ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

Stellarium - ಸ್ಟೆಲ್ಲೇರಿಯಂ  ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು, ಹೀಗೆ ಹತ್ತು ಹಲವಾರು ಖಗೋಳಶಾಸ್ತ್ರದ ವಿಷಯಗಳನ್ನ ಇದು ನಮಗೆ ತಿಳಿಸ್ತದೆ.

ಒಂದೆರಡು ಉದಾಹರಣೆಗಳನ್ನ ಕೊಡಲೆ?

ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?   ಇದನ್ನ ನೋಡಿ ಇಲ್ಲಿ ಹೇಳಿರೋ ಗ್ರಹಗಳ ಮಿಲನವನ್ನ ಬಾನಂಗಳದಲ್ಲಿ ನೋಡ್ಲಿಕ್ಕಾಗ್ಲಿಲ್ವಲ್ಲ ಅಂತ ಕೂತಿರ್ಬೇಕಾದ್ರೆ, ಸ್ಟೆಲ್ಲೇರಿಯಂ ಯಾಕ್ ತಲೆ ಕೆಡಿಸ್ಕೊಳ್ತೀಯಂತ ಕೇಳ್ತು. ಇಲ್ಲಿದೆ ನೋಡಿ ಡಿಸೆಂಬರ್ ಒಂದರಂದು ಎಲ್ಲಿ ನಿಮಗೆ ಶುಕ್ರ ಮತ್ತು ಗುರು ಕಾಣಿಸ್ತಾರಂತ ರೋಡ್ ಮ್ಯಾಪು.

ಇದಿರಲಿ, ನಕ್ಷತ್ರ ಪುಂಜಗಳನ್ನ ತೋರಿಸ್ತಾ ಶಾರೂಕ್ ಖಾನ್ ಹಾಡೋ ಹಾಡು ಜ್ಞಾಪಕಕ್ಕೆ ಬಂತಾ? ಅದರಲ್ಲಿ ನೇಗಿಲನ್ನ ಮಕ್ಕಳಿಗೆ ಅವನು ತೋರಿಸ್ತಾನ ಅಲ್ವಾ? ಇರಲಿ, ಅದು ಕಪೋಲ ಕಲ್ಪಿತ ಇರಬಹುದು. ಆದ್ರೆ ನೀವು ನಿಜವಾದ ರಾಶಿ, ಮಂಡಲ ಅಥವಾ ಪುಂಜಗಳನ್ನ ಇತರರಿಗೆ ಕ್ಷಣಾರ್ಧದಲ್ಲಿ ತೋರಿಸಬಹುದು. 

ಇಲ್ನೋಡಿ:

ನೀವೂ ಟ್ರೈ ಮಾಡ್ತೀರಾ? ಕೆಳಗೆ ಕೊಟ್ಟಿರೋ ಕಮ್ಯಾಂಡನ್ನ ನಿಮ್ಮ ಲಿನಕ್ಸ್ ಟರ್ಮಿನಲ್ ನಲ್ಲಿ ಟೈಪ್ ಮಾಡಿ ಸ್ಟೆಲ್ಲೇರಿಯಂ ಇನ್ಸ್ಟಾಲ್ ಮಾಡ್ಕೊಳ್ಳಿ

# sudo aptitude install stellarium stellarium-data

ಇದನ್ನ ನೀವು System -> Administration -> Synaptic Package Manager ನಿಂದ  ಕೂಡ ಇನ್ಸ್ಟಾಲ್ ಮಾಡ್ಕೋ ಬಹುದು.

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

ಶ್ರೀನಿವಾಸ ವೀ. ಬ೦ಗೋಡಿ's picture

ಪ್ರತಿ ಸಾರಿ internetನಿಂದ ಡೌನ್‌ಲೋಡ್ ಮಾಡೊ ಬದಲಿಗೆ, ಈ ಸ್ಟೆಲ್ಲೇರಿಯಂನ installable (.deb) ಫೈಲ್ ಸಿಗುತ್ತಾ? ಹಾಗೆ ಸಿಕ್ಕರೆ, ಸಿಡಿಯಲ್ಲಿ ಹಾಕಿಕೊಂಡು, ಬೇಕಾದಾಗ install/uninstall ಮಾಡ್ಕೋಬಹ್ದು.
ಇದೇ ಒಂದೇ ಅಲ್ಲಾ. ಉಳಿದ ಮುಕ್ತ ತಂತ್ರಾಂಶಗಳ installable ಫೈಲ್ ಎಲ್ಲಿ ಸಿಗುತ್ತೆ ಅಥ್ವಾ ಸೋರ್ಸ್ ಕೋಡ್‌ನಿಂದ ಹ್ಯಾಗೆ ಅದನ್ನು ಬಿಲ್ಡ್ ಮಾಡಬಹುದು ಎಂದು ತಿಳಿಸೊಕಾಗುತ್ತಾ?

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

Aravinda's picture

ಇದನ್ನೊಮ್ಮೆ ನೋಡಿ
http://habba.in/cont...

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

ಶ್ರೀನಿವಾಸ ವೀ. ಬ೦ಗೋಡಿ's picture

ಥ್ಯಾಂಕ್ಸ್ ಅರವಿಂದ. ನನಗೆ ಬೇಕಾಗಿದ್ದಿದ್ದು ಇದೇ. ಇವತ್ತೇ ಪ್ರಯತ್ನಿಸ್ತಿನಿ. ಹಿಂದೊಮ್ಮೆ ಇದನ್ನು ಓದಿದ್ದೆ. ಆದರೆ ಮರೆತುಬಿಟ್ಟಿದ್ದೆ.
ಇನ್ನೊಂದು ಸಂದೇಹ. AptOn ಸಿಡಿ ಮಾಡಲು ಲಿನಕ್ಸ್ ಇರಲೇ ಬೇಕು. ವಿಂಡೋಸ್‌ನಿಂದ installable ಸಿಗೊಲ್ವಾ? ಅತ್ವಾ source code ಡೌನ್‌ಲೋಡ್ ಮಾಡ್ಕೋಂಡು ಬಿಲ್ಡ್ ಮಾಡೋಕಾಗುತ್ತಾ?

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

Aravinda's picture

Apt On Cd ಯಲ್ಲೂ ಬೈನರಿಸ್ ಇರುತ್ತೆ ಸೋರ್ಸ್ ಅಲ್ಲ... :)

ಇನ್ ಸ್ಟಾಲ್ ಮಾಡದೆಯೇ ನೀವು ಸೇವ್ ಮಾಡಿ ಇಟ್ಟುಕೋಬೆಕಲ್ವೇ?
೧. ನಿಮಗೆ ಬೇಕಾದ ಪ್ಯಾಕೇಜ್ ಸೆಲೆಕ್ಟ್ ಮಾಡಿ synaptic ಪ್ಯಾಕೇಜ್ ಮ್ಯಾನೇಜರ್ ನಲ್ಲಿ.
೨. ಇನ್ ಸ್ಟಾಲ್ ಮಾಡುವ ಬದಲು "Generate download Scripts" ಅಂತ options ಇರುತ್ತೆ
೩. ಆ script ಅನ್ನು ರನ್ ಮಾಡಿ
೪. ಎಲ್ಲಾ packages (.deb) ಒಂದು ಫೋಲ್ಡರ್ ಗೆ download ಆಗುತ್ತೆ
೫. ನಿಮಗೆ ಬೇಕಾದ ಹೆಸರು ಕೊಡಿ ಆ ಫೋಲ್ಡರ್ ಗೆ, install ಮಾಡಬೇಕು ಅಂದರೆ
cd /path/to/deb/files/saved
dpkg -i *.deb

ನಿಮಗ ಬೇಕಾಗಿದ್ದು ಒಂದೆ ಸಾಫ್ಟ್ವೇರ್ ಆದ್ರೆ ಇಸ್ಟೆಲ್ಲಾ packages ಯಾಕೆ ಅಂತ ನಿಮಗೆ ಅನ್ನಿಸ್ತಿರಬಹುದು. ನಿಮ್ಮ ಪ್ಯಾಕೇಜ್ ಸರಿಯಾಗಿ ರನ್ ಆಗಲು ಏನೇನು ಲೈಬ್ರರಿ ಗಳು ಬೇಕೋ ಅದನ್ನೆಲ್ಲಾ ಸೇರಿಸಿ download script ರೆಡಿ ಮಾಡುತ್ತೆ.

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

ಶ್ರೀನಿವಾಸ ವೀ. ಬ೦ಗೋಡಿ's picture

ಥ್ಯಾಂಕ್ಸ್. ಇನ್ನೊಂದು ವಿಷಯ ಗಮನಿಸಿದೆ. install ಮಾಡಿದ ನಂತರ .deb ಫೈಲ್/var/cache/apt/archives ಫೋಲ್ಡರ್ನಲ್ಲಿ ಇರುತ್ತೆ. ಬೇಕಾದರೆ ಅದನ್ನು ಬೇರೆ ಕಡೆ ಉಳಿಸಿಕೊಳ್ಳಬಹುದು.

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

shreekant.mishrikoti's picture

ಯಾವುದಾದರೂ ಕಂಪ್ಯೂಟರ್ ಮ್ಯಾಗಝೀನ್ ಜತೆ ಸಿಗಬಹುದು . ನೋಡುತ್ತಿರಿ . ವಿಂಡೋಸ್ ಆವೃತ್ತಿಯನ್ನು ಸೀಡಿಯಿಂದ ಇನ್ಸ್ಟಾಲ್ ಮಾಡ್ಕೊಂಡಿದ್ದೆ.

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

ಶ್ರೀನಿವಾಸ ವೀ. ಬ೦ಗೋಡಿ's picture

ವಿಂಡೋಸ್ ಆವೃತ್ತಿ ನನ್ನ ಹತ್ರನೂ ಇದೆ. ಆದರೆ ಸ್ಟೆಲ್ಲೇರಿಯಂ ಒಂದೇ ಅಲ್ಲಾ, ಬೇರೆ ತಂತ್ರಾಂಶಗಳ installableನ್ನು ವಿಂಡೋಸ್‌ನಿಂದ ಡೌನ್‌ಲೋಡ್ ಮಾಡ್ಕೋಂಡು,ಸಿಡಿಯಲ್ಲಿ ಹಾಕ್ಕೋಂಡು, ಉಬುಂಟುನಲ್ಲಿ ಬೇಕಾದಾಗ ಹಾಕ್ಕೋಳೋದು ಹೇಗೆ ಅಂತ?

ಉ: ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ

hpn's picture

ಗವಾಕ್ಷಿ ಆಗಬಹುದೇನೊ ;)