬರತ್ತೆ. ಏಕೆಂದರೆ ಆ ಸೈಟು EoT ಬಳಸತ್ತೆ. EoT ಸಪೋರ್ಟ್ ಇರೋದು Internet Explorerನಲ್ಲಿ ಮಾತ್ರ. ತುಂಬ 'ಕಿರಿಕ್' ತಂತ್ರಜ್ಞಾನ ಇದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa