ಬ್ಲೂ ಮೂನ್ ಜೊತೆ ಬಂದ ಹೊಸ ವರ್ಷ ೨೦೧೦
- omshivaprakash's blog
- Login or register to post comments
- 250 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
— ಡಿ. ವಿ. ಜಿ.
ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್
ಪರಿಚಯ
ಸ್ವತಂತ್ರ ತಂತ್ರಾಂಶ ಉಪಯೋಗಿಸೋದು, ಅದರ ಬಗ್ಗೆ ತಿಳಿಸೋದು ನನಗೆ ಖುಷಿ ಕೊಡುವ ಕೆಲಸಗಳಲ್ಲೊಂದು. "ಲಿನಕ್ಸಾಯಣ" ನನ್ನ ಗ್ನು/ಲಿನಕ್ಸ್ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೊಂದು ಚೆಂದದ ಹೆಸರು. ಇತ್ತೀಚೆಗೆ ಫೋಟೋ ತೆಗೆಯೋ ಹುಚ್ಚು. ನೀಲಿ ಬಾನಂಗಳದಲ್ಲಿ ನಕ್ಷತ್ರಗಳನ್ನ ಎಣಿಸಿ, ಹಿಡಿಯೋ ಹವಣಿಕೆ. ಮಾತಾಡಿ, ಮಾತಾಡ್ಸಿ ಮುಂದಿನ ಪರಿಚಯ ಮಾಡಿಕೊಳ್ಳಿ ಇಲ್ಲಾಂದ್ರೆ ನನ ಪ್ರೊಫೈಲ್ ಹ್ಯಾಕ್ ಮಾಡಿ.. ;)
ನನ್ನ ಇಂಗ್ಲೀಷ್ ಬ್ಲಾಗ್: ಪ್ಲೇಟೋನಿಕ್

ಪ್ರತಿಕ್ರಿಯೆಗಳು
ಉ: ಬ್ಲೂ ಮೂನ್ ಜೊತೆ ಬಂದ ಹೊಸ ವರ್ಷ ೨೦೧೦
'ಬ್ಲೂ ಮೂನ್' ನೀಲಿ ಬಣ್ಣಕ್ಕಿರೋದಿಲ್ಲ. ಒಂದು ತಿಂಗಳಲ್ಲಿ ಎರಡು ಹುಣ್ಣಿಮೆ ಇದ್ದರೆ, ಎರಡನೇ ಹುಣ್ಣಿಮೆಗೆ 'ಬ್ಲೂ ಮೂನ್' ಅಂತಾರೆ. ಸುಮಾರು ಎರಡೂವರೆ ವರ್ಷಕ್ಕೊಂದು ಬ್ಲೂ ಮೂನ್ ಬರುತ್ತೆ. ಮತ್ತೆ ಡಿಸೆಂಬರ್ ೩೧ಕ್ಕೆ ಬ್ಲೂ ಮೂನ್ ಆಗೋದು ೨೦೨೮ರಲ್ಲಿ.
ಉ: ಬ್ಲೂ ಮೂನ್ ಜೊತೆ ಬಂದ ಹೊಸ ವರ್ಷ ೨೦೧೦
:) ನೆನ್ನೆಯೇ ಬ್ಲೂ ಮೂನ್ ಅಂತ ಎಷ್ಟೋ ದಿನ ಆದ್ಮೇಲೆ ಕೇಳಿದ್ದು... ಧನ್ಯವಾದ ವಿಷ್ಯ ತಿಳ್ಸಿದ್ದಕ್ಕೆ..
ಉ: ಬ್ಲೂ ಮೂನ್ ಜೊತೆ ಬಂದ ಹೊಸ ವರ್ಷ ೨೦೧೦
'once in a blue moon' ಅನ್ನೋ ಇಂಗ್ಲೀಷಿನ ನುಡಿಗಟ್ಟಿದೆ. 'ತುಂಬಾ ಅಪರೂಪ'ದ ವಿಷಯದ ಬಗ್ಗೆ ಮಾತಾಡುವಾಗ ಈ ನುಡಿಗಟ್ಟನ್ನು ಬಳಸುತ್ತಾರೆ.
ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಚಂದ್ರ ಬಂದ್ರೆ ಎರಡನೇ ಹುಣ್ಣಿಮೆ ಚಂದ್ರನಿಗೆ ಬ್ಲೂ ಮೂನ್ ಅಂತಾರೆ. ಇದು ಬರುವುದು ತುಂಬಾ ಅಪರೂಪ.
blue moon ನ್ನು 'ನೀಲಿ ಚಂದ್ರ' ಅಂತ ಕನ್ನಡಕ್ಕೆ ಅನುವಾದಿಸುವುದು ಎಷ್ಟು ಸರಿಯೋ ತಿಳಿದವರು ಹೇಳಬೇಕು.
ಈ ಬ್ಲೂ ಮೂನ್ ಪದ ಹೇಗೆ ಬಳಕೆ ಬಂತು ಅಂತ ಒಮ್ಮೆ ಗೂಗಲಿಸ್ಬೇಕು ;)
ಅಲ್ಲದೆ, ನಿನ್ನೆ ರಾತ್ರಿ ಹೊರಗಿನ ವಾತಾವರಣ ತುಂಬಾ ಚೆನ್ನಾಗಿತ್ತು. ಸುಮಾರು ೧೧ ಗಂಟೆಯಿಂದ ೧೨ ರ ವರೆಗೆ ನಾವು ನಮ್ಮ ಮನೆ ಮೇಲಿನ ತಾರಸಿಯಲ್ಲೇ ಟೈಮ್ ಪಾಸ್ ಮಾಡಿದೆವು. ಚಂದ್ರನನ್ನೂ ಗಮನಿಸುತ್ತೆದ್ದೆವು. ಎಲ್ಲೂ ನೀಲಿ ಚಂದ್ರ ಕಣ್ಣಿಗೆ ಕಾಣಲಿಲ್ಲ ;) . ಹಾ.. ಹಲವು ಬಾರಿ ಮೋಡ ದಲ್ಲಿ ಮರೆಯಾಗಿ ಹೊರಗೆ ಬರ್ತಾ ಇದ್ದ ಅಷ್ಟೇ.