20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲಿನಕ್ಸಾಯಣ - ೫೩ - ಉಬುಂಟು ೯.೦೪ ನಲ್ಲಿ ಕನ್ನಡ -೧

April 30, 2009 - 8:39pm
omshivaprakash

ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ ಬೇಕು. ಇನ್ಸ್ಟಾಲ್ ಮಾಡ್ಕೊಂಡ್ರೆ ಸಂಪದ ಹ್ಯಾಗೆ ಅದರಲ್ಲಿ ಓದೋದು, ಕಾಮೆಂಟ್ ಹಾಕೋದ್ ಹ್ಯಾಗೆ ಅನ್ನೋದನ್ನ ತಿಳಿದುಕೊಂಡಿರಬೇಕಲ್ವಾ? ಅದಕ್ಕೇ ಈ ಲೇಖನ ಸಂಪದದಲ್ಲಿರಲಿ ಅಂತ ಫೋಟೋಗಳ ಜೊತೆ ಬರೀತಿದೀನಿ. ಪ್ರಶ್ನೆ ಇದ್ರೆ, ಮರೆಯದೆ ಕೇಳ್ತೀರಲ್ವಾ? (ನಾಚಿಕೊಳ್ಬೇಡಿ ಪ್ಲೀಸ್!)

ಉಬುಂಟು ೯.೦೪-೧

 ಉಬುಂಟು ಇನ್ಸ್ಟಾಲ್ ಮಾಡಿ ಕೊಂಡ ನಂತರ ಮೊದಲು ಕಾಣೋ ಚಿತ್ರ ಲಾಗಿನ್ ಸ್ಕ್ರೀನ್. ಲಾಗಿನ್ ಆಗ್ತಿದ್ದ ಹಾಗೆ ಕಾಣುತ್ತೆ ನೀಟಾಗಿ ಕಾಣುವ ಡೆಸ್ಕ್ ಟಾಪ್. ಕೆಳಗಿನ ಚಿತ್ರ ನೋಡಿ.

 ಉಬುಂಟು ೯.೦೪-೨

 ಡೆಸ್ಕ್ಟಾಪ್ ಮೇಲಿನ ಮೊದಲ್ ಬಾರ್ ನಲ್ಲಿ ಕಾಣುವ ಫೈರ್ ಫಾಕ್ಸ್ ಐಕಾನ್ ನೋಡಿ. ಮೊದಲನೆಯದು. ನಿಮ್ಮ ಕಂಪ್ಯೂಟರ್ ಇಂಟರ್ನೆಟ್ಗೆ ಕನೆಕ್ಟ್ ಆಗಿದ್ರೆ (ಅಲ್ಲೇ ಕಾಣುವ ಕಂಪ್ಯೂಟರ್ ಐಕಾನ್ ಹೇಳತ್ತೆ ನಾನು ಸಧ್ಯಕ್ಕೆ ನೆಟ್ವರ್ಕ್ ನಲ್ಲಿದ್ದೇನೆ ಅಂತ) ಬ್ರೌಸರ್ನಲ್ಲಿ (firefox) ಸಂಪದ ಬ್ರೌಸ್ ಮಾಡಿ.

ಉಬುಂಟು ೯.೦೪-೩

ಅಯ್ಯೋ! ಏನಿದು ಎಲ್ಲಾ ಗಜಿಬಿಜಿ ಆಗಿ ಬರ್ತಿದೆ. ಯಾಕೆ ಹೀಗೆ?  ಯೋಚನೆ ಮಾಡ್ಬೇಡಿ. ಅದು ಒಂದು ಫಾಂಟ್ ಪ್ರಾಬ್ಲಮ್. ಸರಿಯಾದ ಫಾಂಟ್ ಹಾಕಿಕೊಂಡ್ರೆ ಸರಿ ಹೋಗತ್ತೆ.  System ಮೆನುಗೆ ಹೋಗಿ ಮುಂದಿನ ಚಿತ್ರದಲ್ಲಿ ತೋರಿಸಿರುವ ಹಾಗೆ.

ಉಬುಂಟು ೯.೦೪-೪

 ಅಲ್ಲಿ Administration ನಲ್ಲಿ Language Support ಸೆಲೆಕ್ಟ್ ಮಾಡಿಕೊಳ್ಳಿ. ಮುಂಬರುವ ವಿಂಡೋದಲ್ಲಿ ನಾವು ಎರಡು ಕೆಲಸ ಮಾಡಬೇಕು. ಮೊದಲನೆಯದು ಫಾಂಟ್ ಇನ್ಸ್ಟಾಲ್ ಮಾಡಿಕೊಂಡು ಕನ್ನಡ ಓದುವಂತಾಗಲು, ಮತ್ತೊಂದು ಕನ್ನಡ ಟೈಪಿಸಲು ಬರಹ IME ತರಹದ ಟೂಲ್ ಇನ್ಸ್ಟಾಲ್ ಮಾಡ್ಕೊಳ್ಳೋದು. 

ಉಬುಂಟು ೯.೦೪-೫

 ಇಲ್ಲಿ ಮೊದಲು "Use input method enginees (IME) to enter complex characters" ಅನ್ನೋ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ನಂತರ install/remove Lanaguages ಬಟನ್ ಮೇಲೆ ಕ್ಲಿಕ್ ಮಾಡಿ. 

ಉಬುಂಟು ೯.೦೪-೬

 ಈ ವಿಂಡೋದಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಂಡು Apply Changes ಪ್ರೆಸ್ ಮಾಡಿ.

ಉಬುಂಟು ೯.೦೪-೭

ಮಾಡಿ ಆದ್ಮೇಲೆ ಸ್ವಲ್ಪ ನೀವು ಕೈಕಟ್ಟಿ ಕುಳಿತರೆ ಕನ್ನಡ ಫಾಂಟ್ಸ್ ಇತ್ಯಾದಿಗಳು ಇನ್ಸ್ಟಾಲ್ ಆಗೋದನ್ನು ನೋಡಬಹುದು. ಏನಾಗ್ತಿದೆ ಅಂತ ಗೊತ್ತಾಗ್ತಿಲ್ವಾ? ಅಲ್ಲೇ Details ಅಂತಿದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ. 

ಉಬುಂಟು ೯.೦೪-೮

ಈಗ ಗೊತ್ತಾಯ್ತಾ? ttf-kannada-fonts, scim ಇತ್ಯಾದಿಗಳು ಇನ್ಸ್ಟಾಲ್ ಆಗ್ತಿವೆ.  

ಉಬುಂಟು ೯.೦೪-೯

ಅಬ್ಬಾ ಕಡೆಗೂ ಮುಗೀತು. ಸೂಪರ್! ಡೆಸ್ಕ್ ಟಾಪ್ ನಲ್ಲಿ ಏನು ಚೇಂಗ್ ಆಗಿದೆ ನೋಡ್ಬೇಕಾ? ಅದಕ್ಕಿಂತ ಮೊದಲು ಒಂದು ಕೆಲ್ಸ ಮಾಡಿ, ಲಾಗ್ ಔಟ್ ಆಗಿ ಮತ್ತೆ ಲಾಗಿನ್ ಆಗಿ. ಆದ ತಕ್ಷಣ, ಕೆಳಗಿನ ಚಿತ್ರದಲ್ಲಿ ಮೌಸ್ ಪಾಯಿಂಟರ್ ತೋರಿಸುತ್ತಿರೋ ಐಕಾನ್ ನೋಡಿ. ಅದೇನು ಗೊತ್ತಾ? ಹೌದು ಕೀಲಿಮಣೆ ತರ ಕಾಣುತ್ತೆ ಅದು. 

ಉಬುಂಟು ೯.೦೪-೧೦

ಬರಹ IME ಯ "ಕ" ಅನ್ನೋ ಐಕಾನ್ ನಿಮ್ಮ ವಿಂಡೋಸ್  ಸಿಸ್ಟಂ ನ ಟಾಕ್ಸ್ ಬಾರ್ ನಲ್ಲಿ ಕಾಣುತ್ತಲ್ವಾ, ಅದೇ ತರ ಲಿನಕ್ಸ್ ನಲ್ಲಿ SCIM ಅನ್ನೋ ಟೂಲ್. ಇದರ ಉಪಯೋಗದಿಂದಲೇ ನಾನು ಈ ಲೇಖನವನ್ನು ಕೂಡ ನನ್ನ ಉಬುಂಟುವಿನ ಮುಖೇನ ಬರೀತಿರೋದು.  ಅದರ ಮೇಲೆ left - right ಕ್ಲಿಕ್ ಎಲ್ಲಾ ಮಾಡಿ ಏನಿದೆ ಅಂತ ಒಮ್ಮೆ ನೋಡಿ. ಅದರ ಬಗ್ಗೆ ಮತ್ತೆ ಹೇಳ್ತೇನೆ. ಈಗ ಸಂಪದ ಸರಿಯಾಗಿ ಕಾಣುತ್ತಾ ನೋಡೋಣ್ವಾ? ಸರಿ ಹಾಗಿದ್ರೆ ಫೈರ್ ಫಾಕ್ಸ್ ಐಕಾನ್ ಕ್ಲಿಕ್ ಮಾಡಿ ಸಂಪದ ಬ್ರೌಸ್ ಮಾಡೇ ಬಿಡಿ. 

ಉಬುಂಟು ೯.೦೪-೧೧

ಸಕತ್ ಅಲ್ವಾ? ಸಂಪದ ಸುಂದರವಾಗಿ ಕಾಣ್ತಿದೆ.  ಸುಲಭ ಅಲ್ವಾ? ಹಾಗಿದ್ರೆ ಈ ಲೇಖನಕ್ಕೆ ಕಾಮೆಂಟ್ ಹಾಕ್ತೀರಿ ಅಂದುಕೊಳ್ಳೂತ್ತೀನಿ. ಹೇಗೆ ಅಂದ್ರಾ? ಸರಿ ಅದನ್ನೂ ಹೇಳಿ ಬಿಡ್ತೇನೆ. SCIM ಐಕಾನ್ ಹೇಳಿದ್ದೆ ಅಲ್ವಾ?  ಅದರ ಮೇಲೆ ಕ್ಲಿಕ್ ಮಾಡಿ ಕನ್ನಡದ ಕಡೆಗೆ ನಿಮ್ಮ ಮೌಸ್ ಪಾಯಿಂಟರ್ ಮೂವ್ ಮಾಡಿ. inscript  ಮತ್ತೆ KGP ಕಾಣ್ತಿದಿಯಾ? ನಿಮಗೆ ಯಾವ ಕೀಬೋರ್ಡ್ ಲೇಔಟ್ ಬೇಕೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಉಬುಂಟು ೯.೦೪-೧೨

ನಾನು KGP ಲೇಔಟ್ ಸೆಲೆಕ್ಟ್ ಮಾಡ್ಕೊಳ್ತೀನಿ ಸಧ್ಯಕ್ಕೆ.    ಆಮೇಲೆ Applications -> Accessories -> Text Editor ಸೆಲೆಕ್ಟ್ ಮಾಡಿಕೊಳ್ಳಿ ಸ್ವಲ್ಪ ಟೈಪ್ ಮಾಡಿ ನೋಡೇ ಬಿಡೋಣ.

 ಉಬುಂಟು ೯.೦೪-೧೩

ಹಾ! ಅಲ್ನೋಡಿ. ಅ, ಆ, ಇ, ಈ....

ಮೇಲೆ ಕಾಣ್ತಿರೋ SCIM ನ ವಿಂಡೋವನ್ನು <ctrl>+ <space bar> ಕೀ ಬಳಕೆ (shortcut key) ಬಳಸುವುದರ ಮೂಲಕವೂ ಪಡೆಯಬಹುದು. ಇದನ್ನೇ ಸಂಪದದಲ್ಲಿ ಹೊಸ ಲೇಖನ ಬರೀಲಿಕ್ಕೋ, ಕಾಮೆಂಟ್ ಹಾಕ್ಲಿಕ್ಕೋ, ಇಲ್ಲಾ ನಿಮ್ಮ ಗೆಳೆಯ/ಗೆಳತಿಯ ಜೊತೆ ಚಾಟ್ ಮಾಡಲೋ ಬಳಸಬಹುದು. ಹಾದು, ಕನ್ನಡದಲ್ಲೇ ಚಾಟ್ ಮಾಡಿ.

ಇನ್ನೂ ಸ್ವಲ್ಪ ಪ್ರಶ್ನೆಗಳಿರಬೇಕಲ್ವಾ? ಎರಡನೆ ಭಾಗದಲ್ಲಿ ಬರಹದಲ್ಲಿ ಟೈಪ್ ಮಾಡೋತರ ಇಲ್ಲಿ ಮಾಡೋದ್ ಹ್ಯಾಗೆ, ಉಬುಂಟುವಿನಲ್ಲಿ ಎಲ್ಲವನ್ನೂ ಕನ್ನಡಮಯ ಮಾಡೋದಕ್ಕೆ ಸಾಧ್ಯವೇ ಅಂತ ತಿಳಿದುಕೊಳ್ಳೋಣ. 

ನಿಮ್ಮ, 

ಶಿವು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shreekant.mishrikoti on
ನಾನಿನ್ನೂ 8.04 ನಲ್ಲಿದೀನಿ . 9.04 ಗೆ ಮೊದಲು ನಾನು 8.1 ಗೆ ಅಪ್ಡೇಟ್ ಮಾಡ್ಕೋಬೇಕು . ಈ ವಿಷಯವನ್ನ ಮತ್ತು ಹೇಗೆ ಮಾಡ್ಬೇಕಂತ ಉಬುಂಟು ತಾಣ ನೋಡಿ ತಿಳ್ಕೊಂಡೆ . ಅಲ್ಲೇ ಅರುನೂರು ಎಂ ಬಿ ಖರ್ಚಾಗುತ್ತದೆ :( . ನಾಳೆ ಹೊಸ ತಿಂಗಳು ಶುರು ಆಗುತ್ತದೆ . ನನ್ನ ತಿಂಗಳ ಡೌನ್ಲೋಡ್ ಕೋಟಾ ನಾಳೇನೇ ಮುಗಿದುಬಿಡುತ್ತದೆ . ಆದ್ರೂ ಪರವಾಗಿಲ್ಲ . ಮಾಡ್ತೀನಿ . ಆಮೇಲೆ ೯.೦೪ ಗೆ ಅಪ್ಡೇಟ್ ಆಗಲು ಎಷ್ಟು ಎಂಬಿ ಬೇಕೋ ಗೊತ್ತಿಲ್ಲ . ಅಂದ ಹಾಗೆ ಅಲ್ಲಿ kn-itrans ಇದೆ ತಾನೇ ? ನೀವು ಕೊಟ್ಟಿರೋ ಸ್ಕ್ರೀನ್ ಶಾಟ್ ನಲ್ಲಿ ಇದ್ದ ಹಾಗಿಲ್ಲ . ಅದಕ್ಕೆ ಕೇಳ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
3rd party ರೆಪೋಗಳನ್ನೆಲ್ಲಾ System -> Administration -> Software Sources ನಿಂದ un-check ಮಾಡಿ ನಂತರ sudo update-manager -d ಕಮ್ಯಾಂಡ್ ಬಳಸಿ ೮.೧೦ಗೆ ಅಪ್ಡೇಟ್ ಮಾಡಿಕೊಳ್ಳಿ. ನಂತರ ೯.೦೪ ಗೆ ಅಪ್ಡೇಟ್ ಮಾಡಿ. (೯.೦೪ ಸಿ.ಡಿ ತರಿಸಿಕೊಳ್ಳ ಬಹುದು) ಬರಹದ ರೀತಿ ಟೈಪಿಸಲಿಕ್ಕೆ ಏನ್ಮಾಡ್ಬೇಕು ಅಂತ ಹೇಳ್ತಾ kn-itrans ಬಗ್ಗೆ ಹೇಳುತ್ತೇನೆ. ಮುಂದಿನ ಭಾಗದಲ್ಲಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
ಮೇ ತಿಂಗಳು ಶುರು ಆಗೋದನ್ನೇ ಕಾಯ್ತಿದ್ದು ... ಅಂದರೆ ರಾತ್ರಿ ೧ ಗಂಟೆಗೆ ೮.೦೪ ದಿಂದ ೮.೧ ಗೆ ಅಪ್ಡೇಟ್ ಮಾಡ್ಕೊಂಡೆ . ಇನ್ನು ೯.೦೪ ಗೆ ಅಪ್ಡೇಟ್ ಜೂನ್ ನಲ್ಲಿ ಮಾಡ್ಕೊಳ್ತೀನಿ. kn-itrans ಈಗಂತೂ ಬರ್ತಾ ಇದೆ. ತೊಂದ್ರೆ ಇಲ್ಲ . ನಿಧಾನಕ್ಕೆ ತಿಳ್ಸಿ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಉಉನಾಶೆ on
ನಿನ್ನೆ ತಾನೆ ಉಬುಂಟು ೯.೦.೪ ಹಾಕ್ಕಂಡು [ ೬-೭ ವರುಷ ಆಗಿರಬೇಕು, ಲಿನಕ್ಸ್ ಹಾಕ್ಕೊಬೇಕು ಅಂದ್ಕಂಡು :) ], ಸಂಪದಕ್ಕೆ ಹೋದ್ರೆ ಎಡ್ವಟ್ಟು? ಈವತ್ತು ನೋಡಿದ್ರೆ - ಉತ್ತರಾನೇ ಬಂದಿದೆ ಇಲ್ಲಿ. ಧನ್ಯವಾದಗಳು ಶಿವು. ತೊಂದರೆ ಹೇಳ್ಕೊಳ್ಳೊ ಮೊದ್ಲೆ ಪರಿಹಾರ ಮಾಡ್ಬಿಟ್ಟಿದ್ದೀರ. ಬರಹ ತರ ಆಗ್ಬಿಟ್ರೆ ಸಾಕು, ಮತ್ತೆ ಬೇರೆ ಯಾವ ಪ್ಲಾನು ಕೂಡ ಇಲ್ಲ ಸದ್ಯಕ್ಕೆ. ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
ನಾನು ೮.೧೦ ಇಂದ ೯.೦೪ಗೆ synaptic ನಲ್ಲೇ upgrade ಮಾಡಿಕೊಂಡೆ. ನನ್ನ ಹಳೆ installationನಲ್ಲಿ ಕುಬುಂಟು, xfce ಎಲ್ಲಾ ಇದ್ದದ್ದರಿಂದ ಸುಮಾರು ೧೧೧೦ ಎಮ್.ಬಿ. ಇಳಿಸಿಕೊಳ್ಳಬೇಕಾಯಿತು - ಮಧ್ಯದಲ್ಲಿ ಎರಡು ಮೂರು ಬಾರಿ ನಿಲ್ಲಿಸಿದರೂ ತೊಂದರೆಯಿಲ್ಲದೆ ಅಲ್ಲಿಂದಲೇ ಮುಂದುವರೆದು ಪೂರ್ತಿ ಆದಂತೆ ಕಾಣುತ್ತಿದೆ - ಜೊತೆಯಲ್ಲೇ amarok, fspot ಎಲ್ಲಾ ಹೊಸದೇ ಆಗಿಬಿಟ್ಟಿವೆ! bsnl unlimited ತುಂಬಾ ನಿಧಾನ ಆದರೂ ಒಂದೆರಡು ದಿನದಲ್ಲಿ ಮುಗಿಯಿತು...! ಹೊಸ ಉಬುಂಟು ಬಹಳ ಬೇಗನೇ boot ಆಗ್ತಾ ಇದೆ. ಹಳೇ scim, thunderbird ಇತ್ಯಾದಿ ಎಲ್ಲಾ ಹಾಗೇ ಕೆಲಸ ಮಾಡುತ್ತಿವೆ - (ಮೊದಲಿನ settingಗಳಲ್ಲೇ)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basavarajdengi on
ಶಿವಪ್ರಕಾಶ್ , ಉಬುಂಟುವಿನಲ್ಲಿ ಈ ಕೋಡ್ ನೇಮ್ ಗಳಿಗೆ ಏನರ್ಥ? Ex: ಉಬುಂಟು 9.04 is 'ಜಾಂಟಿ ಜಾಕ್ಲೋಪ್ '
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಉಬುಂಟು ಪ್ರತಿ ಆರು ತಿಂಗಳಿಗೊಮ್ಮೆ ಹೊಸ ಆವೃತ್ತಿಯನ್ನ ಹೊರತರುತ್ತದೆ. ಪ್ರತಿಯೊಂದನ್ನೂ ಆವೃತ್ತಿಯ ಸಂಖ್ಯೆಯ ಬದಲಿಗೆ ಒಂದು ಹೆಸರಿನಿಂದ ಕರೆದರೆ ಚೆನ್ನ ಅಲ್ಲವೇ. ಅದಕ್ಕೆ ಅಂತಲೇ ಅದನ್ನ ನಾಮಕರಣ ಕೂಡ ಮಾಡುತ್ತಾರೆ. ಈ ಕೊಂಡಿಯನ್ನು ನೋಡಿ. ಇವುಗಳ ಅರ್ಥ ಏನು ಅಂತ ಬರೆದು ತಿಳಿಸಲಿಕ್ಕೆ ಪ್ರಯತ್ನ ಪಡುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.