ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಪ್ರಶಾಂತ ಜಿ ಉರಾಳ
ಪರಿಚಯ
ನಾನು ಹುಟ್ಟಿ ಬೆಳೆದದ್ದು ಮೈಸೂರಾದರೂ ನನ್ನ ಅಜ್ಜನ ಊರು ಉಡುಪಿ ಜಿಲ್ಲೆಯ ಬಾರಕೂರು. ಅಪ್ಪ ಸಾಲಿಗ್ರಾಮದ ಬಳಿಯ ಹಂದಟ್ಟಿನವರು. ನಾನು ಈಗ ನೆಲೆಸಿರುವುದು ರಾಜಧಾನಿ ಬೆಂಗಳೂರಿನಲ್ಲಿ.
ಇವತ್ತು ಏನ್ ತಿಂಡಿ ಮಾಡ್ಲೀ....
ಇವತ್ತು ಏನ್ ತಿಂಡಿ ಮಾಡ್ಲೀ....
ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.
ಅಬ್ಬಬ್ಬಾ!!!! ಅದಿರಲಿ ಬಿಡಿ. ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....
ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????
ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)
ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.
ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).
ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ.... :D
- pachhu2002's blog
- Login or register to post comments
- 265 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಇವತ್ತು ಏನ್ ತಿಂಡಿ ಮಾಡ್ಲೀ....
ಹ್ವಾಯ್ ಉರಾಳ್ರೆ,
ನೀವ್ ಯಾಕ್ ಕೊಚ್ಚಕ್ಕಿ ಗಂಜಿ ಮಾಡುಕಾಗ?
(ನೀವು ಯಾಕೆ ಕೊಚ್ಚಿಗೆ ಅಕ್ಕಿ ಗಂಜಿಯನ್ನು ಮಾಡಬಾರದು? )
ಒಳ್ಳೆ ಬೆಷಿ ಬೆಷಿ ಕೊಚ್ಚಕ್ಕಿ ಗಂಜಿಗ್, ಒಂದ್ ಚಮ್ಚ ತುಪ್ಪ, ಮತ್ತೊಂದ್ ಎರ್ಡ್ ಅಪ್ಪಿ ಮಿಡಿ ಉಪ್ಪಿನ್ಕಾಯ್ ಹಾಕ ಸುರ್ದೆ, ಎರ್ಡ್ ಬಟ್ಲ್ ಗಂಜಿ ಉಂಬುಕಾತಿಲ್ಲೆ ಅಂತ್ರ್ಯ?
(ಒಳ್ಳೆ ಬಿಸಿ ಬಿಸಿ ಕೊಚ್ಚಿಗೆಯ ಅಕ್ಕಿಯ ಗಂಜಿಗೆ, ಒಂದು ಚಮಚ ತುಪ್ಪ, ಮತ್ತೊಂದು ಎರಡು ಮಿಡಿ "ಅಪ್ಪಿ" ಮಿಡಿ ಉಪ್ಪಿನಕಾಯಿ ಹಾಕಿಸಿಕೊಂಡು, ಗಂಜಿಯನ್ನು ಸುರಿದರೆ[ಊಟ ಮಾಡಿದರೆ] ಎರಡು ಬಟ್ಟಲು ಗಂಜಿ ಊಟ ಮಾಡಲಾಗುವುದಿಲ್ಲವೇ?)
ಉ: ಇವತ್ತು ಏನ್ ತಿಂಡಿ ಮಾಡ್ಲೀ....
ನಿಮ್ಮ ಉಪಾಯ ಅಡ್ಡಿಲ್ಲ ಮಾರಾಯ್ರೆ...
<<ನೀವ್ ಯಾಕ್ ಕೊಚ್ಚಕ್ಕಿ ಗಂಜಿ ಮಾಡುಕಾಗ?>>
ಮಾಡುಕಡ್ಡಿಇಲ್ಲ.... ಅದ್ರೆ ಅದ್ನ ಆಫೀಸಿಗೆ ತೊಗೊಂಡ್ ಹೋಪುದ್ ಹ್ಯಂಗ್ ಹೇಳಿ...
<<ಒಳ್ಳೆ ಬೆಷಿ ಬೆಷಿ ಕೊಚ್ಚಕ್ಕಿ ಗಂಜಿಗ್, ಒಂದ್ ಚಮ್ಚ ತುಪ್ಪ, ಮತ್ತೊಂದ್ ಎರ್ಡ್ ಅಪ್ಪಿ ಮಿಡಿ ಉಪ್ಪಿನ್ಕಾಯ್ ಹಾಕ ಸುರ್ದೆ, ಎರ್ಡ್ ಬಟ್ಲ್ ಗಂಜಿ ಉಂಬುಕಾತಿಲ್ಲೆ ಅಂತ್ರ್ಯ?>>
ಉಂಬುಕಾತಿಲ್ಲೆ ಅಂತ ಯಾರ್ ಹೇಳಿದ್ದು??? ಗಂಜಿ ನಮ್ ಭಾನುವಾರದ್ ತಿಂಡಿ ಮಾರಯ್ರೇ... ಅಪ್ಪೆ ಮಿಡಿ ಉಪ್ಪಿನ್ಕಾಯ್ ರುಚಿಯೇ ಬೇರೆ...
;)