ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › pachhu2002 ರವರ ಬ್ಲಾಗ್

nannakanasu-chiguru

ನನಗೆ ಬರೆಯೋದಿಕ್ಕೆ ಸ್ಪೂರ್ತಿ ತಂದು ಕೊಟ್ಟ ನನ್ನ ಅತ್ಮೀಯ ಗೆಳೆಯರಾದ ಅಮರ ಮತ್ತೆ ವಿಜಯ್ ಗೆ ನನ್ನ ಹೃತ್ಪೋರ್ವಕ ವಂದನೆಗಳು. ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ... ನಮಸ್ಕಾರ, ನನ್ನ ಎಲ್ಲಾ ಸ್ನೇಹಿತರಿಗೂ.... ನಾನಿಲ್ಲಿ ಬರೆದಿರುವುದೆಲ್ಲಾ ನನ್ನ ಮನಸ್ಸಿನ ಭಾವನೆಗಳು, ಮನದ ಮಾತುಗಳು. ಮೊದ ಮೊದಲು ಕವನದ ಕಡೆಗೆ ಇದ್ದ ಒಲವು ಇತ್ತಿಚೆಗೆ ಕಡಿಮೆಯಾಗಿದೆ. ನನ್ನದೇ ಒಂದು ಪುಟ್ಟ ಬ್ಲಾಗ್ ಇದೆ. ಮನಸ್ಸಿಗೆ ತೋಚಿದ್ದನ್ನ ನಾನಿಲ್ಲಿ ವ್ಯಕ್ತಪಡಿಸ್ತಾ ಇದ್ದೇನೆ. ಇಲ್ಲಿ ಬರೆದಿರೊದ್ರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಓದುಗರು ಅದನ್ನ ನನಗೆ ತಿದ್ದಿ ಹೇಳಬೇಕು. ಯಾರೂಕೂಡಾ ಹುಟ್ಟಿದ ತಕ್ಷಣ ಎಲ್ಲಾದನ್ನೂ ಕಲಿಯೋದಿಲ್ಲ. ನಡಿಯೋಕಾಲು ಎಡವೋದು ಸಹಜತಾನೆ ??? ನಿಮ್ಮ ಪ್ರೀತಿಯ ತಿದ್ದುಪಡಿಗೆ ನಾನು ಚಿರರುಣಿ...

ನನ್ನ ಗೆಳತಿ

July 14, 2008 - 11:21am — pachhu2002

ಹೇಗಿದ್ದಿಯೋ ?

ಸಾರಿ ಕಣೋ, ನಿನ್ಜೊತೆ ನಾನು ಸರಿಯಾಗಿ ಮಾತಾಡೊಕ್ಕೇ ಆಗ್ತಾ ಇಲ್ಲ. ಯಾಕೋ ಬೇಜಾರು, ತುಂಬಾ ಬೇಜಾರು.

ನಾನು ನಿನ್ನ ಹತ್ರ ಒಂದು ಹುಡುಗನಬಗ್ಗೆ ಹೇಳಿದ್ದೆ ಅಲ್ವ ? ಅದೇ ನಾನು ಪ್ರೀತಿಸ್ತಾ ಇರೋ ಹುಡ್ಗನ ಬಗ್ಗೆ ? ಅವನಿಂದ್ಲೇ ನನ್ನ ಮನಸ್ಸಿಗೆ ಬೇಜಾರಾಗ್ತಾ ಇರೋದು. ಅವ್ನು ನನ್ನ ಒಂಟಿಯಾಗಿ ಬಿಟ್ಟು ಹೋಗ್ತಾ ಇದಾನೆ ಕಣೋ... ನಾನು ಕಂಡಿದ್ದ ಕನಸನ್ನ ನುಚ್ಚುನೂರು ಮಾಡಿ ಹೋಗ್ತಾ ಇದಾನೆ ನನ್ನ ಒಂಟಿಯಾಗಿ ಬಿಟ್ಟು.

ನನ್ನದೇನು ತಪ್ಪಿರಲೇ ಇಲ್ಲ ಕಣೋ... ನಾನು ಅವನನ್ನ ಮನಸಾರೆ ಪ್ರೀತಿಸ್ದೆ, ಪೂಜಿಸ್ದೆ, ಆದ್ರೂ ಅವ್ನು ಯಾಕೆ ಹೀಗೆ ಮಾಡಿದ ? ಅವನಿಲ್ಲದೆ ಒಂಟಿಯಾಗಿ ಈ ಬಾಳನ್ನ ಎದುರಿಸೋಕೆ ನನಗೆ ಬರೋದಿಲ್ಲ ಕಣೋ...
ಮೊದಲು ನಾವಿಬ್ಬರೂ ಎಷ್ಟು ಚೆನ್ನಾಗಿದ್ವಿ. ನಾನು ಅವನನ್ನ ನೋಡೇ ಇಲ್ಲ ಇನ್ನೂ, ಬರೀ ಅವನ ಫೋಟೋ ನೋಡಿದ್ದೀನಿ, ಮುಂದಿನ ೧೪ನೇ ತಾರೀಖು ಇಬ್ಬ್ರೂ ಮೀಟ್ ಆಗೋಣಾ ಅಂತಿದ್ವಿ. ಇದ್ದಕ್ಕಿದ್ದಹಾಗೆ ಅವ್ನು ಏನೇನೋ ಹೇಳ್ತಾಇದಾನೆ. ನಾನು ಅವ್ನಿಂದ ದೂರ ಹೋಗ್ಬೇಕಂತೆ. ಅವನನ್ನ ಮರೀಬೇಕಂತೆ. ಅವ್ನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆಯಂತೆ... ಯಾವ್ದನ್ನ ನಂಬೋದು ಯಾವ್ದನ್ನ ಬಿಡೋದು ?

ನನಗೆ ನನ್ನಮೇಲೇ ಆಸಕ್ತಿ ಕಡಿಮೆ ಆಗ್ತಾ ಇದೆ. ಅವನ ಯೋಚನೆ ಇಂದ ನನಗೆ ಹೊರಕ್ಕೆ ಬರೋಕ್ಕೇ ಆಗ್ತಾಇಲ್ಲ. ಒಂದೊಂದ್ಸಲ ನಾನೊಬ್ಳೇ ಮನೆನಲ್ಲಿ ಇರ್ತೀನಲ್ಲಾ, ಆಗ ನನ್ನ ಸುತ್ತಾ ಅವನ ನೆನಪೇ ಸುಳಿದಾಡ್ತಾ ಇರತ್ತೆ. ನನ್ನ ಕಿತ್ತು ತಿನ್ನತ್ತೆ. ಹೇಗೆ ಮರಿಯೋದು ಅವನ್ನ ? ಅವನ ಮಾತುಗಳನ್ನ ? ಅವನಜೊತೆ ಕಳೆದ ಆ ಮಧುರ ಕ್ಷಣಗಳನ್ನ ? ಅವನೇ ನನ್ನ ಪ್ರಪಂಚ, ನನ್ನ ಸರ್ವಸ್ವ. ನಾನು ಅವನ ಬಗ್ಗೆ ಮನೆನಲ್ಲಿ ಮಾತಾಡಿ ಎಲ್ಲಾ ಸಸೂತ್ರವಾಗಿ ಆಗತ್ತೆ ಅಂತ ಸಂತೋಷದಿಂದಿದ್ದೆ. ಆದ್ರೆ ಈಗ ನೋಡು...

ನನ್ಗೆ ಎಷ್ಟೇ ಕಷ್ಟ ಬಂದ್ರೂ ಕೂಡಾ ಅವನ ಮುಖ ನೋಡಿದ್ರೆ ಅದನ್ನ ಎದುರಿಸೋ ಧೈರ್ಯ ಬರ್ತಾ ಇತ್ತು, ಅದೇನೋ ಹುಮ್ಮಸ್ಸು ಮೂಡ್ತಾ ಇತ್ತು. ಎಲ್ಲವನ್ನೂ ಗೆದ್ದು ಅವನಿಂದ ನಾಲ್ಕು ಒಳ್ಳೇ ಮಾತು ಕೇಳೋದಕ್ಕೆ ಮನಸ್ಸು ಕುಣೀತಾ ಇರ್ತಿತ್ತು. ದಿನಾ ನಾನು ಅವನು ಮೊಬೈಲಿನಲ್ಲಿ ಏಷ್ಟು ಹೊತ್ತು ಮಾತಾಡ್ತಾ ಇದ್ವಿ ಗೊತ್ತಾ... ಆದ್ರೆ ಯಾಕೊ ಗೊತ್ತಿಲ್ಲ ಸ್ವಲ್ಪ ದಿನಗಳಿಂದಾ ಅವ್ನಿಗೆ ನನ್ನಲ್ಲಿ ಆಸಕ್ತಿ ಕಡಿಮೆ ಆಗ್ತಾ ಇದ್ಯೇನೋ ಅಂತ ಅನ್ನಿಸ್ತಾ ಇತ್ತು. ನಾನು ಬಹುಷಃ ಅವನಿಗೆ ಕೆಲಸದ ಒತ್ತಡ ಇರ್ಬೇಕು ಅಂತ ಸುಮ್ನೆ ಸಮಾಧಾನವಾಗಿ ಮಾತಾಡಿಸ್ತಾ ಇದ್ದೆ ಕಣೋ. ಆದ್ರೆ ಇವತ್ತು ಅವ್ನು ನನ್ಗೆ ಫೋನ್ ಮಾಡಿ ಅವ್ನಿಂದ ದೂರ ಹೋಗೊಕ್ಕೆ ಹೇಳ್ತಾ ಇದಾನೆ. ನಾನೇನು ತಪ್ಪು ಮಾಡಿದ್ದೆ ಅಂತ ಅವನ್ನ ಪರಿ ಪರಿಯಾಗಿ ಕೇಳ್ಕೊಂಡಿದೀನಿ, ಆದ್ರೂ ಅವ್ನು ಏನೂ ಹೇಳ್ತಾ ಇಲ್ಲ. ಅವನೊಡನೆ ಅವನ ನೋವನ್ನ ಹಂಚಿಕೊಂಡಿದ್ದು ನನ್ನ ತಪ್ಪಾ ? ಅವ್ನನ್ನ ನನ್ನ ಕಣ್ಣುಗಳರೀತಿ ನೋಡ್ಕೊಂಡಿದ್ದು ತಪ್ಪಾ ?

ಪ್ರತೀ ದಿನ ನನ್ನ ನೆನಪಿಗೆ ಅವ್ನು ಬರ್ತಾನೆ, ಈ ಕಣ್ಣಲ್ಲಿ ನೀರು ತರಿಸ್ತಾನೆ. ನಾನು ಎಷ್ಟೇ ಪ್ರಯತ್ನ ಪಟ್ರೂ ನನ್ನಿಂದ ಅವ್ನನ್ನ ಮರಿಯೋಕೆ ಆಗ್ತಾ ಇಲ್ಲ. ಪದೇ ಪದೇ ಅವ್ನ ಹೆಸರನ್ನೇ ಕರೆಯೋಣ ಅನ್ಸತ್ತೆ, ಅವ್ನ ಹೆಸ್ರನ್ನೇ ಬರಿಯೋಣ ಅನ್ಸತ್ತೆ. ಇದೆಲ್ಲಾ ನನ್ನ ಹುಚ್ಚುತನ ಅಂತ ಬೇಕಾದ್ರೆ ಅನ್ಕೊ. ಆದ್ರೆ ನನ್ನಿಂದ ಅವನನ್ನ ಮರಿಯೋಕೆ ಆಗ್ತಾಇಲ್ಲ.

ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಮಗುವಿನಂತೆ ತೇಲಿ ಹೋಗೋಣಾ, ಈ ದುಃಖನ ಮರೆಯೋಣ ಅಂತ ಇಲ್ಲಿಂದ ದೂರ ಹೋಗಿದ್ದೆ, ಆದ್ರೆ ಆಗ್ಲಿಲ್ಲ ಕಣೋ... ಅಲ್ಲಿ ಪ್ರತಿಯೊಬ್ಬರೂ ನನಗೆ ಅವನ ಹಾಗೇ ಕಣ್ತಾಇದ್ರು. ನನ್ನಿಂದ ದೂರ ಹೋಗಿದಾನೆ, ಎಲ್ಲೇ ಇದ್ರೂ ಖುಷಿಯಾಗಿರ್ಲಿ ಅವ್ನು. ನಾನು ನನ್ನ ಪಾಡನ್ನ ಹೇಗೋ ಸಂಭಾಳಿಸಿಕೊಂಡು ಹೋಗೊಕ್ಕೆ ಪ್ರಯತ್ನ ಪಡ್ತೀನಿ. ನಾನು ನನ್ನ ಮನಸ್ಸಿನಜೊತೆ ಹೋರಾಡ್ತಾ ಇದೀನಿ, ಅವನನ್ನ ಮರೆತು ನನ್ನ ನಾನು ಗೆಲ್ಲೋ ಹಾಗೆ ನನಗೆ ಗೆಲುವು ಸಿಕ್ಲಿ ಅಂತ ಹಾರೈಸೋ...

ಒಬ್ಬ ಒಳ್ಳೇ ಗೆಳೆಯನಾಗಿ ನನ್ನ ಕಷ್ಟದಲ್ಲಿ ನನಗೆ ಧೈರ್ಯ ಹೇಳೋ...

~.~
  • pachhu2002 ರವರ ಬ್ಲಾಗ್
  • Login or register to post comments
  • 333 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 14, 2008 - 3:37pm — priyateju

ಉ: ನನ್ನ ಗೆಳತಿ

priyateju's picture

hmm chenagidhe paa Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 9:11am — pachhu2002

ಉ: ನನ್ನ ಗೆಳತಿ

pachhu2002's picture

Smiling

ವಂದನೆಗಳು,
ಪ್ರಶಾಂತ ಜಿ ಉರಾಳ (ಪಚ್ಚು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 8:08pm — yuvapremi

ಉ: ನನ್ನ ಗೆಳತಿ

yuvapremi's picture

ಪಾಪ, ಈಕೆಯ ಮನಸಿಗೆ ಬಹಳ ನೋವಾಗಿದೆ. Sad

ಪಚ್ಚು ರವರೆ, ದಯವಿಟ್ಟು ಇವರ ಮನಸಿಗೆ ಸಮಾದಾನ ಮಾಡಿ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 9:10am — pachhu2002

ಉ: ನನ್ನ ಗೆಳತಿ

pachhu2002's picture

ಹೌದು ಯುವಪ್ರೇಮಿಗಳೇ,

ಈಕೆಯೊಡನೆ ಮಾತನಾಡುವಾಗ ನನಗೂ ಬಹಳ ನೋವಾಯಿತು. ಏತಕ್ಕಾಗಿ ಹುಡುಗ ಹೀಗೆ ಮಾಡಿರಬಹುದು ???

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ (ಪಚ್ಚು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 9:25am — pachhu2002

ಉ: ನನ್ನ ಗೆಳತಿ

pachhu2002's picture

ನಾನು ನನ್ನ ಕೈಲಾದ ಪ್ರಯತ್ನ ಮಾಡಿ ಸ್ವಲ್ಪ ಮಟ್ಟಿಗೆ ಆಕೆಯನ್ನ ಸಮಾಧಾನಿಸಿದೆ Smiling
http://sampada.net/blog/pachhu2002/15/07/2008/10048

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ (ಪಚ್ಛು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೩
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ಡೈರಿಯ ಕೆಲವು ಹಾಳೆಗಳು - ಭಾಗ ೧
  • ಹಾಗೇ ಸುಮ್ ಸುಮ್ನೆ.... :)
Syndicate content

ಲೇಖಕರು

pachhu2002's picture

ಪೂರ್ಣ ಹೆಸರು
ಪ್ರಶಾಂತ ಜಿ ಉರಾಳ

ಪರಿಚಯ

ನಾನು ಹುಟ್ಟಿ ಬೆಳೆದದ್ದು ಮೈಸೂರಾದರೂ ನನ್ನ ಅಜ್ಜನ ಊರು ಉಡುಪಿ ಜಿಲ್ಲೆಯ ಬಾರಕೂರು. ಅಪ್ಪ ಸಾಲಿಗ್ರಾಮದ ಬಳಿಯ ಹಂದಟ್ಟಿನವರು. ನಾನು ಈಗ ನೆಲೆಸಿರುವುದು ರಾಜಧಾನಿ ಬೆಂಗಳೂರಿನಲ್ಲಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 513 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator