ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಸಂಪದ ಆರ್ಕೈವಿನಿಂದ

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಪರಿಚಯ

ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)

ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು  ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ. ಈಗ ನೀವು ಲಿನಕ್ಸ್ ನ root ಯೂಸರ್ ಆಗಿರುತ್ತೀರಿ (ಅಂದರೆ ಲಿನಕ್ಸ್ ನ ಮುಖ್ಯ ಅಡ್ಮಿನ್ ಬಳಕೆದಾರ ಅಥವಾ ಸೂಪರ್ ಯೂಸರ್). ಇಲ್ಲಿಂದ ನೀವು ಕಮ್ಯಾಂಡ್ ಲೈನ್ ಟೂಲ್ ಗಳನ್ನು ಬಳಸಿ ನಿಮ್ಮಆಪರೇಟಿಂಗ್ ಸಿಸ್ಟಂ ಸರಿ ಪಡಿಸಿಕೊಳ್ಳಬಹುದು. ಮುಖ್ಯವಾಗಿ ಬೂಟಿಂಗ್ ಮತ್ತು ಲಿನಕ್ಸ್ ಫೈಲ್ ಸಿಸ್ಟಂಗೆ ಸಂಬಂದ ಪಟ್ಟ ತೊಂದರೆಗಳನ್ನು.

ರಿಕವರಿ ಮೋಡ್ ಬಳಸಲಿಕ್ಕೆ ಕೆಳ ಕಂಡ ಹಂತಗಳನ್ನ ಬಳಸಿ:

  1. ಕಂಪ್ಯೂಟರ್ ಪ್ರಾರಂಬಿಸಿ
  2. ಬಯೋಸ್ ಲೋಡ್ ಆಗುವವರೆಗೆ ಕಾಯಿರಿ
  3. ಕೆಳಕಂಡ ಸಂದೇಶ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ:

    	Grub loading stage1.5
    	Grub loading, please wait...
    	Press ESC to enter the menu
    	
  4. ತಕ್ಷಣ Escape (Esc) ಕೀ ಪ್ರೆಸ್ ಮಾಡಿ, ಇದು ಬೂಟ್ ಮೆನು ನಿಮ್ಮ ಮುಂದಿಡುತ್ತದೆ
  5.  '(recovery mode)' ಎಂಬುದರೊಂದಿಗೆ ಕೊನೆಗೊಳ್ಳುವ ಲೈನನ್ನು ಸೆಲೆಕ್ಟ್ ಮಾಡಿಕೊಳ್ಳಿ , ಸಾಮಾನ್ಯವಾಗಿ ಇದು ಎರಡನೇ ಸಾಲಿನಲ್ಲಿ ಕೆಳಕಂಡಂತೆ ಕಾಣಿಸಿ ಕೊಳ್ಳುತ್ತದೆ. 

    	Ubuntu, kernel 2.6.17-10-generic (recovery mode)
    	
  6. ಈಗ ಎಂಟರ್ (Enter) ಪ್ರೆಸ್ ಮಾಡಿ ಮತ್ತು ಕೆಳಗಿನ  ಪ್ರಾಂಪ್ಟ್ ಬರುವವರೆಗೆ ಕಾಯಿರಿ

    	root@techfiz:~#
    	
  7. ಮೇಲ್ಕಂಡ ಪ್ರಾಂಪ್ಟ್ ಬರದೆ ಇತರೆ ಎರರ್ ಕಾಣಿಸಿ ಕೊಂಡಲ್ಲಿ LivecdRecovery ಅನ್ನು ನೀವು ಬಳಸ ಬಹುದು.

ನಿಮಗೆ ಬೂಟಿಂಗ್ ಸಮಯದಲ್ಲಿ ಇದುವರೆಗೆ ಕಂಡು ಬಂದಿರುವ ಸಮಸ್ಯೆಗಳನ್ನ ಕಂಮೆಂಟಿ ನಲ್ಲಿ ನೊಂದಾಯಿಸಿ. ಅದಕ್ಕೆ ಉತ್ತರಗಳನ್ನ ನೀಡುವ ಮೂಲಕ ಈ ಲೇಖನ ಪೂರ್ಣವಾಗಿ ನಿಮಗೆ ಕನ್ನಡದಲ್ಲಿ ಸಿಗುತ್ತದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

smurthygr's picture

ಲಿನಕ್ಸಾಯಣ ಎಲ್ಲಾ ಲೇಖನಗಳನ್ನು ಒಂದೇ ಕಡೆ ನೋಡುವುದು ಹೇಗೇ? RSS ನನಗೆ ಯಾಕೋ ಗೊತ್ತಾಗ್ಲಿಲ್ಲ (- ಸರಿಯಾಗಿ ಪ್ರಯತ್ನಿಸಲು ಸಮಯವಿಲ್ಲ). ಎಲ್ಲಾ ಲೇಖನ ಸೇರಿಸಿ printer friendly version ಮಾಡಿದರೆ ತುಂಬಾ ಅನುಕೂಲ!

ಉ: ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

omshivaprakash's picture

RSS ಫೀಡ್ ನ ಲಿಂಕ್ ಇಲ್ಲಿದೆ :)

http://sampada.net/t...

ಬ್ಲಾಗ್ ವರ್ಗದ ಲಿಂಕ್ ಇದು

ಇದನ್ನ ಪುಸ್ತಕದ ರೂಪದಲ್ಲಿ ಸಂಪದದಲ್ಲಿ ಸಿಗುವಂತೆ ಮಾಡುವ ಯೋಜನೆಯಿದೆ. ಸ್ವಲ್ಪ ಸಮಯವಿಡಿಯ ಬಹುದು ಮತ್ತು ಇನ್ನೂ ಬರೆಯುವುದು ಬಹಳವಿದೆ. ಇದಿನ್ನೂ ಪ್ರಾರಂಭವಷ್ಟೇ. ಅಲ್ಲಿಯವರೆಗೆ ನಿಮಗೆ ಮೇಲೆ ನೀಡಿದ RSS ಸಹಾಯಕ್ಕೆ ಬರುವುದೆಂದು ಭಾವಿಸುತ್ತೇನೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ